ಹೋಟೆಲ್ ಉದ್ಯಮಕ್ಕೆ ಕಾಲಿಟ್ಟ Bigg Boss ಉಗ್ರಂ ಮಂಜು: ಏನಿದರ ಸ್ಪೆಷ್ಯಾಲಿಟಿ? ಎಲ್ಲಿದೆ
'ಬಿಗ್ ಬಾಸ್' ಖ್ಯಾತಿಯ ನಟ ಉಗ್ರಂ ಮಂಜು ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ತಲಘಟ್ಟಪುರದಲ್ಲಿ 'ಮಂಡಿಪೇಟೆ ಮೈಸೂರು ಪಲಾವ್' ಹೆಸರಿನ ಹೋಟೆಲ್ ಆರಂಭಿಸಿದ್ದು, ಈ ಮೂಲಕ ಬಾಣಸಿಗನಾಗಿ ಹೊಸ ಅವತಾರವೆತ್ತಿದ್ದಾರೆ. ತಮ್ಮ ಈ ಹೊಸ ಪ್ರಯತ್ನಕ್ಕೆ ಅವರು ಅಭಿಮಾನಿಗಳ ಬೆಂಬಲ ಕೋರಿದ್ದಾರೆ.

ಗುಡ್ನ್ಯೂಸ್ ಕೊಟ್ಟ ಉಗ್ರಂ ಮಂಜು
ಸಿನಿಮಾಗಳಲ್ಲಿ ವಿಲನ್ ಹಾಗೂ ಪೋಷಕ ನಟನಾಗಿ ಮಿಂಚುತ್ತಿದ್ದ ಉಗ್ರಂ ಮಂಜು, ಎಲ್ಲ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾದದ್ದು ʻಬಿಗ್ ಬಾಸ್ʼ ಸೀಸನ್ ಮೂಲಕ. ಇದೀಗ ಅವರ ಹೆಸರಿನ ಹಿಂದೆ ಬಿಗ್ ಬಾಸ್ ಖ್ಯಾತಿಯ ಎನ್ನುವ ಬಿರುದು ಸೇರಿಕೊಳ್ಳುತ್ತದೆ. ಈಚೆಗಷ್ಟೇ ಇವರ ನಟನೆಯ 'ಮ್ಯಾಂಗೋ ಪಚ್ಚ' ಸಿನಿಮಾ ಬಿಡುಗಡೆಯಾಗಿದೆ. ಇವೆಲ್ಲವುಗಳ ನಡುವೆ ಹೊಸದೊಂದು ಗುಡ್ನ್ಯೂಸ್ ಕೊಟ್ಟಿದ್ದಾರೆ ಮಂಜು.
ಸ್ನೇಹಿತೆ ಜೊತೆ ಮದುವೆ
ಅಷ್ಟಕ್ಕೂ ನಟ ಉಗ್ರಂ ಮಂಜು (Bigg Boss Ugram Manju) ಕಳೆದ ಜನವರಿಯಲ್ಲಿ ತಮ್ಮ ಸ್ನೇಹಿತೆ ಸಂಧ್ಯಾ ಜೊತೆ ಧರ್ಮಸ್ಥಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಜುನಾಥನ ಸಾನಿಧ್ಯದಲ್ಲಿ ಇವರು ವಿವಾಹವಾಗಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐದೇ ತಿಂಗಳಿಗೆ ಹೊಸ ಬಿಜಿನೆಸ್ ಶುರು ಮಾಡಿದ್ದಾರೆ ಉಗ್ರಂ ಮಂಜು. ಅವರು ಹೋಟೆಲ್ ಉದ್ಯಮವನ್ನು ಆರಂಭ ಮಾಡಿದ್ದಾರೆ. ಈ ಕುರಿತು ವಿಶೇಷ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಶೇಷ ವಿಡಿಯೋ ಶೇರ್
ಇದರಲ್ಲಿ ಮಂಜು ಅವರೇ ಬಾಣಸಿಗನಾಗಿರುವುದನ್ನು ಕಾಣಬಹುದು. ದೊಡ್ಡ ಪಾತ್ರೆಯಲ್ಲಿ ಸೌಟು ಹಿಡಿದು ಅಡುಗೆ ಮಾಡುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಈ ಹೊಸ ಉದ್ಯಮಕ್ಕೆ ಎಲ್ಲರ ಪ್ರೀತಿ, ವಿಶ್ವಾಸ, ಆಶೀರ್ವಾದ ಬೇಕು ಎಂದು ಕೇಳಿಕೊಂಡಿದ್ದಾರೆ.
ಪ್ರೀತಿ ಇರಲಿ
ನಾನು ನಿಮ್ಮ ಪ್ರೀತಿಯ ಉಗ್ರಂ ಮಂಜು. ಇಷ್ಟು ದಿನ ಕಲಾವಿದನಾಗಿ ನನಗೆ ನಿಮ್ಮ ಪ್ರೀತಿ ಕೊಟ್ಟಿದ್ದೀರಾ. ಇವಾಗ ಹೋಟೆಲ್ ಉದ್ಯಮ ಪ್ರಾರಂಭ ಮಾಡಿದ್ದೇನೆ. ಇದಕ್ಕೂ ನಿಮ್ಮ ಬೆಂಬಲ, ಆಶೀರ್ವಾದ ಸದಾ ಹೀಗೆ ಇರಲಿ" ಎಂದಿದ್ದಾರೆ.
ಎಲ್ಲಿದೆ ಹೋಟೆಲ್
ಮಂಡಿಪೇಟೆ ಶೈಲಿಯ ರುಚಿಕರ ಆಹಾರಕ್ಕೆ ಫೇಮಸ್ ಆಗಿರುವುದಾಗಿ ತಿಳಿಸಲಾಗಿದೆ. ನಾಟಿ ಶೈಲಿಯ ಹಾಗೂ ಮೈಸೂರು ಶೈಲಿಯ ಪಲಾವ್ ಪ್ರಿಯರಿಗಾಗಿ ಈ ಹೋಟೆಲ್ ಮಸ್ತ್ ತಾಣವಾಗಲಿದೆ. ಅಂದಹಾಗೆ ʻಮಂಡಿಪೇಟೆ ಮೈಸೂರು ಪಲಾವ್ʼ ಹೆಸರಿನ ಈ ಹೋಟೆಲ್ ಬೆಂಗಳೂರಿನ ತಲಘಟ್ಟಪುರ ಬ್ರಾಂಚ್ ಕನಕಪುರ ರಸ್ತೆಯಲ್ಲಿ ತೆರೆಯಲಾಗಿರುವುದಾಗಿ ನಟ ಹೇಳಿದ್ದಾರೆ.
ಉಗ್ರಂ ಹೆಸರು ಬಂದಿದ್ದು ಹೇಗೆ?
ಕೋಲಾರದ ಉಗ್ರಂ ಮಂಜು ಅವರು ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ ಉಗ್ರಂ ಮೂವಿಯಲ್ಲಿ ಖಳ ನಟನಾಗಿ ಅಮೋಘವಾಗಿ ಅಭಿನಯ ಮಾಡಿದ್ದರು. ಈ ಸಿನಿಮಾದಿಂದಲೇ ಇವರಿಗೆ ಉಗ್ರಂ ಎನ್ನುವುದು ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

