ಇಡೀ ಮನೆಗೆ ಒಂದು ಚಿಂತೆಯಾದ್ರೆ, ರಕ್ಷಿತಾ & ಕಾಕ್ರೋಚ್ ಸುಧಿಗೆ ಮತ್ತೊಂದು ಸಮಸ್ಯೆ
Bigg Boss Kannada Show: ಬಿಗ್‌ಬಾಸ್ ಮನೆಯಲ್ಲಿ ಅಡುಗೆ ವಿಚಾರವಾಗಿ ಒಂಟಿಗಳು ಮತ್ತು ಜಂಟಿಗಳ ನಡುವೆ ಜಗಳ ಶುರುವಾಗಿದೆ. ಜಾನ್ವಿ ಬಳಸಿದ 'ಗಾಂಚಾಲಿ' ಪದವು ದೊಡ್ಡ ಗಲಾಟೆಗೆ ಕಾರಣವಾಗಿದ್ದು, ನಿಯಮ ಉಲ್ಲಂಘನೆಗಾಗಿ ಬಿಗ್‌ಬಾಸ್ ಜಂಟಿಗಳಿಗೆ ಕಠಿಣ ಶಿಕ್ಷೆ ನೀಡಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ಜಗಳ
ಅಡುಗೆಮನೆಯಲ್ಲಿ ಕೆಲಸ ಮಾಡುವ ವಿಚಾರವಾಗಿ ಒಂಟಿಗಳು ಮತ್ತು ಜಂಟಿಗಳ ನಡುವೆ ಜಗಳವಾಗಿದೆ. ಕೈಗೆ ಬೆಲ್ಟ್ ಹಾಕಿಕೊಂಡು ಅಡುಗೆ ಮಾಡೋದಕ್ಕೆ ಆಗಲ್ಲ ಎಂದು ಬಿಗ್‌ಬಾಸ್‌ಗೆ ಮಂಜು ಭಾಷಿಣಿ ಹೇಳುತ್ತಾರೆ. ಹಾಗಾಗಿ ನಾನು ಅಡುಗೆ ಮಾಡಲ್ಲ ಮಂಜು ಭಾಷಿಣಿ ಹೇಳಿದ್ದಾರೆ.
ಗಾಂಚಾಲಿ ಪದ ಅರ್ಥವಾಗದೇ ರಕ್ಷಿತಾ ಕನ್ಫ್ಯೂಸ್
ಇದೇ ವಿಷಯವಾಗಿ ಎರಡು ಬಣಗಳ ನಡುವೆ ಜಗಳ ನಡೆಯುತ್ತಿರುವ ಸಂದರ್ಭದಲ್ಲಿ ಜಾನ್ವಿ ಗಾಂಚಾಲಿ ಎಂಬ ಪದವನ್ನು ಬಳಕೆ ಮಾಡುತ್ತಾರೆ. ಈ ಪದ ಬಳಕೆ ಮಾಡಿದ್ದು ತಪ್ಪು ಎಂದು ಮಂಜು ಭಾಷಿಣಿ, ಯಾಶಿಕಾ, ಗಿಲ್ಲಿ, ಕಾವ್ಯಾ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಇದೆಲ್ಲವನ್ನು ದೂರದಿಂದ ನೋಡುತ್ತಿದ್ದ ರಕ್ಷಿತಾ ಶೆಟ್ಟಿ ಮಧ್ಯ ಪ್ರವೇಶ ಮಾಡಿ ಪ್ರಶ್ನೆಯೊಂದನ್ನು ಮಾಡುತ್ತಾರೆ.
ರಕ್ಷಿತಾ ಶೆಟ್ಟಿ ಮತ್ತು ಕನ್ನಡ
ಮುಂಬೈನಲ್ಲಿ ಹುಟ್ಟಿ ಬೆಳೆದಿರುವ ಕಾರಣ ರಕ್ಷಿತಾ ಶೆಟ್ಟಿ ಅವರಿಗೆ ಕನ್ನಡ ಮಾತನಾಡೋದು ಸ್ವಲ್ಪ ಕಷ್ಟವಾಗುತ್ತದೆ. ಕೆಲವೊಂದು ಸ್ಥಳೀಯ ಮತ್ತು ಕಠಿಣ ಪದಗಳು ರಕ್ಷಿತಾಗೆ ಅರ್ಥವಾಗಲ್ಲ. ಎರಡು ಬಣಗಳ ನಡುವೆ ತೀವ್ರವಾಗಿ ಜಗಳವಾಗುತ್ತಿದ್ರೆ, ಎಲ್ಲರ ಮಧ್ಯೆ ಬಂದ ರಕ್ಷಿತಾ, ಜಾನ್ವಿ ಅವರಿಗೆ ನೀವು ಬಳಸಿದ ಪದದ ಅರ್ಥ ಹೇಳಿ ಎಂದು ಕೇಳುತ್ತಾರೆ. ಅದಕ್ಕೆ ಜಾನ್ವಿ ಅಹಂಕಾರ ಎಂದು ಉತ್ತರ ನೀಡುತ್ತಾರೆ.
ಜಂಟಿಗಳಿಂದ ನಿಯಮ ಉಲ್ಲಂಘನೆ
ಜಂಟಿಗಳು ನಿಯಮ ಉಲ್ಲಂಘನೆ ಮಾಡಿರುವ ಕಾರಣ, ರಕ್ಷಿತಾ ಶೆಟ್ಟಿಯನ್ನು ಹೊರತುಪಡಿಸಿ ಎಲ್ಲಾ ಒಂಟಿಗಳು ಬೆಡ್‌ರೂಮ್ ಬಳಕೆ ಮಾಡುವಂತಿಲ್ಲ ಎಂದು ಬಿಗ್‌ಬಾಸ್ ಆದೇಶಿಸಿದ್ದಾರೆ. ನಿಯಮ ಪಾಲನೆ ಮಾಡಲು ವಿಫಲವಾಗಿದ್ದಕ್ಕೆ ಜಂಟಿಗಳು ಕ್ಷಮೆ ಕೇಳಿದ್ರೂ ಬಿಗ್‌ಬಾಸ್ ಯಾವುದೇ ರಿಯಾಯ್ತಿಯನ್ನು ನೀಡಿಲ್ಲ. ಕೆಲ ಒಂಟಿಗಳು ಊಟ ಮಾಲ್ಲ ಎಂದು ಹಠ ಹಿಡಿದಿದ್ದರು. ಆದ್ರೆ ಮಲ್ಲಮ್ಮ ಮಾತ್ರ ನನಗೆ ಹಸಿವು ಆಗುತ್ತಿದೆ ಎಂದು ಊಟ ಮಾಡಿ ಕೈ ತೊಳೆದುಕೊಂಡರು.
ರಕ್ಷಿತಾ - ಕಾಕ್ರೋಚ್ ಸುಧಿ ಸಮಸ್ಯೆ ಬೇರೆ
ರಕ್ಷಿತಾ ಅವರಿಗೆ ಕನ್ನಡ ಪದಗಳು ಅರ್ಥವಾಗದೇ ಪದೇ ಪದೇ ಗೊಂದಲದಲ್ಲಿ ಸಿಲುಕುತ್ತಿದ್ದಾರೆ. ಮತ್ತೊಂದೆಡೆ ಕಾಕ್ರೋಚ್ ಸುಧಿ ಅವರಿಗೆ ಸ್ವಲ್ಪ ಮರೆಗುಳಿತನವಿದೆ. ಈ ಹಿಂದೆ ಸ್ಪರ್ಧಿಗಳು ಹೇಳಿದ ಮಾತುಗಳನ್ನು ಮರೆತು ಬಿಡುತ್ತಾರೆ. ಜಗಳದ ಸಂದರ್ಭದಲ್ಲಿ ಒಂದು ಕ್ಷಣ ಬ್ಲ್ಯಾಂಕ್ ಆಗುತ್ತಿದ್ದಾರೆ.
ಇದನ್ನೂ ಓದಿ: ಬಡ್ಡಿ ಬಂಗಾರಮ್ಮಾ ಮೊನಚಾದ ಮಾತಿನೇಟಿಗೆ ರಾಜಮಾತೆಯ ಕಣ್ಣೀರು; ದಿಗ್ಬ್ರಮೆಯಾಗಿ ನಿಂತ ರಕ್ಷಿತಾ ಶೆಟ್ಟಿ
ಪಾತ್ರೆ ತೊಳೆದ ರಕ್ಷಿತಾ ಶೆಟ್ಟಿ
ಕಾಕ್ರೋಚ್ ಸುಧಿ ಬೇಡ ಅಂದರೂ ರಕ್ಷಿತಾ ಶೆಟ್ಟಿ ಪಾತ್ರೆಗಳನ್ನು ತೊಳೆದಿದ್ದಾರೆ. ರಾತ್ರಿ ಹೀಗೆಲ್ಲಾ ಪಾತ್ರೆಗಳನ್ನು ಬಿಡಬಾರದು. ನನ್ನ ಪರವಾಗಿ ಜಂಟಿಗಳಿಗೆ ದೊಡ್ಡ ಕೆಲಸ ನೀಡುತ್ತೇನೆ. ಇದು ತುಂಬಾನೇ ಚಿಕ್ಕ ಕೆಲಸವಾಗಿದೆ ಎಂದು ರಕ್ಷಿತಾ ಹೇಳುತ್ತಾರೆ. ಇದೇ ವೇಳೆ ಅಲ್ಲಿಗೆ ಬಂದ ಮಲ್ಲಮ್ಮ ಅವರು ಸಹ ಪಾತ್ರೆಗಳನ್ನು ತೊಳೆಯೋದು ಸೇವಕರ ಕೆಲಸ ಎಂದು ಹೇಳುತ್ತಾರೆ.
ಇದನ್ನೂ ಓದಿ: ಬಿಗ್‌ಬಾಸ್ ಶೋ ನಿಲ್ಲಿಸಿ? ವಿದ್ಯುತ್ ಕಡಿತಗೊಳಿಸಿ, ಮಾಲಿನ್ಯ ಮಂಡಳಿಯಿಂದ ಶಾಕಿಂಗ್ ನೋಟಿಸ್