MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಬಡ್ಡಿ ಬಂಗಾರಮ್ಮಾ ಮೊನಚಾದ ಮಾತಿನೇಟಿಗೆ ರಾಜಮಾತೆಯ ಕಣ್ಣೀರು; ದಿಗ್ಬ್ರಮೆಯಾಗಿ ನಿಂತ ರಕ್ಷಿತಾ ಶೆಟ್ಟಿ

ಬಡ್ಡಿ ಬಂಗಾರಮ್ಮಾ ಮೊನಚಾದ ಮಾತಿನೇಟಿಗೆ ರಾಜಮಾತೆಯ ಕಣ್ಣೀರು; ದಿಗ್ಬ್ರಮೆಯಾಗಿ ನಿಂತ ರಕ್ಷಿತಾ ಶೆಟ್ಟಿ

Manju Bhashini angry reactionn: ಬಿಗ್‌ಬಾಸ್ ಸೀಸನ್ 12ರ ಎರಡನೇ ವಾರದಲ್ಲಿ ಒಂಟಿ ಮತ್ತು ಜಂಟಿ ಬಣಗಳ ನಡುವೆ ಸಂಘರ್ಷ ತಾರಕಕ್ಕೇರಿದೆ. ಜಾನ್ವಿ ಬಳಸಿದ 'ಗಾಂಚಾಲಿ' ಪದದಿಂದಾಗಿ ಮಂಜು ಭಾಷಿಣಿ ಆಕ್ರೋಶಗೊಂಡಿದ್ದು, ಈ ಬೆಳವಣಿಗೆಗಳಿಂದ ನೊಂದ ಒಂಟಿಗಳ ರಾಜಮಾತೆ ಅಶ್ವಿನಿ ಗೌಡ ಕಣ್ಣೀರು ಹಾಕಿದ್ದಾರೆ.

2 Min read
Author : Mahmad Rafik
Published : Oct 06 2025, 05:55 PM IST
Share this Photo Gallery
  • FB
  • TW
  • Linkdin
  • Whatsapp
16
ಒಂಟಿ ಜಂಟಿಗಳ ನಡುವೆ ಗಲಾಟೆ
Image Credit : Colors Kannada

ಒಂಟಿ-ಜಂಟಿಗಳ ನಡುವೆ ಗಲಾಟೆ

ಬಿಗ್‌ಬಾಸ್ ಸೀಸನ್ 12 ಆರಂಭವಾದ ಮೊದಲ ದಿನದಂದು ಮನೆಯಲ್ಲಿ ಒಂಟಿ ಮತ್ತು ಜಂಟಿ ಎಂಬ ಎರಡು ಬಣಗಳಿವೆ. ಮೊದಲ ವಾರ ಹೊಂದಾಣಿಕೆ ಮಾಡಿಕೊಂಡು ಹೋಗಿದ್ದರಿಂದ ಎರಡೂ ಬಣಗಳ ನಡುವೆ ಯಾವುದೇ ಗಲಾಟೆಗಳು ವ್ಯಾಪಕವಾಗಿ ನಡೆದಿರಲಿಲ್ಲ. ಇದೀಗ ಎರಡನೇ ವಾರದ ಮೊದಲ ದಿನದಿಂದಲೇ ಎರಡೂ ಬಣಗಳ ನಡುವೆ ಬೆಂಕಿ ಹತ್ತಿಕೊಂಡಿದ್ದು, ಗಾಂಚಾಲಿ ಎಂಬಿತ್ಯಾದಿ ಪದಗಳಿಂದ ಮನೆಯಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ.

26
ನಿಯಮಗಳ ಉಲ್ಲಂಘನೆ
Image Credit : Colors Kannada

ನಿಯಮಗಳ ಉಲ್ಲಂಘನೆ

ಜಂಟಿಗಳೇ ಏನೇ ತಪ್ಪು ಮಾಡಿದರೂ ಒಂಟಿಗಳು ಶಿಕ್ಷೆ ಅನುಭವಿಸುತ್ತಾರೆ. ಜಂಟಿಗಳು ನಿಯಮ ಪಾಲಿಸುವಂತೆ ನೋಡಿಕೊಳ್ಳುವುದು ಒಂಟಿಗಳ ಜವಾಬ್ದಾರಿಯಾಗಿತ್ತು. ಮೊದಲ ವಾರದಲ್ಲಿ ಈ ರೂಲ್ಸ್ ಬ್ರೇಕ್ ಆಗಿದ್ದರಿಂದ ಒಂಟಿಗಳು ಲಕ್ಷುರಿ ಆಹಾರ ಸಾಮಾಗ್ರಿಗಳನ್ನು ಕಳೆದುಕೊಂಡಿದ್ದರು. ಗಿಲ್ಲಿ ಮತ್ತು ಕಾವ್ಯಾ ಮಾಡಿದ ತಪ್ಪಿನಿಂದ ನಾವು ಆಹಾರ ಕಳೆದುಕೊಂಡಿದ್ದೇವೆ ಎಂದು ಅಶ್ವಿನಿ ಗೌಡ ಆರೋಪಿಸಿದ್ದರು.

Related Articles

Related image1
ಬಿಗ್‌ಬಾಸ್ ಮನೆಯಲ್ಲಿ ಇತಿಹಾಸ ಸೃಷ್ಟಿಸಿದ ಮಲ್ಲಮ್ಮ: ಹೊಸ ಅಧ್ಯಾಯಕ್ಕೆ ಬಿಗ್‌ಬಾಸ್‌ ಮೆಚ್ಚುಗೆ
Related image2
ಜಾಹ್ನವಿಯದ್ದು ವಿಕೃತ ಮನಸ್ಸು ಎಂದ ಮಾಜಿ ಗಂಡ ಕಾರ್ತಿಕ್
36
ಅಶ್ವಿನಿ ಗೌಡ ಕಣ್ಣೀರು
Image Credit : Colors Kannada

ಅಶ್ವಿನಿ ಗೌಡ ಕಣ್ಣೀರು

ಇದೀಗ ಜಂಟಿಗಳು ತಪ್ಪಿನಿಂದ ನಾವು ಹೊರಗಡೆ ಮಲಗುವಂತಾಗಿದೆ ಎಂದು ಜಾನ್ವಿ ಮತ್ತು ಅಶ್ವಿನಿ ಗೌಡ ಕೋಪಗೊಂಡಿದ್ದಾರೆ. ಜಗಳದ ಸಂದರ್ಭದಲ್ಲಿ ಗಾಂಚಾಲಿ ಎಂಬ ಪದವನ್ನು ಜಾನ್ವಿ ಬಳಕೆ ಮಾಡಿದ್ದರು. ಇದರಿಂದ ಕೋಪಗೊಂಡಿರುವ ಮಂಜು ಭಾಷಿಣಿ, ಒಂಟಿಗಳನ್ನು ತರಾಟೆಗೆ ತೆಗೆದುಕೊಂಡಂತೆ ಕಾಣಿಸುತ್ತಿದೆ. ಈ ಎಲ್ಲಾ ಬೆಳವಣಿಗೆಯಿಂದ ಒಂಟಿಗಳ ರಾಜಮಾತೆಯಾಗಿರುವ ಅಶ್ವಿನಿ ಗೌಡ ಕಣ್ಣೀರು ಹಾಕಿದ್ದಾರೆ.

46
ಮಂಜು ಭಾಷಿಣಿ ಆಕ್ರೋಶ
Image Credit : Colors Kannada

ಮಂಜು ಭಾಷಿಣಿ ಆಕ್ರೋಶ

ಬಿಡುಗಡೆಯಾಗಿರುವ ಪ್ರೋಮೋ ಪ್ರಕಾರ, ಗಾಂಚಾಲಿ ಗೀಂಚಾಲಿ ಯಾವನಿದ್ದಾನೂ ಅನ್ನಿಸಿಕೊಳ್ಳಲ್ಲ ಬಿಗ್‌ಬಾಸ್. ಹದ್ದುಮೀರಿ ಮಾತನಾಡೋದೆಲ್ಲಾ ಬೇಡ, ಮಾತುಗಳ ಮೇಲೆ ನಿಗಾ ಇರಲಿ ಎಂದು ಮಂಜು ಭಾಷಿಣಿ ಆಕ್ರೋಶ ಹೊರ ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ, ಮಂಜು ಭಾಷಿಣಿ ಇಷ್ಟೊಂದು ಓವರ್ ಆಗಿ ರಿಯಾಕ್ಟ್ ಮಾಡೋದು ಬೇಕಿರಲ್ಲ ಅಂತಾ ಅಶ್ವಿನಿ ಗೌಡ ಹೇಳಿದ್ದಾರೆ.

56
ಊಟ ಮಾಡದ ಅಶ್ವಿನಿ ಗೌಡ
Image Credit : Colors Kannada

ಊಟ ಮಾಡದ ಅಶ್ವಿನಿ ಗೌಡ

ಮಂಜು ಭಾಷಿಣಿ ಅವರ ಮಾತಿನೇಟಿನಿಂದ ನೊಂದಿರುವ ಅಶ್ವಿನಿ ಗೌಡ ಊಟ ಮಾಡದೇ ಕುಳಿತಿದ್ದಾರೆ. ಆಟ ಆಡೋದಕ್ಕೆ ನನಗೇನು ಅಭ್ಯಂತರವಿಲ್ಲ. ಒಬ್ಬರನ್ನು ಅಂಗಿಸೋದ್ಯಾಕೆ? ಮೂರು ದಿನದಿಂದ ಆರೋಗ್ಯ ಸರಿ ಇಲ್ಲ ಎಂದು ಹೇಳುತ್ತಾ ಧನುಷ್ ಸೇರಿದಂತೆ ಎಲ್ಲಾ ಒಂಟಿಗಳ ಮುಂದೆ ಅಶ್ವಿನಿ ಗೌಡ ಕಣ್ಣೀರು ಹಾಕಿದ್ದಾರೆ. ಈ ಎಲ್ಲಾ ಜಗಳವನ್ನು ರಕ್ಷಿತಾ ಶೆಟ್ಟಿ ಬೆಕ್ಕಸ ಬೆರಗಾಗಿ ನೋಡುತ್ತಾ ನಿಂತಿದ್ದಾರೆ.

ಇದನ್ನೂ ಓದಿ: ಡಿವೋರ್ಸ್ ಆದ್ರು ಬಿಡ್ತಿಲ್ಲ: ನಿರೂಪಕಿ ಜಾನ್ವಿ ಮಾಜಿ ಗಂಡ ಕಾರ್ತಿಕ್ ಮಹಡಿ ಬೇಸರ

66
ಜಂಟಿಗಳಿಗೆ ಅಡುಗೆ ಮನೆ ಕ್ಲೋಸ್
Image Credit : Colors Kannada

ಜಂಟಿಗಳಿಗೆ ಅಡುಗೆ ಮನೆ ಕ್ಲೋಸ್

ನಿಯಮಗಳನ್ನು ಉಲ್ಲಂಘನೆ ಮಾಡಿದ್ದರಿಂದ ಜಂಟಿಗಳಿಗೆ ಅಡುಗೆಮನೆಯನ್ನು ಕ್ಲೋಸ್ ಮಾಡಲಾಗಿದೆ. ಹಾಗಾಗಿ ಒಂಟಿಗಳೇ ಅಡುಗೆ ತಯಾರಿಸಿದಂತೆ ಕಾಣಿಸುತ್ತಿದೆ. ಕಿಚನ್ ಹೊರಗಡೆ ನಿಂತುಕೊಂಡು ಜಂಟಿಗಳೆಲ್ಲಾ ಒಂದಾಗಿ ಒಂಟಿಗಳನ್ನು ತಮಾಷೆ ಮಾಡುತ್ತಾ ಕಾಲೆಳೆದಿರೋದು ಪ್ರೋಮೋದಲ್ಲಿ ಕಂಡು ಬಂದಿದೆ. ಮತ್ತೊಂದೆಡೆ ಅಭಿಷೇಕ್ ಮತ್ತು ಜಾನ್ವಿ ನಡುವೆಯೂ ಕಿಚ್ಚು ಹೊತ್ತುಕೊಂಡಿದೆ.

ಇದನ್ನೂ ಓದಿ: ನಿನ್ನಂತಹ ಆಂಟಿಗಳೇ ಇಷ್ಟವೆಂದ ಅಭಿಷೇಕ್‌ಗೆ ಖಡಕ್ ತಿರುಗೇಟು ಕೊಟ್ಟ ಜಾಹ್ನವಿ! ಬಿಗ್ ಬಾಸ್ ಅಸಲಿ ಆಟ ಈಗ ಶುರು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬಿಗ್ ಬಾಸ್ ಕನ್ನಡ
ಬಿಗ್ ಬಾಸ್
ಕಲರ್ಸ್ ಕನ್ನಡ
ರಿಯಾಲಿಟಿ ಶೋ

Latest Videos
Recommended Stories
Recommended image1
ಕುಟುಂಬ ಸಮೇತರಾಗಿ ಮಂತ್ರಾಲಯ ರಾಯರ ದರ್ಶನ ಪಡೆದ ನಿರೂಪಕಿ ಶ್ವೇತಾ ಚಂಗಪ್ಪ
Recommended image2
ಮದುವೆಯ ಸುಳಿವು ನೀಡಿದ ಬಿಗ್ಬಾಸ್ ಬೆಡಗಿ: ವೀಡಿಯೋ ನೋಡಿ ತಲೆಕೆಡಿಸಿಕೊಂಡ ಫ್ಯಾನ್ಸ್
Recommended image3
Bigg Boss ಅಶ್ವಿನಿ ಗೌಡ - ಗಿಲ್ಲಿ ನಟ ಮಂಡ್ಯದಲ್ಲಿ ಮುಖಾಮುಖಿ! ಈ ಬಾರಿ ಇಬ್ಬರ ನಡುವೆ ರೋಚಕ ಟ್ವಿಸ್ಟ್​
Related Stories
Recommended image1
ಬಿಗ್‌ಬಾಸ್ ಮನೆಯಲ್ಲಿ ಇತಿಹಾಸ ಸೃಷ್ಟಿಸಿದ ಮಲ್ಲಮ್ಮ: ಹೊಸ ಅಧ್ಯಾಯಕ್ಕೆ ಬಿಗ್‌ಬಾಸ್‌ ಮೆಚ್ಚುಗೆ
Recommended image2
ಜಾಹ್ನವಿಯದ್ದು ವಿಕೃತ ಮನಸ್ಸು ಎಂದ ಮಾಜಿ ಗಂಡ ಕಾರ್ತಿಕ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved