Yakshagana artist dies on stage: ಯಕ್ಷಗಾನದ ಪ್ರಸಿದ್ಧ ಮಂದಾರ್ತಿ ಮೇಳದ ಹಿರಿಯ ಕಲಾವಿದ ಈಶ್ವರ ಗೌಡ ಅವರು ಮಹಿಷಾಸುರ ಪಾತ್ರದ ಪ್ರದರ್ಶನದ ನಂತರ ಹೃದಯಾಘಾತದಿಂದ ನಿಧನರಾದರು. ಪ್ರದರ್ಶನಕ್ಕೂ ಮುನ್ನ ಅದೇ ಮೇಳದಲ್ಲಿರುವ ತಮ್ಮ ತಂದೆಯ ಆಶೀರ್ವಾದ ಪಡೆದಿದ್ದೇ ಕೊನೆಯಾಯಿತು ಎಂಬುದು ವಿಪರ್ಯಾಸ.
ಉಡುಪಿ, (ನ.20): ಯಕ್ಷಗಾನದ ಪ್ರಸಿದ್ಧ ಮಂದಾರ್ತಿ ಎರಡನೇ ಮೇಳದ ಹಿರಿಯ ಕಲಾವಿದ ಈಶ್ವರ ಗೌಡ ನಿನ್ನೆ ರಾತ್ರಿ ಹಠಾತ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಮಹಿಷಾಸುರ ಪಾತ್ರದಲ್ಲಿ ಅದ್ಭುತ ನಟನೆ ನೀಡಿ, ಪ್ರಸಂಗ ಮುಗಿಸಿ ವೇಷ ಕಳಚುತ್ತಿದ್ದಂತೆಯೇ ಈಶ್ವರ ಗೌಡ ಅಸ್ವಸ್ಥರಾಗಿದ್ದಾರೆ. ತಕ್ಷಣ ಅವರನ್ನ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದ್ರೂ ಆ ವೇಳೆಗೆ ದಾರಿಯಲ್ಲೇ ಅವರು ನಿಧನರಾಗಿದ್ದಾರೆ.
ಇದನ್ನೂ ಓದಿ: ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿ ಕಾಮಿಗಳು : ಬಿಳಿಮಲೆ ವಿವಾದ!
ತಂದೆಯ ಕೊನೆ ಆಶೀರ್ವಾದ!
ವಿಶೇಷವೆಂದರೆ, ಅದೇ ಮಂದಾರ್ತಿ ಮೇಳದಲ್ಲಿ ಈಶ್ವರ ಗೌಡ ಅವರ ತಂದೆ ಕೂಡ ಹಿರಿಯ ವೇಷಧಾರಿಯಾಗಿದ್ದು, ಪ್ರತಿ ಪ್ರದರ್ಶನದಲ್ಲೂ ಚೌಕಿಯಲ್ಲಿ ತಂದೆಯ ಆಶೀರ್ವಾದ ಪಡೆದು ನಂತರವೇ ಮಗ ಪಾತ್ರನಿರ್ವಹಿಸುತ್ತಿದ್ದರಂತೆ ನಿನ್ನೆ ಕೂಡ ಕೊನೆಯ ಆಶೀರ್ವಾದವೆಂಬಂತೆ ತಂದೆಯ ಕಾಲು ಮುಟ್ಟೀ ನಮಸ್ಕರಿಸಿ ಪಾತ್ರ ಪಾತ್ರ ನಿರ್ವಹಿಸಿದ್ದರು.
ಆದರೆ ಪಾತ್ರ ಮುಗಿಸಿ ತಂದೆಯ ಬಳಿ ಮರಳಿ ಬರುವ ಮೊದಲೇ ಜೀವ ಬಿಟ್ಟಿದ್ದಾರೆ. ಈಶ್ವರ ಗೌಡರ ಅಕಾಲಿಕ ನಿಧನಕ್ಕೆ ಯಕ್ಷಗಾನದ ಪ್ರೇಮಿಗಳು, ಮಂದಾರ್ತಿ ಮೇಳದ ಕಲಾವಿದರು ಕಂಬನಿ ಮಿಡಿದಿದ್ದಾರೆ.


