- Home
- Entertainment
- TV Talk
- ಮದುವೆ ಆಗೋ ಆಸೆ ಇದೆ, ಪ್ರಫೋಸಲ್ ಹೆಚ್ಚಾಗಿದೆ - ಹುಡುಗಿಯರ ಬಗ್ಗೆ ಧ್ರುವಂತ್ ಹೇಳಿದ್ದೇನು ?
ಮದುವೆ ಆಗೋ ಆಸೆ ಇದೆ, ಪ್ರಫೋಸಲ್ ಹೆಚ್ಚಾಗಿದೆ - ಹುಡುಗಿಯರ ಬಗ್ಗೆ ಧ್ರುವಂತ್ ಹೇಳಿದ್ದೇನು ?
ಬಿಗ್ ಬಾಸ್ 11ರ ಸ್ಪರ್ಧಿ ಧ್ರುವಂತ್ ಈಗ್ಲೂ ಬ್ಯಾಚ್ಯುಲರ್. ಬಿಗ್ ಬಾಸ್ ಮುಗಿದ ಮೇಲೆ ಅವರ ಫ್ಯಾನ್ಸ್ ಫಾಲೋವರ್ಸ್ ಸಂಖ್ಯೆ ಮಾತ್ರವಲ್ಲ ಪ್ರಫೋಸ್ ಮಾಡೋರ ಸಂಖ್ಯೆ ಕೂಡ ಹೆಚ್ಚಾಗಿದೆ. ಮದುವೆ ಬಗ್ಗೆ ನಟನ ಅಭಿಪ್ರಾಯ ಏನು?

ಹೆಚ್ಚಾಗ್ತಿದೆ ಹುಡುಗಿ ಫಾಲೋವರ್ಸ್ ಸಂಖ್ಯೆ
ಬಿಗ್ ಬಾಸ್ 11 ರಲ್ಲಿ ಉತ್ತಮ ಆಟ ಪ್ರದರ್ಶನ ಮಾಡಿದ್ದ ಧ್ರುವಂತ್ ಈಗ ತಮ್ಮ ಕೆಲ್ಸದಲ್ಲಿ ಬ್ಯುಸಿ. ಸದ್ಯ ಯಾವುದೇ ಸೀರಿಯಲ್ ನಲ್ಲಿ ಅವರು ಕಾಣಿಸಿಕೊಳ್ತಿಲ್ಲ. ಇವೆಂಟ್ಸ್ ಸೇರಿದಂತೆ ಮುಂದಿನ ಪ್ರಾಜೆಕ್ಟ್ ಬಗ್ಗೆ ಬ್ಯುಸಿ ಇರುವ ಧ್ರುವಂತ್ ಗೆ ಫ್ಯಾನ್ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದೆ. ಹೆಣ್ಮಕ್ಕಳು ಹೆಚ್ಚು ಫಾಲೋ ಮಾಡ್ತಿದ್ದಾರೆ.
ಪ್ರಫೋಸ್ ಬಗ್ಗೆ ಧ್ರುವಂತ್ ಹೇಳೋದೇನು?
ಧ್ರುವಂತ್ ಗೆ ಸಾಕಷ್ಟು ಪ್ರಫೋಸಲ್ ಬಂದಿದೆ. ಅನೇಕ ಹುಡುಗಿಯರು ಧ್ರುವಂತ್ ಗೆ ಪ್ರಫೋಸ್ ಮಾಡಿದ್ದಾರೆ. ಹುಡುಗಿಯರು ತಮ್ಮ ಇಷ್ಟ, ಕಷ್ಟಗಳನ್ನು ಧುವಂತ್ ಮುಂದೆ ಹಂಚಿಕೊಂಡಿದ್ದಾರೆ. ಇದು ಗೌರವದ ವಿಷ್ಯ ಎಂದು ಧ್ರುವಂತ್ ಹೇಳಿದ್ದಾರೆ. ಎಲ್ಲರನ್ನು ತಾಯಿ ದೃಷ್ಟಿಯಲ್ಲಿ ನೋಡ್ತಿದ್ದಾರೆ ಧ್ರುವಂತ್. ಪ್ರತಿಯೊಬ್ಬ ಮಹಿಳೆಗೆ ಗೌರವ ನೀಡ್ತೇನೆ. ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡ್ತೇನೆ ಎಂದು ಧ್ರುವಂತ್ ಹೇಳಿದ್ದಾರೆ.
ಧ್ರುವಂತ್ ಮದುವೆ ಯಾವಾಗ?
ಧ್ರುವಂತ್ ಇನ್ನೂ ಸಿಂಗಲ್. ಅವರು ಮದುವೆಯಾಗೋಕೆ ಸಿದ್ಧವಿದ್ದಾರೆ. ಬಾಳಸಂಗಾತಿ ಬೇಕು ಅಂತ ಧ್ರುವಂತ್ ಹೇಳಿದ್ದಾರೆ. ಆದ್ರೆ ಮನೆಯಲ್ಲಿ ಧ್ರುವಂತ್ ಗೆ ಹುಡುಗಿ ಹುಡುಕ್ತಿಲ್ಲ. ಧ್ರುವಂತ್ ಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ನಿಮಗಿಷ್ಟದ, ನಿಮಗೆ ಸೂಕ್ತವೆನ್ನಿಸುವ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಂತೆ ಧ್ರುವಂತ್ ಗೆ ಪಾಲಕರು ಹೇಳಿದ್ದಾರೆ. ನನಗಿಂತ ಪಾಲಕರು ಹುಡುಕಿದ್ರೆ ಬೆಸ್ಟ್ ಇತ್ತು. ಆ ಸ್ಥಿತಿ ಈಗ ನನಗೆ ಬಂದಿದೆ ಎಂದು ಧ್ರುವಂತ್ ಹೇಳಿದ್ದಾರೆ.
ಹೆಣ್ಮಕ್ಕಳಿಗೆ ಸಮಾನತೆ ನೀಡಲು ಸಿದ್ಧವಿಲ್ವ?
ಹೆಣ್ಮಕ್ಕಳು ಯಾವಾಗ್ಲೂ ಪುರುಷರಿಗಿಂತ ಮೇಲಿದ್ದಾರೆ. ಅವರು ಪುರುಷರಿಗೆ ಸಮ ಅಲ್ವೇ ಅಲ್ಲ. ಪುರುಷರಿಗಿಂತ ಉನ್ನತ ಸ್ಥಾನದಲ್ಲಿದ್ರೂ ಸಮಾನತೆ ಏಕೆ ಕೇಳ್ತಿದ್ದಾರೆ ನನಗೆ ಗೊತ್ತಿಲ್ಲ ಎನ್ನುವ ಧ್ರುವಂತ್, ನಾನು ತೀರಾ ಒಳ್ಳೆಯವನಲ್ಲ ಅಂತಾ ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲೂ ಇದ್ದನೇ ಹೇಳಿದ್ದ ಧ್ರುವಂತ್, ಬ್ಯಾಡ್ ಕಮೆಂಟ್ ಮಾಡಿದ ಹುಡುಗಿಯರಿಗೆ ತಿರುಗಿ ಉತ್ತರ ನೀಡಿದ್ದನ್ನು ಒಪ್ಪಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

