- Home
- Entertainment
- TV Talk
- Brahmagantu ಸೀರಿಯಲ್ಗೆ ಹೊಸ ಹೀರೋ ಎಂಟ್ರಿ! ಕಿಡ್ನ್ಯಾಪ್ ಆಗಿರೋ ದೀಪಾ ಕಾಪಾಡಲು ಬಂದನೀತ
Brahmagantu ಸೀರಿಯಲ್ಗೆ ಹೊಸ ಹೀರೋ ಎಂಟ್ರಿ! ಕಿಡ್ನ್ಯಾಪ್ ಆಗಿರೋ ದೀಪಾ ಕಾಪಾಡಲು ಬಂದನೀತ
'ಬ್ರಹ್ಮಗಂಟು' ಸೀರಿಯಲ್‌ನಲ್ಲಿ ಸೌಂದರ್ಯಳಿಂದ ಕಿಡ್ನಾಪ್ ಆದ ದೀಪಾಳನ್ನು ರಕ್ಷಿಸಲು ಹೊಸ ಹೀರೋ ಎಂಟ್ರಿ ಕೊಟ್ಟಿದ್ದಾನೆ. ಈ ಘಟನೆಯ ನಂತರ, ವೀಕ್ಷಕರು ಕಾತರದಿಂದ ಕಾಯುತ್ತಿದ್ದ ದೀಪಾಳ ಮಾಡೆಲ್ ದಿಶಾ ರೂಪದ ಪರಿಚಯವಾಗಲಿದ್ದು, ನಟಿ ದಿಯಾ ಪಾಲಕ್ಕಲ್ ಅವರ ನಿಜವಾದ ಸೌಂದರ್ಯ ತೆರೆಯ ಮೇಲೆ ಅನಾವರಣಗೊಳ್ಳಲಿದೆ.

ದಿಶಾ ಆಗ್ತಿದ್ದಾಳೆ ದೀಪಾ
ಬ್ರಹ್ಮಗಂಟು ಸೀರಿಯಲ್ (Brahmagantu Serial) ದೀಪಾ, ದಿಶಾ ಆಗಿ ಇನ್ನೇನು ವೀಕ್ಷಕರ ಕಣ್ಣಮುಂದೆ ಬರಲಿದ್ದಾಳೆ. 'ಪ್ಲೀಸ್ ದೀಪಾ, ನಿನ್ನ ರಿಯಲ್ ಮುದ್ದು ಮುಖ ತೋರಿಸು ಕಣೆ... ಹೀಗೆ ನೋಡಲು ಆಗಲ್ಲ'... 'ಡೈರೆಕ್ಟರ್ ಸಾಹೇಬ್ರೇ ಈ ವೇಷ ಯಾವಾಗ ಬದಲಿಸ್ತೀರಾ?', 'ಇವಳ ಒರಿಜಿನಲ್ ಮುಖ ತೋರಿಸಿಲ್ಲಾ ಅಂದ್ರೆ ಸೀರಿಯಲ್ ನೋಡೋದನ್ನೇ ಬಿಟ್ಬಿಡ್ತೀವಿ ಅಷ್ಟೇ ಎಂಬ ಧಮ್ಕಿ!...' ಹೀಗೆ ಪ್ರತಿನಿತ್ಯವೂ ನಟಿಯ ನಿಜವಾದ ಮುಖವನ್ನು ನೋಡಲು ಕಾತರದಿಂದ ವೀಕ್ಷಕರು ಕಾಯ್ತಿರೋ ವೀಕ್ಷಕರಿಗೆ ದಿಶಾ ಕಾಣಿಸಿಕೊಳ್ಳಲಿದ್ದಾಳೆ.
ದೀಪಾ ಕಿಡ್ನ್ಯಾಪ್
ಇದರ ಮುನ್ನವೇ ದೀಪಾ ಕಿಡ್ನ್ಯಾಪ್ ಆಗಿದ್ದಾಳೆ. ಅದನ್ನು ಮಾಡಿಸಿದ್ದು ಯಾರು ಎಂದು ಬೇರೆ ಹೇಳಬೇಕಾಗಿಲ್ಲ. ಅವಳೇ ಸ ಸೌಂದರ್ಯ. ತನ್ನ ಗಂಡನಿಗೆ ರೂಪ ಅಲ್ಲ ಗುಣ ಮುಖ್ಯ, ಅದನ್ನು ನಾನು ಸಾಬೀತು ಮಾಡುತ್ತೇನೆ ಎಂದು ದೀಪಾ, ಸೌಂದರ್ಯಳಿಗೆ ಸವಾಲು ಹಾಕಿದ್ದಳು. ಇವಳದ್ಯಾಕೋ ಅತಿಯಾಯಿತು ಎಂದುಕೊಂಡ ಸೌಂದರ್ಯ ದೀಪಾಳನ್ನು ಕಿಡ್ನ್ಯಾಪ್ ಮಾಡಿಸಿದ್ದಾಳೆ.
ಹೊಸ ಹೀರೋ ಎಂಟ್ರಿ
ನಿನ್ನನ್ನು ಕಾಪಾಡಲು ಯಾರು ಬರ್ತಾರೆ ಎಂದು ನೋಡಿಯೇ ಬಿಡ್ತೇನೆ ಎಂದು ರೌಡಿಗಳು ಚಾಲೆಂಜ್ ಹಾಕಿದ್ದಾಳೆ. ಅಷ್ಟರಲ್ಲಿಯೇ ಹೊಸ ಹೀರೋ ಎಂಟ್ರಿಯಾಗಿದೆ. ಆತ ದೀಪಾಳನ್ನು ಬಿಡಿಸಿಕೊಂಡು ಬರಲು ದೌಡಾಯಿಸಿದ್ದಾನೆ.
ಯಾರೀ ಹೊಸಬ?
ಈಗ ರಿಲೀಸ್ ಆಗಿರೋ ಪ್ರೊಮೋದಲ್ಲಿ ಹೀರೋನ ಮುಖ ತೋರಿಸಿಲ್ಲ. ಆದರೆ ಈತ ಬೇರಾರೂ ಅಲ್ಲ ನಾನಿನ್ನ ಬಿಡಲಾರೆ (Naa Ninna Bidalaare) ಶರತ್ ಎಂದೇ ನೆಟ್ಟಿಗರು ಕಮೆಂಟ್ನಲ್ಲಿ ಹೇಳುತ್ತಿದ್ದಾರೆ. ಹಾಗಿದ್ರೆ ಹೀರೋ ರೋಲ್ ಬದಲಾಯಿತಾ ಎಂದು ಹಲವರು ಪ್ರಶ್ನೆ ಕೂಡ ಮಾಡುತ್ತಿದ್ದಾರೆ. ಆದರೆ ವಿಶೇಷ ಸಂದರ್ಭಗಳಲ್ಲಿ ಒಂದು ಸೀರಿಯಲ್ ನಾಯಕ-ನಾಯಕಿ ಇನ್ನೊಂದು ಸೀರಿಯಲ್ಗೆ ಅತಿಥಿಯಾಗಿ ಎಂಟ್ರಿ ಕೊಡುವುದು ಮಾಮೂಲು.
ಬಚಾವಾಗ್ತಾಳಾ ದೀಪಾ?
ಈ ಹೀರೋ ದೀಪಾಳನ್ನು ಬಚಾವ್ ಮಾಡ್ತಾನಾ ಎನ್ನುವುದು ಮುಂದಿರುವ ಪ್ರಶ್ನೆ. ಹೀರೋ ಎಂಟ್ರಿ ಆದ್ಮೇಲೆ ದೀಪಾ ಬಚಾವ್ ಆಗಲೇಬೇಕು. ಅಲ್ಲಿ ದೀಪಾ ದಿಶಾ ಆಗಿ ಬದಲಾಗ್ತಿರೋ ಈ ಹೊತ್ತಿನಲ್ಲಿ ಅದಕ್ಕೂ ಮುನ್ನ ಒಂದು ಟ್ವಿಸ್ಟ್ ಕೊಟ್ಟಿದ್ದಾರೆ ಅಷ್ಟೇ.
ದಿಯಾ ಪಾಲಕ್ಕಲ್ ರಿಯಲ್ ರೂಪ
ಸೋಡಾಬುಡ್ಡಿ, ಕಪ್ಪು ವರ್ಣ, ಹಲ್ಲಿಗೆ ಕ್ಲಿಪ್, ಎಣ್ಣೆ ಬಳಿದ ಎರಡು ಜಡೆ, ಅದಕ್ಕೊಂದು ರಿಬ್ಬನ್... ಈ ವೇಷದಲ್ಲಿ ಕಾಣಿಸಿಕೊಳ್ತಿರೋ ದೀಪಾ ಈಗ ಮಾಡೆಲ್ ದಿಶಾ ಆಗಿ ಬದಲಾಗ್ತಿದ್ದಾಳೆ. ಅಂದಹಾಗೆ ದೀಪಾ- ದಿಶಾಳ ರಿಯಲ್ ನೇಮ್ ದಿಯಾ ಪಾಲಕ್ಕಲ್. ರಿಯಲ್ ಮುಖ ಮುದ್ದಾಗಿ ಇರೋದನ್ನು ನೋಡಿರುವ ವೀಕ್ಷಕರು, ಅದೇ ಮುಖವನ್ನೇ ತೋರಿಸಿ ಇನ್ನಾದರೂ ಎಂದು ನಿರ್ದೇಶಕರನ್ನು ದುಂಬಾಲು ಬೀಳುವುದನ್ನು ಕಮೆಂಟ್ಗಳಲ್ಲಿ ನೋಡಬಹುದಾಗಿದೆ. ಬಾಲಕಿಯಾಗಿ ಮನಸೆಳೆದಿದ್ದ ದಿಯಾ ಈಗ ನಾಯಕಿಯಾಗಿದ್ದಾರೆ.
ವೀಕ್ಷಕರ ಆಸೆ ನೆರವೇರಿತು
ಕೊನೆಗೂ ಈ ಆಸೆಯನ್ನು ಈಡೇರಿಸಿಯೇ ಬಿಟ್ಟಿದ್ದಾರೆ ನಿರ್ದೇಶಕರು. ಬ್ರಹ್ಮಗಂಟು ಅಭಿಮಾನಿಗಳಿಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟಿದ್ದಾರೆ. ದೀಪಾಳ ಅಸಲಿ ಮುಖ ಬಯಲಾಗುವ ಟೈಮ್ ಬಂದೇ ಬಿಟ್ಟಿದೆ. ಇದೀಗ ಗಂಡನ ಎದುರು ದಿಶಾ ಆಗಿ ಕಾಣಿಸಿಕೊಳ್ತಿದ್ದಾಳೆ ದೀಪಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

