- Home
- Entertainment
- TV Talk
- ನಮ್ಮ ಮನೆಯಲ್ಲೂ ಕನ್ನಡಿ ಇದೇರಿ... Body Shaming ಬಗ್ಗೆ Laskhmi Nivasa ಚಿನ್ನುಮರಿ ಗರಂ....
ನಮ್ಮ ಮನೆಯಲ್ಲೂ ಕನ್ನಡಿ ಇದೇರಿ... Body Shaming ಬಗ್ಗೆ Laskhmi Nivasa ಚಿನ್ನುಮರಿ ಗರಂ....
'ಲಕ್ಷ್ಮೀ ನಿವಾಸ' ಧಾರಾವಾಹಿ ಖ್ಯಾತಿಯ ನಟಿ ಚಂದನಾ ಅನಂತಕೃಷ್ಣ ಅವರು ಬಾಡಿ ಷೇಮಿಂಗ್ ಮಾಡುವವರಿಗೆ ಖಡಕ್ ಉತ್ತರ ನೀಡಿದ್ದಾರೆ. ದಪ್ಪ, ಸಣ್ಣ ಎಂದು ಟೀಕಿಸುವವರಿಗೆ, ನಮ್ಮ ದೇಹದ ಬಗ್ಗೆ ನಮಗೆ ಅರಿವಿದೆ ಮತ್ತು ನಮ್ಮ ಮನೆಯಲ್ಲೂ ಕನ್ನಡಿ ಇದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಇವರು ಮೆಚ್ಚುವ ವಸ್ತು ಇನ್ನಿಲ್ಲ ಜೋಕೆ...
ಕವಿ ಕೆ.ಎಸ್.ನರಸಿಂಹ ಸ್ವಾಮಿ ಅವರ ಇವರು ಮೆಚ್ಚುವ ವಸ್ತು ಇನ್ನಿಲ್ಲ ಜೋಕೆ... ಹಾಡನ್ನು ಕೇಳಿರಬೇಕಲ್ಲವೆ? ನಿಂತರೆ ಕೇಳುವರು ನೀನೇಕೆ ನಿಂತೆ ಮಲಗಿದರೆ ಗೊಣಗುವರು ಇವಗಿಲ್ಲ ಚಿಂತೆ ಓಡಿದರೆ ಬೆನ್ನ ಹಿಂದೆಯೇ ಇವರ ಟೀಕೆ ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ... ಎನ್ನುವ ಹಾಡು ಇಂದಿಗೂ ಪ್ರಸ್ತುತವೇ. ಈ ಮಾತನ್ನು ಬಾಡಿ ಷೇಮಿಂಗ್ (Body Shaming) ವಿಷಯಕ್ಕೆ ಹೋಲಿಕೆ ಮಾಡಿಕೊಂಡರೆ ಅದರಲ್ಲಿಯೂ ಹೆಣ್ಣುಮಕ್ಕಳ ಬಗ್ಗೆ ಮಾತನಾಡುವುದಾದರೆ ಅಕ್ಷರಶಃ ಅನ್ವಯ ಆಗುತ್ತದೆ. ಇಂಥದ್ದೊಂದು ಪರಿಸ್ಥಿತಿ ಮನೆ, ಕಚೇರಿಯಿಂದ ಹಿಡಿದು ಎಲ್ಲೆಡೆಯೂ ಕಾಣಸಿಗುತ್ತದೆ. ಅದರಲ್ಲಿಯೂ ಸೆಲೆಬ್ರಿಟಿಗಳ ಪಾಡೂ ಯಾರಿಗೂ ಬೇಡ.
ಹಾಗಿದ್ರೂ ಕೇಳ್ತಾರೆ, ಹೀಗಿದ್ರೂ ಕೇಳ್ತಾರೆ...
ತೆಳ್ಳಗಿದ್ದರೆ ಹೊಟ್ಟೆಗೆ ಏನೂ ತಿನ್ನಲ್ವಾ ಎನ್ನುವುದು, ದಪ್ಪ ಇದ್ದರೆ ಥೂ ಅಸಹ್ಯ ಎನ್ನುವುದು, ಬಣ್ಣದ ವಿಷಯದಲ್ಲಿ ಇನ್ನೊಂದು ಮಾತನಾಡುವುದು, ಎತ್ತರ ಇದ್ದರೆ ಒಂದು, ಕುಳ್ಳಗೆ ಇದ್ದರೆ ಮತ್ತೊಂದು.... ಹೀಗೆ ತಾವು ಹೇಗೆ ಇದ್ದೇವೆ ಎನ್ನುವುದನ್ನೂ ನೋಡದೇ ಬೇರೆಯವರನ್ನು ಅಣಕಿಸಿ ಮಾತನಾಡುವುದು ಎಂದರೆ ಒಂದಿಷ್ಟು ಮಂದಿಗೆ ಬಹಳ ಖುಷಿ. ಅದರಲ್ಲಿಯೂ ಸೆಲೆಬ್ರಿಟಿಗಳು ಎಂದರೆ ಹೀಗೆಯೇ ಇರಬೇಕು, ತೆಳ್ಳಗೆ ಬೆಳ್ಳಗೆ, ಸಪೂರ ಸೊಂಟ ಇದ್ದರೇನೇ ಅವರು ಮಾಡೆಲ್ಗಳು, ನಟಿಯರು ಎನ್ನುವ ಮಾತು ಇರುವುದರಿಂದ ಅವರ ಬಗ್ಗೆ ಕಮೆಂಟ್ಸ್ಗಳು ಸಾಕಷ್ಟು ಬರುತ್ತವೆ.
ವಿಶ್ವನ ಮನೆಯಲ್ಲಿ ಆಶ್ರಯ
ಅದರ ಬಗ್ಗೆನೇ ಇದೀಗ ನಟಿ ಚಂದನಾ ಅನಂತಕೃಷ್ಣ (Chandana Ananthakrishna) ಮಾತನಾಡಿದ್ದಾರೆ. ಚಂದನಾ ಅನಂತಕೃಷ್ಣ ಎಂದರೆ ಸೀರಿಯಲ್ ಪ್ರಿಯರಿಗೆ ತಿಳಿಯದೇ ಇರಬಹುದು. ಅವರೇ Laskhmi Nivasa Serial ಚಿನ್ನುಮರಿ ಜಾಹ್ನವಿ. ಸದ್ಯ ಗಂಡನಿಗೆ ಹೆದರಿ ವಿಶ್ವನ ಮನೆಯಲ್ಲಿ ಚಂದನಾ ಹೆಸರಿನಲ್ಲಿಯೇ ಉಳಿದುಕೊಂಡಿರುವ ನಾಯಕಿ ಈಕೆ.
ನಮ್ಮ ಬಗ್ಗೆ ನಮಗೆ ಗೊತ್ತಿರಲ್ವಾ?
Radiocity Kannadaಕ್ಕೆ ನೀಡಿರುವ ಸಂದರ್ಶನದಲ್ಲಿ ಚಂದನಾ ಅವರು, ನಾನು Bigg Bossನಲ್ಲಿದ್ದಾಗ ಡವ್ ರಾಣಿ, ಓವರ್ ಆ್ಯಕ್ಟಿಂಗ್ ಎಂದೆಲ್ಲಾ ಹೇಳ್ತಿದ್ರು. ಹೊರಕ್ಕೆ ಬಂದ ಮೇಲೆ ನೋಡಿದಾಗ ತುಂಬಾ ನೊಂದುಕೊಂಡಿದ್ದೆ. ಏಕೆಂದರೆ ಆಗಷ್ಟೇ ಈ ಕಮೆಂಟ್ಸ್ ನೋಡುವ ಆರಂಭವಾಗಿತ್ತು. ಆದರೆ ಅದರ ನಂತರ ನಾನು ದಪ್ಪ ಇದ್ದೇನೆಂದರೆ ಆಡಿಕೊಳ್ಳುತ್ತಾರೆ. ದಪ್ಪ ಇದ್ದರೆ ಆನೆ ಥರ ಊದ್ಕೊಂಡಿದ್ಯಾ ಅಂತಾರೆ ಎನ್ನುತ್ತಲೇ ಗರಂ ಆಗಿರೋ ನಟಿ, ನಮಗೆ ಗೊತ್ತಿರಲ್ವಾ, ನಾವು ಸಣ್ಣಗಾಗ್ತಾ ಇದ್ದೇವೋ, ದಪ್ಪ ಆಗ್ತಾ ಇದ್ದೇವೋ ಎಂದು. ಅವರ್ಯಾರು ಶೇಮಿಂಗ್ ಮಾಡಲು ಎಂದು ಪ್ರಶ್ನಿಸಿದ್ದಾರೆ.
ನಮ್ಮ ಮನೆಯಲ್ಲೂ ಕನ್ನಡಿ ಇದೆ...
ನಮ್ಮ ಬಾಡಿಯಲ್ಲಿ ಏನಾಗ್ತಿದೆ ಎನ್ನುವುದು ನಮಗೇ ಗೊತ್ತಿರತ್ತೆ. ಅದರಲ್ಲಿಯೂ ಹೆಚ್ಚಾಗಿ ಹೆಣ್ಣುಮಕ್ಕಳ ದೇಹದಲ್ಲಿ ಎಷ್ಟೊಂದು ಹಾರ್ಮೋನಲ್ ಚೇಂಜಸ್ ಆಗ್ತಾ ಇರತ್ತೆ. ಅದಕ್ಕೆಲ್ಲಾ ಉತ್ತರ ಕೊಡೋಕೆ ಆಗತ್ತಾ ಎಂದು ಪ್ರಶ್ನಿಸಿದ್ದಾರೆ. ನಮ್ಮ ಮನೆಯಲ್ಲಿಯೂ ಕನ್ನಡಿ ಇದೆ ಗುರೂ... ನಾವು ನೋಡಿಕೊಳ್ಳಲ್ವಾ? ಬಾಡಿ ಷೇಮಿಂಗ್ ಚಿಕ್ಕ ವಯಸ್ಸಿನಂದಲೂ ಬರ್ತಿದೆ. ಏನೂ ಮಾಡಲು ಆಗಲ್ಲ. ನಾನಿರೋದೇ ಹಾಗೆ ಎಂದು ಹೇಳಿದ್ದಾರೆ.
ಅದ್ಭುತ ನೃತ್ಯಗಾತಿ, ಗಾಯಕಿ
ಅಂದಹಾಗೆ ಚಂದನಾ ಅವರು ಅದ್ಭುತ ನೃತ್ಯಗಾತಿ. ಇವರು ಇದಾಗಲೇ ಹಲವು ವಿಡಿಯೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರ ಅದ್ಭುತ ಭರತನಾಟ್ಯವನ್ನು ನೊಡಬಹುದಾಗಿದೆ. ಅದರ ಜೊತೆಯಲ್ಲಿಯೇ ತಾವು ಅತ್ಯಂತ ಸುಂದರವಾಗಿ ಹಾಡಬಲ್ಲೆ ಎನ್ನುವುದನ್ನೂ ಇದರಲ್ಲಿ ತೋರಿಸಿಕೊಟ್ಟಿದ್ದಾರೆ. ಗಾಯನವೊಂದಕ್ಕೆ ದನಿಯಾಗಿದ್ದಾರೆ. ಸದ್ಯ ಇವರು ಮದುವೆಯಾಗಿದ್ದು, ಲೈಫ್ ಎಂಜಾಯ್ ಮಾಡುತ್ತಿದ್ದಾರೆ.