- Home
- Entertainment
- TV Talk
- ರೋಚಕ ತಿರುವಿನಲ್ಲಿ Naa Ninna Bidalaare: ಕೊನೆಗೂ ಅಮ್ಮ-ಮಗಳ ಮಿಲನ; ಮುಂದಿದೆ ಭಾರಿ ಟ್ವಿಸ್ಟ್
ರೋಚಕ ತಿರುವಿನಲ್ಲಿ Naa Ninna Bidalaare: ಕೊನೆಗೂ ಅಮ್ಮ-ಮಗಳ ಮಿಲನ; ಮುಂದಿದೆ ಭಾರಿ ಟ್ವಿಸ್ಟ್
ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ, ಮಗಳು ಹಿತಾಳ ಕಣ್ಣೀರಿಗೆ ಕರಗಿದ ಅಮ್ಮ ಅಂಬಿಕಾ, ಕನಸಿನಲ್ಲಿ ಬಂದು ಮಗಳನ್ನು ಭೇಟಿಯಾಗಿದ್ದಾಳೆ. ಇದೇ ವೇಳೆ, ಹಿತಾಳ ಪ್ರಾಣಕ್ಕೆ ಮಾಯಾಳಿಂದ ಅಪಾಯವಿದೆ ಎಂದು ದುರ್ಗಾಗೆ ಎಚ್ಚರಿಕೆ ನೀಡಿದ್ದರಿಂದ ಡಿವೋರ್ಸ್ ನಿರ್ಧಾರ ಬಿಟ್ಟು ಹಿತಾಳ ರಕ್ಷಣೆಗೆ ನಿಂತಿದ್ದಾಳೆ.

ಅಮ್ಮನ ದರ್ಶನಕ್ಕೆ ಒತ್ತಾಯ
ಪ್ಲೀಸ್ ಹಿತಾಗೆ ಒಮ್ಮೆಯಾದ್ರೂ ಅಮ್ಮನನ್ನು ಕಾಣಿಸಿಬಿಡಿ. ಅವಳ ನೋವನ್ನು ನೋಡಲು ಆಗ್ತಿಲ್ಲ. ಹೀಗೆ ಅಮ್ಮನಿಗಾಗಿ ಕಂದಮ್ಮ ಅಳುವುದನ್ನು ನೋಡಿದ್ರೆ ನೋವಾಗತ್ತೆ. ಇದು ಸೀರಿಯಲ್ ಎನ್ನೋದು ಗೊತ್ತು, ಆದ್ರೂ ಸೀರಿಯಲ್ನಲ್ಲಿ ಏನು ಬೇಕಾದ್ರೂ ಆಗತ್ತಲ್ಲ... ಹಿತಾಗೆ ಅಮ್ಮನ ದರ್ಶನ ಮಾಡಿಸಿಬಿಡಿ ಡೈರೆಕ್ಟರ್ ಸಾಹೆಬ್ರೇ... ಎಂದು ನಾ ನಿನ್ನ ಬಿಡಲಾರೆ (Naa Ninna Bidalaare) ಸೀರಿಯಲ್ ವೀಕ್ಷಕರು ಕಮೆಂಟ್ ಮಾಡಿದ್ದೇ ಹೆಚ್ಚು.
ಅಂಬಿಕಾಗೆ ವರದಾನ
ಕೊನೆಗೂ ಅವರ ಆಸೆ ಈಡೇರಿಯೇ ಬಿಟ್ಟಿದೆ. ಹಿತಾ ಪುಟ್ಟಿಗೆ ಅಮ್ಮ ಅಂಬಿಕಾ ಕಾಣಿಸಿದ್ದಾಳೆ. ಅಲ್ಪ ಸಮಯದಲ್ಲಿ ಆಕೆಗೆ ಅಮ್ಮ ಕಾಣಿಸಿದ್ದಾಳೆ. ಅಮ್ಮ ಪ್ಲೀಸ್ ಒಮ್ಮೆ ಬಂದು ನನ್ನನ್ನು ಹಗ್ ಮಾಡಿಕೋ. ನೀನು ಹೇಳಿದಂತೆ ಕೇಳ್ತೇನೆ ಎಂದಿಲ್ಲಾ ಹಿತಾ ಅಳುವುದನ್ನು ನೋಡಲಾಗದೇ ಅಂಬಿಕಾ ದೇವರಲ್ಲಿ ಒಮ್ಮೆಯಾದರೂ ಕಂದನ ಕಣ್ಣಿಗೆ ತಾನು ಕಾಣಿಸುವ ಹಾಗೆ ಮಾಡಮ್ಮಾ ಎಂದು ಕೇಳಿಕೊಂಡಿದ್ದಳು. ಕೊನೆಗೆ ಆಕೆಯ ಅಪ್ಪ ಒಂದು ಮಣಿ ನೀಡಿದ್ದಾನೆ. ಅದು ಅಂಬಿಕಾಗೆ ಸ್ವಲ್ಪ ಸಮಯದ ಮಟ್ಟಿಗೆ ಮಗಳ ಕಣ್ಣಿಗೆ ಕಾಣಿಸುವ ವರದಾನ.
ಅಮ್ಮ-ಮಗಳ ಮಿಲನ
ಹಾಗೆಂದು ಅದು ನೇರಾನೇರ ಭೇಟಿ ಅಲ್ಲ. ಬದಲಿಗೆ ಕನಸಿನಲ್ಲಿ ಬಂದು ಮಗಳನ್ನು ಸಿಗುವ ವರದಾನ ಅದು. ಅದರಂತೆಯೇ, ಅಂಬಿಕಾ ಹಿತಾಳ ಕನಸಿನಲ್ಲಿ ಬಂದಿದ್ದಾಳೆ. ಅಲ್ಲಿ ಅಮ್ಮ-ಮಗಳ ಮಿಲನವಾಗಿದೆ. ಮಗಳನ್ನು ತಬ್ಬಿ ಮುದ್ದಾಡಿದ್ದಾಳೆ ಅಂಬಿಕಾ. ಹಿತಾ ಕೂಡ ಅಮ್ಮನನ್ನು ಕಂಡು ಅದೆಷ್ಟು ಖುಷಿಪಟ್ಟಿದ್ದಾಳೆ ಎನ್ನುವುದು ಶಬ್ದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ.
ದುರ್ಗಾಳ ಬಗ್ಗೆ ಕಿವಿಮಾತು
ಇದೇ ವೇಳೆ ಭೇಟಿಯ ಸಮಯ ಮುಗಿಯುತ್ತಿದ್ದಂತೆಯೇ ಅಂಬಿಕಾ, ಹಿತಾಳಿಗೆ ದುರ್ಗಾಳಿಗೆ ತುಂಬಾ ಪ್ರೀತಿ ಕೊಡು ಎಂದು ಹೇಳಿದ್ದು, ಅಷ್ಟರಲ್ಲಿಯೇ ಅವಳ ಭೇಟಿಯ ಅವಧಿ ಮುಕ್ತಾಯವಾಗಿದೆ. ಇದನ್ನು ಹಿತಾ ಕೇಳಿಸಿಕೊಂಡಿದ್ದಾಳೋ ಇಲ್ಲವೋ ಸೀರಿಯಲ್ ನೋಡಿದ ಮೇಲಷ್ಟೇ ತಿಳಿಯಬೇಕಿದೆ. ಇದನ್ನೇನಾದರೂ ಹಿತಾ ಕೇಳಿಸಿಕೊಂಡಿದ್ದರೆ ಮುಂದೆ ಸೀರಿಯಲ್ ರೋಚಕ ಟ್ವಿಸ್ಟ್ನತ್ತ ಸಾಗಲಿದೆ.
ಆರು ತಿಂಗಳ ಗಡುವು
ಅಷ್ಟಕ್ಕೂ ಹಿತಾ ದುರ್ಗಾಳನ್ನು ಅಮ್ಮನಾಗಿ ನೋಡಲು ಇಷ್ಟಪಡುತ್ತಿಲ್ಲ. ಅವಳು ಕೇರ್ಟೇಕರ್ ಆಗಿಯಷ್ಟೇ ಅವಳಿಗೆ ಇಷ್ಟವಾಗಿದ್ದಳು. ಇದೇ ಕಾರಣಕ್ಕೆ ಅಪ್ಪನನ್ನು ಮದುವೆಯಾಗಿದ್ದು ಅವಳಿಗೆ ಇಷ್ಟವಿಲ್ಲ. ಹಿತಾಳ ನೋವನ್ನು ನೋಡಿರೋ ದುರ್ಗಾ ಅವಳಿಂದ ದೂರವಾಗುವ ನಿರ್ಧಾರಕ್ಕೆ ಬಂದಿದ್ದಳು. ಆದರೆ ಆರು ತಿಂಗಳು ಮಾತ್ರ ಇದ್ದು ಆಮೇಲೆ ಮನೆಬಿಟ್ಟು ಹೋಗುವುದಾಗಿ ಹೇಳಿದ್ದಾಳೆ.
ಡಿವೋರ್ಸ್ ಮಾಡದ ದುರ್ಗಾ
ಅದೇ ಇನ್ನೊಂದೆಡೆ, ದುರ್ಗಾಳನ್ನು ತನ್ನ ಜೀವನದಿಂದ ದೂರ ಮಾಡಲು ಶರತ್ ಡಿವೋರ್ಸ್ ಮೊರೆ ಹೋಗಿದ್ದ. ಇದಕ್ಕೆ ದುರ್ಗಾ ಕೂಡ ಒಪ್ಪಿದ್ದಳು. ಏಕೆಂದರೆ ಇದೇನು ಅವಳು ಇಷ್ಟಪಟ್ಟು ಆದ ಮದುವೆಯಲ್ಲವಲ್ಲ. ಇನ್ನೇನು ಡಿವೋರ್ಸ್ಗೆ ಸಹಿ ಹಾಕಬೇಕು ಎನ್ನುವಷ್ಟರಲ್ಲಿ ಆ ಪೇಪರ್ ಮೇಲೆ ಇಂಕ್ ಚೆಲ್ಲಿತು.
ದುರ್ಗಾಳಿಗೆ ಅಸಲಿ ವಿಚಾರ ತಿಳಿಸಿದ್ದ ಅಂಬಿಕಾ
ಆಗ ದುರ್ಗಾ ಕೈತೊಳೆದುಕೊಳ್ಳಲು ಹೋದಾಗ, ಅಲ್ಲಿಗೆ ಬಂದ ಅಂಬಿಕಾ ಕನ್ನಡಿಯ ಮೇಲೆ ಹಿತಾಳನ್ನು ಬಿಟ್ಟು ಹೋದರೆ ಆಕೆಯ ಪ್ರಾಣಕ್ಕೆ ಅಪಾಯ ಇದೆ ಎನ್ನುವ ಸೂಚನೆ ಕೊಟ್ಟಿದ್ದಾಳೆ. ತನ್ನನ್ನು ಸಾಯಿಸಿದ್ದು ಕೂಡ ಮಾಯಾ. ಈಗ ಅವಳ ಮುಂದಿನ ಗುರಿ ಹಿತಾ ಎಂದಿದ್ದಾಳೆ.
ಮನಸ್ಸು ಬದಲಿಸಿದ ದುರ್ಗಾ
ಇದನ್ನು ನೋಡಿ, ದುರ್ಗಾ ಡಿವೋರ್ಸ್ ಕೊಡಬಾರದು ಎಂದು ನಿರ್ಧಾರಕ್ಕೆ ಬಂದಿದ್ದಾಳೆ. ಹಿತಾಳ ಜೀವವನ್ನು ಕಾಪಾಡುವುದು ಈಗ ಅವಳಿಗೆ ದೊಡ್ಡ ಜವಾಬ್ದಾರಿಯಾಗಿದೆ. ಆದರೆ ಇದರ ಅರಿವು ಶರತ್ಗೆ ಇದೆ. ತನಗೆ ಅಂಬಿಕಾ ಕಾಣಿಸಿಕೊಳ್ತಿದ್ದಾಳೆ ಎಂದು ದುರ್ಗಾ ಹೇಳಿದರೂ ಅದನ್ನು ಆತ ನಂಬದೇ ದುರ್ಗಾಳನ್ನೇ ಬೈಯುತ್ತಿದ್ದಾನೆ
ಅಮ್ಮಾ ಎಂದು ಒಪ್ಪಿಕೊಳ್ತಾಳಾ ಹಿತಾ?
ಒಟ್ಟಿನಲ್ಲಿ ಈಗ ಅಮ್ಮ-ಮಗಳು ಒಂದಾದ ಕಾರಣ, ಹಿತಾ ಅಮ್ಮನ ಮಾತನ್ನು ಕೇಳಿಸಿಕೊಂಡಿದ್ದರೆ, ದುರ್ಗಾಳ ಮೇಲೆ ಪ್ರೀತಿ ಹುಟ್ಟುತ್ತದೆ. ಆರು ತಿಂಗಳ ಒಳಗೇ ಆಕೆಯನ್ನು ಅಮ್ಮ ಎಂದು ಒಪ್ಪಿಕೊಳ್ಳುತ್ತಾಳೆ. ಅತ್ತ ಮಾಯಾ ಮತ್ತು ಶರತ್ ಅಮ್ಮನ ಬಂಡವಾಳವೂ ಬಯಲಾಗುತ್ತದೆ. ಇದ್ಯಾವ ಆಗುತ್ತದೆ ಎಂದು ವೀಕ್ಷಕರು ಕಾಯುತ್ತಿದ್ದಾರೆ.