- Home
- Entertainment
- TV Talk
- ಮೊದಲೇ ಸಾವಿನ ಬಗ್ಗೆ ಬರೆದುಕೊಂಡಿದ್ರಾ ಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿ! ಸೂಚನೆಯೋ? ಕಾಕತಾಳಿಯವೋ
ಮೊದಲೇ ಸಾವಿನ ಬಗ್ಗೆ ಬರೆದುಕೊಂಡಿದ್ರಾ ಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿ! ಸೂಚನೆಯೋ? ಕಾಕತಾಳಿಯವೋ
ಲೋ ಬಿಪಿ ಆಗಿ ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ರಾಕೇಶ್ ಪೂಜಾರಿ ಅವರು ನಿಧನರಾಗಿದ್ದಾರೆ. ಆದರೆ ಅವರ ಇನ್‌ಸ್ಟಾಗ್ರಾಮ್ ಖಾತೆಯ ಬಯೋ ಮಾತ್ರ ಸಾಕಷ್ಟು ಕುತೂಹಲವನ್ನು ಮೂಡಿಸಿದೆ.

ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ರಾಕೇಶ್ ಪೂಜಾರಿ ಅವರು ಇಂದು ಲೋ ಬಿಪಿ ಆಗಿ ನಿಧನರಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಇವರ ತಂದೆಯೂ ಹೀಗೆ ನಿಧನರಾಗಿದ್ದರು. ʼಹಿಟ್ಲರ್ ಕಲ್ಯಾಣʼ ಧಾರಾವಾಹಿಯಲ್ಲಿ ಹೀರೋ ಪಿಎ ಆಗಿಯೂ ಅವರು ಕಾಣಿಸಿಕೊಂಡಿದ್ದರು. ಈ ಮೂಲಕ ಕಿರುತೆರೆ ಪ್ರೇಕ್ಷಕರಿಗೆ, ಕೆಲ ಸಿನಿಮಾಗಳಲ್ಲಿ ನಟಿಸಿದ್ದು, ಸಿನಿಮಾ ರಂಗದವರಿಗೆ ಪರಿಚಯವಾಗಿದ್ದರು.
ರಾಕೇಶ್ ಸಾವಿಗೆ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ʼಕಾಮಿಡಿ ಕಿಲಾಡಿಗಳುʼ ಶೋ ಸ್ಪರ್ಧಿಗಳು ಅವರ ಉಡುಪಿಯ ಮನೆಗೆ ಹೋಗಿದ್ದಾರೆ. “ರಾಕೇಶ್ ಪೂಜಾರಿ ತುಂಬ ಒಳ್ಳೆಯ ಹುಡುಗ, ಮುಗ್ಧ ಮನಸ್ಸಿನ ಹುಡುಗ, ಮಗುವಿನ ಥರ ನಿಷ್ಕಲ್ಮಶ ಮನಸ್ಸಿನವನು. ಕಾಮಿಡಿ ಕಿಲಾಡಿಗಳು ಶೋ ಜಡ್ಜ್‌ಗಳಿಗೆ ಇವನೆಂದರೆ ತುಂಬ ಇಷ್ಟ ಎಂದು ʼಕಾಮಿಡಿ ಕಿಲಾಡಿಗಳುʼ ಶೋ ಸ್ಪರ್ಧಿಗಳು ಹಾಡಿ ಹೊಗಳಿದ್ದಾರೆ.
ರಾಕೇಶ್ ಪೂಜಾರಿ ಅವರು ನಿನ್ನೆ ತಡರಾತ್ರಿ ಸ್ನೇಹಿತರ ಮದುವೆಯ ಆರತಕ್ಷತೆಯಲ್ಲಿ ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲದೆ ಒಂದು ಮೆಹೆಂದಿ ಫಂಕ್ಷನ್‌ನಲ್ಲಿ ಕೂಡ ಕುಣಿದಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ನಿನ್ನೆ ರಾತ್ರಿಯವರೆಗೆ ಜನರ ಜೊತೆ ಆರಾಮಾಗಿದ್ದ ರಾಕೇಶ್‌ಗೆ ಸಡನ್ ಆಗಿ ಸುಸ್ತು ಆಗಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಕೂಡ ಚಿಕಿತ್ಸೆ ಫಲಕಾರಿಯಾಗಿಲ್ಲ. ಹೀಗಾಗಿ ಅವರು ಸಾವನ್ನಪ್ಪಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಆಕ್ಟಿವ್ ಆಗಿದ್ದ ರಾಕೇಶ್ ಪೂಜಾರಿ ಅವರು ಧಾರಾವಾಹಿ, ಸಿನಿಮಾ ಸೇರಿದಂತೆ ಸಾಕಷ್ಟು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ ಇನ್‌ಸ್ಟಾಗ್ರಾಮ್ ಬಯೋದಲ್ಲಿ ಹೆಮ್ಮೆಯ ಉಡುಪಿಯವನು, ಕಾಮಿಡಿ ಕಿಲಾಡಿಗಳು ಸೀಸನ್ 3 ಎಂದೆಲ್ಲ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ರಾಕೇಶ್ ಪೂಜಾರಿ ಅವರು ಇನ್‌ಸ್ಟಾಗ್ರಾಮ್ ಬಯೋದಲ್ಲಿ ಲೈಫ್ ಈಜ್ ಶಾರ್ಟ್‌ಟು ಮಿ ಎಂದು ಬರೆದುಕೊಂಡಿದ್ದಾರೆ. ಅಂದರೆ ಜೀವನ ನನಗೆ ತುಂಬ ಚಿಕ್ಕದು. ಇದನ್ನು ನೋಡಿದ್ರೆ ರಾಕೇಶ್‌ಅವರಿಗೆ ಸಾವಿನ ಸೂಚನೆ ಸಿಕ್ಕಿತ್ತಾ? ಅಥವಾ ಕಾಕತಾಳಿಯವೋ ಅರ್ಥ ಆಗ್ತಿಲ್ಲ.