- Home
- Entertainment
- TV Talk
- ಹೆಣ್ಣೆಂದು ತಿಳಿದು ಎಲ್ಲೆಲ್ಲೋ ಉಜ್ಜಲು ಬಂದ ಅಜ್ಜ, ಆಮೇಲೆ? ಸೀರೆಯುಟ್ಟ ಕಾಮಿಡಿ ನಟ ರಾಘವೇಂದ್ರನ ಫಜೀತಿ ಕೇಳಿ
ಹೆಣ್ಣೆಂದು ತಿಳಿದು ಎಲ್ಲೆಲ್ಲೋ ಉಜ್ಜಲು ಬಂದ ಅಜ್ಜ, ಆಮೇಲೆ? ಸೀರೆಯುಟ್ಟ ಕಾಮಿಡಿ ನಟ ರಾಘವೇಂದ್ರನ ಫಜೀತಿ ಕೇಳಿ
'ಮಜಾ ಭಾರತ' ಖ್ಯಾತಿಯ ನಟ ರಾಘವೇಂದ್ರ, ತಮ್ಮ ಸ್ತ್ರೀವೇಷದ ಪಾತ್ರದಿಂದ 'ರಾಗಿಣಿ' ಎಂದೇ ಜನಪ್ರಿಯರಾಗಿದ್ದಾರೆ. ಆದರೆ ಈ ವೇಷದಿಂದಾಗಿ ಅವರು ಎದುರಿಸಿದ ಸಂಕಷ್ಟಗಳನ್ನು ಹಂಚಿಕೊಂಡಿದ್ದಾರೆ. ಒಮ್ಮೆ ಅಜ್ಜನೊಬ್ಬ ತನ್ನ ತೊಡೆ ಉಜ್ಜಲು ಬಂದ ಆಘಾತಕಾರಿ ಘಟನೆಯನ್ನೂ ಅವರು ವಿವರಿಸಿದ್ದಾರೆ.

ಸ್ತ್ರೀವೇಷದಲ್ಲಿ ಮಿಂಚ್ತಿರೋ ರಾಘವೇಂದ್ರ
ಸ್ತ್ರೀವೇಷದಲ್ಲಿ ಹೆಣ್ಣುಮಕ್ಕಳನ್ನೂ ನಾಚಿಸುವ ಹಾಗೆ ನಟಿಸುವುದರಲ್ಲಿ ಎತ್ತಿದ ಕೈ ಯಾರದ್ದು ಎಂದು ಕೇಳಿದರೆ ಕಿರುತೆರೆ ವೀಕ್ಷಕರಿಗೆ ಮೊದಲಿಗೆ ನೆನಪಾಗುವುದು ರಾಘವೇಂದ್ರ. ರಾಗಿಣಿ ಎಂದೇ ಫೇಮಸ್ ಆಗಿರೋ ಕಾಮಿಡಿ ಹೀರೋ ರಾಘು ಅಂದ್ರೆ ಒಂದು ಲೆವೆಲ್ ಮೇಲೆಯೇ. ಶಿವಮೊಗ್ಗ ಜಿಲ್ಲೆಯ ಸಾಗರದವರಾದ ರಾಘವೇಂದ್ರ ಹುಡುಗಿ ಪಾತ್ರದ ಮೂಲಕವೇ ವೀಕ್ಷಕರ ಮನಸ್ಸು ಗೆದ್ದಿದ್ದಾರೆ, ಹಾಗೆ ಕದ್ದಿದ್ದಾರೆ ಕೂಡ. ಇವರು ಸ್ತ್ರೀವೇಷ ಹಾಕಿದರೆನೇ ನೋಡಲು ಸೊಗಸು ಎನ್ನುವಷ್ಟರ ಮಟ್ಟಿಗೆ ವೀಕ್ಷಕರು ಇವರನ್ನು ಹಾಗೆಯೇ ನೋಡಲು ಬಯಸುವುದು ಇದೆ.
ಹೆಣ್ಣಿನ ಸಂಕಷ್ಟ
ಪ್ರಶಸ್ತಿ ಸಮಾರಂಭಗಳಲ್ಲಿಯೂ ಇವರು ಹೆಣ್ಣಿನ ಪಾತ್ರ ಹಾಕಿಯೇ ಸೆಲೆಬ್ರಿಟಿಗಳ ಜೊತೆ ಒಂದಷ್ಟು ತರಲೆ ತಮಾಷೆ ಕೂಡ ಮಾಡುವುದು ಇದೆ. ಆದರೆ ಓರ್ವ ಹೆಣ್ಣು ಈ ಸಮಾಜದಲ್ಲಿ ಎಷ್ಟೊಂದು ಸಂಕಷ್ಟ ಅನುಭವಿಸುತ್ತಾಳೆ ಎನ್ನುವುದನ್ನು ನೋಡಬೇಕಾದರೆ, ಪ್ರತಿಯೊಬ್ಬ ಗಂಡು ಕೂಡ ಹೆಣ್ಣಿನ ವೇಷ ತೊಟ್ಟು ಓಡಾಡಬೇಕು ಎನ್ನುವ ಮಾತು ಕೂಡ ಇದೆ. ಅದೇ ಅನುಭವ ನಟ ರಾಘವೇಂದ್ರ ಅವರಿಗೂ ಆಗಿದ್ದಿದೆ. ನೋಡಲು ಸುಂದರಿಯಂತೆ ಕಾಣುವ ರಾಘವೇಂದ್ರನನ್ನು ಹುಡುಗಿ ಎಂದೇ ತಿಳಿದು ಹಲವು ಕಡೆಗಳಲ್ಲಿ ಪುರುಷರು ಕಿರುಕುಳ ನೀಡಿದ್ದೂ ಇದೆಯಂತೆ.
ಹೆಣ್ಣಿನ ವೇಷದ ಫಜೀತಿ
ಈ ಬಗ್ಗೆ ಕೀರ್ತಿ ಎಂಟರ್ಟೇನ್ಮೆಂಟ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ. ಒಮ್ಮೆ ಯಾವುದೋ ಷೋಗೆ ಹೋಗಿದ್ದಾಗ ಹೆಣ್ಣಿನ ವೇಷ ಹಾಕಿದ್ದರು. ಅದಾದ ಬಳಿಕ ಮುಂದಿನ ಷೋಗಾಗಿ ಅವರು ಅದೇ ವೇಷದಲ್ಲಿ ಕೋಣೆಯಲ್ಲಿ ಕುಳಿತು ಮುಂದಿನ ಷೋಗೆ ರೆಡಿಯಾಗುತ್ತಿದ್ದ ವೇಳೆ ಅಜ್ಜನೊಬ್ಬ ಬಂದು ನಿಧಾನವಾಗಿ ಅವರ ಕಾಲ ಮೇಲೆ ಕೈ ಹಾಕಿದನಂತೆ.
ಉಜ್ಜಿದ ಅಜ್ಜ!
ಆರಂಭದಲ್ಲಿ ಏನೋ ಸುಮ್ಮನೇ ಕೈ ತಾಕಿರಬೇಕು ಎಂದುಕೊಂಡರೆ, ಆ ಅಜ್ಜ ನಿಧಾನವವಾಗಿ ತೊಡೆಯ ಮೇಲೆ ಕೈಹಾಕಿ ಉಜ್ಜಲು ಬಂದನಂತೆ! ರಾಘವೇಂದ್ರ ಅವರಿಗೆ ಏನಾಗ್ತಿದೆ ಎಂದು ಗೊತ್ತಾಗಿ ಜೋರಾಗಿ, ಲೋ ನಿನಗೆ ಇರೋದೇ ನನಗೆ ಇರೋದು ಕಣೋ ಎಂದು ಕೆಟ್ಟ ಶಬ್ದದಲ್ಲಿ ಬೈದರಂತೆ!
ಅಜ್ಜ ಕಕ್ಕಾಬಿಕ್ಕಿ
ಇವರ ದನಿ ಕೇಳಿ ಈತ ಪುರುಷ ಎಂದು ತಿಳಿಯುತ್ತಲೇ ಅಜ್ಜ ಅಲ್ಲಿಂದ ಕಾಲ್ಕಿತ್ತನಂತೆ. ಇಂಥ ಘಟನೆಗಳು ಆಗಾಗ್ಗೆ ಆಗುತ್ತಿರುತ್ತವೆ ಎಂದಿದ್ದಾರೆ ನಟ. ಅಂದಹಾಗೆ ರಾಘವೇಂದ್ರ ಅವರು ಮೊದಲಿಗೆ 'ಮಜಾ ಭಾರತ' ರಿಯಾಲಿಟಿ ಶೋನಲ್ಲಿ ಹುಡುಗಿ ಪಾತ್ರ ಮಾಡಿದರು. ಕೊನೆಗೆ ಇದಕ್ಕೇ ಡಿಮಾಂಡ್ ಜಾಸ್ತಿಯಾಗಿ ಇವರನ್ನು ಅದೇ ವೇಷದಲ್ಲಿ ನೋಡಲು ವೀಕ್ಷಕರೂ ಬಯಸತೊಡಗಿದರು.
ಪುರುಷನಾಗಿ ಸಿಕ್ಕಿತು ಛಾನ್ಸ್
ಇದರಿಂದ ಒಂದು ಹಂತದಲ್ಲಿ ರಾಘವೇಂದ್ರ ಅವರಿಗೆ ಬೇಸರವೂ ಆಗಿತ್ತಂತೆ. ಕೊನೆಗೆ 'ಗಿಚ್ಚಿ ಗಿಲಿಗಿಲಿ' ಷೋನಲ್ಲಿ ಪುರುಷನಾಗಿಯೇ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಾಗ ಖುಷಿಯಾಯಿತು ಎಂದಿದ್ದಾರೆ. ಈ ಬಗ್ಗೆ ಅವರು ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಊಟನೂ ಹಾಕಿರಲಿಲ್ಲ!
ಅವರ ಸ್ತ್ರೀವೇಷ ಎಷ್ಟು ಫೇಮಸ್ ಆಗಿದೆಯೆಂದ್ರೆ, "ರಾಘವೇಂದ್ರನಾಗಿ ನಾನು ಊರಿಗೆ ಹೋದರೆ ಯಾರೂ ಕೂಡ ಅಲ್ಲಿ ರಾಘವೇಂದ್ರ ಅಂತ ಈಗ ನನ್ನ ನಂಬಲು ರೆಡಿಯಿಲ್ಲ. ಅನುಬಂಧ ಅವಾರ್ಡ್ಸ್ ಶೋನಲ್ಲಿ ಕೂಡ ಕಲಾವಿದರಿಗೆ ಊಟ ಹಾಕುವ ವೇಳೆ ನನ್ನನ್ನು ಕಲಾವಿದ ಅಲ್ಲ ಎಂದು ಊಟ ಹಾಕಲು ರೆಡಿ ಇರಲಿಲ್ಲ. ಆಮೇಲೆ ನಿರ್ಮಾಪಕರನ್ನು ಕರೆಸಿ ನಾನೇ ರಾಘವೇಂದ್ರ ಅಂತ ಹೇಳಿಸಲಾಯಿತು, ಆಮೇಲೆ ಊಟ ಹಾಕಿದರು" ಎಂದು ರಾಘವೇಂದ್ರ ಹಿಂದೊಮ್ಮೆ ನೆನಪಿಸಿಕೊಂಡಿದ್ದಾರೆ.