ಧಾರಾವಾಹಿ ಶುರುವಾಗಿ ಆರೇ ತಿಂಗಳಿಗೆ ಅಂತ್ಯ ಕಾಣ್ತಿರೋ Vadhu Serial; ಯಾಕೆ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʼವಧುʼ ಧಾರಾವಾಹಿ ಅಂತ್ಯ ಆಗಲಿದೆ. ಹೌದು, ತಿಂಗಳುಗಳ ಹಿಂದೆಯೇ ಈ ಬಗ್ಗೆ ಗುಸುಗುಸು ಶುರುವಾಗಿತ್ತು.
15

Image Credit : colors kannada instagram
ವಧು ಧಾರಾವಾಹಿಗೆ ಪರಮೇಶ್ವರ್ ಗುಂಡ್ಕಲ್ ಅವರು ನಿರ್ದೇಶನ ಮಾಡಿದ್ದಾರೆ. ದಿಲೀಪ್ ರಾಜ್ ಅವರು ಹಣ ಹೂಡಿದ್ದಾರೆ.
25
Image Credit : colors kannada instagram
ವಧು ಧಾರಾವಾಹಿಯಲ್ಲಿ ನಾಯಕಿ ವಧು, ನಾಯಕ ಸಾರ್ಥಕ್. ತಾನು ಮಾಡುವ ವಕೀಲೆ ವೃತ್ತಿಯಿಂದಲೇ ವಧುವಿಗೆ ಮದುವೆ ಆಗುತ್ತಿರಲಿಲ್ಲ. ಇದರಿಂದ ನಿತ್ಯವೂ ವಧು ಮನೆಯಲ್ಲಿ ಅವಮಾನಕ್ಕೆ ಒಳಗಾಗುತ್ತಿರುತ್ತಾಳೆ. ಸಾರ್ಥಕ್‌ಗೆ ಆತನ ಪತ್ನಿಯೇ ಸಮಸ್ಯೆಯಾಗಿದೆ. ಪತ್ನಿಯಿಂದ ಡಿವೋರ್ಸ್ ಪಡೆಯಲು ಸಾರ್ಥಕ್ ನಾಯಕಿ ವಧು ಬಳಿ ಬರುತ್ತಾನೆ. ಆಮೇಲೆ ಏನಾಗುತ್ತದೆ ಎನ್ನೋದು ಈ ಧಾರಾವಾಹಿಯ ಕಥೆ.
35
Image Credit : colors kannada instagram
ವಧು ಧಾರಾವಾಹಿ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಶುರುವಾಗಿವೆ. ಯಾವ ಕಾರಣಕ್ಕೆ ಈ ಸೀರಿಯಲ್ ಅಂತ್ಯ ಮಾಡ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ.
45
Image Credit : colors kannada instagram
2025 ಜನವರಿ 27ರಂದು ಈ ಧಾರಾವಾಹಿ ಪ್ರಸಾರ ಶುರುವಾಗಿದೆ. ಈ ಸೀರಿಯಲ್ ಶುರುವಾಗಿ ಆರು ತಿಂಗಳಿಗೆ ಎಂಡ್ ಆಗ್ತಿದೆ ಎನ್ನೋದು ಬೇಸರದ ವಿಷಯ.
55
Image Credit : colors kannada instagram
ವಧು ಧಾರಾವಾಹಿಯಲ್ಲಿ ಅಭಿಷೇಕ್ ಶ್ರೀಕಾಂತ್, ದುರ್ಗಶ್ರೀ ಮುಂತಾದವರು ನಟಿಸುತ್ತಿದ್ದಾರೆ.
Latest Videos