MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Charu Asopa: 'ಆಕೆಯನ್ನ ಬಿಟ್ಟು ಇರಲು ಆಗಲ್ಲ'..: ಬಿಗ್ ಬಾಸ್ ಆಫರ್ ತಿರಸ್ಕರಿಸಿದ ನಟಿ ಚಾರು!

Charu Asopa: 'ಆಕೆಯನ್ನ ಬಿಟ್ಟು ಇರಲು ಆಗಲ್ಲ'..: ಬಿಗ್ ಬಾಸ್ ಆಫರ್ ತಿರಸ್ಕರಿಸಿದ ನಟಿ ಚಾರು!

Charu Asopa: ಖ್ಯಾತ ಟಿವಿ ನಟಿ ಚಾರು ಅಸೋಪಾ ಅವರು 'ಬಿಗ್ ಬಾಸ್ 20' ಶೋನ ದೊಡ್ಡ ಆಫರ್ ಅನ್ನು ತಿರಸ್ಕರಿಸಿದ್ದಾರೆ. ತನ್ನ ಮಗಳನ್ನು ಬಿಟ್ಟು ಇರಲು ಸಾಧ್ಯವಿಲ್ಲ, ಹಾಗಾಗಿ ಕೆರಿಯರ್‌ಗಿಂತ ಕುಟುಂಬವೇ ಮುಖ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

2 Min read
Author : Govindaraj S
Published : Jun 28 2026, 08:31 PM IST
Share this Photo Gallery
  • FB
  • TW
  • Linkdin
  • Whatsapp
15
ಅವಳನ್ನು ಬಿಟ್ಟು ದೂರ ಇರಲು ಸಾಧ್ಯವಿಲ್ಲ
Image Credit : others

ಅವಳನ್ನು ಬಿಟ್ಟು ದೂರ ಇರಲು ಸಾಧ್ಯವಿಲ್ಲ

ಟಿವಿ ಲೋಕದ ಜನಪ್ರಿಯ ನಟಿ ಚಾರು ಅಸೋಪಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 'ಮೇರೆ ಆಂಗನೇ ಮೇ', 'ಟಶನ್-ಎ-ಇಶ್ಕ್' ಮತ್ತು 'ಅಕ್ಬರ್ ಕಾ ಬಲ್ ಬೀರ್‌ಬಲ್' ನಂತಹ ಶೋಗಳಲ್ಲಿ ನಟಿಸಿ ಫೇಮಸ್ ಆಗಿರುವ ಚಾರು, ಇತ್ತೀಚೆಗೆ ತಮಗೆ ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ 'ಬಿಗ್ ಬಾಸ್ 20'ಗೆ ಆಫರ್ ಬಂದಿದ್ದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಆದರೆ, ಈ ದೊಡ್ಡ ಅವಕಾಶವನ್ನು ಅವರು ನಿರಾಕರಿಸಿದ್ದಾರೆ. ಇದಕ್ಕೆ ಕಾರಣ ಯಾವುದೇ ಸಿನಿಮಾ ಅಥವಾ ಸೀರಿಯಲ್ ಕಮಿಟ್‌ಮೆಂಟ್ ಅಲ್ಲ, ಬದಲಾಗಿ ಅವರ ಮಗಳು ಜಿಯಾನಾ. ತನ್ನ ಜೀವನದಲ್ಲಿ ಮಾಡಿಕೊಂಡಿರುವ ಎಲ್ಲಾ ಬದಲಾವಣೆಗಳು ಮಗಳಿಗಾಗಿಯೇ, ಹಾಗಾಗಿ ಸದ್ಯಕ್ಕೆ ಅವಳನ್ನು ಬಿಟ್ಟು ದೂರ ಇರಲು ಸಾಧ್ಯವಿಲ್ಲ ಎಂದು ಚಾರು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಚಾರು ಅಸೋಪಾ 'ಬಿಗ್ ಬಾಸ್ 20' ಆಫರ್ ತಿರಸ್ಕರಿಸಿದ್ದೇಕೆ?
Image Credit : instagram

ಚಾರು ಅಸೋಪಾ 'ಬಿಗ್ ಬಾಸ್ 20' ಆಫರ್ ತಿರಸ್ಕರಿಸಿದ್ದೇಕೆ?

ತಮ್ಮ ಇತ್ತೀಚಿನ ವ್ಲಾಗ್‌ನಲ್ಲಿ ಮಾತನಾಡಿದ ಚಾರು ಅಸೋಪಾ, "ನಿಜ ಹೇಳಬೇಕೆಂದರೆ, ಎರಡು ದಿನಗಳ ಹಿಂದೆ ನನಗೆ ಬಿಗ್ ಬಾಸ್ ತಂಡದಿಂದ ಕಾಲ್ ಬಂದಿತ್ತು. ಆದರೆ ನಾನು ಸ್ಪಷ್ಟವಾಗಿ ಈ ಶೋನಲ್ಲಿ ಭಾಗವಹಿಸಲ್ಲ ಅಂತ ಹೇಳಿದೆ. ಯಾಕಂದ್ರೆ, ಈ ಸಮಯದಲ್ಲಿ ನಾನು ನನ್ನ ಜೀವನದಲ್ಲಿ ಮಾಡಿಕೊಂಡಿರುವ ಎಲ್ಲಾ ಬದಲಾವಣೆಗಳು ನನ್ನ ಮಗಳು ಜಿಯಾನಾಗೋಸ್ಕರ. ಅವಳನ್ನು ಬಿಟ್ಟು ದೂರ ಇರೋಕೆ ನನಗೆ ಇಷ್ಟ ಇಲ್ಲ. ನಾನು ಅವಳ ಜೊತೆ ಇದ್ದುಕೊಂಡು, ಒಬ್ಬ ತಾಯಿಯಾಗಿ ನನ್ನ ಜವಾಬ್ದಾರಿಗಳನ್ನು ನಿಭಾಯಿಸುವಂತಹ ಕೆಲಸ ಮಾಡಲು ಬಯಸುತ್ತೇನೆ" ಎಂದು ತಿಳಿಸಿದ್ದಾರೆ.

Related Articles

Related image1
Nora Fatehi: ಫಿಫಾ ವೇದಿಕೆಯಲ್ಲಿ ಮಿಂಚಿದ ನೋರಾ: ಆ ಪ್ರದರ್ಶನಕ್ಕೆ ಗೂಗಲ್‌ನಲ್ಲಿ ನಂಬರ್ 1 ಆದ ಬಾಲಿವುಡ್ ಬೆಡಗಿ!
Related image2
Alia Bhatt: ಕಲ್ಕಿ ಸೀಕ್ವೆಲ್‌ನಲ್ಲಿ ಆಲಿಯಾ? ಹೊಸ ಪಾತ್ರದಲ್ಲಿ ಪ್ರಭಾಸ್‌ಗೆ ಜೋಡಿಯಾಗ್ತಾರಾ ಬಾಲಿವುಡ್ ಬ್ಯೂಟಿ!
35
ಮಗಳನ್ನು ಬಿಟ್ಟು ಕೆಲಸ ಮಾಡಲು ಇಷ್ಟವಿಲ್ಲ
Image Credit : instagram

ಮಗಳನ್ನು ಬಿಟ್ಟು ಕೆಲಸ ಮಾಡಲು ಇಷ್ಟವಿಲ್ಲ

ಸದ್ಯಕ್ಕೆ ತಮ್ಮ ಮೊದಲ ಆದ್ಯತೆ ಮಗಳು ಮಾತ್ರ ಎಂದು ಚಾರು ಹೇಳಿದ್ದಾರೆ. ಹಾಗಾಗಿ, ಹೆಚ್ಚು ದಿನಗಳ ಕಾಲ ಮನೆಯಿಂದ ದೂರ ಇರಬೇಕಾದ ಯಾವುದೇ ಪ್ರಾಜೆಕ್ಟ್‌ಗಳನ್ನು ಅವರು ಒಪ್ಪಿಕೊಳ್ಳುತ್ತಿಲ್ಲ. ಜಿಯಾನಾಳಿಂದ ದೂರ ಇರಬೇಕಾದ ಯಾವುದೇ ಕೆಲಸಕ್ಕೆ ಸದ್ಯಕ್ಕೆ ತಾನು ಸಿದ್ಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದೇ ಕಾರಣಕ್ಕೆ ಮುಂಬೈ ತೊರೆದು ಸಿಂಗಿಂಗ್ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಷನ್ ಆಯ್ಕೆ ಮಾಡಿಕೊಂಡಿದ್ದಾಗಿ ಚಾರು ಅಸೋಪಾ ತಿಳಿಸಿದ್ದಾರೆ. "ಒಂದು ವೇಳೆ ಜಿಯಾನಾಳಿಂದ ದೂರ ಇದ್ದು ಕೆಲಸ ಮಾಡೋಕೆ ನಾನು ಓಕೆ ಆಗಿದ್ರೆ, ಮುಂಬೈ ಬಿಟ್ಟು ಬರ್ತಾನೇ ಇರಲಿಲ್ಲ," ಎಂದು ಅವರು ಹೇಳಿದ್ದಾರೆ.

45
ನನ್ನ ಇಡೀ ಪ್ರಪಂಚವೇ ಜಿಯಾನಾ ಎಂದ ಚಾರು
Image Credit : instagram

ನನ್ನ ಇಡೀ ಪ್ರಪಂಚವೇ ಜಿಯಾನಾ ಎಂದ ಚಾರು

ಚಾರು ಪ್ರಕಾರ, ಅವರಿಗೆ ಕೆಲಸ ಮಾಡಬೇಕು, ಜೊತೆಗೆ ಮಗಳ ಜೊತೆಗೂ ಇರಬೇಕು. ಈ ಎರಡನ್ನೂ ಬ್ಯಾಲೆನ್ಸ್ ಮಾಡುವ ಕಾರಣಕ್ಕಾಗಿಯೇ ಅವರು ತಮ್ಮ ಕೆರಿಯರ್‌ನಲ್ಲಿ ಹೊಸ ದಾರಿ ಹಿಡಿದಿದ್ದಾರೆ. ಈಗ ಅವರ ಜೀವನ ಸಂಪೂರ್ಣವಾಗಿ ಮಗಳು ಜಿಯಾನಾಳ ಸುತ್ತಲೇ ಗಿರಕಿ ಹೊಡೆಯುತ್ತಿದೆ. "ನಾನು ಜಿಯಾನಾಳ ಎಲ್ಲಾ ಕನಸುಗಳನ್ನು ಪೂರೈಸಬೇಕು. ಅದಕ್ಕಾಗಿ ಹೆಚ್ಚು ಕಷ್ಟಪಡಬೇಕಾದರೂ, ಹೆಚ್ಚುವರಿ ಕೆಲಸ ಮಾಡಬೇಕಾದರೂ ನಾನು ಖುಷಿಯಿಂದ ಮಾಡುತ್ತೇನೆ. ಜಿಯಾನಾ ಮಲಗಿದಾಗ ಅಥವಾ ಶಾಲೆಗೆ ಹೋದಾಗ, ನಾನು ನನ್ನ ಉಳಿದ ಕೆಲಸಗಳನ್ನು ಮುಗಿಸುತ್ತೇನೆ. ಈ ವ್ಯವಸ್ಥೆಯಿಂದ ನಾನು ಸಂತೋಷವಾಗಿದ್ದೇನೆ," ಎಂದು ಅವರು ಹೇಳಿದ್ದಾರೆ.

55
ಮುಂಬೈ ದಿನಗಳನ್ನು ನೆನೆದು ಭಾವುಕರಾದ ಚಾರು
Image Credit : instagram

ಮುಂಬೈ ದಿನಗಳನ್ನು ನೆನೆದು ಭಾವುಕರಾದ ಚಾರು

ಮುಂಬೈನಲ್ಲಿ ತಾನು ಪಟ್ಟ ಕಷ್ಟದ ದಿನಗಳನ್ನು ನೆನಪಿಸಿಕೊಂಡ ಚಾರು, ತುಂಬಾ ಕಡಿಮೆ ಸಪೋರ್ಟ್‌ನೊಂದಿಗೆ ಮಗಳನ್ನು ಬೆಳೆಸಿದ್ದಾಗಿ ಹೇಳಿದರು. ಕೆಲಸ ಮಾಡುವಾಗಲೂ ತಮ್ಮ ಸಂಪೂರ್ಣ ಗಮನ ಜಿಯಾನಾ ಮೇಲೆಯೇ ಇರುತ್ತಿತ್ತು ಮತ್ತು ಯಾವಾಗಲೂ ಅವಳ ಬಗ್ಗೆ ಚಿಂತೆ ಮಾಡುತ್ತಿದ್ದೆ ಎಂದು ತಿಳಿಸಿದರು. ಆದರೆ, ಈಗ ಆ ಹಳೆಯ ದಿನಗಳ ಬಗ್ಗೆ ಯೋಚಿಸಲು ಅವರು ಇಷ್ಟಪಡುವುದಿಲ್ಲ. "ನಾನು ಈಗ ನನ್ನ ಜೀವನದಲ್ಲಿ ಮುಂದೆ ಸಾಗಿದ್ದೇನೆ ಮತ್ತು ಇಂದು ನಿಜವಾಗಿಯೂ ಸಂತೋಷವಾಗಿದ್ದೇನೆ. ಕೆಲವೊಮ್ಮೆ ಸುಸ್ತಾಗುತ್ತದೆ, ಆದರೆ ಅದು ಜೀವನದ ಒಂದು ಭಾಗ," ಎಂದು ಚಾರು ಹೇಳಿದ್ದಾರೆ. ಅಂದಹಾಗೆ, ಚಾರು ಅಸೋಪಾ ಅವರು ಸುಶ್ಮಿತಾ ಸೇನ್ ಅವರ ಸಹೋದರ ರಾಜೀವ್ ಸೇನ್ ಅವರನ್ನು ಮದುವೆಯಾಗಿದ್ದರು. ಜೂನ್ 2023 ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ವಿಚ್ಛೇದನದ ನಂತರ ಚಾರು ತಮ್ಮ ಮಗಳು ಜಿಯಾನಾ ಜೊತೆ ರಾಜಸ್ಥಾನದ ಬಿಕಾನೇರ್‌ನಲ್ಲಿ ವಾಸಿಸುತ್ತಿದ್ದಾರೆ. ಅವರು ಈಗ ಫುಲ್-ಟೈಮ್ ತಾಯಿಯಾಗಿರುವುದರ ಜೊತೆಗೆ, ಕಂಟೆಂಟ್ ಕ್ರಿಯೇಟರ್ ಮತ್ತು ಗಾಯಕಿಯಾಗಿಯೂ ಕೆಲಸ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ನಟಿ
ಬಿಗ್ ಬಾಸ್
ಸಲ್ಮಾನ್ ಖಾನ್
ಬಾಲಿವುಡ್

Latest Videos
Recommended Stories
Recommended image1
ಕಾಲು ಮುರಿದರೂ 4 ತಿಂಗಳು ನಿಲ್ಲದ ಶೂಟಿಂಗ್​: ವಿಡಿಯೋ ಶೇರ್​ ಮಾಡಿದ Naa Ninna Bidalaare ಅಂಬಿಕಾ
Recommended image2
Bigg Bossಗೆ ಅವಕಾಶ ಕೋರಿ ವಿಡಿಯೋ ಮಾಡಿದ ಪೊಲೀಸ್​ ಸಂಕಷ್ಟದಲ್ಲಿ! ಕೆಲಸ ಕಳೆದುಕೊಳ್ಳೋ ಭೀತಿ
Recommended image3
ಮಗು ವಿಷಯ ತೆಗೆದು ಕಣ್ಣೀರು ಹಾಕಿ, ಎಲ್ಲ ಚೆನ್ನಾಗಿದೆ ಅಂತ ನಾಟಕ ಮಾಡಿ ಡಿವೋರ್ಸ್‌ ಘೋಷಿಸಿದ Bigg Boss ವಿಜೇತ!
Related Stories
Recommended image1
Nora Fatehi: ಫಿಫಾ ವೇದಿಕೆಯಲ್ಲಿ ಮಿಂಚಿದ ನೋರಾ: ಆ ಪ್ರದರ್ಶನಕ್ಕೆ ಗೂಗಲ್‌ನಲ್ಲಿ ನಂಬರ್ 1 ಆದ ಬಾಲಿವುಡ್ ಬೆಡಗಿ!
Recommended image2
Alia Bhatt: ಕಲ್ಕಿ ಸೀಕ್ವೆಲ್‌ನಲ್ಲಿ ಆಲಿಯಾ? ಹೊಸ ಪಾತ್ರದಲ್ಲಿ ಪ್ರಭಾಸ್‌ಗೆ ಜೋಡಿಯಾಗ್ತಾರಾ ಬಾಲಿವುಡ್ ಬ್ಯೂಟಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved