Kannada

ರಜಿನಿ ಅರುಣ್

ಕನ್ನಡ ಕಿರುತೆರೆ ನಟಿ ರಜಿನಿ ಹಾಗೂ ಪತಿ ಅರುಣ್ ಗೌಡ, ಜೊತೆಯಾಗಿ ಥೈಲ್ಯಾಂಡ್ ತೆರಳಿದ್ದು, ಅಲ್ಲಿ ಸುಂದರ ತಾಣಗಳಿಗೆ ಜೋಡೀ ಭೇಟಿ ನೀಡಿ, ಸಖತ್ ಆಗಿ ಎಂಜಾಯ್ ಮಾಡುತ್ತಿದ್ದಾರೆ.

Kannada

ಬುದ್ದ ಮಂದಿರದಲ್ಲಿ ಜೋಡಿ

ಅರುಣ್ ಮತ್ತು ರಜಿನಿ ಜೋಡಿ, ಥೈಲ್ಯಾಂಡ್ ನಲ್ಲಿರುವ ಬುದ್ಧ ಮಂದಿರಕ್ಕೆ ಭೇಟಿ ನೀಡಿ ಅನುಗ್ರಹ ಪಡೆದಿದ್ದಾರೆ. ಅಲ್ಲಿನ ಸುಂದರವಾದ ಫೋಟೊಗಳನ್ನು ರಜಿನಿ ಹಂಚಿಕೊಂಡಿದ್ದಾರೆ.

Image credits: Isntagram
Kannada

ಜೋಡಿ ನಂ 1 ಸ್ಪರ್ಧಿ

ಅಂದ ಹಾಗೇ ರಜಿನಿ ಮತ್ತು ಅರುಣ್ ಇಬ್ಬರು ಜೋಡಿಯಾಗಿ ಜೀ ಕನ್ನಡ ವಾಹಿನಿಯ ಜೋಡಿ ನಂ 1 ಕಪಲ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿದ್ದರು.

Image credits: Isntagram
Kannada

ರಿಯಾಲಿಟಿ ಶೋನಿಂದ ಬ್ರೇಕ್?

ಸದ್ಯ ರಿಯಾಲಿಟಿ ಶೋ ಪ್ರಸಾರವಾಗುತ್ತಿತ್ತು, ಇದರ ಮಧ್ಯೆ ರಜಿನಿ ಅರುಣ್ ಜೋಡಿ ಬ್ರೇಕ್ ತೆಗೆದುಕೊಂಡು ವಿದೇಶಕ್ಕೆ ಹಾರಿದ್ದು, ಕಾರ್ಯಕ್ರಮದಲ್ಲಿ ಮುಂದುವರೆಯುತ್ತಾರೆಯೇ ಎನ್ನುವ ಮಾಹಿತಿ ಸಿಕ್ಕಿಲ್ಲ.

Image credits: Isntagram
Kannada

ಜೋಡಿ ನಂ 1 ಆಗೋದು ಬಿಟ್ಟು ಹೋಗಿದ್ದೇಕೆ?

ಜೋಡಿ ನಂ 1 ಕಾರ್ಯಕ್ರಮದ ಫೇವರಿಟ್ ಜೋಡಿಗಳಲ್ಲಿ ಇವರು ಒಬ್ಬರು. ಇಬ್ಬರ ಕೆಮೆಸ್ಟ್ರಿ, ಸಾಮರಸ್ಯವನ್ನು ಜನರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಇದಿಗ ವಿದೇಶದಲ್ಲಿ ನೋಡಿ ಫ್ಯಾನ್ಸ್ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

Image credits: Isntagram
Kannada

ಕಿರುತೆರೆ ನಟಿ ರಜಿನಿ

ನಟಿ ರಜಿನಿ ಹಲವು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ‘ಅಮೃತವರ್ಷಿಣಿ’ ಅಮೃತ ಹಾಗೂ ‘ಹಿಟ್ಲರ್ ಕಲ್ಯಾಣ’ದ ಅಂತರ ಪಾತ್ರದ ಮೂಲಕ ಗಮನ ಸೆಳೆದಿದ್ದರು.

Image credits: Isntagram
Kannada

ಬಾಡಿ ಬಿಲ್ಡರ್ ಅರುಣ್

ಅರುಣ್ ಗೌಡ ಬಾಡಿ ಬಿಲ್ಡರ್ ಆಗಿದ್ದು, ಹಲವಾರು ರಾಷ್ಟ್ರೀಯ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರೆ. ರಜಿನಿ ಮತ್ತು ಅರುಣ್ ವರ್ಕೌಟ್ ಮತ್ತು ಕಾಮಿಡಿ ರೀಲ್ಸ್ ನಿಂದ ಜನಪ್ರಿಯತೆ ಪಡೆದಿದ್ದರು.

Image credits: Isntagram
Kannada

ಪ್ರೀತಿಸಿ ಮದುವೆಯಾದ ಜೋಡಿ

ಅರುಣ್ ಗೌಡ ಮತ್ತು ರಜಿನಿ ಇಬ್ಬರು ಸ್ನೇಹಿತರಾಗಿದ್ದು, ಹಲವು ವರ್ಷಗಳಿಂದ ಪ್ರೀತಿಸಿ, ಕಳೆದ ವರ್ಷ ದಿಢೀರ್ ಆಗಿ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಅಚ್ಚರಿ ಮೂಡಿಸಿದ್ದರು.

Image credits: Isntagram

ನೆದರ್ಲೆಂಡ್ಸ್‌ ಚಳಿಯಲಿ ನಲಿದಾಡಿದ 'ಕಳ್ಳಪುಟ್ಟಿ' ಸ್ಪಂದನಾ ಸೋಮಣ್ಣ

ಟರ್ಕಿ ಸಮುದ್ರ ತೀರದಲ್ಲಿ ಮತ್ಸ್ಯಕನ್ಯೆಯಾದ 'ಪವಿತ್ರ ಬಂಧನ' ನಟಿ ಅಮೂಲ್ಯ

Bigg Boss ಸೂಟ್’ಕೇಸ್ ಹಿಡ್ಕೊಂಡು ಹೊರಟು ನಿಂತ ಸ್ಪಂದನಾ ಸೋಮಣ್ಣ… ಹೋಗಿದ್ದೆಲ್ಲಿ?

ವಿಯೆಟ್ನಾಂನಲ್ಲಿ ಜೋಡಿ ಹಕ್ಕಿಗಳಂತೆ ಜೊತೆಯಾಗಿ ಹಾರಾಡಿದ ಶಿಶಿರ್- ಐಶ್ವರ್ಯ