MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • 'ಪ್ಲೀಸ್‌ ಕೇಸ್‌ ವಾಪಾಸ್‌ ತೆಗೆದುಕೊಳ್ಳಿ..' ಡಬಲ್‌ ಮೀನಿಂಗ್‌ ಕೇಸ್‌ಅಲ್ಲಿ ಹನಿ ರೋಸ್‌ಗೆ ಉದ್ಯಮಿ ಬಾಬಿ ಚೆಮ್ಮಣ್ಣೂರ್‌ ಕ್ಷಮೆ

'ಪ್ಲೀಸ್‌ ಕೇಸ್‌ ವಾಪಾಸ್‌ ತೆಗೆದುಕೊಳ್ಳಿ..' ಡಬಲ್‌ ಮೀನಿಂಗ್‌ ಕೇಸ್‌ಅಲ್ಲಿ ಹನಿ ರೋಸ್‌ಗೆ ಉದ್ಯಮಿ ಬಾಬಿ ಚೆಮ್ಮಣ್ಣೂರ್‌ ಕ್ಷಮೆ

ಖ್ಯಾತ ಉದ್ಯಮಿ ಬಾಬಿ ಚೆಮ್ಮಣ್ಣೂರ್ ಅವರು ನಟಿ ಹನಿ ರೋಸ್‌ ವಿರುದ್ಧ ನೀಡಿದ್ದ ನಿಂದನಾತ್ಮಕ ಹೇಳಿಕೆಗೆ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ತಮ್ಮ ಹೇಳಿಕೆಯಿಂದ ನಟಿಗೆ ನೋವಾಗಿದ್ದು, ಈ ಪ್ರಕರಣವನ್ನು ಹಿಂಪಡೆಯುವಂತೆ ಅವರು ವಿನಂತಿಸಿದ್ದಾರೆ. 

2 Min read
Author : Santosh Naik
Published : Jun 29 2026, 01:20 PM IST
Share this Photo Gallery
  • FB
  • TW
  • Linkdin
  • Whatsapp
16
ಬಹಿರಂಗವಾಗ ಕ್ಷಮೆಯಾಚಿಸಿದ ಬಾಬಿ ಚೆಮ್ಮಣ್ಣೂರ್‌
Image Credit : Instagram

ಬಹಿರಂಗವಾಗ ಕ್ಷಮೆಯಾಚಿಸಿದ ಬಾಬಿ ಚೆಮ್ಮಣ್ಣೂರ್‌

ಖ್ಯಾತ ಮಲಯಾಳಂ ನಟಿ ಹನಿ ರೋಸ್‌ ಅವರ ವಿರುದ್ಧ ನೀಡಿದ್ದ ನಿಂದನಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಪ್ರಮುಖ ಉದ್ಯಮಿ ಬಾಬಿ ಚೆಮ್ಮಣ್ಣೂರ್‌ ಬಹಿರಂಗವಾಗಿ ವಿಷಾದ ವ್ಯಕ್ತಪಡಿಸಿದ್ದಾರೆ. ತಮ್ಮ ಮಾತುಗಳಿಂದ ನಟಿ ಮತ್ತು ಅವರ ಕುಟುಂಬದ ಮಾನಹಾನಿಯಾಗಿದ್ದು, ನನ್ನ ಮಾತುಗಳಿಂದ ಆಕೆಯ ಕುಟುಂಬದ ಮಾನಹಾನಿ ಮಾಡಿದ ಏಕಾಂಗಿ ವ್ಯಕ್ತಿಯಾಗಿದ್ದೇನೆ. ಇದಕ್ಕೆ ನಾನೇ ಜವಾಬ್ದಾರ. ಈ ಬಗ್ಗೆ ಕ್ಷಮೆ ಕೇಳುತ್ತೇನೆ' ಎಂದು ಬಾಬಿ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಉದ್ದೇಶಪೂರ್ವಕವಾಗಿ ಯಾರಿಗೂ ನೋವು ಮಾಡಿಲ್ಲ ಎಂದ ಉದ್ಯಮಿ
Image Credit : Instagram

ಉದ್ದೇಶಪೂರ್ವಕವಾಗಿ ಯಾರಿಗೂ ನೋವು ಮಾಡಿಲ್ಲ ಎಂದ ಉದ್ಯಮಿ

ತಾವು ಸೋಶಿಯಲ್‌ ಮೀಡಿಯಾದಲ್ಲಿ ಕೇವಲ ಹಾಸ್ಯ ಮತ್ತು ಮನೋರಂಜನಾತ್ಮಕ ವಿಷಯಗಳನ್ನು ಮಾತ್ರ ಹಂಚಿಕೊಳ್ಳುವುದಾಗಿ ಬಾಬಿ ತಿಳಿಸಿದ್ದಾರೆ. "ನಾನು ಪ್ರತಿಯೊಬ್ಬರನ್ನೂ ಗೌರವಿಸುವ, ಪ್ರೀತಿಸುವ ವ್ಯಕ್ತಿ. ಯಾರನ್ನೂ ಉದ್ದೇಶಪೂರ್ವಕವಾಗಿ ಅವಮಾನಿಸುವ ಅಥವಾ ನೋಯಿಸುವ ಕೆಟ್ಟ ಚಿಂತನೆ ನನಗಿಲ್ಲ. ನನ್ನ ಹೇಳಿಕೆಯಿಂದ ನಟಿಗೆ ನೋವಾಗಿದ್ದು, ಅದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ. ಅವರು ಈ ಕ್ಷಮೆಯನ್ನು ಸ್ವೀಕರಿಸಿ ಪ್ರಕರಣವನ್ನು ಹಿಂಪಡೆಯಬೇಕಾಗಿ ವಿನಂತಿಸುತ್ತೇನೆ" ಎಂದು ಬಾಬಿ ಕೋರಿದ್ದಾರೆ.

Related Articles

Related image1
ಕೇರಳದ ಖ್ಯಾತ ಆಭರಣ ವ್ಯಾಪಾರಿ ಬಾಬಿ ಚೆಮ್ಮನೂರು ವಿರುದ್ಧ ನಟಿ ಹನಿ ರೋಸ್‌ ಲೈಂ*ಗಿಕ ಕಿರುಕುಳ ಆರೋಪ
Related image2
ಕೆಂಪು ಡ್ರೆಸ್‌ನಲ್ಲಿ ಮೈಮಾಟ ಪ್ರದರ್ಶಿಸಿದ ಹನಿ ರೋಸ್‌: ಸೀರೆ ಹಾಕೋದು ಮರೆತ್ರಾ ಎಂದು ಟ್ರೋಲ್ ಮಾಡಿದ ಫ್ಯಾನ್ಸ್‌!
36
ದ್ವಂದ್ವಾರ್ಥದ ಮಾತಿನಿಂದ ಆರಂಭವಾದ ವಿವಾದ
Image Credit : Instagram

ದ್ವಂದ್ವಾರ್ಥದ ಮಾತಿನಿಂದ ಆರಂಭವಾದ ವಿವಾದ

ಉದ್ಘಾಟನಾ ಸಮಾರಂಭವೊಂದರಲ್ಲಿ ಭಾಗವಹಿಸಿದ್ದಾಗ ಬಾಬಿ ಚೆಮ್ಮಣ್ಣೂರ್ ಅವರು ದ್ವಂದ್ವಾರ್ಥದ (Double meaning) ಪದಗಳನ್ನು ಬಳಸಿ ತಮಗೆ ಅಪಮಾನ ಮಾಡಿದ್ದಾರೆ ಎಂದು ಹನಿ ರೋಸ್ ಈ ಹಿಂದೆ ಗಂಭೀರ ಆರೋಪ ಮಾಡಿದ್ದರು. ಈ ಘಟನೆಯ ನಂತರ ಆ ಉದ್ಯಮಿಯ ಯಾವುದೇ ಸಂಸ್ಥೆಯ ಕಾರ್ಯಕ್ರಮಗಳಲ್ಲೂ ಭಾಗವಹಿಸುವುದಿಲ್ಲ ಎಂದು ನಟಿ ಕಠಿಣ ನಿರ್ಧಾರ ಕೈಗೊಂಡಿದ್ದರು.

46
ಮಹಿಳೆಗೆ ಅವಮಾನ ಮಾಡಿದ್ದಕ್ಕೆ ಶಿಕ್ಷೆ ಆಗುತ್ತದೆ
Image Credit : Instagram

ಮಹಿಳೆಗೆ ಅವಮಾನ ಮಾಡಿದ್ದಕ್ಕೆ ಶಿಕ್ಷೆ ಆಗುತ್ತದೆ

ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ನಿರಾಕರಿಸಿದ ನಂತರ, ಆ ಉದ್ಯಮಿ ತಮ್ಮ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಹೆಸರನ್ನು ಎಳೆದು ತರುತ್ತಿದ್ದಾರೆ ಎಂದು ಹನಿ ರೋಸ್ ಆರೋಪಿಸಿದ್ದರು. ತಮ್ಮ ಪೋಸ್ಟ್‌ನಲ್ಲಿ ಬಾಬಿ ಹೆಸರನ್ನು ನೇರವಾಗಿ ಉಲ್ಲೇಖಿಸದ ನಟಿ, ಆ ವ್ಯಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಮಹಿಳೆಗೆ ಧಕ್ಕೆ ತರುವಂತಹ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದರು.

56
ಪೊಲೀಸ್ ದೂರು ಮತ್ತು ಬಾಬಿ ಚೆಮ್ಮಣ್ಣೂರ್ ಬಂಧನ
Image Credit : Instagram

ಪೊಲೀಸ್ ದೂರು ಮತ್ತು ಬಾಬಿ ಚೆಮ್ಮಣ್ಣೂರ್ ಬಂಧನ

ಈ ವಿಷಯವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ನಟಿ ಹನಿ ರೋಸ್ ಕಾನೂನು ಹೋರಾಟದ ಹಾದಿ ಹಿಡಿದರು. ಬಾಬಿ ವಿರುದ್ಧ ಅವರು ಪೊಲೀಸರಿಗೆ ಅಧಿಕೃತ ದೂರು ನೀಡಿದ್ದರು. ನಟಿಯ ದೂರಿನ ಆಧಾರದ ಮೇಲೆ ಪೊಲೀಸರು ಇತ್ತೀಚೆಗೆ ಬಾಬಿ ಚೆಮ್ಮಣ್ಣೂರ್‌ ಅವರನ್ನು ಬಂಧಿಸಿದ್ದರು. ತದನಂತರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೀಗ ಪ್ರಕರಣದಿಂದ ಹೊರಬರಲು ಬಾಬಿ ನಟಿಯ ಬಳಿ ಕೇಸ್ ಹಿಂಪಡೆಯಲು ಮನವಿ ಮಾಡಿದ್ದಾರೆ.

66
ಏನಿದು ಘಟನೆ?
Image Credit : Instagram

ಏನಿದು ಘಟನೆ?

ಬಾಬಿ ಚೆಮ್ಮಣ್ಣೂರ್‌ ಅವರ ಉದ್ಯಮದ ಕಾರ್ಯಕ್ರಮದ ಉದ್ಘಾಟನೆಗೆ ಹನಿ ರೋಸ್‌ ಆಗಮಿಸಿದ್ದರು. ಈ ವೇಳೆ ವೇದಿಕೆಯ ಮೇಲೆ ಆಕೆಯ ಅನುಮತಿಯಿಲ್ಲದೆ ಮುಟ್ಟಿದ್ದಲ್ಲದೆ, ಆಕೆಯ ಕೈಹಿಡಿದು ಒಂದು ಸುತ್ತು ತಿರುಗಿಸಿದ್ದರು. ಅದಲ್ಲದೆ, ಹನಿ ರೋಸ್‌ ಬೇಡ ಎಂದರೂ ಆಕೆಗೆ ಚಿನ್ನದ ನಕ್ಲೇಸ್‌ ಅನ್ನು ಸ್ವತಃ ಬಾಬಿ ಚೆಮ್ಮಣ್ಣೂರ್‌ ಹಾಕಿದ್ದರು. ಅದಾದ ಬಳಿಕ ಆಕೆಯನ್ನು ಮಹಾಭಾರತದ ಕುಂತಿಗೆ ಹೋಲಿಸಿದ್ದು ಕೂಡ ವಿವಾದ ಸೃಷ್ಟಿಸಿತ್ತು. ಕಾರ್ಯಕ್ರಮದ ಬಳಿಕ ಹನಿ ರೋಸ್‌ ಇದಕ್ಕೆಲ್ಲಾ ಆಕ್ಷೇಪ ವ್ಯಕ್ತಪಡಿಸಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ ಬಳಿಕ ಆಕೆಯ ವಿರುದ್ಧ ನಿಂದನಾತ್ಮಕ ಕಾಮೆಂಟ್‌ ಪೋಸ್ಟ್‌ ಮಾಡಿದ್ದರು. ಸಣ್ಣ ರೀತಿಯಲ್ಲಿ ಆರಂಭವಾದ ವಿವಾದ ಕೊನೆಗೆ ಪೊಲೀಸ್‌ ಠಾಣೆ ಮೆಟ್ಟಿಲೇರಿ, ಬಾಬಿ ಚೆಮ್ಮಣ್ಣೂರ್‌ ಬಂಧನದವರೆಗೂ ಹೋಗಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಕಿರುಕುಳ
ಸುದ್ದಿ
ಮನರಂಜನಾ ಸುದ್ದಿ
ವಿವಾದ
ನಟಿ

Latest Videos
Recommended Stories
Recommended image1
ನೆದರ್ಲೆಂಡ್ಸ್‌ ಚಳಿಯಲಿ ನಲಿದಾಡಿದ 'ಕಳ್ಳಪುಟ್ಟಿ' ಸ್ಪಂದನಾ ಸೋಮಣ್ಣ
Recommended image2
ಟರ್ಕಿ ಸಮುದ್ರ ತೀರದಲ್ಲಿ ಮತ್ಸ್ಯಕನ್ಯೆಯಾದ 'ಪವಿತ್ರ ಬಂಧನ' ನಟಿ ಅಮೂಲ್ಯ
Recommended image3
Charu Asopa: 'ಆಕೆಯನ್ನ ಬಿಟ್ಟು ಇರಲು ಆಗಲ್ಲ'..: ಬಿಗ್ ಬಾಸ್ ಆಫರ್ ತಿರಸ್ಕರಿಸಿದ ನಟಿ ಚಾರು!
Related Stories
Recommended image1
ಕೇರಳದ ಖ್ಯಾತ ಆಭರಣ ವ್ಯಾಪಾರಿ ಬಾಬಿ ಚೆಮ್ಮನೂರು ವಿರುದ್ಧ ನಟಿ ಹನಿ ರೋಸ್‌ ಲೈಂ*ಗಿಕ ಕಿರುಕುಳ ಆರೋಪ
Recommended image2
ಕೆಂಪು ಡ್ರೆಸ್‌ನಲ್ಲಿ ಮೈಮಾಟ ಪ್ರದರ್ಶಿಸಿದ ಹನಿ ರೋಸ್‌: ಸೀರೆ ಹಾಕೋದು ಮರೆತ್ರಾ ಎಂದು ಟ್ರೋಲ್ ಮಾಡಿದ ಫ್ಯಾನ್ಸ್‌!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved