Brahmagantu ದೀಪಾ ಇದೆಂಥ ನಡೆ? ದಿಶಾ ಪಯಣಕ್ಕೆ ವಿದಾಯ ಹೇಳಿ ಬಿಟ್ಟು ಹೋಗೇ ಬಿಟ್ಟಳು!
ಬ್ರಹ್ಮಗಂಟು ಧಾರಾವಾಹಿಯಲ್ಲಿ, ಸೌಂದರ್ಯಳ ಕುತಂತ್ರದಿಂದ ದೀಪಾ ದಿಶಾಳಾಗಿ ಚಿರಾಗ್‌ಗೆ ಪ್ರಪೋಸ್ ಮಾಡುತ್ತಾಳೆ. ಚಿರಾಗ್ ಒಪ್ಪಿಕೊಳ್ಳುತ್ತಾನೆ. ಈ ತಪ್ಪು ತಿಳುವಳಿಕೆಯಿಂದ ನೊಂದ ದೀಪಾ, ದಿಶಾ ಪಾತ್ರಕ್ಕೆ ಅಂತ್ಯ ಹಾಡಿ ಮನೆ ಬಿಟ್ಟು ಹೋಗುತ್ತಾಳೆ.

ತಪ್ಪು ತಿಳಿವಳಿಕೆ
ಬ್ರಹ್ಮಗಂಟು (Brahmagantu Serial) ನಲ್ಲಿ ತಪ್ಪು ತಿಳಿವಳಿಕೆಯಿಂದ ಇದೀಗ ದೀಪಾ ಮತ್ತು ಚಿರಾಗ್ ಬಾಳಲ್ಲಿ ಅಪಸ್ವರ ಕೇಳಿಬಂದಿದೆ. ಸೌಂದರ್ಯಳ ಕುತಂತ್ರದಿಂದ ದಿಶಾ ಆಗಿ ದೀಪಾ ಚಿರುಗೆ ಪ್ರಪೋಸ್ ಮಾಡಿದ್ದಳು.
ದಿಶಾಳ ಪ್ರಪೋಸಲ್
ಅಲ್ಲಿ ನಿಂತದ್ದು ತನ್ನದೇ ಪತ್ನಿ ಅರ್ಥಾತ್ ದೀಪಾ ಎಂದು ಕಲ್ಪನೆ ಮಾಡಿಕೊಂಡ ಚಿರಾಗ್, ದಿಶಾಳ ಮದುವೆಯ ಪ್ರಪೋಸಲ್ ಒಪ್ಪಿಕೊಂಡಿದ್ದಾನೆ. ಇದನ್ನು ಕೇಳಿ ದೀಪಾಗೆ ನೆಲವೇ ಕುಸಿದ ಅನುಭವವಾಗಿದ್ದರೆ, ಸೌಂದರ್ಯ ಗೆದ್ದೆನೆಂದು ಬೀಗುತ್ತಿದ್ದಾಳೆ.
ಸೌಂದರ್ಯಕ್ಕಿಂತ ಗುಣನೇ ಮುಖ್ಯ
ಸೌಂದರ್ಯಕ್ಕಿಂತ ಗುಣನೇ ಮುಖ್ಯ ಎಂದು ಸಾಬೀತು ಮಾಡುವುದು ದೀಪಾ ಗುರಿಯಾಗಿತ್ತು. ಆದರೆ ಸೌಂದರ್ಯವೇ ಮೇಲು ಎನ್ನೋದು ಸೌಂದರ್ಯಳ ವಾದ. ಆದರೆ ತಪ್ಪು ಕಲ್ಪನೆಯಿಂದಾಗಿ ಈಗ ಸೌಂದರ್ಯವೇ ಮೇಲಾಯಿತು ಎಂದುಕೊಂಡ ದೀಪಾ ದಿಶಾಳಿಗೆ ಶಾಶ್ವತ ಮುಕ್ತಿ ಹಾಡಲು ಮುಂದಾಗಿದ್ದಾಳೆ.
ಮೇಕಪ್ ಕಳಚಿ
ಪ್ರಪೋಸ್ ಮಾಡಬಂದವಳೇ ತಲೆಯ ಮೇಲೆ ಶವರ್ ಬಿಟ್ಟುಕೊಂಡು ತನ್ನ ಮೇಕಪ್ ಕಳಚಿ ದಿಶಾಳ ಫೋನ್ ಅಲ್ಲಿಯೇ ಇಟ್ಟು, ದೀಪಾ ರೂಪದಲ್ಲಿಯೇ ಮನೆಬಿಟ್ಟು ಹೋಗಿದ್ದಾಳೆ. ದಿಶಾಳಿಗೆ ವಿದಾಯ ಹೇಳಿದ್ದಾಳೆ.
ಮುಂದೇನು ಎನ್ನುವ ಕುತೂಹಲ
ಅಲ್ಲಿಗೆ ತರಾತುರಿಯಲ್ಲಿ ಮಾಡಿದ ನಿರ್ಧಾರದಿಂದ ದೀಪಾಳಿಗೆ ಸೋಲಾಗಿದೆ. ಮುಂದೆ ಚಿರು ತಾನು ನೀವೇ ಎಂದು ತಿಳಿದುಕೊಂಡು ದಿಶಾಳ ಪ್ರಪೋಸಲ್ ಒಪ್ಪಿಕೊಂಡೆ ಎಂದರೂ ಅದನ್ನು ಕೇಳದ ಸ್ಥಿತಿ ದೀಪಾಗೆ ಬರುತ್ತದೆ. ಮುಂದೇನು ಎನ್ನುವ ಕುತೂಹಲ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

