- Home
- Entertainment
- TV Talk
- ನನ್ನ ಮಗನಿಗೆ ಇಷ್ಟುಬೇಗ ಉಪನಯನ ಮಾಡಿದ್ದಕ್ಕೂ ಕಾರಣ ಇದೆ: ಬ್ರಹ್ಮಗಂಟು ನಟಿ ಪ್ರೀತಿ ಶ್ರೀನಿವಾಸ್!
ನನ್ನ ಮಗನಿಗೆ ಇಷ್ಟುಬೇಗ ಉಪನಯನ ಮಾಡಿದ್ದಕ್ಕೂ ಕಾರಣ ಇದೆ: ಬ್ರಹ್ಮಗಂಟು ನಟಿ ಪ್ರೀತಿ ಶ್ರೀನಿವಾಸ್!
ಬ್ರಹ್ಮಗಂಟು ಧಾರಾವಾಹಿ ನಟಿ ಪ್ರೀತಿ ಶ್ರೀನಿವಾಸ್ ಅವರ ಏಕೈಕ ಪುತ್ರ ಹೃದಯ್ ಶರ್ಮಾ ಅವರಿಗೆ ಬ್ರಹ್ಮೋಪದೇಶ ಮಾಡಲಾಗಿದೆ. ಬ್ರಹ್ಮೋಪದೇಶಕ್ಕೆ ಉಪನಯನ ಅಂತಲೂ ಕರೆಯಲಾಗುತ್ತದೆ. ಮುಂಜಿ ಅಂತಲೂ ಹೇಳುತ್ತಾರೆ.

ಬ್ರಹ್ಮೋಪದೇಶ ಅಥವಾ ಉಪನಯನದ ಬಗ್ಗೆ ಬ್ರಹ್ಮಗಂಟು ಧಾರಾವಾಹಿ ನಟಿ ಪ್ರೀತಿ ಶ್ರೀನಿವಾಸ್ ಅವರು Asianet Suvarna News ಜೊತೆಗೆ ಮಾತನಾಡಿದ್ದಾರೆ.
ಏಳು ವರ್ಷದ ನಂತರ ಯಾವಾಗ ಬೇಕಿದ್ರೂ ಉಪನಯನ ಮಾಡಬಹುದು ಅಂತ ನಮಗೆ ಹೇಳಿದ್ದರು, ಈಗ ಮಗನಿಗೆ ಉಪನಯನ ಮಾಡಿದೆವು ಎಂದು ಪ್ರೀತಿ ಶ್ರೀನಿವಾಸ್ ಹೇಳಿದ್ದಾರೆ.
ಶಂಕರ ಜಯಂತಿ ದಿನ ಶಂಕರಾಚಾರ್ಯರು, ಶಾರದಾಂಬಾ ಆಶೀರ್ವಾದ ಇರಲಿ ಅಂತ ಆ ದಿನವೇ ಉಪನಯನ ಮಾಡಿದೆವು ಎಂದು ಪ್ರೀತಿ ಶ್ರೀನಿವಾಸ್ ಅವರು ಹೇಳಿದ್ದಾರೆ.
ಗುರುಬಲ ಚೆನ್ನಾಗಿತ್ತು ಅಂತ ಈಗ ಉಪನಯನ ಮಾಡಿದೆವು. ಚೆನ್ನಾಗಿ ಉಪದೇಶ ಮಾಡಲಾಗಿದೆ. ಸಾಕಷ್ಟು ಹಿರಿಯರು ಬಂದು ಅವನಿಗೆ ಆಶೀರ್ವದಿಸಿದ್ದರು ಎಂದು ಪ್ರೀತಿ ಶ್ರೀನಿವಾಸ್ ಹೇಳಿದ್ದಾರೆ.
“ನನಗೆ ಮಗನ ಉಪನಯನ ಮಾಡಬೇಕು ಅಂತ ತುಂಬ ಆಸೆ ಇತ್ತು. ಬೆಂಗಳೂರಿನಲ್ಲಿ ಕಲ್ಯಾಣಮಂಟಪದಲ್ಲಿಯೇ ಗ್ರ್ಯಾಂಡ್‌ಆಗಿ ಮಾಡಿದೆವು” ಎಂದು ಪ್ರೀತಿ ಶ್ರೀನಿವಾಸ್ ಹೇಳಿದ್ದಾರೆ.
“ತಾಯಿಯಾಗಿ ಮಗನಿಗೆ ಒಳ್ಳೆಯದು ಮಾಡಬೇಕು ಎನ್ನೋ ಆಸೆ ಇತ್ತು. ಎಲ್ಲರೂ ಇಷ್ಟು ಬೇಗ ಯಾಕೆ ಬ್ರಹ್ಮೋಪದೇಶ ಮಾಡಿದ್ರಿ ಅಂತ ಕೇಳಿದ್ರು” ಎಂದು ಪ್ರೀತಿ ಶ್ರೀನಿವಾಸ್ ಹೇಳಿದ್ದಾರೆ.
“ಈಗ ಅವನಿಗೆ ಉಪನಯನ ಮಾಡಿದರೆ ಚೆನ್ನಾಗಿರತ್ತೆ ಅಂತ ಹೇಳಿದ್ದಕ್ಕೆ, ಈಗ ಎಲ್ಲವೂ ಕೂಡಿಬಂದಿದ್ದಕ್ಕೆ ಈಗ ಉಪನಯನ ಮಾಡಿದೆವು” ಎಂದು ಪ್ರೀತಿ ಶ್ರೀನಿವಾಸ್ ಹೇಳಿದ್ದಾರೆ.
ಕನ್ನಡ ನಟಿ ಪ್ರೀತಿ ಶ್ರೀನಿವಾಸ್ ಅವರು ಈಗ ಟ್ರೆಡಿಷನಲ್ ಆಗಿ ರೆಡಿಯಾಗಿದ್ದಾರೆ. ಅದ್ದೂರಿ ಆಭರಣಗಳನನು ಕೂಡ ಧರಿಸಿದ್ದರು.
ಪ್ರೀತಿ ಶ್ರೀನಿವಾಸ್ ಅವರ ಪತಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಂಬಂಧಿಕರ ಹುಡುಗನನ್ನೇ ಪ್ರೀತಿ ಶ್ರೀನಿವಾಸ್ ಅವರು ಮದುವೆಯಾಗಿದ್ದರು.
ಪ್ರೀತಿ ಶ್ರೀನಿವಾಸ್ ಅವರು ಮಗನಿಗೆ ಶಾಸ್ತ್ರೋಕ್ತವಾಗಿ ಉಪನಯನ ಮಾಡಿದ್ದಾರೆ. ಕಾರ್ಯಕ್ರಮ ಚೆನ್ನಾಗಿ ಬಂದಿದ್ದಕ್ಕೆ ಅವರಿಗೆ ತುಂಬ ಖುಷಿ ಇದೆಯಂತೆ.