Brahmagantu Serial ದೀಪಾ ಅರೆಸ್ಟ್- ಅಷ್ಟಕ್ಕೂ ಆಗಿದ್ದೇನು? ದೂರು ಕೊಟ್ಟೋರು ಯಾರು?
ಬ್ರಹ್ಮಗಂಟು ಧಾರಾವಾಹಿಯಲ್ಲಿ, ದೀಪಾಳೇ ದಿಶಾ ಎಂದು ರೂಪಾಗೆ ಅನುಮಾನ ಮೂಡಿದೆ. ತನ್ನ ಅನುಮಾನವನ್ನು ಸಾಬೀತುಪಡಿಸಲು ರೂಪಾ ಮಾಡಿದ ಕುತಂತ್ರದಿಂದ ದೀಪಾ ಕಳ್ಳತನದ ಆರೋಪದ ಮೇಲೆ ಅರೆಸ್ಟ್ ಆಗಿದ್ದಾಳೆ. ಇದೀಗ ದೀಪಾಳನ್ನು ಬಿಡಿಸಲು 'ಶ್ರಾವಣಿ ಸುಬ್ರಹ್ಮಣ್ಯ' ಖ್ಯಾತಿಯ ಶ್ರಾವಣಿ ಎಂಟ್ರಿ ಕೊಟ್ಟಿದ್ದಾಳೆ.

ರೂಪಾಗೆ ಡೌಟ್
ಬ್ರಹ್ಮಗಂಟು (Brahmagantu Serial)ನಲ್ಲಿ ಸದ್ಯ ದೀಪಾನೇ ದಿಶಾ ಎನ್ನುವ ಡೌಟ್ ರೂಪಾಗೆ ಬಂದಿದೆ. ಆದರೆ ಅದರ ಅರಿವು ದೀಪಾಗೆ ಇಲ್ಲ. ಇದೀಗ ಚಿರು ಕೈಗೆ ಬ್ಯಾಂಡೇಜ್ ಹಾಕಿರುವ ಕಾರಣದಿಂದ ದಿಶಾ ಚಿರುನ ಆಫೀಸ್ ಕೆಲಸವನ್ನೂ ನೋಡಿಕೊಳ್ಳಬೇಕಿದೆ.
ಸೊಸೆಯಂದಿರ ಪರೀಕ್ಷೆ
ಇದರ ಜೊತೆಗೆ, ಸೊಸೆಯಂದಿರಿಗೆ ಟಾಸ್ಕ್ ಕೊಟ್ಟಿದ್ದಾಳೆ ಅಜ್ಜಿ. ಮೂರು ಟಾಸ್ಕ್ನಲ್ಲಿ ಎರಡು ವಿನ್ ಆಗಲೇಬೇಕು. ಇಲ್ಲದಿದ್ದರೆ ದೀಪಾ ಮನೆಬಿಟ್ಟು ಹೋಗುವುದಾಗಿ ಹೇಳಿಬಿಟ್ಟಿದ್ದಾಳೆ. ಇದಾಗಲೇ ಮೊದಲ ಟಾಸ್ಕ್ನಲ್ಲಿ ಆಕೆ ವಿನ್ ಆಗಿದ್ದಾಳೆ.
ಡಬಲ್ ಟಾಸ್ಕ್
ಇನ್ನೂ ಎರಡು ಟಾಸ್ಕ್ ಇದೆ. ಆದರೆ ಈಗ ಆಗಿರೋದೇ ಬೇರೆ. ದೀಪಾ, ದಿಶಾ ಆಗಿ ಚಿರು ಆಫೀಸ್ ನೋಡಿಕೊಂಡು ಮನೆಯಲ್ಲಿ ಟಾಸ್ಕ್ ಕೂಡ ಗೆಲ್ಲಬೇಕಿದೆ. ಆದರೆ ಇದರ ನಡುವೆಯೇ ದೀಪಾ ಅರೆಸ್ಟ್ ಆಗಿಬಿಟ್ಟಿದ್ದಾಳೆ.
ರೂಪಾ ಕಿತಾಪತಿ
ಈ ಅರೆಸ್ಟ್ ಮಾಡಿಸಿದ್ದು ರೂಪಾನೇ. ಕಚೇರಿಯಲ್ಲಿ ಇಟ್ಟಿದ್ದ ಹಣವೆಲ್ಲಾ ಮಾಯವಾಗಿದೆ. ಅದು ದಿಶಾ ತಲೆಮೇಲೆ ಬರುವ ಹಾಗೆಮಾಡಿದ್ದಾಳೆ ರೂಪಾ. ಅವಳಿಗೆ ರೂಪಾ ಮತ್ತು ದಿಶಾ ಒಬ್ಬರೇ ಎಂದು ಸಾಬೀತು ಮಾಡಬೇಕಿದೆ. ಅದಕ್ಕಾಗಿಯೇ ಈ ಆಟ.
ಶ್ರಾವಣಿ ಎಂಟ್ರಿ
ದೀಪಾಳನ್ನು ಜೈಲಿಗೆ ಹಾಕಲಾಗಿದೆ. ಆಕೆಯನ್ನು ಬಿಡಿಸಲು ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್ ಶ್ರಾವಣಿ ಎಂಟ್ರಿ ಕೊಟ್ಟಿದ್ದಾಳೆ. ನನ್ನ ಸ್ನೇಹಿತೆಯನ್ನು ಯಾರು ಜೈಲಿಗೆ ಹಾಕಿದ್ದು, ಏನು ಸಾಕ್ಷಿ ಇದೆ ಎಂದು ಪ್ರಶ್ನಿಸಿದ್ದಾಳೆ.
ಕಂಪ್ಲೇಂಟ್ ಕೊಟ್ಟಿದ್ದು ಯಾರು
ಈಕೆಯ ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ದು ಯಾರು ಎಂದು ಪೊಲೀಸರಿಗೆ ಪ್ರಶ್ನಿಸಿದ್ದಾಳೆ. ಆದರೆ ಪೊಲೀಸರು ಸದ್ಯ ಏನೂ ಹೇಳಲಿಲ್ಲ. ಇದೀಗ ರೂಪಾ ಕಿತಾಪತಿ ಬಯಲಾಗಲಿದೆ. ರೂಪಾ ಸತ್ಯದ ಬಾಯಿ ಬಿಟ್ಟರೆ ಅಲ್ಲಿಗೆ ದೀಪಾ ಖೇಲ್ ಕಥಮ್. ಮುಂದೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

