ಡ್ರೈವರ್ ಮಂಜು ಮತ್ತು ಲೀಲಾ ಅವರ ವಿವಾದಾತ್ಮಕ ಕೌಟುಂಬಿಕ ಗೊಂದಲ ಸುಖಾಂತ್ಯ ಕಂಡಿದೆ. ಕೋರ್ಟ್ ಮೆಟ್ಟಿಲೇರಿದ ಬಳಿಕ ದಂಪತಿ ಮಕ್ಕಳಿಗಾಗಿ ಮತ್ತೆ ಒಂದಾಗಲು ನಿರ್ಧರಿಸಿದ್ದು, ಪ್ರೇಮಿ ಸಂತು ಕೂಡ ಇದಕ್ಕೆ ಸಮ್ಮತಿ ನೀಡಿದ್ದಾನೆ ಎನ್ನಲಾಗುತ್ತಿದೆ. ಇಲ್ಲಿದೆ ಕೊನೆಯ ವಿಡಿಯೋ..
ನೀನು ನನ್ನ ಪ್ಲೇವರ್ ಚಿನ್ನೀ, ಬಂದು ಬಿಡು ಬಂಗಾರೀ.., ನಿನ್ನ ರಾಣಿ ಥರ ನೊಡ್ಕೋತೀನಿ ಬಂದುಬಿಡು ಲೀಲಾ ಎಂದು ಗೋಳಾಡಿದ್ದ ಮಂಜನಿಗೆ ಇದೀಗ ಲೀಲಾ ಸಿಕ್ಕಾಗಿದೆ. ಡ್ರೈವರ್ ಗಂಡ ಮಂಜು ಹಾಗೂ ಮೂರು ಮಕ್ಕಳನ್ನು ಬಿಟ್ಟು ಪ್ರೇಮಿಯೊಂದಿಗೆ ಓಡಿ ಹೋಗಿದ್ದ ಲೀಲಾಳ ಸ್ಟೋರಿ ಇದೀಗ ಸುಖಾಂತ್ಯಗೊಂಡಿದೆ. ಮೀಡಿಯಾಗಳಲ್ಲಿ ಕೌಟುಂಬಿಕ ವಿಚಾರದ ಬಗ್ಗೆ ಚರ್ಚೆ ಮಾಡಿ ಇವರ ದಾಂಪತ್ಯ ಮತ್ತು ಟ್ರೈಯಾಂಗಲ್ ಲವ್ ಸ್ಟೋರಿ ಭಾರೀ ವೈರಲ್ ಆಗಿತ್ತು. ಕೋರ್ಟ್ ಮೆಟ್ಟಿಲೇರಿದ ನಂತರವೂ ಇದೀಗ ಮಂಜು ಮತ್ತು ಲೀಲಾ ಮೂವರು ಮಕ್ಕಳಿಗಾಗಿ ಒಂದಾಗಿದ್ದಾರೆ.
ಲೀಲಾ ಬಂದುಬಿಡಮ್ಮೂ, ನಿನ್ನ ದೇವತೆಗಿಂತ ಹೆಚ್ಚಾಗಿ ಚೆನ್ನಾಗಿ ನೋಡ್ಕೋತೀನಿ. ಇನ್ನೂ ಬಂಗಾರದ ರಾಣಿ ಥರಹ ಸಾಕ್ತೀನಿ. ತುಂಬಾ ದೂರ ಹೋಗಿಬಿಡೋಣ ಬಾ.. ನೀನು ಇಲ್ಲ ಅಂದ್ರೆ ನಂಗೆ ಪ್ರಪಂಚನಾ ಇಲ್ಲ. ಅದೆಲ್ಲಾ ಮರೆತುಬಿಟ್ಟು ಬಂದುಬಿಡು. ಪ್ರಪಂಚ ದೊಡ್ಡದಿದೆ, ನಾನೊಬ್ಬನೇ ಇದೀನಿ ಬಂದುಬಿಡು ಅಮ್ಮು.. ನೀನು ನನ್ನ ಬಂಗಾರಿ, ನನ್ನ ಚಿನ್ನಿ ನಿನ್ನ ಎಲ್ಲಾ ತಪ್ಪನ್ನು ಕ್ಷಮಿಸಿ ಚೆನ್ನಾಗಿ ನೋಡ್ಕೋತೀನಿ ಬಂದುಬಿಡು ಎಂದು ಮಂಜು ಗೋಳಾಡಿ ಅತ್ತು ಕರೆದಿದ್ದನು.
ಅವನು ಸಂತು ಅನ್ನೋನು ರಾತ್ರಿ 8.30ಕ್ಕೆ ಮನೆಗೆ ಬಂದು ಅಲ್ಲೇ ಇರುತ್ತಿದ್ದ. ನನ್ನ ದೊಡ್ಡ ಮಗ ಎಲ್ಲಾ ನೋಡಿದ್ದಾನೆ. ಮಕ್ಕಳಿಗೆ ರಾತ್ರಿ 8 ಗಂಟೆಯೊಳಗೆ ಊಟ ಮಾಡಿಸಿ ಮಲಗಿಸುತ್ತಿದ್ದಳು. ಆಮೇಲೆ ಸಂತು ಬಂದಾಗ ಅವರಿಬ್ಬರೂ ರೂಮಿನೊಳಗೆ ಸೇರಿಕೊಳ್ಳುತ್ತಿದ್ದರು. ಒಂದು ವೇಳೆ ಮಕ್ಕಳು ಏನಾದರೂ ಎದ್ದು ಬಂದರೆ ಸಂತು ಮಕ್ಕಳಿಗೆ ಹೊಡೆಯುತ್ತಿದ್ದನು. ನನ್ನ ಹೆಂಡತಿಗೆ ನಾನು ಎಲ್ಲ ಬೆರಳಿಗೂ ಉಂಗುರ ಹಾಕಿ ಚಿನ್ನ ನೋಡ್ಕೊಂಡಂಗೆ ನೋಡಿಕೊಂಡಿದ್ದೀನಿ. ಈಗ ಕಷ್ಟ ಬಂದಾಗ ಚಿನ್ನ ಅಡವಿಟ್ಟುದ್ದು, ಕ್ಯಾಬ್ ಡ್ರೈವರ್ ಆಗಿ ದುಡಿದು ಎಲ್ಲವನ್ನೂ ಬಿಡಿಸಿ ಕೊಡ್ತೇನೆ ಎಂದು ಮಂಜು ಹೇಳಿದ್ದರು.
ಕುಡಿಯೋದು ಬಿಡ್ತೀನಿ, ಹೆಂಗಸರ ಸಹವಾಸ ಬಿಡ್ತೀನಿ
ನನಗೋಸ್ಕ ಇಲ್ಲದಿದ್ದರೂ ನಮ್ಮ ಮಕ್ಕಳಿಗಾಗಿ ನಾವು ಒಂದಾಗೋಣ. ಲೀಲಾ ಬಾರಮ್ಮಾ.., ನನ್ನ ಮಾತು ಕೇಳಿ ಬಾರೆ. ನಿನ್ನ ಎಷ್ಟು ಚೆನ್ನಾಗಿ ಸಾಕಿದ್ದೀನಿ, ಇನ್ಮೇಲೆ ಅದರ ಅಪ್ಪನಂಗೆ ನೋಡಿಕೊಳ್ತೀನಿ. ನಾನು ನಿಂಗೋಸ್ಕರ ಕುಡಿಯೋದು ಬಿಡ್ತೀನಿ, ಬೇರೆ ಹೆಣ್ಣಿನ ಸಹವಾಸ ಇದ್ದರೂ ಬಿಡ್ತೀನಿ. ನಾವಿಬ್ಬರೂ ಒಂದಾಗಿರೋಣ, ಕಾಲು ಹಿಡ್ಕೋತೀನಿ ಲೀಲಾ ಬಾ ಎಂದು ಟಿವಿಯ ಎದುರಿಗೆ ನಿಂತು ಗೋಳಾಡಿದ್ದನು. ನೀನು ಬೇಕಾದರೆ ನನ್ನ ಮಕ್ಕಳನ್ನು ಕಳಿಸಿಬಿಡು, ನಾನು ನಿನ್ನ ಜೊತೆಗೆ ಬರಲ್ಲ ಎಂದು ಹೇಳಿದ್ದಳು. ಇದೀಗ ಕೊನೆಗೆ ಕಾನೂನಿನ ರೀತಿಯಲ್ಲಿ ದೂರವಾಗಲು ಕೋರ್ಟ್ ಮೆಟ್ಟಿಲೇರಿದ್ದರು.
ಇನ್ನು ಕೋರ್ಟಿನ ವಿಚಾರಗಳ ನಡುವೆಯೂ ಇದೀಗ ಇಬ್ಬರೂ ಮಕ್ಕಳನ್ನು ನೋಡಿಕೊಳ್ಳುವುದಾಗಿ ತೀರ್ಮಾನ ಮಾಡಿದ್ದಾರೆ. ಇದಕ್ಕೆ ಸಂತೋಷ್ ಕೂಡ ಸಾಥ್ ಕೊಟ್ಟಿದ್ದು, ಅವರಿಬ್ಬರೂ ಪ್ರತ್ಯೇಕವಾಗಿ ಮಕ್ಕಳನ್ನು ನೋಡಿಕೊಂಡು ಹೋಗುವುದಕ್ಕೆ ದಂಪತಿ ಸಮ್ಮತಿ ತೋರಿಸಿದ್ದಾನೆ. ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೂ ನಿಮ್ಮ ಕುಟುಂಬ, ಸಂಸಾರವನ್ನು ನೋಡಿಕೊಂಡು ಹೋಗಿ. 'ಎಲ್ಲರ ಮನೆ ದೋಸೆನೂ ತೂತು' ಇರುತ್ತದೆ ಎಂದು ಬುದ್ಧಿ ಹೇಳಿದ್ದಾರೆ.
ಮಕ್ಕಳನ್ನು ಇಬ್ಬರಿಗೂ ಹಂಚಿದ ಸಂಧ್ಯಾ:
ನಾನು ಸಂಧ್ಯಾ ಮೇಡಂ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ನನ್ನಿಂದ ತಪ್ಪಾಗಿದೆ, ತಪ್ಪನ್ನು ತಿದ್ದಿಕೊಳ್ತೇನೆ. ನಾನು ನನ್ನ ಮಕ್ಕಳನ್ನು ಬಿಟ್ಟುಕೊಡೊಲ್ಲ, ಮಕ್ಕಳಿಗೆ ಒಳ್ಳೆಯ ಭವಿಷ್ಯ ಕೊಡುವುದಕ್ಕೆ ಒಂದಾಗುತ್ತೇವೆ. ಸಂಧ್ಯಾ ಮೇಡಂ ನಿಮಗೆ ತುಂಬಾ ಥ್ಯಾಂಕ್ಸ್. ಒಬ್ಬರ ಬಗ್ಗೆ ಮಾತನಾಡುವಾಗ, ಕೆಟ್ಟದಾಗಿ ಕಾಮೆಂಟ್ ಮಾಡುವಾಗ ಎಚ್ಚರದಿಂದಿರಿ. ಒಂದು ಹೆಣ್ಣಿನ ಬಗ್ಗೆ ಮಾತನಾಡೋವಾಗ ನಿಮ್ಮನೆಯಲ್ಲೂ ಹೆಣ್ಮಕ್ಕಳು ಇರ್ತಾರೆ ಎಂದು ಹೇಳಿದ್ದಾರೆ. ಇನ್ನು ಮಕ್ಕಳನ್ನು ನೋಡಿಕೊಳ್ಳೋದಾಗಿ ಮಂಜು ಹೇಳಿದ್ದಾರೆ. ಆದರೆ, ಇಬ್ಬರು ಮಕ್ಕಳನ್ನು ಮಂಜು ಹಾಗೂ ಒಬ್ಬ ಹೆಣ್ಣು ಮಗಳನ್ನು ಲೀಲಾ ನೋಡಿಕೊಳ್ಳೋದಾಗಿ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಲೀಲಾ ಮಂಜು ಒಟ್ಟಿಗೆ ಜೀವನ ಮಾಡುತ್ತಾರಾ? ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.


