Bigg Boss Kannada Season 12: ಬಿಗ್ ಬಾಸ್ ಮನೆಯಲ್ಲಿ ರಘು ಬಗ್ಗೆ ಗಿಲ್ಲಿ ನಟ ಮಾತನಾಡಿರೋದು ಬೇಸರ ತಂದಿದೆಯಂತೆ. ಕಾವ್ಯ ಶೈವ ಬಗ್ಗೆ ಮಾತಾಡೋದು, ಕಾವು ಕಾವು ಎನ್ನೋದು ಕೂಡ ಇಷ್ಟ ಆಗ್ತಿಲ್ಲವಂತೆ. ಈ ವಿಚಾರವಾಗಿ ಚರ್ಚೆ ನಡೆದಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ( Bigg Boss Kannada Season 12 ) ಗಿಲ್ಲಿ ನಟ ( Gilli Nata ) ಅವರು “ರಘು ಅಣ್ಣ ಮಚ್ಚು, ಲಾಂಗು ತಗೊಂಡು ಬರ್ತಾರೆ ಎಂದ್ಕೊಂಡೆ. ಆದರೆ ಕಿಚನ್‌ನಲ್ಲಿ ಬೆಳ್ಳುಳ್ಳಿ, ಈರುಳ್ಳಿ ಬಿಡಿಸಿಕೊಂಡು ಇರ್ತಾರೆ” ಎಂದು ಹೇಳಿದ್ದರು. ಇದು ರಘು ಮನಸ್ಸಿಗೆ ಬೇಸರ ತಂದಿದೆ.
ಪದೇ ಪದೇ ಕಾವ್ಯ ಶೈವ ಅವರನ್ನು ಕಾವು ಕಾವು ಎನ್ನುತ್ತ ಗಿಲ್ಲಿ ನಟ ಅವರು, “ನನಗೆ ಕಾವ್ಯ ಶೈವನಂಥ ಅಲ್ಲ, ಮದುವೆಯಾಗೋಕೆ ಕಾವ್ಯ ಶೈವ ಬೇಕು” ಎಂದು ಹೇಳಿದ್ದರು. ಒಟ್ಟಿನಲ್ಲಿ ಗಿಲ್ಲಿ ನಟನಿಂದಲೇ ಕಾವ್ಯ, ಕಾವ್ಯ ಜೀರೋ ಎಂದು ಕೂಡ ರಿಷಾ ಗೌಡ ಅವರು ಹೇಳಿದ್ದರು. ಟಾಸ್ಕ್ ಮಾಡದ, ಅಡುಗೆಯೂ ಮಾಡದ ಕಾವ್ಯ ಶೈವ ಯಾಕೆ ಈ ಮನೆಯಲ್ಲಿದ್ದಾರೆ ಎಂದು ಅನೇಕರು ಹೇಳಿದ್ದುಂಟು.
ಈಗ ಗಿಲ್ಲಿ ನಟನ ವಿರುದ್ಧ ಮಾತನಾಡಬೇಕು, ಕ್ರಮ ಕೈಗೊಳ್ಳಬೇಕು ಎಂದು ರಘು ಅವರಿಗೆ ಕಾವ್ಯ ಶೈವ ಹೇಳಿದ್ದಾರೆ.
ರಘು: ಗಿಲ್ಲಿ ನಟ ವೀಕೆಂಡ್ ಎಪಿಸೋಡ್‌ನಲ್ಲಿ ರಘು ಅಣ್ಣ ಶೆಫ್ ಎಂದು ಹೇಳಿದ, ಅದು ನನಗೆ ಟ್ರಿಗರ್ ಆಯ್ತು, ತಲೆ ಕೆಟ್ಟಿತು. ಕುಕ್ಕಿಂಗ್ ಮಾಡುತ್ತಿರೋದರಿಂದ ನನ್ನ ಪರ್ಸನಾಲಿಟಿ ಚೇಂಜ್ ಆಗ್ತಿದೆ ಅನಿಸ್ತು. ಇದು ನನಗೆ ಹೊಡೆತ ಆಗಬಾರದು. ಅವನು ಹಾಗೆ ಇರಬೇಕು, ಹೀಗೆ ಇರಬೇಕು ಎಂದು ಹೇಳಿ ಕುಕ್ ಮಾಡಿಕೊಂಡು ಇದ್ದರೆ..?
ಕಾವ್ಯ ಶೈವ: ನೀವು ಕುಕ್ಕಿಂಗ್ ಶೋ ವಿನ್ನರ್ ಅಲ್ವಾ? ನೀವು ಹಂಗಿದ್ರೆ ಆ ಶೋಗೆ ಹೋಗಬಾರದಿತ್ತು. ಆ ಶೋಗೆ ಹೋಗಿ ಬಂದ ಬಳಿಕ
ಸೂರಜ್: ನೀವು ಕುಕ್ ಎಂದು ಹೇಳಬಾರದಿತ್ತು. ಅವನು ಆ ಥರ ಮಾತನಾಡಿದಾಗ ನೀವು ಹೇಳಬೇಕು, ಆಮೇಲೆ ಗೆಳೆಯ ಎಂದು ಬಂದಾಗ ನೀವು ಸುಮ್ಮನೆ ಇರೋಕೆ ಬಿಡಬಾರದು
ಕಾವ್ಯ ಶೈವ: ಅವನು ತಪ್ಪು ಮಾಡಿದಾಗ ನೀವು ಹೇಳಬೇಕು.
ಸ್ಪಂದನಾ ಸೋಮಣ್ಣ: ನೀವು ಹೇಳಬೇಕು ಸರ್
ರಘು: ನಾನು ತುಂಬ ಸಲ ಹೇಳಿದೀನಿ, ಎಷ್ಟು ಸಲ ಅಂತ ಹೇಳಿದೀನಿ. ಹೊರಗಡೆ ಇದ್ದಿದ್ರೆ ಎರಡು ಬಿಟ್ಟು ಹೇಳ್ತಿದ್ದೆ. ಇಷ್ಟೆಲ್ಲ ಮಾಡಿಕೊಂಡು ಕುಕ್ಕಿಂಗ್ ಮಾಡ್ತಾರೆ ಎಂದು ಬೇರೆ ಥರ ಹೇಳಬಹುದಿತ್ತು. ಬೇರೆಯವರ ಬಗ್ಗೆ ಮಾತಾಡ್ತಿದೀವಿ ಎಂದು ಅವನಿಗೆ ಅನಿಸೋದಿಲ್ಲ. ನಮಗೆ ಕುಟುಂಬವಿದೆ, ಮಗ ಸ್ಕೂಲ್‌ಗೆ ಹೋಗ್ತಾನೆ, ಸ್ಟುಡೆಂಟ್ಸ್ ಇದ್ದಾರೆ.
ಕಾವ್ಯ ಶೈವ: ನಾವು ಕ್ರಮ ಕೈಗೊಳ್ಳಬೇಕು. ನಾವಿಬ್ಬರೂ ಒಂದೇ ದೋಣಿಯಲ್ಲಿದ್ದೇವೆ. ನನ್ನ ವಿಚಾರದಲ್ಲಿ ಕೂಡ ನಾನು ಹೇಳಿದಾಗ ಅವನು ಕೇಳಲೇ ಇಲ್ಲ.


