- Home
- Entertainment
- TV Talk
- Brahmagantu ಶೂಟಿಂಗ್ ವೇಳೆ ಚಿರು ಮೈಮೇಲೆ ಆಯತಪ್ಪಿ ಬಿದ್ದ ದೀಪಾ: ನಟನ ಚೀರಾಟ- ವಿಡಿಯೋ ವೈರಲ್
Brahmagantu ಶೂಟಿಂಗ್ ವೇಳೆ ಚಿರು ಮೈಮೇಲೆ ಆಯತಪ್ಪಿ ಬಿದ್ದ ದೀಪಾ: ನಟನ ಚೀರಾಟ- ವಿಡಿಯೋ ವೈರಲ್
ಬ್ರಹ್ಮಗಂಟು ಧಾರಾವಾಹಿಯ ರೊಮ್ಯಾಂಟಿಕ್ ದೃಶ್ಯವೊಂದರ ಚಿತ್ರೀಕರಣ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ತೂಗುಯ್ಯಾಲೆಯ ದೃಶ್ಯವನ್ನು ಚಿತ್ರೀಕರಿಸುವಾಗ ನಟ-ನಟಿ ದೀಪಾ (ದಿಯಾ ಪಾಲಕ್ಕಲ್) ಮತ್ತು ಚಿರು (ಭುವನ್ ಸತ್ಯ) ಪಟ್ಟ ಕಷ್ಟವನ್ನು ತೆರೆ ಹಿಂದಿನ ವಿಡಿಯೋ ಬಹಿರಂಗಪಡಿಸಿದೆ.

ಅಂದುಕೊಂಡಷ್ಟು ಸುಲಭವಲ್ಲ
ಸೀರಿಯಲ್ಗಳ ಶೂಟಿಂಗ್ ಮಾಡುವಾಗ ಎಲ್ಲವೂ ನಾವಂದುಕೊಂಡಂತೆ ಸುಲಭವಾಗಿರುವುದಿಲ್ಲ. ಹಲವಾರು ದೃಶ್ಯಗಳನ್ನು ಗ್ರೀನ್ ಅಥವಾ ಬ್ಲೂ ಸ್ಕ್ರೀನ್ ತಂತ್ರದಿಂದ ಮಾಡುವುದು ಇದೆ. ಇದರ ಅರ್ಥ ಹಿಂದೆ ಹಸಿರು ಅಥವಾ ನೀಲು ಪರದೆ ಹಾಕಿ ಕೋಣೆಯ ಒಳಗೇ ಶೂಟಿಂಗ್ ಮಾಡುತ್ತಾರೆ. ಬಳಿಕ ಎಡಿಟಿಂಗ್ನಲ್ಲಿ ಆ ಸ್ಕ್ರೀನ್ ತೆಗೆದು ಗುಡ್ಡ-ಬೆಟ್ಟ ಅಥವಾ ಇನ್ನೇನೋ ದೃಶ್ಯಗಳನ್ನು ಸೇರಿಸಿ, ಅದು ನಿಜವಾಗಿಯೂ ಅದೇ ಸ್ಥಳದಲ್ಲಿ ಮಾಡಿದ್ದು ಎನ್ನುವಂತೆ ತೋರಿಸಲಾಗುತ್ತದೆ.
ನೈಜ ದೃಶ್ಯಗಳು
ಆದರೆ, ಕೆಲವು ದೃಶ್ಯಗಳನ್ನು ನೈಜವಾಗಿ ಮಾಡುವುದು ಉಂಟು. ಅಂಥದ್ದೇ ಒಂದು ದೃಶ್ಯ ಬ್ರಹ್ಮಗಂಟು ಸೀರಿಯಲ್ (Brahmagantu Serial)ನಿಂದ ಬಂದಿದೆ. ಇದು ದೀಪಾ ಮತ್ತು ಚಿರು ರೊಮಾನ್ಸ್ ಮಾಡುವ ದೃಶ್ಯವಿದೆ. ಅದರಲ್ಲಿ ಬಟ್ಟೆಯ ತೂಗುಯ್ಯಾಲೆಯಲ್ಲಿ ಇಬ್ಬರನ್ನೂ ಮಲಗಿಸುವ ದೃಶ್ಯವಿದ್ದು, ಅದನ್ನು ಮಾಡುವಾಗ ಇಬ್ಬರೂ ಎಷ್ಟು ಕಷ್ಟ ಪಟ್ಟರು ಎನ್ನುವ ವಿಡಿಯೋ ವೈರಲ್ ಆಗಿದೆ.
ಕಷ್ಟವಾಗಿದ್ದ ಶೂಟಿಂಗ್
ಒಂದು ಹಂತದಲ್ಲಿ ದೀಪಾ, ಚಿರು ಮೈಮೇಲೆ ಆಯತಪ್ಪಿ ಬಿದ್ದಾಗ ಚಿರು ಅಯ್ಯಯ್ಯಪ್ಪೋ ಎಂದು ಕೂಗಿಕೊಂಡಿದ್ದಾರೆ. ಆ ದೃಶ್ಯ ಮಾಡುವುದು ಸುಲಭವಾಗಿರಲಿಲ್ಲ ಎನ್ನುವುದು ಈ ವೈರಲ್ ವಿಡಿಯೋ ನೋಡಿದ್ರೆ ತಿಳಿದು ಬರುತ್ತದೆ.
ದೀಪಾ ಕುರಿತು ಹೇಳುವುದಾದರೆ
ಇನ್ನು ಇವರಿಬ್ಬರ ಕುರಿತು ಹೇಳುವುದಾದರೆ, ದೀಪಾಳ ನಿಜವಾದ ಹೆಸರು ದಿಯಾ ಪಾಲಕ್ಕಲ್ (Diya Palakkal). ಸೀರಿಯಲ್, ಸಿನಿಮಾಗಳಲ್ಲಿ ನಟರನ್ನು ಸುಂದರವಾಗಿ ಕಾಣಿಸುವ ಸಲುವಾಗಿ ಕೆ.ಜಿಗಟ್ಟಲೆ ಮೇಕಪ್ ಮಾಡುವುದು ಇದೆ. ಆದರೆ ಈ ಸೀರಿಯಲ್ನಲ್ಲಿ, ದೀಪಾಳನ್ನು ಈ ಪರಿಯಲ್ಲಿ ಕಾಣುವಂತೆ ಮಾಡಲು ಕೂಡ ಮೇಕಪ್ ಮಾಡಲಾಗಿದೆ. ಅಸಲಿಗೆ ದೀಪಾ ಅಂದರೆ ದಿಯಾ ಸೀರಿಯಲ್ನಲ್ಲಿ ಕಾಣುವ ಹಾಗೆ ರಿಯಲ್ ಲೈಫ್ನಲ್ಲಿ ಇಲ್ಲ. ಆದರೆ ಈಕೆ ನಿಜಕ್ಕೂ ಹೀಗೆಯೇ ಇದ್ದಾಳಾ ಎನ್ನುವಷ್ಟರ ಮಟ್ಟಿಗೆ ಈಕೆಯನ್ನು ಧಾರಾವಾಹಿಯಲ್ಲಿ ತೋರಿಸಲಾಗಿದೆ. ಸೀರಿಯಲ್, ಸಿನಿಮಾಗಳಲ್ಲಿ ಹೀರೋಯಿನ್ ಆಗಲು ಯಾವ್ಯಾವ ರೀತಿಯ ಕ್ವಾಲಿಟಿಗಳು ಇರಬೇಕೋ, ಯಾವ ರೀತಿಯಲ್ಲಿ ಗ್ಲಾಮರಸ್ ಲುಕ್ ಇರಬೇಕೋ ಎಲ್ಲವೂ ರಿಯಲ್ ಲೈಫ್ನಲ್ಲಿ ದಿಯಾ ಅವರಿಗೆ ಇದೆ. ಮಾಡರ್ನ್ ಗರ್ಲ್ ಆಗಿ, ಹಳ್ಳಿಯ ಹುಡುಗಿಯಾಗಿ, ಗ್ಲಾಮರಸ್ ಲುಕ್ನಲ್ಲಿ ಕಾಣಿಸಿಕೊಂಡು ಫೋಟೋಶೂಟ್ ಕೂಡ ಮಾಡಿಸಿಕೊಳ್ಳುತ್ತಾರೆ ದಿಯಾ.
ಕನ್ನಡದ ಹುಡುಗಿ
ಅಷ್ಟಕ್ಕೂ ದಿಯಾ, ಕನ್ನಡದ ಹುಡುಗಿ. ಆದರೂ ತಮಿಳು ಸೀರಿಯಲ್ನಲ್ಲಿಯೂ ಗುರುತಿಸಿಕೊಂಡಿದ್ದಾರೆ. ಮೊದಲಿಗೆ ಬಾಲನಟಿಯಾಗಿ ಕನ್ನಡದಲ್ಲಿ ಗುರುತಿಸಿಕೊಂಡವರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ (Kinnari) ಸೀರಿಯಲ್ನಲ್ಲಿ ಪುಟಾಣಿ ಐಶ್ವರ್ಯಾ ಪಾತ್ರದಲ್ಲಿ ಈಕೆ ನಟಿಸಿದ್ದರು. ಬಳಿಕ ಲಕ್ಷ್ಮೀ ಸ್ಟೋರ್ಸ್ ಎನ್ನುವ ಜನಪ್ರಿಯ ತಮಿಳು ಧಾರಾವಾಹಿಯಲ್ಲಿ ನಟಿ ಖುಷ್ಬು ಜೊತೆಗೂ ನಟಿಸಿದ್ದರು ಇವರು.ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಬ್ರಹ್ಮಗಂಟುವಿನಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಗೆಟಪ್ಪೇ ಬದಲಾಗಿದೆ. ಅಂದಹಾಗೆ ದಿಯಾ ಅವರು ಸಿನಿಮಾದಲ್ಲಿಯೂ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ಬಿಡುಗಡೆಯಾದ ಅಮ್ಮಚ್ಚಿಯೆಂಬ ನೆನಪು (Ammacchi emba nenapu) ಸಿನಿಮಾದಲ್ಲಿ ದಿಯಾ ಎನ್ನುವ ಪುಟ್ಟ ಹುಡುಗಿಯ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ರಾಜ್ ಬಿಶೆಟ್ಟಿ, ವೈಜಯಂತಿ ಅಡಿಗ ನಟಿಸಿದ್ದರು.
ಚಿರು ಕುರಿತು...
ಚಿರು ಕುರಿತು ಹೇಳುವುದಾದರೆ, ಇವರ ಹೆಸರು ಭುವನ್ ಸತ್ಯ ಅವರು, ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪುಣ್ಯವತಿ' ಧಾರಾವಾಹಿಯಲ್ಲಿಯೂ ನಾಯಕನಾಗಿ ನಟಿಸುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಇನ್ನು ಬ್ರಹ್ಮಗಂಟು ಸೀರಿಯಲ್ ವಿಷಯಕ್ಕೆ ಬರುವುದಾದರೆ, ಅತ್ತಿಗೆಯ ಮಾತು ಕೇಳಿ ಪತ್ನಿಯನ್ನೇ ದೂಷಿಸುವ, ಪತ್ನಿ ಕಂಡರೆ ಕಿರಿಕಿರಿ ಮಾಡುವ ಚಿರುಗೆ ಈಗ ಪತ್ನಿ ದೀಪಾಳ ಮೇಲೆ ಲವ್ ಶುರುವಾಗಿದೆ. ದೀಪಾ ಮತ್ತು ಚಿರು ಯಾವುದೇ ಕಾರಣಕ್ಕೂ ಒಂದಾಗಬಾರದು ಎಂದು ಅತ್ತಿಗೆ ಸೌಂದರ್ಯ, ಚಿರುನಿಗೆ ಮತ್ತೊಂದು ಮದ್ವೆ ಮಾಡಲು ನೋಡಿದ್ದಳು. ಇದೇ ವೇಳೆ ಚಿರು ಮಾತ್ರ ದೀಪಾಳ ಲವ್ನಲ್ಲಿ ಬಿದ್ದಿದ್ದಾನೆ. ಆದ್ರೆ ದೀಪಾಳ ಆಣೆಯಿಂದ ಮದುವೆಯಾಗಲು ರೆಡಿಯಾಗಿದ್ದ. ಆದರೆ ಅದು ತಪ್ಪಿಹೋಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

