- Home
- Entertainment
- TV Talk
- 'ಅವ್ರು ತಂಗಿ ಎನ್ನಲಿ ಬಿಡಿ, ಹುಡುಗನಲ್ಲಿ ಆ ಗುಣನೂ ಇರಬೇಕ್ರಿ': ಪ್ರಶ್ನೆ ಕೇಳ್ದೋರನ್ನೇ ಸುಸ್ತು ಮಾಡಿದ Rakshita!
'ಅವ್ರು ತಂಗಿ ಎನ್ನಲಿ ಬಿಡಿ, ಹುಡುಗನಲ್ಲಿ ಆ ಗುಣನೂ ಇರಬೇಕ್ರಿ': ಪ್ರಶ್ನೆ ಕೇಳ್ದೋರನ್ನೇ ಸುಸ್ತು ಮಾಡಿದ Rakshita!
ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ, ಸಹ ಸ್ಪರ್ಧಿ ಗಿಲ್ಲಿಯ ಮೇಲೆ ತಮಗಿದ್ದ ಕ್ರಷ್ ಬಗ್ಗೆ ಮಾತನಾಡಿದ್ದಾರೆ. ಗಿಲ್ಲಿ ತಮ್ಮನ್ನು 'ತಂಗಿ' ಎಂದು ಕರೆದಿದ್ದಕ್ಕೆ, ಹುಡುಗನಲ್ಲಿ ಅಣ್ಣ, ತಮ್ಮ, ಮಗುವಿನಂತಹ ಎಲ್ಲಾ ಗುಣಗಳಿರಬೇಕು ಎಂದು ಜಾಣ್ಮೆಯಿಂದ ಉತ್ತರಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ.

ರಕ್ಷಿತಾ ಈಗ ಸೆಲೆಬ್ರಿಟಿ
ಮಂಗಳೂರು ಪುಟ್ಟಿ ರಕ್ಷಿತಾ ಶೆಟ್ಟಿ ಈಗ ದೊಡ್ಡ ಸೆಲೆಬ್ರಿಟಿ. ಮೊದಲ ರನ್ನರ್ ಅಪ್ ಆಗುತ್ತಿದ್ದಂತೆಯೇ ಆಕೆಗೆ ಪ್ರಶ್ನೆಗಳ ಸುರಿಮಳೆಯೇ ಬರುತ್ತಿದೆ. ಉತ್ತರ ಕೊಟ್ಟೂ ಕೊಟ್ಟೂ ಸುಸ್ತಾಗಿ ಹೋಗಿದ್ದಾರೆ ರಕ್ಷಿತಾ ಶೆಟ್ಟಿ (Bigg Boss Rakshita Shetty).
ಕಾವ್ಯಾ ಬದಲು ರಕ್ಷಿತಾ
ಅಷ್ಟಕ್ಕೂ ಬಿಗ್ಬಾಸ್ ಮನೆಯಲ್ಲಿ ಮೊದಲಿಗೆ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಲವ್ ಸ್ಟೋರಿ ಕೇಳಿಬರ್ತಿದ್ರೆ, ಆಮೇಲೆ ರಕ್ಷಿತಾ ಅವರಿಗೆ ಗಿಲ್ಲಿಯ ಮೇಲೆ ಒಲವು ಹೆಚ್ಚಾಗಿತ್ತು. ಅವರ ನಡವಳಿಕೆಗೆ ಫಿದಾ ಆಗಿದ್ದ ರಕ್ಷಿತಾ ನನಗೆ ಗಿಲ್ಲಿ ರೀತಿ ಹುಡುಗ ಬೇಕು ಎಂದಿದ್ದರು.
ತಂಗಿ ಅಂದುಬಿಟ್ರಲ್ಲ!
ಅಲ್ಲಿಂದ ಗಿಲ್ಲಿಯ ಮೇಲೆ ರಕ್ಷಿತಾಗೆ ಕ್ರಷ್ ಆಗಿದೆ ಎಂದೇ ಹೇಳಲಾಗುತ್ತಿತ್ತು. ಈ ಬಗ್ಗೆ ಖುದ್ದು ಗಿಲ್ಲಿ ನಟ ಕೂಡ ಬಿಗ್ಬಾಸ್ಮನೆಯಲ್ಲಿ ತಮಾಷೆ ಮಾಡಿದ್ದು ಇದೆ. ಅದೊಂದು ಹಂತದಲ್ಲಿ ಗಿಲ್ಲಿ, ರಕ್ಷಿತಾ ಕುರಿತು ನೀನು ನನ್ನ ತಂಗಿ ಇದ್ದಂತೆ ಎಂದಿದ್ದರು.
ಸುಸ್ತು ಮಾಡಿದ ರಕ್ಷಿತಾ
ಈಗ ಅದೇ ಪ್ರಶ್ನೆಯನ್ನು ರಕ್ಷಿತಾಗೆ ಕೇಳಲಾಗಿದೆ. ಗಿಲ್ಲಿ ನಿಮಗೆ ತಂಗಿ ಎಂದರಲ್ಲಾ ಎಂದಾಗ, ಜಾಣ್ಮೆಯಿಂದ ಉತ್ತರಿಸಿದ ರಕ್ಷಿತಾ, ಪ್ರಶ್ನೆ ಕೇಳಿದವರನ್ನೇ ಸುಸ್ತು ಮಾಡಿದ್ದಾರೆ.
ಎಲ್ಲಾ ಗುಣ ಇರಬೇಕು
ತಂಗಿ ಎಂದರೆ ಏನಂತೆ. ಹುಡುಗನಲ್ಲಿ ಎಲ್ಲ ಗುಣಗಳೂ ಇರಬೇಕು. ಅಣ್ಣನಾಗಿ, ತಮ್ಮನಾಗಿ, ಮಗುವಾಗಿ, ಅಪ್ಪನಾಗಿ... ಹೀಗೆ ಎಲ್ಲಾ ರೀತಿಯಲ್ಲಿಯೇ ಆತ ಇರಬೇಕು. ಅದೇ ರೀತಿ ಗಿಲ್ಲಿ ಕೂಡ ಕೆಲವೊಮ್ಮೆ ನನಗೆ ಬುದ್ಧಿ ಹೇಳಿ ತಾತ ರೀತಿ ಆಗಿದ್ದಾರೆ,ಕೆಲವೊಮ್ಮೆ ನನ್ನ ಮಗು ರೀತಿ ನಡೆದುಕೊಂಡಿದ್ದಾರೆ, ಆದ್ದರಿಂದ ಈಗ ಅಣ್ಣನ ರೀತಿ ನಡೆದುಕೊಂಡಿದ್ದಾರೆ ಅಷ್ಟೇ ಎಂದಿದ್ದಾರೆ!
ಕಿಚ್ಚನ ಚಪ್ಪಾಳೆ
ರಕ್ಷಿತಾ ಮಾತಿಗೆ ಆಕೆಯ ಅಭಿಮಾನಿಗಳಂತೂ ಫಿದಾ ಆಗಿದ್ದಾರೆ. ಮತ್ತೊಮ್ಮೆ ಕಿಚ್ಚನ ಚಪ್ಪಾಳೆ ರಕ್ಷಿತಾಗೆ ಬರಬೇಕು ಎನ್ನುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

