- Home
- Entertainment
- TV Talk
- ಆ ಹುಡುಗಿ ನನ್ನ ಚಾರಿತ್ರ್ಯವಧೆ ಮಾಡ್ತಿದ್ದಾಳೆ, ಮತ್ತೊಂದಿಷ್ಟು ವಿಡಿಯೋ ವೈರಲ್ ಮಾಡ್ತಿದ್ದಾಳೆ: Sonu Gowda ಆರೋಪ
ಆ ಹುಡುಗಿ ನನ್ನ ಚಾರಿತ್ರ್ಯವಧೆ ಮಾಡ್ತಿದ್ದಾಳೆ, ಮತ್ತೊಂದಿಷ್ಟು ವಿಡಿಯೋ ವೈರಲ್ ಮಾಡ್ತಿದ್ದಾಳೆ: Sonu Gowda ಆರೋಪ
Sonu Srinivas Gowda: ಇತ್ತೀಚೆಗೆ ಯುಟ್ಯೂಬರ್, ಬಿಗ್ ಬಾಸ್ ಒಟಿಟಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾನಸಿಕ ಹಿಂಸೆ ಆಗ್ತಿದೆ ಎಂದು ಹೇಳಿದ್ದಾರೆ. ವೈಯಕ್ತಿಕ ಜೀವನದ ಬಗ್ಗೆ ಒಂದಿಷ್ಟು ವಿಷಯಗಳು ಹರಿದಾಡುತ್ತಿದ್ದು, ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಹಳೇ ವಿಡಿಯೋ ಪೋಸ್ಟ್ ಮಾಡ್ತಿದ್ದಾರೆ
'ಸಿಂಚನ' ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಅಕೌಂಟ್‌ನಿಂದ ಸೋನು ಗೌಡ ಅವರ ಖಾಸಗಿ ಫೋಟೋಗಳನ್ನು, ಅವರ ಗೆಳೆಯ ( ಮಾಜಿ ಪ್ರಿಯತಮ, ಈಗ ಬದುಕಿಲ್ಲ ) ರಾಜೇಶ್ ಜೊತೆಗಿನ ಹಳೆಯ ವಿಡಿಯೋಗಳನ್ನು ಅನುಮತಿಯಿಲ್ಲದೆ ಪೋಸ್ಟ್ ಮಾಡಲಾಗುತ್ತಿದೆ. ಈ ಮೂಲಕ ಸೋನು ಚಾರಿತ್ರ್ಯದ ಬಗ್ಗೆ ಪ್ರಶ್ನೆ ಮಾಡಲಾಗ್ತಿದೆ. ಇನ್ನು ಸೋನು ಗೌಡ ಕ್ಲೋಸ್ ಫ್ರೆಂಡ್ ಮನು ಜೊತೆಗೆ ಸಂಬಂಧ ಕಲ್ಪಿಸಿ ಅವಹೇಳನಕಾರಿ ಪೋಸ್ಟ್ ಮಾಡಲಾಗ್ತಿದೆ ಎಂದು ಸೋನು ಗೌಡ ದೂರು ಹೇಳಿದ್ದಾರೆ.
ಅವರ ಜೊತೆ ಸಂಬಂಧ ಕಲ್ಪಿಸ್ತಾರೆ
"ನನ್ನ ಲೈಕ್ಸ್ ಅಥವಾ ವ್ಯೂಸ್‌ಗಾಗಿ ನಾನು ಯಾರ ಹೆಸರನ್ನೂ ಬಳಸುತ್ತಿಲ್ಲ. ಸೋನು ಗೌಡ ಎಂಬ ಹೆಸರೇ ಒಂದು ಬ್ರ್ಯಾಂಡ್. ಮನು ನನ್ನ ಅಣ್ಣನ ಸಮಾನ, ನನ್ನ ಕಷ್ಟದ ಟೈಮ್‌ನಲ್ಲಿ ಸಹಾಯ ಮಾಡೋಕೆ ಬಂದಿದ್ದರು. ಅವರೊಂದಿಗೆ ಸಂಬಂಧ ಕಲ್ಪಿಸುವುದು ಅತ್ಯಂತ ಕೆಟ್ಟ ವಿಚಾರ" ಎಂದು ಹೇಳಿದ್ದಾರೆ. ರಾಜೇಶ್ ಹೋದ್ಮೇಲೆ ಅವರ ಫೋನ್ ಯಾರ ಕೈಯಲ್ಲಿದೆ, ಅವರ ಖಾಸಗಿ ಫೋಟೋಗಳು ಈ ವ್ಯಕ್ತಿಗೆ ಹೇಗೆ ಸಿಕ್ಕವು” ಎಂದು ಡೌಟ್ ಆಗ್ತಿದೆ ಎಂದು ಹೇಳಿದ್ದಾರೆ.
ನಾನು ಡಿಪ್ರೆಶನ್‌ನಲ್ಲಿದ್ದೀನಿ
"ನಾನು ಈಗಾಗಲೇ ಡಿಪ್ರೆಶನ್‌ನಲ್ಲಿದ್ದೇನೆ, ಈ ಟೈಮ್‌ನಲ್ಲಿ ಈ ರೀತಿ ಟಾರ್ಚರ್ ಕೊಡೋದು ಸರಿಯಲ್ಲ. ಇದರ ಹಿಂದೆ ಯಾರಿದ್ದಾರೆ ಎಂದು ಪತ್ತೆ ಹಚ್ಚುವೆ. ತಮ್ಮ ಅಭಿಮಾನಿಗಳಲ್ಲಿ ಆ ಫೇಕ್ ಅಥವಾ ಕಿರುಕುಳ ನೀಡುವ ಖಾತೆಯ ಬಗ್ಗೆ ಮಾಹಿತಿ ಇದ್ದರೆ ಹಂಚಿಕೊಳ್ಳಿ” ಎಂದು ಮನವಿ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

