ಗಂಡು ಮಗುವಿಗೆ ತಾಯಿಯಾದ ‘ಲಕ್ಷ್ಮೀ ನಿವಾಸ’ ನಟಿ ಮಾನಸ ಮನೋಹರ್.. ಮಗುವಿನ ಫೋಟೊ ವೈರಲ್
Manasa Manohar: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನೀಲೂ ಪಾತ್ರದ ಮೂಲಕ ಮಿಂಚಿದ ನಟಿ ಮಾನಸ ಮನೋಹರ್ ಇದೀಗ ಗಂಡು ಮಗುವಿಗೆ ತಾಯಿಯಾಗಿದ್ದು, ತಾಯಿ ಮಗು ಇಬ್ಬರೂ ಆರೋಗ್ಯದಿಂದಿದ್ದಾರೆ. ಮಗುವಿನೊಂದಿಗೆ ಫೋಟೊವನ್ನು ಸಹ ಹಂಚಿಕೊಂಡಿದ್ದಾರೆ

ಮಾನಸ ಮನೋಹರ್
ಕನ್ನಡ ಕಿರುತೆರೆಯಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದ ನಟಿ ಮಾನಸ ಮನೋಹರ್ ಇದೀಗ ಗಂಡು ಮಗುವಿಗೆ ತಾಯಿಯಾಗಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದು, ನಟಿ ತಮ್ಮ ಪುಟ್ಟ ಕಂದಮ್ಮನೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಹಂಚಿಕೊಂಡು ಶುಭ ಸುದ್ದಿ ಹಂಚಿಕೊಂಡಿದ್ದಾರೆ
ಲಕ್ಷ್ಮೀ ನಿವಾಸ ನಟಿ
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನೀಲೂ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಮಾನಸ ಮನೋಹರ್ ಇತ್ತೀಚೆಗೆ ತಮ್ಮ ಬೇಬಿ ಬಂಪ್ ಫೋಟೊ ಶೂಟ್ ಮಾಡಿಸಿದ್ದರು. ಸದ್ಯದಲ್ಲೇ ತಮಗೆ ಮಗುವಾಗಲಿದೆ ಎಂದು ಆಸ್ಪತ್ರೆಗೆ ಬಟ್ಟೆ ಪ್ಯಾಕ್ ಮಾಡಿ ಹೋಗುವಂತಹ ಫೋಟೊಗಳನ್ನು ಸಹ ನಟಿ ಹಂಚಿಕೊಂಡಿದ್ದರು. ಇದೀಗ ಮಗುವಿನೊಂದಿಗೆ ಡೆಲಿವರಿ ರೂಮ್ ಫೋಟೊ ಕೂಡ ಶೇರ್ ಮಾಡಿದ್ದಾರೆ.
ಸಂತಸ ಹಂಚಿಕೊಂಡ ನಟಿ
ಮಾನಸ ಮನೋಹರ್ ಈ ಕುರಿತು ತಮ್ಮ ಸಂತಸವನ್ನು ಹಂಚಿಕೊಂಡಿದ್ದು, ನಮ್ಮ ಅತ್ಯಂತ ಅಮೂಲ್ಯವಾದ ಮ್ಯಾನಿಫೆಸ್ಟೇಶನ್ ಇಲ್ಲಿದೆ. ಇಟ್ಸ್ ಬಾಯ್. ‘1.5.2026’ ಎಲ್ಲಾ ಗೊಂದಲಗಳ ನಡುವೆ ಇದು ನಮ್ಮ ಅತ್ಯಂತ ಪ್ರೀತಿಯ ದಿನವಾಗಿರುತ್ತದೆ. ನನ್ನ ತಂದೆ ಹೇಗೋ ಈ ಮುದ್ದಾದ ಪುಟ್ಟ ರೂಪದಲ್ಲಿ ನಮ್ಮ ಜೀವನಕ್ಕೆ ಮರಳಿದ್ದಾರೆಂದು ನನಗೆ ಅನಿಸುತ್ತದೆ - ನನ್ನ - ಬೀ ಎಂದು ಮಾನಸ ಮನೋಹರ್ ಹಂಚಿಕೊಂಡಿದ್ದಾರೆ.
ಶುಭಾಶಯಗಳ ಮಹಾಪೂರ
ಪೋಷಕರಾಗಿ ಭಡ್ತಿ ಪಡೆದ ನಟಿ ಮಾನಸ ಮನೋಹರ್ ದಂಪತಿಗಳಿಗೆ ದಿಶಾ ಮದನ್, ಯಶಸ್ವಿನಿ, ಐಶ್ವರ್ಯ ಬಸ್ಪುರೆ, ಚೆರಿಕಾ, ರೆಬಾ ಜಾನ್, ಅಂಜಲಿ ಸೇರಿ ಕನ್ನಡ ಕಿರುತೆರೆ ಹಿರಿತೆರೆಯ ಹಲವಾರು ನಟ ನಟಿಯರು ಶುಭಾಶಯ ಕೋರಿದ್ದಾರೆ. ತಾಯಿ ಮಗು ಆರೋಗ್ಯದಿಂದ ಇರಲಿ ಎಂದು ಆಶೀರ್ವದಿಸಿದ್ದಾರೆ.
ಮುದ್ದಾದ ಫೋಟೊಗಳು ವೈರಲ್
ಮಾನಸ ಆಸ್ಪತ್ರೆಯ ಬೆಡ್ ಮೇಲೆ ಇರುವಂತಹ ಫೋಟೊಗಳು, ತಂದೆ ಪ್ರೀತಮ್ ಮಗುವನ್ನು ಹಿಡಿದಿರುವಂತಹ ಫೋಟೊ, ಅಮ್ಮನ ಎದೆ ಮೇಲೆ ಮಗು ಮಲಗಿರುವ ಫೋಟೊ, ಡೆಲಿವರಿ ರೂಮ್ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಆದರೆ ಎಲ್ಲೂ ಸಹ ಮಗುವಿನ ಮುಖ ರಿವೀಲ್ ಮಾಡಿಲ್ಲ.
ಪ್ರೀತಂ ಜೊತೆ ಸಪ್ತಪದಿ ತುಳಿದ ಮಾನಸ
2024ರ ನವಂಬರ್ ತಿಂಗಳಲ್ಲಿ ಮಾನಸ ಮನೋಹರ್ ಬ್ಯುಸಿನೆಸ್ ಮ್ಯಾನ್ ಆಗಿರುವ ಪ್ರೀತಂ ಚಂದ್ರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದು ಅವರ ಎರಡನೇ ವಿವಾಹವಾಗಿತ್ತು. ಜನವರಿ ತಿಂಗಳಲ್ಲಿ ನಟಿ ತಾವು ಗರ್ಭಿಣಿಯಾಗಿರುವ ಸಂಭ್ರಮದ ವಿಷಯವನ್ನು ಮುದ್ದಾದ ವಿಡಿಯೋವನ್ನು ಶೇರ್ ಮಾಡುವ ಮೂಲಕ ತಿಳಿಸಿದ್ದರು. ಇದೀಗ ತಾಯಿಯಾದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

