- Home
- Entertainment
- TV Talk
- ಬೆಂಗಳೂರಿನಲ್ಲಿ ದಂಡ ಕಟ್ಟಿ, ಶ್ರೀಲಂಕಾದಲ್ಲಿ ಬೋಲ್ಡ್ ಬಟ್ಟೆ ಧರಿಸಿ, ಹೊಟ್ಟೆ ಉರಿದುಕೊಳ್ಳಿ ಎಂದ Sonu Gowda
ಬೆಂಗಳೂರಿನಲ್ಲಿ ದಂಡ ಕಟ್ಟಿ, ಶ್ರೀಲಂಕಾದಲ್ಲಿ ಬೋಲ್ಡ್ ಬಟ್ಟೆ ಧರಿಸಿ, ಹೊಟ್ಟೆ ಉರಿದುಕೊಳ್ಳಿ ಎಂದ Sonu Gowda
ವಿವಾದಕ್ಕೆ, ಟ್ರೋಲ್‌ಗಳಿಗೆ ಮತ್ತೊಂದು ಹೆಸರು ಎನ್ನುವಂತೆ ಸದಾ ಒಂದಿಲ್ಲೊಂದು ವಿಚಾರದಲ್ಲಿ ಸದ್ದು ಮಾಡುವ ಸೋನು ಶ್ರೀನಿವಾಸ್ ಗೌಡ ಅವರು ಈ ಬಾರಿ ಬಿ*ಕಿನಿ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ದಂಡವನ್ನು ಕೂಡ ಕಟ್ಟಿದ್ದಾರೆ.

ಬಿಗ್ ಬಾಸ್ ಕನ್ನಡ ಒಟಿಟಿ ಸ್ಪರ್ಧಿ, ಯುಟ್ಯೂಬರ್ ಸೋನು ಶ್ರೀನಿವಾಸ್ ಗೌಡ ಅವರು ಶ್ರೀಲಂಕಾಕ್ಕೆ ಹೋಗಿದ್ದಾರೆ. ಆಗಾಗ ಪ್ರವಾಸಕ್ಕೆ ಹೋಗುವ ಇವರು ಈ ಬಾರಿ ಲಂಕಾ ಪ್ರವಾಸದಲ್ಲಿದ್ದಾರೆ.
ಕೆಲ ಸ್ನೇಹಿತರ ಜೊತೆ ಸೋನು ಶ್ರೀನಿವಾಸ್ ಗೌಡ ಅವರು ಬೆಂಗಳೂರಿನ ಏರ್‌ಪೋರ್ಟ್‌ನಲ್ಲಿ 2800 ರೂಪಾಯಿ ದಂಡವನ್ನು ಕೂಡ ಕಟ್ಟಿದ್ದಾರೆ. ಇದಕ್ಕೂ ಕಾರಣ ಇದೆ. ನಾನು ಮಾಡ್ಕೊಂಡ ಥರ ನೀವೂ ಮಾಡ್ಕೋಬೇಡಿ ಎಂದು ಅವರು ಹೇಳಿದ್ದಾರೆ.
ಸೋನು ಗೌಡ ಅವರು 15kg ಲಗೇಜ್ ತಗೊಂಡು ಹೋಗಬೇಕಿತ್ತು. ಆದರೆ 22kg ಲಗೇಜ್ ತಗೊಂಡು ಹೋಗಿದ್ದಾರೆ. ಇವರ ಬ್ಯಾಗ್ ಸಿಕ್ಕಾಪಟ್ಟೆ ವೇಟ್ ಇದೆಯಂತೆ. ಹೀಗಾಗಿ ದಂಡ ಹಾಕಲಾಗಿದೆ.
ಸೋನು ಗೌಡ ಅವರು ಬಿ*ಕಿನಿ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನನ್ನ ಬಗ್ಗೆ ನನಗೆ ಅಭದ್ರತೆ ಇಲ್ಲ, ಹೊಟ್ಟೆ ಉರಿದುಕೊಂಡೋರು ನೆಗೆಟಿವ್ ಕಾಮೆಂಟ್ ಹಾಕಿದ್ರೂ ತೊಂದರೆ ಇಲ್ಲ ಎಂದು ಅವರು ಹೇಳಿದ್ದಾರೆ.
ಪದೇ ಪದೇ ಈ ರೀತಿ ಟ್ರಿಪ್ ಮಾಡೋಕೆ ಹಣ ಎಲ್ಲಿಂದ ಬರುತ್ತದೆ ಎಂದು ವೀಕ್ಷಕರು ಕೂಡ ತಲೆಕೆಡಿಸಿಕೊಂಡಿದ್ದು, ಇವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ.