ದುಬೈನಲ್ಲೂ Bigg Boss ಕಾವ್ಯಾ ಶೈವ ಹವಾ: ಅಭಿಮಾನಿಗಳು ಏನು ಹೇಳಿದ್ರು ನೋಡಿ
ಬಿಗ್‌ಬಾಸ್ ಸ್ಪರ್ಧಿ ಕಾವ್ಯಾ ಶೈವ ಅವರು ತಮ್ಮ ಆಟದ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದು, ಅವರ ಜನಪ್ರಿಯತೆ ಇದೀಗ ದುಬೈವರೆಗೂ ತಲುಪಿದೆ. ದುಬೈನಲ್ಲಿರುವ ಅವರ ಅಭಿಮಾನಿಗಳು 'ವೋಟ್ ಫಾರ್ ಕಾವ್ಯಾ' ಎಂದು ಪ್ರಚಾರ ಮಾಡುತ್ತಿದ್ದಾರೆ.

ಬಿಗ್‌ಬಾಸ್ ಕಾವು ಕಾವು
ಬಿಗ್ಬಾಸ್ನಲ್ಲಿ ಕಾವ್ಯಾ ಶೈವ (Bigg Boss Kavya Shaiva) ಕ್ಯೂಟೆಸ್ಟ್ ಸ್ಪರ್ಧಿಗಳಲ್ಲಿ ಒಬ್ಬರು ಎನ್ನಿಸಿದ್ದಾರೆ. ಗಿಲ್ಲಿ ನಟನ ಬಾಯಲ್ಲಿ ಕಾವು ಕಾವು ಆಗಿರೋ ಕಾವ್ಯಾ ಇದೀಗ ಇಲ್ಲಿಯವರೆಗೂ ಬಿಗ್ಬಾಸ್ನಲ್ಲಿ ಮುಂದುವರೆದುಕೊಂಡು ಬಂದಿದ್ದಾರೆ. ಗಿಲ್ಲಿ ನಟ (Bigg Boss Gilli Nata) ನಿಂದಾಗಿಯೇ ಕಾವ್ಯಾ ಇಲ್ಲಿಯವರೆಗೂ ಬಂದಿದ್ದಾರೆ ಎಂದು ಕೆಲವು ಸ್ಪರ್ಧಿಗಳು ಆರೋಪ ಮಾಡ್ತಿದ್ದರೂ ಕಾವ್ಯಾ ಚೆನ್ನಾಗಿಯೇ ಆಡಿ ಅಭಿಮಾನಿಗಳನ್ನೂ ಸಾಕಷ್ಟು ಪ್ರಮಾಣದಲ್ಲಿ ಗಳಿಸಿದ್ದಾರೆ.
ದುಬೈನಲ್ಲೂ ಕ್ರೇಜ್
ಇದೀಗ ಅವರ ಅಧಿಕೃತ ಇನ್ಸ್ಟಾಗ್ರಾಮ್ ಪುಟದಲ್ಲಿ ಕಾವ್ಯಾ ಅವರ ಕ್ರೇಜ್ ದುಬೈವರೆಗೂ ಹೋಗಿರುವುದನ್ನು ನೋಡಬಹುದು. ದುಬೈನಲ್ಲಿ ಒಂದಿಷ್ಟು ಕಾವ್ಯಾ ಶೈವ ಅಭಿಮಾನಿಗಳು ಅವರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಕಾವ್ಯಾ ಅವರಿಗೆ ವೋಟ್ ಹಾಕಿ ಎಂದು ಹೇಳುತ್ತಿದ್ದಾರೆ.
ವೋಟ್ ಫಾರ್ ಕಾವ್ಯಾ
ವೋಟ್ ಫಾರ್ ಕಾವ್ಯಾ ಎಂದು ಸುಂದರವಾಗಿ ಬರೆದು ಅದನ್ನು ಹಿಡಿದು ಕಾವ್ಯಾ ಪರವಾಗಿ ದುಬೈನಲ್ಲಿಯೂ ಪ್ರಚಾರ ಆರಂಭಿಸುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಇದರಿಂದಾಗಿ ಕಾವ್ಯಾ ಹವಾ ದುಬೈನಲ್ಲಿಯೂ ಇರುವುದನ್ನು ನೋಡಬಹುದಾಗಿದೆ.
ನಟಿಯ ಕುರಿತು
ಇನ್ನು ನಟಿ, ಕಾವ್ಯ ಶೈವ ಕುರಿತು ಹೇಳುವುದಾದರೆ, ಇವರು, ಸೀರಿಯಲ್ ತಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೆಂಡಸಂಪಿಗೆ ಧಾರಾವಾಹಿಯಲ್ಲಿ ಸುಮನಾ ಪಾತ್ರದ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಮೂಲತಃ ಕೆ.ಆರ್.ಪೇಟೆಯವರಾದ ಕಾವ್ಯ ಶೈವ, ಮೈಸೂರಿನಲ್ಲಿ ತಮ್ಮ ಶಿಕ್ಷಣ ಮುಗಿಸಿದ್ದಾರೆ. 'ಭೂಮಿ ತಾಯಾಣೆ' ಕಾವ್ಯ ನಟನೆಯ ಮೊದಲ ಸೀರಿಯಲ್.
ಡಾನ್ಸ್ ಷೋ
ಇದಾದ ಬಳಿಕ ಡಾನ್ಸ್ ಶೋನಲ್ಲಿಯೂ ಭಾಗವಹಿಸಿದರು. ನಟ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ ಕೊತ್ತಲವಾಡಿ ಚಿತ್ರದಲ್ಲಿಯೂ ಮಿಂಚುವ ಮೂಲಕ ಬಿಗ್ಬಾಸ್ನಲ್ಲಿ ಕಾಣಿಸಿಕೊಂಡಿದ್ದಾರೆ ಕಾವ್ಯಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

