- Home
- Entertainment
- Sandalwood
- ದರ್ಶನ್ ಟಾರ್ಚರ್ ಕೊಟ್ಟಾಗ ಸುದೀಪ್ ರಕ್ಷಿಸಿದ್ದು ಮರೆತರಾ ವಿಜಯಲಕ್ಷ್ಮಿ? ಫ್ಯಾನ್ಸ್ ಪ್ರಶ್ನೆಗೆ ಕಿಚ್ಚ ಕೊಟ್ಟ ಉತ್ತರವೇನು?
ದರ್ಶನ್ ಟಾರ್ಚರ್ ಕೊಟ್ಟಾಗ ಸುದೀಪ್ ರಕ್ಷಿಸಿದ್ದು ಮರೆತರಾ ವಿಜಯಲಕ್ಷ್ಮಿ? ಫ್ಯಾನ್ಸ್ ಪ್ರಶ್ನೆಗೆ ಕಿಚ್ಚ ಕೊಟ್ಟ ಉತ್ತರವೇನು?
ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ನಡುವಿನ ಸೋಷಿಯಲ್ ಮೀಡಿಯಾ ಯುದ್ಧದ ನಡುವೆ, ದರ್ಶನ್ ಪತ್ನಿ ವಿಜಯಲಕ್ಷ್ಮಿ ತಮ್ಮ ವಿರುದ್ಧ ನೀಡಿದ ಹೇಳಿಕೆಗೆ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ಮೊದಲು ಕುಟುಂಬದ ಪರ ನಿಲ್ಲುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳುವ ಮೂಲಕ ಅವರು ಈ ವಿವಾದಕ್ಕೆ ತೆರೆ ಎಳೆದಿದ್ದಾರೆ

Darshan Vs Sudeep war
ದರ್ಶನ್ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳ ನಡುವೆ ಕೆಲವು ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಯುದ್ಧವೇ ಶುರುವಾಗಿದೆ (Darshan Vs Sudeep war). ಸುದೀಪ್ ಅವರು ತಾವು ಯುದ್ಧಕ್ಕೆ ಸಿದ್ಧ ಎಂದು ಹೇಳಿರುವ ಮಾತುಗಳ ಬಗ್ಗೆ ಕಿಡಿ ಕಾರಿದ್ದ ವಿಜಯಲಕ್ಷ್ಮಿ ಸುದೀಪ್ ಅವರ ವಿರುದ್ಧ ತಿರುಗಿ ಬಿದ್ದು ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಸುದೀಪ್ ಹೇಳಿದ್ದು ಪೈರಸಿ ಬಗ್ಗೆಯೇ ವಿನಾ ದರ್ಶನ್ ಬಗ್ಗೆ ಅಲ್ಲ ಎಂದು ಇದಾಗಲೇ ಸ್ಪಷ್ಟನೆ ಕೊಟ್ಟಿದ್ದರೂ, ಇವರಿಬ್ಬರ ನಡುವಿನ ಯುದ್ಧ ಅಭಿಮಾನಿಗಳು ಮುಗಿಸುವಂತೆ ಕಾಣುತ್ತಿಲ್ಲ.
ಅಭಿಮಾನಿಗಳು ಗರಂ
ಇದರ ಬೆನ್ನಲ್ಲೇ ಸುದೀಪ್ ಅಭಿಮಾನಿಗಳು, ವಿಜಯಲಕ್ಷ್ಮಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ದರ್ಶನ್ ಅವರು ವಿಜಯಲಕ್ಷ್ಮಿ ಮೇಲೆ ಹಲ್ಲೆ ನಡೆಸಿದಾಗ ದರ್ಶನ್ ಮೇಲೆ ಕೇಸ್ ಆಗಿ ಸಂಸಾರ ಬೀದಿಗೆ ಬೀಳುವ ಮಟ್ಟದಲ್ಲಿ ಇದ್ದ ಸಂದರ್ಭದಲ್ಲಿ ಅವರ ಸಂಸಾರ ಉಳಿಸಿದ್ದ ಅಂಬರೀಶ್ ಮತ್ತು ಸುದೀಪ್ ಅವರೇ. ಆದರೆ ವಿಜಯಲಕ್ಷ್ಮಿ ಅವರು ಇದನ್ನು ಮರೆತಂತೆ ಕಾಣುತ್ತಿದೆ ಎಂದು ಕಿಡಿ ಕಾರುತ್ತಿದ್ದಾರೆ.
ಸುದೀಪ್ vs ವಿಜಯಲಕ್ಷ್ಮಿ
ಇದೇ ಪ್ರಶ್ನೆಯನ್ನು ಈಗ ಸುದೀಪ್ (Kichcha Sudeep) ಅವರಿಗೆ ಕೇಳಲಾಗಿದೆ. ದರ್ಶನ್ ಅವರು ವಿಜಯಲಕ್ಷ್ಮಿ ಅವರ ಮೇಲೆ ಹಲ್ಲೆ ನಡೆಸಿದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಂದು ವಿಜಯಲಕ್ಷ್ಮಿ ಪರವಾಗಿ ನಿಂತು ಅವರಿಗೆ ಸಾಂತ್ವನ ಹೇಳಿದ್ದೀರಿ. ಈಗ ಅವರಿಬ್ಬರೂ ಚೆನ್ನಾಗಿದ್ದಾರೆ. ಆದರೆ ಅದನ್ನೇ ಮರೆತು ವಿಜಯಲಕ್ಷ್ಮಿ ಅವರು ನಿಮ್ಮ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಏನು ಅನ್ನಿಸುತ್ತಿದೆ ಎನ್ನುವ ಪ್ರಶ್ನೆಯನ್ನು ಕೇಳಲಾಗಿದ್ದು, ಇದನ್ನು ಬಾಸ್ ಟಿವಿ ಶೇರ್ ಮಾಡಿಕೊಂಡಿದೆ.
ಸುದೀಪ್ ಉತ್ತರ
ಇದಕ್ಕೆ ಉತ್ತರ ನೀಡಿರುವ ಸುದೀಪ್ ಅವರು, 'ನಾನು ಏನೇ ಮಾಡಿರಲಿ, ಮಾಡದೇ ಇರಲಿ ಆ ಬಗ್ಗೆ ಈಗ ಬೇಡ. ಆದ್ರೆ ಒಂದಂತೂ ಸತ್ಯ. ಯಾರು ಏನೇ ಇರಲಿ ತಾವು ಎಲ್ಲರೂ ನಿಮ್ಮ ಮನೆಯವರ ಪರವಾಗಿ ನಿಲ್ಲಬೇಕಾಗಿರುವುದು ನಿಮ್ಮ ಕರ್ತವ್ಯ. ಸತ್ಯ, ಸುಳ್ಳು ಸರಿ, ತಪ್ಪು ಎಲ್ಲವನ್ನೂ ಆಮೇಲೆ ನೋಡಿಕೊಳ್ಳೋಣ' ಎಂದಿದ್ದಾರೆ.
ಮೊದಲು ಮನೆ
ಮೊದಲು ಮನೆ. ಅದು ನಿಮ್ಮ ಗಂಡ ಆಗಿರಲಿ, ಹೆಂಡತಿ ಆಗಿರಲಿ, ಮಗು, ತಂದೆ-ತಾಯಿ ಯಾರೇ ಆಗಿರಲಿ. ದಯವಿಟ್ಟು ಮೊದಲು ಫ್ಯಾಮಿಲಿ ಪರವಾಗಿ ನಿಂತುಕೊಳ್ಳಿ, ಮಿಕ್ಕದ್ದು ಆಮೇಲೆ ನೋಡಿಕೊಂಡರಾಯಿತು. ಅದರಲ್ಲಿ ನನಗೆ ಏನೂ ಪ್ರಾಬ್ಲೆಮ್ ಇಲ್ಲ ಎಂದು ಸುದೀಪ್ ಅವರು ಈ ವಿವಾದದಲ್ಲಿ ಸಿಲುಕಲು ಹೋಗಲಿಲ್ಲ.
ಯಾವುದೋ ಕಾಲ ಆಗೋಯ್ತು
ಕೊನೆಗೆ ಅವರು, ಈ ಘಟನೆ ಮುಗಿದು ಯಾವುದೋ ಕಾಲ ಆಗೋಯ್ತು, ನೀವು ಇನ್ನೂ ಅಲ್ಲೇ ಇದ್ದೀರಾ ಎನ್ನುವ ಮೂಲಕ ಈ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

