- Home
- Entertainment
- TV Talk
- BBK 12: ತಣ್ಣೀರು ಸ್ನಾನ, ಉರುಳು ಸೇವೆ; ಚಾಮುಂಡೇಶ್ವರಿ ತಾಯಿಗೆ ಹಸಿರು ಸೀರೆ ಅರ್ಪಿಸಿದ್ಯಾಕೆ ಮಲ್ಲಮ್ಮ?
BBK 12: ತಣ್ಣೀರು ಸ್ನಾನ, ಉರುಳು ಸೇವೆ; ಚಾಮುಂಡೇಶ್ವರಿ ತಾಯಿಗೆ ಹಸಿರು ಸೀರೆ ಅರ್ಪಿಸಿದ್ಯಾಕೆ ಮಲ್ಲಮ್ಮ?
ಬಿಗ್‌ಬಾಸ್ ಕನ್ನಡ ಸೀಸನ್ 12ರ ಮನೆಗೆ ಮರಳಿದ ಮಾತಿನ ಮಲ್ಲಮ್ಮ, ತಾಯಿ ಚಾಮುಂಡೇಶ್ವರಿಗೆ ಕಟ್ಟಿದ್ದ ಹರಕೆಯನ್ನು ತೀರಿಸಿದ್ದಾರೆ. ತಣ್ಣೀರಿನ ಸ್ನಾನ ಮಾಡಿ, ದೇವಿಗೆ ಸೀರೆ ಅರ್ಪಿಸಿದ ಮಲ್ಲಮ್ಮನ ಮೊಮ್ಮಗನಿಗೆ ಬಿಗ್‌ಬಾಸ್ 'ಗಣೇಶ್' ಎಂದು ಹೆಸರಿಟ್ಟು ಅವರ ಆಸೆಯನ್ನು ಪೂರೈಸಿದ್ದಾರೆ.

ತಾಯಿ ಚಾಮುಂಡೇಶ್ವರಿಯ ಹರಕೆ
ಬಿಗ್‌ಬಾಸ್ ಕನ್ನಡ ಸೀಸನ್ 12ರ ಕೊನೆಯ ವಾರದಲ್ಲಿ ಮಾಜಿ ಸ್ಪರ್ಧಿಗಳು ಮತ್ತೊಮ್ಮೆ ಮರಳಿ ಮನೆಗೆ ಬರುತ್ತಿದ್ದಾರೆ. ಮಾತಿನ ಮಲ್ಲಮ್ಮ ಬಿಗ್‌ಬಾಸ್ ಮನೆಯೊಳಗೆ ಬಂದು ತಣ್ಣೀರಿನ ಸ್ನಾನ ಮಾಡಿ ತಾಯಿ ಚಾಮುಂಡೇಶ್ವರಿಯ ಹರಕೆ ತೀರಿಸಿದ್ದಾರೆ. ಸೋಮವಾರ ಬೆಳಗ್ಗೆ ಬಿಡುಗಡೆಯಾದ ಪ್ರೋಮೋದಲ್ಲಿ ಮಲ್ಲಮ್ಮ ಮೇಲೆ ತಣ್ಣೀರು ಸುರಿಯೋದನ್ನು ಮಾತ್ರ ತೋರಿಸಲಾಗಿತ್ತು.
ನೀರು ಸುರಿದುಕೊಂಡಿದ್ಯಾಕೆ?
ಸೋಮವಾರದ ಸಂಚಿಕೆಯಲ್ಲಿ ನೀರು ಸುರಿದುಕೊಂಡಿದ್ಯಾಕೆ ಎಂಬುದನ್ನು ತೋರಿಸಲಾಗಿದೆ. ಬಿಗ್‌ಬಾಸ್‌ಗೆ ಮಲ್ಲಮ್ಮ ಬಂದಾಗ ಅವರ ಸೊಸೆ ಗರ್ಭಿಣಿಯಾಗಿದ್ದರು. ಸೊಸೆ ಹೆರಿಗೆ ಸುಸೂತ್ರವಾಗಿ ನಡೆಯಲಿದೆ ಎಂದು ಬಿಗ್‌ಬಾಸ್ ಮನೆಯಲ್ಲಿರುವ ತಾಯಿ ಚಾಮುಂಡೇಶ್ವರಿ ಮುಂದೆ ಹರಕೆ ಕಟ್ಟಿಕೊಂಡಿದ್ದರು. ಇದೀಗ ಹೆರಿಗೆಯಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.
ಹಸಿರು ಸೀರೆ, ಬಳೆ ಹೂವು ಹಣ್ಣು
ಈ ಹಿನ್ನೆಲೆ ಬಿಗ್‌ಬಾಸ್ ಮನೆಯೊಳಗೆ ಬರುತ್ತಿದ್ದಂತೆಯೇ ಮಲ್ಲಮ್ಮ ಅವರು ಮಡಿಯಿಂದ ತಾಯಿ ಚಾಮುಂಡೇಶ್ವರಿಗೆ ಹಸಿರು ಸೀರೆ, ಬಳೆ ಹೂವು ಹಣ್ಣು ಅರ್ಪಿಸಿ ಹರಕೆಯನ್ನು ತೀರಿಸಿದ್ದಾರೆ. ಮಲ್ಲಮ್ಮ ಅವರೊಂದಿಗೆ ಸೇರಿಕೊಂಡು ಅಶ್ವಿನಿ ಗೌಡ ಅವರು ಚಾಮುಂಡೇಶ್ವರಿ ವಿಗ್ರಹಕ್ಕೆ ಸೀರೆಯನ್ನು ತೊಡಿಸಿದ್ದಾರೆ. ನಂತರ ಪೂಜೆ ಸಲ್ಲಿಸಿ, ತಂದಿರುವ ಊಟವನ್ನು ಮನೆ ಮಂದಿಗೆಲ್ಲಾ ನೀಡಿದ್ದಾರೆ.
ಮಲ್ಲಮ್ಮ ಆಸೆ
ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗುವಾಗ ಮೊಮ್ಮಗನಿಗೆ ಹೆಸರು ಸೂಚಿಸುವಂತೆ ಕೇಳಿಕೊಂಡಿದ್ದರು. ಇದೀಗ ಬಿಗ್‌ಬಾಸ್ ಮಲ್ಲಮ್ಮ ಅವರ ಮೊಮ್ಮಗನ ಹೆಸರನ್ನು ಗಣೇಶ್ ಎಂದು ಮೂರು ಬಾರಿ ಹೇಳಿದ್ದಾರೆ. ಈ ಮೂಲಕ ಮಲ್ಲಮ್ಮ ಅವರ ಆಸೆಯನ್ನು ಬಿಗ್‌ಬಾಸ್ ಈಡೇರಿಸಿದ್ದಾರೆ. ಇದೇ ವೇಳೆ ಮಲ್ಲಮ್ಮ ಅವರ ಮೊಮ್ಮಗನ ಫೋಟೋಶೂಟ್ ಸಹ ತೋರಿಸಲಾಯ್ತು.
ಇದನ್ನೂ ಓದಿ: BBK 12: ಫಿನಾಲೆ ವಾರದಲ್ಲಿ ಗಿಲ್ಲಿಯ ಅಚ್ಚರಿ ನಡೆ; ಕಾವ್ಯಾಳನ್ನು ಬಿಟ್ಟುಕೊಟ್ಟು ಭಾವುಕನಾಗಿ ಮಾತಾಡಿದ ನಟ
ಪವಿತ್ರ ಬಂಧನ
ಮಲ್ಲಮ್ಮ ನಂತರ ಮನೆಗೆ ಬಂದ 'ಪವಿತ್ರ ಬಂಧನ' ಸೀರಿಯಲ್ ಕಲಾವಿದರು ಆಗಮಿಸಿದ್ದರು. ಸೀಸನ್ 12ರ ಸ್ಪರ್ಧಿಯೇ ಸೀರಿಯಲ್‌ನ ನಾಯಕನಾಗಿದ್ದಾರೆ. ಈ ವೇಳೆ ಪವಿತ್ರ ಬಂಧನದ ಕುರಿತು ಮಾತನಾಡಿದ ಧ್ರುವಂತ್, ಈ ಮನೆಯಲ್ಲಿ ನನಗೆ ಮಲ್ಲಮ್ಮ ಅವರೊಂದಿಗೆ ಪವಿತ್ರ ಬಂಧನ ಉಂಟಾಗಿತ್ತು. ತಾಯಿ ಪ್ರೀತಿಯನ್ನು ಮಲ್ಲಮ್ಮ ನನಗೆ ನೀಡಿದ್ದರು ಎಂದು ಹೇಳಿದ್ದರು.
ಇದನ್ನೂ ಓದಿ: ನಮ್ಮಿಬ್ಬರ ಪ್ರೀತಿ ರಿಯಾಲಿಟಿ ಶೋಗೆ ಸೀಮಿತವಾಗಿತ್ತು; ಸತ್ಯ ಒಪ್ಪಿಕೊಂಡ ಕಾಮಿಡಿಯನ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

