- Home
- Entertainment
- TV Talk
- BBK 12: ದೀಪಿಕಾ ದಾಸ್ ಮತ್ತೊಂದು ಪೋಸ್ಟ್ ವೈರಲ್.. ಹಿಂದಿನ ಪೋಸ್ಟ್‌ನಲ್ಲಿ ಟೀಕೆ ಮಾಡಿದ್ದು ಯಾರನ್ನ?
BBK 12: ದೀಪಿಕಾ ದಾಸ್ ಮತ್ತೊಂದು ಪೋಸ್ಟ್ ವೈರಲ್.. ಹಿಂದಿನ ಪೋಸ್ಟ್‌ನಲ್ಲಿ ಟೀಕೆ ಮಾಡಿದ್ದು ಯಾರನ್ನ?
ದೀಪಿಕಾ ದಾಸ್ ಅವರ ಮತ್ತೊಂದು ವಿಡಿಯೋ ಇದೀಗ ವೈರಲ್ ಆಗಿದೆ. ಈ ಮೊದಲು, ಅಂದರೆ ಬಿಗ್ ಬಾಸ್ ಸಿಸನ್ 12ರ ಗ್ರಾಂಡ್ ಫಿನಾಲೆ ಹಿಂದಿನ ದಿನ ಪೋಸ್ಟ್ ಮೂಲಕ ಈ ನಟಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಇದೀಗ ಮತ್ತೊಂದು ಪೋಸ್ಟ್ ಮಾಡಿದ್ದು, ಅದೀಗ ವೈರಲ್ ಆಗಿದೆ..

ದೀಪಿಕಾ ದಾಸ್ ಅವರ ಮತ್ತೊಂದು ವಿಡಿಯೋ ಇದೀಗ ವೈರಲ್ ಆಗಿದೆ. ಈ ಮೊದಲು, ಅಂದರೆ ಬಿಗ್ ಬಾಸ್ ಸಿಸನ್ 12ರ ಗ್ರಾಂಡ್ ಫಿನಾಲೆ ಹಿಂದಿನ ದಿನ ನಟಿ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ಅವರು ಪೋಸ್ಟ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಇದೀಗ ಮತ್ತೊಂದು ಪೋಸ್ಟ್ ಮಾಡಿದ್ದು, ಅದೀಗ ವೈರಲ್ ಆಗಿದೆ..
ಈ ಮೊದಲು ಪೋಸ್ಟ್ ಮಾಡಿದ್ದ ಅವರು 'ಬಿಗ್ ಬಾಸ್ ಕ್ರೇಜ್ ನೋಡಿ ತುಂಬಾ ಖುಷಿ ಆಯ್ತು.. ಆದರೆ, ಕೆಲವರು ಬಿಗ್ ಬಾಸ್ ಶೋವನ್ನು ರಾಜಕೀಯಕ್ಕಾಗಿ, ವೈಯಕ್ತಿಕ ಲಾಭಕ್ಕಾಗಿ ಬಳಸುವುದನ್ನು ನೋಡಿದರೆ ತುಂಬಾ ನಿರಾಸೆ ಆಗುತ್ತೆ.. ಎಲ್ಲರೂ ಕೂಡ ಪ್ರಾಮಾಣಿಕರಾಗಿರಿ, ಅರ್ಹ ಅಭ್ಯರ್ಥಿಯನ್ನು ಗೆಲ್ಲಿಸಿ' ಅಂತ ಫೋಸ್ಟ್ ಮಾಡಿದ್ದಾರೆ.
ಇದೀಗ, ಗ್ರಾಂಡ್ ಫಿನಾಲೆ ನಡೆದು ಗಿಲ್ಲಿ ಕಪ್ ಗೆದ್ದ ಬಳಿಕ, ಅದೇ ದೀಪಿಕಾ ದಾಸ್ ಅವರು ಗಿಲ್ಲಿ ನಟನಿಗೆ ವಿಶ್ ಮಾಡಿ 'ಬಿಗ್ ಬಾಸ್ ಟ್ರೋಫಿ' ಗೆದ್ದಿರೋದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
'ಬಿಗ್ ಬಾಸ್ ಕಪ್ ಗೆದ್ದ ಗಿಲ್ಲಿ ನಟನಿಗೆ ಹೃತ್ಪೂರ್ವಕ ಅಭಿನಂದನೆ' ಎಂದು ಪೋಸ್ಟ್ ಮಾಡಿದ್ದಾರೆ ನಟಿ ದೀಪಿಕಾ ದಾಸ್. ಅಲ್ಲಿಗೆ, ದೀಪಿಕಾ ದಾಸ್ ಹಳೆಯ ಪೋಸ್ಟ್ ಗಿಲ್ಲಿ ನಟನಿಗೆ ಸಂಬಂಧಪಟ್ಟಿದ್ದಲ್ಲ ಎನ್ನಬಹುದು.
ಹಾಗಿದ್ದರೆ ಅವರ ಹಳೆಯ ಇನ್‌ಸ್ಟಾಗ್ರಾಂ ಪೋಸ್ಟ್ ಯಾರಿಗೆ ಸಂಬಂಧಪಟ್ಟಿತ್ತು ಎಂಬ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆ ಆರಂಭವಾಗಿದೆ.
ಹೌದು, ನಟಿ ದೀಪಿಕಾ ದಾಸ್ ಅವರು ಮಾಜಿ ಬಿಗ್ ಬಾಸ್ ಸ್ಪರ್ಧಿಯಾಗಿದ್ದವರು. ಅವರು ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸಾಕಷ್ಟು ಖ್ಯಾತಿ ಹೊಂದಿದ್ದಾರೆ ಕೂಡ. ಕಳೆದ ವರ್ಷ ಮದುವೆ ಆಗುವ ಮೂಲಕ ಮತ್ತೊಮ್ಮೆ ನಟಿ ದೀಪಿಕಾ ದಾಸ್ ಅವರು ಸಖತ್ ಸೌಂಡ್ ಮಾಡಿದ್ದರು. ಇದೀಗ ಮತ್ತೆ ಬಿಗ್ ಬಾಸ್ ಬಗ್ಗೆ ಪೋಸ್ಟ್ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ ದೀಪಿಕಾ ದಾಸ್.
ಒಟ್ಟಿನಲ್ಲಿ, ಈ ಬಾರಿಯ ಬಿಗ್ ಬಾಸ್ ಕನ್ನಡ 12 ಕಪ್‌ಅನ್ನು ಗಿಲ್ಲಿ ನಟ ನಟರಾಜ್ ಅವರು ಗೆದ್ದುಕೊಂಡು ಸಂಭ್ರಮಿಸಿದ್ದಾರೆ. ರಕ್ಷಿತಾ ಶೆಟ್ಟಿಯವರು ರನ್ನರ್ ಅಪ್ ಹಾಗೂ ಅಶ್ವಿನಿ ಗೌಡ ಅವರು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಹೀಗೇ ಪ್ರತಿವರ್ಷ ಬಿಗ್ ಬಾಸ್ ಶೋ ನಡೆಯುತ್ತದೆ, ಸೀಸನ್ ಹಾಗೂ ವಿನ್ನರ್ ಬದಲಾಗುತ್ತಾರೆ. ಹಗಲು ಕಳೆದ ಬಳಿಕ ರಾತ್ರಿ ಬರುವಂತೆ ಬದಲಾವಣೆ ನಿರಂತರ ಅಷ್ಟೇ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

