- Home
- Entertainment
- TV Talk
- BBK 12: ಫಿನಾಲೆ ಟೈಮ್‌ನಲ್ಲಿ ಟೇಸ್ಟ್ ಗೊತ್ತಾಗ್ತಿಲ್ಲ, ಕೊರೊನಾ ಬಂತಾ ಎಂದು ಚಿಂತೆಗೆ ಬಿದ್ದ Gilli Nata
BBK 12: ಫಿನಾಲೆ ಟೈಮ್‌ನಲ್ಲಿ ಟೇಸ್ಟ್ ಗೊತ್ತಾಗ್ತಿಲ್ಲ, ಕೊರೊನಾ ಬಂತಾ ಎಂದು ಚಿಂತೆಗೆ ಬಿದ್ದ Gilli Nata
Bigg Boss Kannada Season 12 Episode Update: ಬಿಗ್ ಬಾಸ್ ಮನೆಯಲ್ಲಿ ಸೂಪರ್ ಸಂಡೇ ವಿಥ್ ಸುದೀಪ ಎಪಿಸೋಡ್ ಸಖತ್ ಕಾಮಿಡಿಯಿಂದಲೇ ಶುರುವಾಗಿದೆ. ಹೌದು, ಇಂದು ಸ್ಪರ್ಧಿಗಳೆಲ್ಲ ಸಿಕ್ಕಾಪಟ್ಟೆ ನಕ್ಕಿದ್ದಾರೆ. ವಾಹಿನಿಯು ಪ್ರೋಮೋ ರಿಲೀಸ್ ಮಾಡಿದೆ.

ಆ ತಿಂಡಿ ಹೆಸರು ಏನು?
ಒಂದಿಷ್ಟು ತಿಂಡಿಗಳು ಅಥವಾ ಆಹಾರ ಪದಾರ್ಥಗಳನ್ನು ಇಡಲಾಗಿದೆ. ಸ್ಪರ್ಧಿಗಳ ಕಣ್ಣಿಗೆ ಕಪ್ಪು ಬಟ್ಟೆ ಹಾಕಲಾಗಿದೆ. ಸ್ಪರ್ಧಿಗಳು ಕೇವಲ ಬಾಯಿಯಲ್ಲಿ ತಿಂದು ಅದೇನು ಎಂದು ಹೇಳಬೇಕು. ಒಟ್ಟಿನಲ್ಲಿ ಆ ತಿಂಡಿ ಹೆಸರು ಏನು ಎಂದು ಸ್ಪರ್ಧಿಗಳು ಕಂಡುಹಿಡಿಯಬೇಕು. ಅದನ್ನು ಪರೋಕ್ಷವಾಗಿ ಹೇಳಬೇಕು, ಅದನ್ನು ಇನ್ನೊಬ್ಬರು ಹೆಸರು ಹೇಳಬೇಕು.
ಕಾಮಿಡಿ ಮಾಡಿದ ಗಿಲ್ಲಿ ನಟ
ಈ ಟಾಸ್ಕ್‌ನ್ನು ಗಿಲ್ಲಿ ನಟ ಮಾತ್ರ ಸಖತ್ ಕಾಮಿಡಿಯಾಗಿ ತಗೊಂಡಿದ್ದಾರೆ. ಇದಕ್ಕೆ ರಜತ್ ಕೂಡ ಸಾಥ್ ನೀಡಿದ್ದಾರೆ. ಗಿಲ್ಲಿ ನಟ ಅವರು ಒಂದಿಷ್ಟು ತಿಂಡಿ ತಿಂದು, ಆಮೇಲೆ ಹೆಸರು ಏನು ಎಂದು ಹೇಳಿದ್ದಾರೆ. ಉಪ್ಪಿಟ್ಟಿನ ರವೆ, ಉಂಡೆ, ಚಿಯಾ ಚಂಕ್ಸ್ ಮುಂತಾದವುಗಳನ್ನು ಇಡಲಾಗಿತ್ತು.
ನನಗೂ ಸ್ವಲ್ಪ ಉಳಿಸು
ಆ ವೇಳೆ ಗಿಲ್ಲಿ ನಟ ಅವರು ತಿಂಡಿ ತಿಂದಿದ್ದಾರೆ. ಟೇಸ್ಟ್ ಏನು ಎಂದು ಗೊತ್ತಾಗದೆ, ನನಗೆ ಏನಾದರೂ ಕೊರೊನಾ ಬಂದಿದ್ಯಾ ಎಂದು ತಮಾಷೆ ಮಾಡಿದ್ದಾರೆ. ಆಗ ರಜತ್ ಅವರು ಗಿಲ್ಲಿ ನಟನಿಗೆ ನನಗೂ ಸ್ವಲ್ಪ ಉಳಿಸು ಎಂದಿದ್ದಾರೆ. ದೊಡ್ಮನೆಯಲ್ಲಿ ಬಗೆಬಗೆಯ ತಿಂಡಿಗಳು ಸಿಗೋದಿಲ್ಲ. ಒಂದು ಮೊಟ್ಟೆ, ಚಿಕನ್, ಮಟನ್ ಸಿಕ್ಕರೆ ಸಾಕು, ಮದುವೆ ಮನೆಯ ಬೀಗರ ಊಟ ಸಿಕ್ಕಿತು ಎನ್ನುವಷ್ಟರ ಮಟ್ಟಿಗೆ ಎಲ್ಲರೂ ಖುಷಿಯಾಗ್ತಾರೆ. ಈಗ ರಜತ್ ಕೂಡ ಅದೇ ಹಾದಿಯಲ್ಲಿದ್ದಾರೆ.
ಇಬ್ಬರು ಔಟ್
ಗಿಲ್ಲಿ ನಟ ಹಾಗೂ ರಜತ್ ಕಾಂಬಿನೇಶನ್ ಸಖತ್ ಆಗಿದ್ದು, ಇವರಿಬ್ಬರು ಒಟ್ಟಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಅಂದಹಾಗೆ ಇವರಿಬ್ಬರ ಕಾಮಿಡಿಯಂತೂ ವೀಕ್ಷಕರಿಗೆ ತುಂಬ ಇಷ್ಟ ಆಗಿದೆ. ಇಂದು ಇಬ್ಬರು ದೊಡ್ಮನೆಯಿಂದ ಹೊರಬರಲಿದ್ದಾರೆ. ಜನವರಿಯಲ್ಲಿ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ಇಬ್ಬರು ಹೊರಬರಲಿದ್ದಾರೆ.
ಯಾರು? ಯಾಋಉ?
ರಜತ್ ಹಾಗೂ ಚೈತ್ರಾ ಕುಂದಾಪುರ ಅವರು ದೊಡ್ಮನೆಯಿಂದ ಹೊರಬರಲಿದ್ದಾರಂತೆ. ಅಂದಹಾಗೆ ಇವರಿಬ್ಬರು ಸ್ಪರ್ಧಿಗಳಲ್ಲ, ಅತಿಥಿಗಳು ಎಂದು ಘೋಷಣೆ ಮಾಡಲಾಗುವುದು ಎನ್ನಲಾಗಿದೆ. ಚೈತ್ರಾ, ರಜತ್ ಹೊರಗಡೆ ಬಂದ್ಮೇಲೆ ಉಳಿದವರು ಹೇಗೆ ಆಟ ಆಡಲಿದ್ದಾರೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

