- Home
- Entertainment
- TV Talk
- ನಾನಿಲ್ಲದೆ Bigg Boss ಮನೇಲಿ Spark ಇಲ್ಲ ಎಂದ Rakshita Shetty; ಅಲ್ಲೇ ಸತ್ಯದರ್ಶನ ಮಾಡಿಸಿದ ಕಿಚ್ಚ ಸುದೀಪ್
ನಾನಿಲ್ಲದೆ Bigg Boss ಮನೇಲಿ Spark ಇಲ್ಲ ಎಂದ Rakshita Shetty; ಅಲ್ಲೇ ಸತ್ಯದರ್ಶನ ಮಾಡಿಸಿದ ಕಿಚ್ಚ ಸುದೀಪ್
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಕ್ಷಿತಾ, ಧ್ರುವಂತ್ ಅವರು ಸೀಕ್ರೆಟ್ ರೂಮ್‌ನಲ್ಲಿದ್ದರು. ಅಲ್ಲಿಂದ ಅವರು ದೊಡ್ಮನೆಯಲ್ಲಿ ಏನು ನಡೆಯುತ್ತಿದೆ ಎಂದು ನೋಡುತ್ತಿದ್ದರು, ಆಮೇಲೆ ಟೀಂ ರಚನೆ ಮಾಡಿದ್ದರು. ತನ್ನಿಂದಲೇ ಎಲ್ಲ, ತಾನೇ ಎಲ್ಲ ಎಂದುಕೊಂಡ ರಕ್ಷಿತಾಗೆ ಉಳಿದವರು ಠಕ್ಕರ್ ಕೊಟ್ಟಿದ್ದಾರೆ.

ನಾನಿಲ್ಲದೆ Spark ಇಲ್ಲ
ಅಷ್ಟೇ ಅಲ್ಲದೆ ನಾನು ಇಲ್ಲದೆ ಮನೆಯಲ್ಲಿ Spark ಇಲ್ಲ ಎಂದರು. ಇದನ್ನು ಕಿಚ್ಚ ಸುದೀಪ್ ಅವರು ಎಲ್ಲರ ಮುಂದೆ ಹೇಳಿದರು. ಅದಿಕ್ಕೆ ಮಾಳು ನಿಪನಾಳ ಅವರು, “ಹೌದು, ರಕ್ಷಿತಾ ಇದ್ದಾಗ ಮನೆಯೇ ಒಂದು ಥರ ಇತ್ತು” ಎಂದು ಹೇಳಿದ್ದಾರೆ. ಈ ಮಾತು ಕೇಳಿ ರಕ್ಷಿತಾ ಅವರು ಖುಷಿಪಟ್ಟಿದ್ದಾರೆ.
ವ್ಯತ್ಯಾಸವೇ ಆಗಿಲ್ಲ
ಕಾವ್ಯ ಶೈವ ಅವರು, “ವ್ಯತ್ಯಾಸವೇ ಆಗಿಲ್ಲ” ಎಂದರು. “ಯಾರೇ ಈ ಮನೆಯಿಂದ ಹೋದರೂ ಒಬ್ಬರು ಖಾಲಿ ಆದರು ಎಂದು ಖುಷಿ ಆಗುತ್ತದೆ, ಹಾಗೆ ಇಬ್ಬರು ಹೋದರು ಎಂದು ಖುಷಿಪಟ್ಟೆ, ಈಗ ಮತ್ತೆ ಬಂದಿರೋದು ಬೇಸರ ತಂದಿದೆ” ಎಂದು ಹೇಳಿದ್ದಾರೆ.
ರಕ್ಷಿತಾ ವಿರುದ್ಧ ಹೋದ ಗಿಲ್ಲಿ ನಟ
ಗಿಲ್ಲಿ ನಟ ಅವರು, “ಮೊದಲಿನಿಂದಲೂ Spark ಇದೆ. ಮನೆಯಲ್ಲಿ ರಕ್ಷಿತಾ ಇಲ್ಲ ಎಂದು Spark ಮಿಸ್ ಆಗಿರಲಿಲ್ಲ” ಎಂದು ಹೇಳಿದ್ದಾರೆ.
ರಜತ್ ಅವರು “ನಾನು ರಕ್ಷಿತಾಳನ್ನು ಮಿಸ್ ಮಾಡಿಕೊಂಡೆ” ಎಂದು ಹೇಳಿದ್ದಾರೆ.
ಧ್ರುವಂತ್ ಅವರು ಮನೆಗೆ ಬಂದಿರೋದು ಬೇಸರ ತಂದಿದೆ ಎಂದು ರಜತ್, ಸೂರಜ್ ಕೂಡ ಹೇಳಿದ್ದಾರೆ. ಒಟ್ಟಿನಲ್ಲಿ ಧ್ರುವಂತ್ ಅವರು ಬಂದಿರೋದನ್ನು ಅಶ್ವಿನಿ ಬಿಟ್ಟು ಯಾರೂ ಕೂಡ ಖುಷಿಪಡಲಿಲ್ಲ.
ಯಾರೂ ಒಪ್ಪಿಲ್ಲ
ರಕ್ಷಿತಾ ಶೆಟ್ಟಿ ಅವರಿಗೆ ಕಾವ್ಯ ಶೈವ ಅವರನ್ನು ಕಂಡ್ರೆ ಆಗೋದಿಲ್ಲ. ಇದು ಕೂಡ ರಕ್ಷಿತಾ ಬಾಯಿಯಿಂದಲೇ ಹೊರಬಂದಿದೆ. ಇದಕ್ಕೆ ರಕ್ಷಿತಾ ಒಂದಿಷ್ಟು ಸಮಜಾಯಿಷಿ ಕೊಟ್ಟರೂ ಕೂಡ, ಕಿಚ್ಚ ಸುದೀಪ್ ಸೇರಿದಂತೆ ಉಳಿದವರು ಕೂಡ ಒಪ್ಪಿಲ್ಲ.
ರಕ್ಷಿತಾ ಈಗ ಇರಿಟೇಟ್
ಅಂದಹಾಗೆ ರಕ್ಷಿತಾ ಮುಗ್ಧೆ, ಪಾಪದವರು, ಇನ್ನೊಮ್ಮೆ ಪ್ರೌಢಿಮೆ ಜಾಸ್ತಿ ಎಂದು ಹೇಳಲಾಗಿತ್ತು. ಆದರೆ ಇತ್ತೀಚೆಗೆ ಯಾರ ಮಾತನ್ನು ಕೇಳಿಸಿಕೊಳ್ಳೋದಿಲ್ಲ, ಕೂಗಾಡ್ತಾರೆ, ವಿಚಿತ್ರವಾಗಿ ವರ್ತಿಸುತ್ತಾರೆ ಎಂಬ ಆರೋಪ ಇದೆ. ಇನ್ನು ವೀಕ್ಷಕರಿಗೆ ರಕ್ಷಿತಾ ಅವರೇ ಇರಿಟೇಟ್ ಎನಿಸೋ ಥರ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

