- Home
- Entertainment
- TV Talk
- ಯಾರಿಗೂ ಕ್ಯಾರೆ ಎನ್ನದ, ಬೇರೆಯವ್ರ ಭಾವನೆಗೆ ಬೆಲೆ ಕೊಡದ Gilli Nata ಗೌರವ ಕೊಡೋದು ಇವರಿಗೆ ಮಾತ್ರ; ರಜತ್ ರಿವೀಲ್
ಯಾರಿಗೂ ಕ್ಯಾರೆ ಎನ್ನದ, ಬೇರೆಯವ್ರ ಭಾವನೆಗೆ ಬೆಲೆ ಕೊಡದ Gilli Nata ಗೌರವ ಕೊಡೋದು ಇವರಿಗೆ ಮಾತ್ರ; ರಜತ್ ರಿವೀಲ್
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಮಾತು, ಡೈಲಾಗ್, ಕಿಲಾಡಿ ಬುದ್ಧಿಯಿಂದಲೇ ವೀಕ್ಷಕರ ಮನಸ್ಸು ಗೆದ್ದಿರುವ ಮಂಡ್ಯದ ಹುಡುಗ ಗಿಲ್ಲಿ ನಟನ ಬಗ್ಗೆ ಮನೆಯವರಿಗೆ ಒಂದೆರಡು ದೂರಿದೆ. ಈ ಬಗ್ಗೆ ರಜತ್ ಅವರು ಎಷಿಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.

ಮೊದಲೇ ಪರಿಚಯ ಇತ್ತು
ಬಿಗ್ ಬಾಸ್ ಶೋನಿಂದ ಆಚೆಯೂ ಗಿಲ್ಲಿ ನಟ ಹಾಗೂ ಕಾವ್ಯ ಶೈವ ಅವರಿಗೆ ಪರಿಚಯ ಇತ್ತು. ಇವರಿಬ್ಬರು ಒಂದು ಡ್ಯಾನ್ಸ್ ಶೋನಲ್ಲಿ ಭಾಗವಹಿಸಿದ್ದರು. ಆರಂಭದಲ್ಲಿ ಜಂಟಿ ಜೋಡಿಯಿದ್ದಾಗ, ಗಿಲ್ಲಿ, ಕಾವ್ಯ ಜೋಡಿಯಾಗಿದ್ದರು. ಅಲ್ಲಿಂದ ಇವರ ಸ್ನೇಹ ಗಾಢವಾಯಿತು.
ಕಾವ್ಯ ಕಾಣಿಸಿದ್ದು ಯಾವಾಗ?
ಗಿಲ್ಲಿ ನಟನಿಂದಲೇ ಕಾವ್ಯ, ಗಿಲ್ಲಿ ಇಲ್ಲದೆ ಕಾವ್ಯ ಇಲ್ಲ ಎಂದು ಮನೆಯಲ್ಲಿದ್ದವರು ಹೇಳಿದ್ದರು. ಅಷ್ಟೇ ಅಲ್ಲದೆ ಹೊರಗಡೆ ಕೂಡ ಹೇಳಿದ್ದುಂಟು. ಅಶ್ವಿನಿ ಗೌಡ ಜೊತೆ ಕಾವ್ಯ ಕೆಲ ಬಾರಿ ಜಗಳ ಆಡಿದ್ದಾರೆ. ಧನುಷ್, ಸ್ಪಂದನಾ, ರಘು ಜೊತೆ ಕಾವ್ಯ ಮಾತನಾಡಿದ್ದು ಬಿಟ್ಟರೆ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಕಾವ್ಯ ಕಾಣಿಸಿಕೊಂಡ್ರೆ ಅದು ಗಿಲ್ಲಿ ನಟನ ಜೊತೆ ಮಾತ್ರ ಅಥವಾ ಗಿಲ್ಲಿ ಬಾಯಲ್ಲಿ ಕಾವ್ಯ ಹೆಸರು ಬಂದಾಗ ಮಾತ್ರ..
ಕಾವ್ಯ ಭಾವನೆಗೆ ಮಾತ್ರ ಬೆಲೆ
ಬಿಗ್ ಬಾಸ್ ಮನೆಯವರೇ ಹೇಳುವಂತೆ ಗಿಲ್ಲಿ ನಟ, ಕೇವಲ ಕಾವ್ಯ ಅವರ ಭಾವನೆಗಳಿಗೆ ಮಾತ್ರ ಬೆಲೆ ಕೊಡ್ತಾರೆ, ಬೇರೆಯವರ ಭಾವನೆಗಳಿಗೆ ಬೆಲೆ ಕೊಡಲ್ಲವಂತೆ. ಹೌದು, ಇದು ನನೆಗ ಅನಿಸಿದೆ. ಇದು ಗಿಲ್ಲಿ ದೃಷ್ಟಿಕೋನ, ಅದಿಕ್ಕೆ ಅವನು ಉತ್ತರ ಕೊಡಬೇಕು. ಕಾವ್ಯಗೆ ಮಾತ್ರ ಗೌರವ ಕೊಡ್ತಾನೆ, ಬೇರೆಯವರಿಗೆ ಗೌರವ ಕೊಡೋದಿಲ್ಲ ಎಂದಿದ್ದಾರೆ ರಜತ್
ಬೇರೆಯವರಿಗೆ ಹರ್ಟ್ ಮಾಡ್ತಾನೆ
ಕಾವ್ಯಗೆ ಹರ್ಟ್ ಆದ್ರೆ ಮಾತ್ರ ಅವನಿಗೆ, ಬೇಜಾರ ಆಗುತ್ತದೆ. ಆದರೆ ಬೇರೆಯವರಿಗೆ ನೀಟಾಗಿ ಅವನು ಹರ್ಟ್ ಮಾಡ್ತಾನೆ. ಅದು ಕಾಣಿಸಿದೆ. ಇದು ಅವನ ಪರ್ಸನಲ್ ಯೋಚನೆ ಇರಬಹುದು. ಈಗ ನಾನು ಅದರ ಬಗ್ಗೆ ಕಾಮೆಂಟ್ ಮಾಡೋಕಾಗಲ್ಲ. ಅವನು ಮಾಡ್ತಾ ಇರೋದು ಅದು ಅವನ ಇಷ್ಟ ಎಂದು ರಜತ್ ಹೇಳಿದ್ದಾರೆ.
ಕಾವ್ಯ ವಿರುದ್ಧ ಯಾಕೆ ಹೋಗಲ್ಲ?
ಗಿಲ್ಲಿ ನಟ ಅವರನ್ನು ಕಾವ್ಯಾ ನಾಮಿನೇಟ್ ಮಾಡ್ತಾರೆ. ನೀನು ಲಿಮಿಟ್ ಮೀರುತ್ತಿದ್ದೀಯಾ, ನನ್ನ ತಂಟೆಗೆ ಬರಬೇಡ, ಯಾವಾಗಲೂ ಕಾವು ಕಾವು ಎನ್ನಬೇಡ ಎಂದು ಹೇಳುತ್ತಾರೆ. ಆದರೆ ಗಿಲ್ಲಿ ಮಾತ್ರ ಇದುವರೆಗೂ ಕಾವ್ಯ ವಿರುದ್ಧ ಹೋಗಿಲ್ಲ, ಕಾವ್ಯ ಅವರನ್ನು ಬಿಟ್ಟುಕೊಟ್ಟಿಲ್ಲ, ಯಾಕೆ ಎಂದು ಪ್ರಶ್ನೆ ಮಾಡಿದಾಗ ರಜತ್ ಅವರು, “ಜನ ಕೂಡ ಇದನ್ನೇ ಇಷ್ಟ ಪಡ್ತಿರೋದು. ಅದಕ್ಕೆ ಅವನ ಕಿಲಾಡಿ ಅಂತ ಹೇಳೋದು” ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

