- Home
- Entertainment
- TV Talk
- BBK 12: ನಮ್ಮನ್ನು ಹೊಸ ರೀತಿಯಾಗಿ ನೋಡು ಎಂದ ಅಶ್ವಿನಿ ಗೌಡಗೆ ಖಡಕ್ ಮಾತು ಹೇಳಿದ ರಕ್ಷಿತಾ ಶೆಟ್ಟಿ
BBK 12: ನಮ್ಮನ್ನು ಹೊಸ ರೀತಿಯಾಗಿ ನೋಡು ಎಂದ ಅಶ್ವಿನಿ ಗೌಡಗೆ ಖಡಕ್ ಮಾತು ಹೇಳಿದ ರಕ್ಷಿತಾ ಶೆಟ್ಟಿ
ಬಿಗ್‌ಬಾಸ್ ಮನೆಯಲ್ಲಿ ಒಂಟಿತನ ಕಾಡುತ್ತಿದೆ ಎಂದ ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ ಜೊತೆಗಿನ ಸಂಭಾಷಣೆಯಲ್ಲಿ ಖಡಕ್ ಮಾತೊಂದನ್ನು ಹೇಳಿದ್ದಾರೆ. ನಾವು ಹೊಸದಾಗಿ ನೋಡಿದರೂ ಇತರರು ನಮ್ಮನ್ನು ಹಳೆಯ ರೀತಿಯಲ್ಲೇ ನೋಡುತ್ತಾರೆ, ಅವರ ಅಭಿಪ್ರಾಯ ಬದಲಿಸಲಾಗದು ಎಂದಿದ್ದಾರೆ.

ರಕ್ಷಿತಾ ಶೆಟ್ಟಿ ಮಾತು
ಬಿಗ್‌ಬಾಸ್ ಮನೆಯ ಪುಟ್ಟಿ ಅಂತಾ ಕರೆಸಿಕೊಳ್ಳುತ್ತಿರುವ ರಕ್ಷಿತಾ ಶೆಟ್ಟಿಯವರ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತಿವೆ. ಇದೀಗ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ನಡುವಿನ ಸಂಭಾಷಣೆಯ ತುಣಕನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಕಿಚನ್ ಏರಿಯಾದಲ್ಲಿ ಈ ಸಂಭಾಷಣೆ ನಡೆದಿದ್ದು, ಈ ವೇಳೆ ಜಾನ್ವಿ ಸಹ ಅಲ್ಲಿಯೇ ಕುಳಿತಿರುತ್ತಾರೆ.
ಲೋನ್ಲಿ ಫೀಲಿಂಗ್
ನನಗೆ ಮನೆಯಲ್ಲಿ ಒಂಟಿತನ (Lonely Feeling) ಕಾಡುತ್ತಿದ್ದು, ಹೊಸ ಜನರನ್ನು ನೋಡಬೇಕೆನಿಸುತ್ತಿದೆ ಎಂದು ಅಶ್ವಿನಿ ಗೌಡ ಮುಂದೆ ಹೇಳುತ್ತಾರೆ. ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ ಅಶ್ವಿನಿ ಗೌಡ, ನೇರವಾಗಿ ಹೊರಗೆ ಹೋಗಿ ಗೋಡೆಯನ್ನು ಜಂಪ್ ಮಾಡು. ಅಲ್ಲಿ ನಿನಗೆ ಕೆಲವರು ಕಾಣಿಸುತ್ತಾರೆ. ನಂತರ ಮನೆಯೊಳಗೆ ಬಾ ಎಂದು ಹೇಳುತ್ತಾರೆ.
ಖಡಕ್ ಮಾತು ಹೇಳಿದ ರಕ್ಷಿತಾ ಶೆಟ್ಟಿ
ನಾನು ಹಾಗೆಲ್ಲಾ ಮಾಡಲ್ಲ ಅಂತಾ ರಕ್ಷಿತಾ ಶೆಟ್ಟಿ ಹೇಳಿದಾಗ ನಮ್ಮನ್ನೇ ಹೊಸ ತರಹ ಜನರನ್ನಾಗಿ ನೋಡು. ಹಳೆಯದನ್ನೆಲ್ಲಾ ಮರೆತು ಹೊಸ ಅಭಿಪ್ರಾಯಗಳೊಂದಿಗೆ ನಮ್ಮನ್ನು ನೋಡು ಎಂದು ಅಶ್ವಿನಿ ಗೌಡ ಹೇಳುತ್ತಾರೆ. ಇದಕ್ಕೂ ತಲೆಯಾಡಿಸುವ ರಕ್ಷಿತಾ ಶೆಟ್ಟಿ, ಖಡಕ್ ಮಾತೊಂದನ್ನು ಹೇಳುತ್ತಾರೆ.
ಅಭಿಪ್ರಾಯಗಳನ್ನು ಬದಲಿಸಲು ಸಾಧ್ಯವಿಲ್ಲ
ನಾವು ಹೊಸ ಅಭಿಪ್ರಾಯಗಳಿಂದ ನೋಡಿದ್ರು ಅವರು ನಮ್ಮನ್ನು ಹಳೆಯ ರೀತಿಯಲ್ಲಿ ನೋಡುತ್ತಾರೆ. ಹಾಗಾಗಿ ಏನು ಮಾಡೋದು? ಬೇರೆಯವರ ಅಭಿಪ್ರಾಯಗಳು ಚೇಂಜ್ ಆಗಲ್ಲ. ನಿಮ್ಮ ಲೆನ್ಸ್, ಬ್ರ್ಯಾಂಡ್‌ಡೆ ಕನ್ನಡಕ ಚೇಂಜ್ ಮಾಡಿ ನೋಡಿದ್ರೂ ಬೇರೆಯವರ ಅಭಿಪ್ರಾಯಗಳನ್ನು ಬದಲಿಸಲು ಸಾಧ್ಯವಿಲ್ಲ. ನಿಮ್ಮ ಕಣ್ಣುಗಳನ್ನೇ ಚೇಂಜ್ ಮಾಡಿದರೂ ಏನು ಪ್ರಯೋಜನವಿಲ್ಲ ಎಂದು ರಕ್ಷಿತಾ ಶೆಟ್ಟಿ ಹೇಳುತ್ತಾರೆ.
ಇದನ್ನೂ ಓದಿ: BBK 12: ನಿಂಬೆ ಹಣ್ಣಿನ ಮಂತ್ರ ಹಾಕಿದ್ದ ಜಾಹ್ನವಿ, ಫಸ್ಟ್ ಮಂಗಳಾರತಿ ಎತ್ತಿ, ದೃಷ್ಟಿ ತೆಗೆಸಿದ ಕಿಚ್ಚ ಸುದೀಪ್
ರಕ್ಷಿತಾ ಈ ಮಾತು ಹೇಳಿದ್ಯಾರಿಗೆ?
ರಕ್ಷಿತಾ ಶೆಟ್ಟಿ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದ ಅಶ್ವಿನಿ ಗೌಡ, ಬೇರೆ ಬಟ್ಟೆ ಹಾಕಿ ಮೇಕಪ್ ಮಾಡಿಕೊಂಡ್ರೂ ಚೇಂಜ್ ಆಗಲ್ಲವಲ್ಲಾ ಎಂದು ಹೇಳಿ ನಗುತ್ತಾರೆ. ಸದ್ಯ ರಕ್ಷಿತಾ ಈ ಮಾತುಗಳನ್ನು ಸಹಜವಾಗಿಯೇ ಹೇಳಿದ್ರಾ ಅಥವಾ ಮನೆಯಲ್ಲಿರುವ ಸದಸ್ಯರನ್ನು ಉದ್ದೇಶಿಸಿ ಹೇಳಿದ್ರಾ ಅಥವಾ ಅಲ್ಲಿಯೇ ಇದ್ದ ಅಶ್ವಿನಿ ಗೌಡ ಮತ್ತು ಜಾನ್ವಿ ಅವರಿಗೆ ಟಾಂಗ್ ನೀಡಿದ್ರಾ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಇದನ್ನೂ ಓದಿ: BBK 12: ಕಿಚ್ಚನ ಚಪ್ಪಾಳೆ ಪಡೆದುಕೊಂಡ ರಕ್ಷಿತಾ ಶೆಟ್ಟಿಗೆ ಮಹತ್ವದ ಜವಾಬ್ದಾರಿ ನೀಡಿದ ಸುದೀಪ್!
ವೈರಲ್ ವಿಡಿಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

