- Home
- Entertainment
- TV Talk
- BBK 12: ಅಶ್ವಿನಿ, ಗಿಲ್ಲಿ ಬಳಿಕ ಮತ್ತೋರ್ವ ಸ್ಪರ್ಧಿ ವಿರುದ್ಧ ದಾಖಲಾಯ್ತು ದೂರು; ಹಳೇ ಕೇಸ್ ರೀ ಓಪನ್
BBK 12: ಅಶ್ವಿನಿ, ಗಿಲ್ಲಿ ಬಳಿಕ ಮತ್ತೋರ್ವ ಸ್ಪರ್ಧಿ ವಿರುದ್ಧ ದಾಖಲಾಯ್ತು ದೂರು; ಹಳೇ ಕೇಸ್ ರೀ ಓಪನ್
Bigg Boss Kannada 12:ಬಿಗ್‌ಬಾಸ್ ಮನೆಯ ಸ್ಪರ್ಧಿ ವಿರುದ್ಧ ಇದೀಗ ದೂರು ದಾಖಲಾಗಿದೆ. ಗಿಲ್ಲಿ ನಟ ಅಭಿಮಾನಿಗಳು ಈ ದೂರು ನೀಡಿದ್ದು, ಕಾರ್ಯಕ್ರಮದ ಆಯೋಜಕರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.

ಸ್ಪರ್ಧಿಗಳ ಆಟ, ವೈಖರಿ ಮತ್ತು ಮಾತು
ಬಿಗ್‌ಬಾಸ್ ಎಂಬ ಸೆರೆಮನೆಯಂತಿರೋ ಅರಮನೆಯಲ್ಲಿರುವ ಸ್ಪರ್ಧಿಗಳ ಮಾತು, ಆಟ ಮತ್ತು ವೈಖರಿ ಎಲ್ಲವೂ ಸಾರ್ವಜನಿಕ ವಲಯದಲ್ಲಿ ಚರ್ಚಗೆ ಗ್ರಾಸವಾಗುತ್ತದೆ. ಸೀಸನ್ 11ರಲ್ಲಿ ಮಹಿಳಾ ಆಯೋಗದ ಸೂಚನೆಯಿಂದ ಆಟದ ವೈಖರಿಯನ್ನೇ ಬದಲಾವಣೆ ಮಾಡಲಾಗಿತ್ತು. ಈ ಬಾರಿಯ ಸ್ಪರ್ಧಿಗಳ ವಿರುದ್ಧ ದೂರು ದಾಖಲಾಗುತ್ತಿವೆ.
ಸ್ಪರ್ಧಿ ವಿರುದ್ಧ ದೂರು
ಈಗಾಗಲೇ ಬಿಗ್‌ಬಾಸ್ ಮನೆಯಲ್ಲಿರುವ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ವಿರುದ್ಧ ದೂರು ದಾಖಲಾಗಿವೆ. ಇದೀಗ ಮತ್ತೋರ್ವ ಸ್ಪರ್ಧಿ ವಿರುದ್ಧ ದೂರು ದಾಖಲಾಗಿದೆ. ಹಳೆಯ ಪ್ರಕರಣವೊಂದು ಮತ್ತೆ ಜೀವ ಪಡೆದುಕೊಂಡಿದ್ದು, ಜಿಲ್ಲಾ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಾಗಿದ್ದು ಯಾರ ವಿರುದ್ಧ ಎಂದು ನೋಡೋಣ ಬನ್ನಿ.
ಗಿಲ್ಲಿ ಅಭಿಮಾನಿಗಳಿಂದ ದೂರು ದಾಖಲು
ಸ್ಪರ್ಧಿ ಗಿಲ್ಲಿ ನಟ ಅವರ ಮೇಲೆ ಹಲ್ಲೆ ಸಂಬಂಧ ರಿಷಾ ಗೌಡ ವಿರುದ್ಧ ದೂರು ದಾಖಲಾಗಿದೆ. ಕಾರ್ಯಕ್ರಮದ ಆಯೋಜಕರು ರಿಷಾ ಗೌಡ ವಿರುದ್ಧ ಯಾವುದೇ ಸೂಕ್ತ ಕ್ರಮ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಗಿಲ್ಲಿ ನಟ ಅಭಿಮಾನಿಗಳು ದೂರು ದಾಖಲಿಸಿದ್ದು, ರಿಷಾ ವಿರುದ್ಧ ಕ್ರಮ ಜರುಗಿಸುವರೆಗೂ ಹೋರಾಟ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.
ಏನಿದು ಪ್ರಕರಣ?
ಎರಡು ವಾರಗಳ ಹಿಂದೆ ಬಾತ್‌ರೂಮ್‌ನಲ್ಲಿ ಬಿಸಿನೀರು ಸಂಬಂಧ ಗಿಲ್ಲಿ ನಟ ಮತ್ತು ರಿಷಾ ಗೌಡ ನಡುವೆ ಜಗಳ ನಡೆದಿತ್ತು. ಈ ವೇಳೆ ಗಿಲ್ಲಿ ನಟ ಮೇಲೆ ರಿಷಾ ಹಲ್ಲೆ ನಡೆಸಿದ್ದರು. ರಿಷಾ ಅವರ ಬಟ್ಟೆಗಳನ್ನು ತೆಗೆದುಕೊಂಡು ಬಂದಿದ್ದ ಗಿಲ್ಲಿ ನಟ ಬಾತ್‌ರೂಮ್ ನೆಲದ ಮೇಲೆ ಇರಿಸಿದ್ದರು. ಈ ಸಮಯದಲ್ಲಿ ಗಿಲ್ಲಿ ನಟ ಮಹಿಳಾ ಸ್ಪರ್ಧಿಯನ್ನು ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಆರೋಪ ಸಂಬಂಧ ಗಿಲ್ಲಿ ನಟ ವಿರುದ್ಧ ದೂರು ದಾಖಲಾಗಿತ್ತು.
ಇದನ್ನೂ ಓದಿ: ಗಿಲ್ಲಿ ನಟನ ವಿರುದ್ಧ ದೂರು; ಎದೆ, ತೊಡೆ, ಸೊಂಟ ತೋರಿಸೋದು ಓಕೆನಾ? ಹೆಣ್ಣಿನ ಮೈತುಂಬ ಬಟ್ಟೆ ಹಾಕಿಸಿ: ವೀಕ್ಷಕರು
ಸುದೀಪ್ ಕ್ಲಾಸ್
ವೀಕೆಂಡ್ ಸಂಚಿಕೆಯಲ್ಲಿ ಈ ವಿಷಯವಾಗಿ ಚರ್ಚೆ ನಡೆಸಿದ್ದ ಸುದೀಪ್, ಇಬ್ಬರಿಗೂ ಕ್ಲಾಸ್ ತೆಗೆದುಕೊಂಡಿದ್ದರು. ಮಹಿಳೆಯರ ಬಟ್ಟೆಗಳನ್ನು ಅವರ ಅನುಮತಿ ಇಲ್ಲದೇ ಮುಟ್ಟೋದು ತಪ್ಪು ಎಂದು ಗಿಲ್ಲಿಗೆ ತಿಳಿ ಹೇಳಿದ್ದರು. ಇತ್ತ ಹಲ್ಲೆ ಮಾಡಿದ ಮಹಿಳಾ ಸ್ಪರ್ಧಿಗೂ ಕ್ಲಾಸ್ ತೆಗೆದುಕೊಂಡು ಮನೆಯ ಸದಸ್ಯರ ಬಹುಮತದ ನಿರ್ಧಾರಕ್ಕೆ ಅನುಗುಣವಾಗಿ ರಿಷಾ ಅವರನ್ನು ಮನೆಯಲ್ಲಿ ಉಳಿಸಿಕೊಂಡಿದ್ದರು. ನಂತರ ನೇರವಾಗಿ ನಾಮಿನೇಟ್ ಮಾಡಿ, 24 ಗಂಟೆ ಜೈಲಿನಲ್ಲಿರುವ ಶಿಕ್ಷೆಯನ್ನು ನೀಡಿದ್ದರು.
ಇದನ್ನೂ ಓದಿ: ಸೋಲು ಒಪ್ಪದ ಗಿಲ್ಲಿ ನಟನ ವಿಚಿತ್ರ ವರ್ತನೆ; ಇದುವೇ ಅಸಲಿ ಮುಖ ಎಂದ ವೀಕ್ಷಕರು, ಹತಾಶೆಯಲ್ಲಿ ಹುಳಿ ಹಿಂಡೋ ಕೆಲಸ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗವನ್ನು ಅನ್ವೇಷಿಸಿ. ಚಲನಚಿತ್ರ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿಗಳಲ್ಲಿ ನಾಟಕ ಮತ್ತು ಮನರಂಜನಾ ಜಗತ್ತಿನಲ್ಲಿ ಟ್ರೆಂಡ್‌ಸ್ಪಾಟಿಂಗ್‌ನೊಂದಿಗೆ ನವೀಕೃತವಾಗಿರಿ. ತೆರೆಮರೆಯ ಕಥೆಗಳು, OTT ಬಿಡುಗಡೆಗಳು ಮತ್ತು ರೆಡ್ ಕಾರ್ಪೆಟ್ ಕ್ಷಣಗಳನ್ನು ಅನ್ವೇಷಿಸಿ. ಗ್ಲಿಟ್ಜ್, ಗ್ಲಾಮರ್ ಮತ್ತು ಮನರಂಜನೆಗೆ ಇದು ನಿಮ್ಮ ಒಂದು-ನಿಲುಗಡೆ ತಾಣವಾಗಿದೆ.

