- Home
- Entertainment
- TV Talk
- BBK 12: ನಿಂಬೆ ಹಣ್ಣಿನ ಮಂತ್ರ ಹಾಕಿದ್ದ ಜಾಹ್ನವಿ, ಫಸ್ಟ್ ಮಂಗಳಾರತಿ ಎತ್ತಿ, ದೃಷ್ಟಿ ತೆಗೆಸಿದ ಕಿಚ್ಚ ಸುದೀಪ್
BBK 12: ನಿಂಬೆ ಹಣ್ಣಿನ ಮಂತ್ರ ಹಾಕಿದ್ದ ಜಾಹ್ನವಿ, ಫಸ್ಟ್ ಮಂಗಳಾರತಿ ಎತ್ತಿ, ದೃಷ್ಟಿ ತೆಗೆಸಿದ ಕಿಚ್ಚ ಸುದೀಪ್
BBK 12 Updates: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕಳೆದ ವಾರ ವೀಕೆಂಡ್ ಎಪಿಸೋಡ್ ಮುಗಿದ ಬಳಿಕ ಜಾಹ್ನವಿ ಹಾಗೂ ಅಶ್ವಿನಿ ಗೌಡ ಅವರು ಸೇರಿಕೊಂಡು ದೃಷ್ಟಿ ತೆಗೆದುಕೊಂಡಿದ್ದರು. ಈ ವಾರ ಕಿಚ್ಚ ಸುದೀಪ್ ಅವರೇ ದೃಷ್ಟಿ ತೆಗೆಸಿದ್ದಾರೆ. ಹಾಗಾದರೆ ಮುಂದೆ ಏನಾಯ್ತು?

ಜಾಹ್ನವಿ, ಅಶ್ವಿನಿ ಚರ್ಚೆ
ಕಳೆದ ವಾರ ಕೂಡ ಜಾಹ್ನವಿ, ಅಶ್ವಿನಿ ಗೌಡ ಅವರಿಗೆ ಕಿಚ್ಚ ಸುದೀಪ್ ಕ್ಲಾಸ್ ತಗೊಂಡಿದ್ದರು. ಅದಾದ ಬಳಿಕ ದೃಷ್ಟಿ ಬಿದ್ದಿದೆ ಎಂದು ಕಾಣುತ್ತದೆ ಎಂದು ಜಾಹ್ನವಿ ಅವರು ಅಶ್ವಿನಿ ಗೌಡಗೆ ದೃಷ್ಟಿ ತೆಗೆದಿದ್ದರು. ದೃಷ್ಟಿ ತೆಗೆಯುವಾಗ ರಕ್ಷಿತಾ ಕಣ್ಣು, ರಘು ಕಣ್ಣು ಎಂದೆಲ್ಲ ಹೇಳಿದ್ದರು. ಈಗ ಈ ವಿಚಾರ ಮತ್ತೆ ಚರ್ಚೆ ಆಗಿದೆ.
ಮತ್ತೆ ಚರ್ಚೆ
ದೃಷ್ಟಿ ತೆಗೆಸಿದ ವಿಚಾರಕ್ಕೂ ಗಿಲ್ಲಿ ನಟ ಮಾತನಾಡಿದ್ದುಂಟು. ಈ ಹಿಂದೆಯೇ ದೃಷ್ಟಿ ತೆಗೆದ ಮೇಲೆ ಅಶ್ವಿನಿ ಗೌಡ ಅವರು ಸೆಲ್ಫ್ ಎಲಿಮಿನೇಶನ್ ಆಗ್ತೀನಿ ಅಂದ್ರು, ವರ್ಕ್ ಆಗಿದೆ ಎಂದಿದ್ದರು. ಆಗ ಜಾಹ್ನವಿ, “ದೃಷ್ಟಿ ತೆಗೆದಮೇಲೆ ನಾನು ಎರಡು ಟಾಸ್ಕ್ ಗೆದ್ದೆ” ಎಂದಿದ್ದರು.
ಮಂಗಳಾರತಿ ಎತ್ತಿದ್ದರು
ನನಗೆ ಮರ್ಯಾದೆ ಕೊಡಬೇಕು ಎಂದು ಉಪವಾಸ ಸತ್ಯಾಗ್ರಹದ ಹಠ ಹಿಡಿದಿದ್ದ ಅಶ್ವಿನಿ ಗೌಡಗೆ ಮಂಗಳಾರತಿ ಎತ್ತಿದ್ದ ಕಿಚ್ಚ ಸುದೀಪ್ ಅವರು ಸಂಡೇ ವಿಥ್ ಸುದೀಪ ಎಪಿಸೋಡ್‌ನಲ್ಲಿ ದೃಷ್ಟಿ ತೆಗೆಯುವ ಟಾಪಿಕ್ ಎತ್ತಿದ್ದಾರೆ.
ಕಾಮಿಡಿ ಮಾಡಿದ ಗಿಲ್ಲಿ ನಟ
ರೂಮ್‌ನಲ್ಲಿದ್ದವರು ಯಾರು ಕ್ಲೋಸ್ ಆಗ್ತಾರೆ, ಅವರೆಲ್ಲ ಮನೆಯಿಂದ ಹೊರಗಡೆ ಹೋಗ್ತಾರೆ, ಅಶ್ವಿನಿ ಗೌಡ ಅವರೇ ಮನೆಯಿಂದ ಹೊರಗಡೆ ಹೋಗ್ತೀನಿ ಎಂದು ಹೇಳುತ್ತಿದ್ದರು. ದೃಷ್ಟಿ ತೆಗೆದಿದ್ದು ಎಷ್ಟು ಎಫೆಕ್ಟ್ ಆಗಿದೆ ನೋಡಿ ಎಂದು ಗಿಲ್ಲಿ ನಟ ಅವರು ಸುದೀಪ್ ಮುಂದೆ ಕಾಮಿಡಿ ಮಾಡಿದ್ದಾರೆ.
ಮನೆಯಲ್ಲಿ ಮೂರು ಬಾಗಿಲು
“ಈ ರೂಮ್‌ನಲ್ಲಿ ಮೂರು ಬಾಗಿಲು ಇದೆ, ಒಳ್ಳೆಯದಲ್ಲ ಎಂದು ಗಿಲ್ಲಿಯೇ ಹೇಳಿದ್ದನು” ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ಆಮೇಲೆ ಜಾಹ್ನವಿ ಅವರಿಗೆ ದೃಷ್ಟಿ ತೆಗೆಯಿರಿ ಎಂದು ಕಿಚ್ಚ ಸುದೀಪ್ ಹೇಳಿದ್ದಲ್ಲದೆ ಕುಂಬಳಕಾಯಿ, ನಿಂಬೆಹಣ್ಣು ಕೂಡ ಇಟ್ಟಿದ್ದರು. ಜಾಹ್ನವಿ ಅವರು ಗಿಲ್ಲಿ ನಟ, ರಘು, ರಕ್ಷಿತಾಗೆ ದೃಷ್ಟಿ ತೆಗೆಯಲು ಮುಂದಾಗಿದ್ದಾರೆ. ಆಗ ರಕ್ಷಿತಾ, “ಹಾಗಲ್ಲ, ಹೀಗೆ ಮಾಡಿ” ಎಂದಿದ್ದಾರೆ. ಇದನ್ನು ಕೇಳಿ ಕಿಚ್ಚ ಸುದೀಪ್ ಅವರಂತೂ ನಕ್ಕಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

