- Home
- Entertainment
- TV Talk
- Bigg Boss ಇತಿಹಾಸದಲ್ಲೇ ಫಸ್ಟ್ ಟೈಮ್; ಮನೆಯವ್ರ ಎಡವಟ್ಟಿನಿಂದ ಕಾವ್ಯ ಶೈವ ಬೆಲೆ ತೆರಬೇಕಾಗತ್ತಾ?
Bigg Boss ಇತಿಹಾಸದಲ್ಲೇ ಫಸ್ಟ್ ಟೈಮ್; ಮನೆಯವ್ರ ಎಡವಟ್ಟಿನಿಂದ ಕಾವ್ಯ ಶೈವ ಬೆಲೆ ತೆರಬೇಕಾಗತ್ತಾ?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಪಾಲಕರ ಮೀಟಿಂಗ್ಸ್‌ನಲ್ಲಿ ಮನೆಯವರು ಚೆನ್ನಾಗಿದ್ದಾರಾ? ಎಲ್ಲವೂ ಆರಾಮಾ ಎಂದು ಕೇಳೋದುಂಟು. ಆದರೆ ಕಾವ್ಯ ಶೈವ ಮನೆಯವರು ಬಂದಾಗ, ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡೋದು, ಯಾವ ರೀತಿ ಆಟ ಆಡೋದು ಎಂದು ಒಪನ್ ಆಗಿ ಚರ್ಚೆ ಮಾಡೋ ಬಗ್ಗೆ ಚರ್ಚೆಯಾಗಿದೆ.

ತಲೆ ಕೆಡಿಸಿಕೊಳ್ಳಬೇಡ
ನೀನು ಸೋಶಿಯಲ್ ಮೀಡಿಯಾವನ್ನು ಹ್ಯಾಂಡಲ್ ಮಾಡುತ್ತಿದ್ದೀಯಾ ಎಂದು ಕಾವ್ಯ ಶೈವ ಅವರು ಪ್ರಶ್ನೆ ಮಾಡಿದ್ದಾರೆ. ಆಗ ಸಹೋದರ ಕಾರ್ತಿಕ್ ಅವರು “ಹ್ಞುಂ” ಎಂದು ಹೇಳಿದ್ದಾರೆ. “ಎಲ್ಲ ಚೆನ್ನಾಗಿ ಹೋಗ್ತಿದೆ, ತಲೆ ಕೆಡಿಸಿಕೊಳ್ಳಬೇಡ” ಎಂದು ಹೇಳಿದ್ದಾರೆ.
ಗಿಲ್ಲಿ ಇಲ್ಲದಿದ್ದರೆ ಕಾವ್ಯ ಇಲ್ಲ?
ಗಿಲ್ಲಿಯಿಂದ ಕಾವ್ಯ, ಗಿಲ್ಲಿ ಇಲ್ಲದಿದ್ದರೆ ಕಾವ್ಯ ಇಲ್ಲ ಅಂತಾರೆ. ನೀನು ಗಿಲ್ಲಿಯನ್ನು ನಾಮಿನೇಟ್ ಮಾಡ್ತೀಯಾ ಎಂದು ಕಾರ್ತಿಕ್ ಹೇಳುತ್ತಾರೆ. “ನಿನಗೆ ಆಗದವರು ಈ ರೀತಿ ಮಾತಾಡ್ತಾರೆ” ಎಂದು ತಾಯಿ ಸಾವಿತ್ರಿ ಹೇಳುತ್ತಾರೆ. ಅದೇ ಸಮಯಕ್ಕೆ ಬಿಗ್ ಬಾಸ್, “ಈ ಮನೆಯ ಮೂಲ ನಿಯಮದ ಉಲ್ಲಂಘನೆ ಆಗಿದೆ, ಕಾವ್ಯ ಮನೆಯವರು ಹೊರಗಡೆ ಬರಬೇಕು” ಎಂದು ಹೇಳುತ್ತಾರೆ.
ಮೂಲ ನಿಯಮ ಏನು?
ಪೇರೆಂಟ್ಸ್ ಮೀಟಿಂಗ್‌ನಲ್ಲಿ ಕುಟುಂಬಸ್ಥರ ಆರೋಗ್ಯ, ಕುಶಲದ ಬಗ್ಗೆ ಚರ್ಚೆ ಆಗುವುದು. ಆಟದ ಬಗ್ಗೆ ಏನೂ ಹೇಳೋ ಹಾಗಿಲ್ಲ, ಹೊರಗಡೆ ಸಿಗುವ ಪ್ರತಿಕ್ರಿಯೆ ಅಥವಾ ಹೊರಗಡೆ ನಡೆದ ವಿಚಾರ ಕೂಡ ಸ್ಪರ್ಧಿಗಳಿಗೆ ಗೊತ್ತಾಗಬಾರದು. ಆದರೆ ಇಲ್ಲಿ ಆಗಿದ್ದೇ ಬೇರೆ.
ಕಾವ್ಯ ಮನೆಯವರಿಂದ ಏನಾಗಿದೆ?
ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಆಟದಲ್ಲಿ ಏನು ಮೈನಸ್ ಆಗಿದೆ? ಏನು ಮಾಡಬೇಕು? ಜನರಿಗೆ ಯಾವ ವಿಷಯ ಇಷ್ಟ ಆಗಿದೆ? ಎಂಬ ವಿಷಯಗಳು ಸ್ಪರ್ಧಿಯಾದವರಿಗೆ ಗೊತ್ತಾಗಲೇಬಾರದು. ಆದರೆ ಇಲ್ಲಿ ಟ್ರೋಫಿ ತಗೊಳ್ಳಲು ಅಥವಾ ಮಾರ್ಕೇಟಿಂಗ್ ಮಾಡಲು ಬೇಕಾದ ಎಲ್ಲ ವಿಷಯಗಳು ಚರ್ಚೆ ಆದಂತಿದೆ. ಸದ್ಯ ಪ್ರೋಮೋ ರಿಲೀಸ್ ಆಗಿದ್ದು, ಇನ್ನು ಏನೇನು ಮಾತನಾಡಿದ್ದಾರೆ ಎಂಬುದು ಸಂಚಿಕೆಯಲ್ಲಿ ಗೊತ್ತಾಗುವುದು.
ಟ್ರೋಲ್ ಆಗ್ತಿರೋ ಕಾವ್ಯ ಶೈವ ತಮ್ಮ
ಕಾರ್ತಿಕ್ ಅವರನ್ನು ಅನೇಕರು ಟ್ರೋಲ್ ಮಾಡುತ್ತಿದ್ದಾರೆ. ತಮ್ಮನಾಗಿ ಅಕ್ಕನಿಗೆ ತಿಳಿ ಹೇಳೋದು, ಹೀಗೆ ಆಟ ಆಡೋದು ಸರಿ ಎಂದು ಹೇಳೋದು ತಪ್ಪೇ ಎಂದು ಕೂಡ ಪ್ರಶ್ನೆ ಮಾಡುತ್ತಿದ್ದಾರೆ. ಗಿಲ್ಲಿ ನಟ ತನ್ನನ್ನು ರೇಗಿಸೋದು ಹೊರಗಡೆ ಸಮಸ್ಯೆ ಆಗತ್ತೆ, ಟ್ಯಾಗ್‌ಲೈನ್ ಆಗತ್ತೆ ಎನ್ನೋ ಭಯಕ್ಕೆ ಕಾವ್ಯ ಅವರು ಸಾಕಷ್ಟು ಬಾರಿ ಗಿಲ್ಲಿ ಮಾತನ್ನು ವಿರೋಧ ಮಾಡಿದ್ದುಂಟು. ಆದರೆ ಕಾರ್ತಿಕ್ ಅವರು ಕಾವ್ಯಾಗೆ ಗಿಲ್ಲಿ ಜೊತೆಗೆ ಇರು ಎಂದು ಹೇಳಿದಂತಿದೆ. ನಿನ್ನ ಆಟವನ್ನು ನೀನು ಆಡೋ ಎನ್ನೋ ಬದಲು ಗಿಲ್ಲಿ ಜೊತೆಗೆ ಇರು ಎಂದು ಹೇಳದಂತಿದೆ ಎಂದು ಸದ್ಯ ಟ್ರೋಲ್ ಆಗ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

