- Home
- Entertainment
- TV Talk
- BBK 12: ರಾಶಿಕಾ ಶೆಟ್ಟಿಯನ್ನು ಮಗಳಾಗಿ ಪಡೆಯೋಕೆ ಎಷ್ಟು ಜನ್ಮದ ಪುಣ್ಯ ಮಾಡಿದ್ದೆವೋ; ಆ ಸೀಕ್ರೆಟ್ ಬಿಚ್ಚಿಟ್ಟ ತಾಯಿ
BBK 12: ರಾಶಿಕಾ ಶೆಟ್ಟಿಯನ್ನು ಮಗಳಾಗಿ ಪಡೆಯೋಕೆ ಎಷ್ಟು ಜನ್ಮದ ಪುಣ್ಯ ಮಾಡಿದ್ದೆವೋ; ಆ ಸೀಕ್ರೆಟ್ ಬಿಚ್ಚಿಟ್ಟ ತಾಯಿ
Bigg Boss Kannada Season 12 Rashika Shetty: ಬಿಗ್ ಬಾಸ್ ಮನೆಯಲ್ಲಿ ಈ ವಾರ ಪೇರೆಂಟ್ಸ್ ವೀಕ್ ಇದೆ. ಕಳೆದ ಎರಡು ವಾರಗಳಿಂದಲೂ ರಾಶಿಕಾ ಶೆಟ್ಟಿ ಅವರು ಮನೆಯವರು ಬರುತ್ತಾರೆ ಎಂದು ಕಾಯುತ್ತಲಿದ್ದರು. ಇದನ್ನು ಅವರು ಬಾಯಿ ಬಿಟ್ಟು ಕೂಡ ಹೇಳಿದ್ದರು. ಈಗ ತಾಯಿ, ತಮ್ಮ ಬಂದಿದ್ದಾರೆ.

ತಾಯಿ ನೋಡಿ ಸೂರಜ್ ಕಣ್ಣೀರು
ಇನ್ನು ಸೂರಜ್ ಅವರ ತಾಯಿ ಕೂಡ ದೊಡ್ಮನೆಗೆ ಬಂದಿದ್ದಾರೆ. ಸೂರಜ್ ಅವರ ತಾಯಿಯು ಮಗನಿಗೆ ಪತ್ರ ಬರೆದಿದ್ದರು. “ನೀನು ಇಲ್ಲದೆ ಮನೆಯಲ್ಲಿ ಅಡುಗೆ ಮಾಡೋಕೆ ಮನಸ್ಸು ಬರುತ್ತಿಲ್ಲ. ನನಗೆ ಏನಾದರೂ ಅಡುಗೆ ಮಾಡಿಕೊಡು” ಎಂದು ಪತ್ರದಲ್ಲಿತ್ತು. ತಾಯಿಗೋಸ್ಕರ ಸೂರಜ್ ಅಡುಗೆ ಮಾಡಿಕೊಂಡು, ಕನ್ಫೆಶನ್ ರೂಮ್‌ನಲ್ಲಿ ಇಡೋಕೆ ಬಂದಾಗ ಅಲ್ಲಿ ಅವರ ತಾಯಿ ಇದ್ದರು. ತಾಯಿ ನೋಡಿ ಸೂರಜ್ ಕಣ್ಣೀರು ಹಾಕಿದ್ದಾರೆ.
ರಾಶಿಕಾ ಶೆಟ್ಟಿ ತಮ್ಮ, ತಾಯಿ ಆಗಮನ
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ತಾಯಿ-ತಮ್ಮನನ್ನು ನೋಡಿ ರಾಶಿಕಾ ಶೆಟ್ಟಿಯಂತೂ ಫುಲ್ ಖುಷಿಯಾಗಿದ್ದಾರೆ. ರಾಶಿಕಾ ಶೆಟ್ಟಿ ತಮ್ಮ ಹೆಲ್ಮೆಟ್ ಹಾಕಿಕೊಂಡು ಬಿಗ್ ಬಾಸ್ ಮನೆ ತುಂಬ ಓಡಾಡಿದ್ದಾರೆ. ಹೆಲ್ಮೆಟ್ ತೆಗೆದ ಬಳಿಕ ರಾಶಿಕಾ ಶೆಟ್ಟಿ ತಮ್ಮ ನಿತಿನ್ ಎನ್ನೋದು ಗೊತ್ತಾಗಿದೆ ಎಂದಿದ್ದಾರೆ ರಾಶಿಕಾ ಶೆಟ್ಟಿ.
10-15 ಬಾರಿ ಮನೆಗೆ ಫೋನ್
ಅಪ್ಪ-ಅಮ್ಮ ಅಂದರೆ ತುಂಬ ಇಷ್ಟ. ಎಲ್ಲ ತಂದೆ-ತಾಯಿಯಂದಿರು ಮಕ್ಕಳನ್ನು ನೋಡಿಕೊಳ್ತಾರೆ. ಮಕ್ಕಳು ಅಪ್ಪ-ಅಮ್ಮನನ್ನು ನೋಡಿಕೊಳ್ಳೋದು ವಿರಳ. ಶೂಟಿಂಗ್ ಇರಲೀ, ಏನೇ ಕೆಲಸ ಇರಲಿ ಮನೆಗೆ 10-15 ಬಾರಿ ಮನೆಗೆ ಫೋನ್ ಮಾಡಿ, ಊಟ ಮಾಡಿದ್ರಾ? ತಿಂದ್ರಾ? ಆರಾಮಾಗಿದ್ದೀರಾ ಅಂತ ಫೋನ್ ಮಾಡ್ತಾಳೆ ಎಂದಿದ್ದಾರೆ ರಾಶಿಕಾ ಶೆಟ್ಟಿ.
ಎಷ್ಟು ಜನ್ಮದ ಪುಣ್ಯ ಮಾಡಿದ್ದೇವೋ ಏನೋ!
ನಾನು ಫೋನ್‌ನಲ್ಲಿ ಹೆಲೋ ಎಂದಾಗ ಸ್ವಲ್ಪ ಧ್ವನಿ ಆಚೀಚೆ ಆದರೆ ಆರಾಮಾಗಿದ್ದೀರಾ? ಏನಾದರೂ ಸಮಸ್ಯೆ ಇದೆಯಾ? ಗುಡ್‌ನ್ಯೂಸ್ ಇದೆಯಾ ಎಂದು ಕೇಳ್ತಾಳೆ. ನಾವು ಮೂವರು ಇವಳನ್ನು ಪಡೆಯೋಕೆ ಪುಣ್ಯ ಮಾಡಿದ್ದೇವೆ, ಇಂಥ ಮಗಳನ್ನು ಪಡೆಯೋಕೆ ಎಷ್ಟು ಜನ್ಮದ ಪುಣ್ಯ ಮಾಡಿದ್ದೇವೋ ಏನೋ! ನಮ್ಮ ಮನೆಯಲ್ಲಿ ಗಂಡು ಮಗು ಇವಳು ಎಂದು ರಾಶಿಕಾ ಶೆಟ್ಟಿ ತಾಯಿ ಹೇಳಿದ್ದಾರೆ.
ರಾಶಿಕಾ ಶೆಟ್ಟಿಗೆ ಮೈನಸ್ ಆಗಿದ್ದೇನು?
ರಾಶಿಕಾ ಶೆಟ್ಟಿ ಅವರು ಕನ್ನಡದ ಕೆಲ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಫಿಸಿಕಲ್ ಟಾಸ್ಕ್‌ನಲ್ಲಿ ಅವರು ಚೆನ್ನಾಗಿ ಆಡಿದ್ದರು. ಇನ್ನು ಸೂರಜ್ ಶೆಟ್ಟಿ ಜೊತೆಗಿನ ಸ್ನೇಹದಿಂದ ಚರ್ಚೆಯಾಗಿದ್ದರು. ಸೂರಜ್ ಹಾಗೂ ರಾಶಿಕಾ ಅವರ ಜೋನ್‌ನಲ್ಲೇ ಇರೋದು, ಹೊರಗಡೆ ಎಲ್ಲರ ಜೊತೆ ಮಾತನಾಡದೆ ಇರೋದನ್ನು ಇಟ್ಟುಕೊಂಡು ಸಾಕಷ್ಟು ಬಾರಿ ಇವರನ್ನು ನಾಮಿನೇಟ್ ಮಾಡಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

