- Home
- Entertainment
- TV Talk
- BBK 12: ಅಜ್ಜಿ ಸಾವಿನಲ್ಲೂ ಗಟ್ಟಿಯಾಗಿ ನಿಂತಿದ್ದ ಗಿಲ್ಲಿ ನಟನಿಗೆ ಕಣ್ಣೀರು ಹಾಕಿಸಿದ Rakshita Shetty!
BBK 12: ಅಜ್ಜಿ ಸಾವಿನಲ್ಲೂ ಗಟ್ಟಿಯಾಗಿ ನಿಂತಿದ್ದ ಗಿಲ್ಲಿ ನಟನಿಗೆ ಕಣ್ಣೀರು ಹಾಕಿಸಿದ Rakshita Shetty!
Bigg Boss Kannada Season 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆ. ಆ ವೇಳೆ ಅಶ್ವಿನಿ ಗೌಡ ಅವರು ಕೂಡ ಕಣ್ಣೀರು ಹಾಕಿದ್ದಾರೆ. ಆ ವೇಳೆ ಇನ್ನುಳಿದ ಇಬ್ಬರು ಆರಾಮಾಗಿರೋದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಚೈತ್ರಾ ಕುಂದಾಪುರ ನಂಬಿಕೆ ಏನು?
ಈ ಹಿಂದೆ ಎಲಿಮಿನೇಟ್ ಆದವರು ಕಾರ್‌ನಲ್ಲಿ ಮರಳಿ ಬಂದಿದ್ದುಂಟು. ಈ ಬಾರಿ ರಕ್ಷಿತಾ ಶೆಟ್ಟಿ ಮತ್ತೆ ಬರುತ್ತಾರೆ ಎಂಬ ನಂಬಿಕೆಯಿದೆ. ಈ ಮನೆಯಲ್ಲಿ ಯುನಿಕ್ ಕ್ಯಾರೆಕ್ಟರ್ ರಕ್ಷಿತಾ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ. ಯಾವಾಗಲೂ ಎಲಿಮಿನೇಟ್ ಆಗಿರೋರನ್ನು ಸುದೀಪ್ ಅವರು ಇಷ್ಟು ಕಮ್ಮಿ ಮಾತನಾಡಿಸೋದಿಲ್ಲ, ಏನೋ ಇದೆ ಎಂದು ಸೂರಜ್ ಹೇಳಿದ್ದಾರೆ.
ಇದು ನಮಗೆ ಎಫೆಕ್ಟ್ ಆಗುತ್ತದೆ
ಧನುಷ್ ಗೌಡ, ಗಿಲ್ಲಿ ನಟ, ರಘು ಅವರು ಕೂಡ ಬೇಸರ ಮಾಡಿಕೊಂಡಿದ್ದಾರೆ.
ನಮ್ಮ ಮೂವರು ಜನರ ಜೊತೆ ಕ್ಲೋಸ್ ಇದ್ದಳು. ನಮಗೆ ಎಫೆಕ್ಟ್ ಆಗುತ್ತದೆ. ನಮಗೆ ಅಂಥ ಇರೋ ಜೀವ ಇದು, ಬಂದು ಬಂದು ಮಾತನಾಡಿಸೋ ಜೀವ ಅದು ಎಂದು ರಘು ಹೇಳಿದ್ದಾರೆ.
ನಾನು ರಕ್ಷಿತಾಳನ್ನು ತುಂಬ ಹಚ್ಕೊಂಡಿದ್ದೆ ಎಂದು ರಜತ್ ಹೇಳಿದ್ದಾರೆ.
ಒಂದು ವಾರ ಬೇಕು ನನಗೆ ಸರಿ ಆಗೋಕೆ
ಕುಣಿದುಕೊಂಡು ಕುಣಿದುಕೊಂಡು ಬಂದು ಮಾತನಾಡುಸುತ್ತಿದ್ದಳು. ಡಬಲ್ ಎಲಿಮಿನೇಶನ್ ಎಂದಾಗಲೇ ನನಗೆ ತಲೆ ಕೆಟ್ಟೋಯ್ತು, ಇದು ನಿರೀಕ್ಷೆ ಮಾಡೋಕೆ ಆಗಿರಲಿಲ್ಲ. ನಾನು ಅಳೋದೇ ಇಲ್ಲ, ಆದರೆ ಇವತ್ತು ಬೇಸರ ಆಗೋಯ್ತು. ಇನ್ನು ಒಂದು ವಾರ ಬೇಕು ನನಗೆ ಸರಿ ಆಗೋಕೆ ಎಂದು ಗಿಲ್ಲಿ ನಟ ಹೇಳಿದ್ದಾರೆ.
ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿ ನಡುವೆ ಒಳ್ಳೆಯ ಸ್ನೇಹ ಸಂಬಂಧ ಇದೆ. ಇವರಿಬ್ಬರು ತಮಾಷೆಗೆ ಕಿತ್ತಾಡಿಕೊಂಡಿದ್ದೂ ಇದೆ.
ಅಜ್ಜಿಯ ಸಾವಿನಲ್ಲಿ ಗಿಲ್ಲಿ ನಗುತ್ತಿದ್ದರು ಎಂದು ಅಶ್ವಿನಿ, ಜಾಹ್ನವಿ ಒಮ್ಮೆ ಮಾತನಾಡಿಕೊಂಡಿದ್ದರು.
ಸ್ಪಂದನಾಗೆ ಖುಷಿಯೋ ಖುಷಿ
ಅಂದಹಾಗೆ ಸ್ಪಂದನಾ ಸೋಮಣ್ಣ ಅವರು ತಾನು ಬಚಾವ್ ಆದೆ ಎಂದು ಖುಷಿಯಾಗಿದ್ದರು. ಇನ್ನು ಕಾವ್ಯ ಶೈವ ಅವರು ನನಗೆ ಡಬಲ್ ಎಲಿಮಿನೇಶನ್ ಸರ್ಪ್ರೈಸ್ ಅನಿಸಿತು, ಆದರೆ ಧ್ರುವಂತ್ ಔಟ್ ಆಗಿರೋದು ಸರ್ಪ್ರೈಸ್ ಎನಿಸಲಿಲ್ಲ ಎಂದಿದ್ದಾರೆ.
ಅಳೋದಿಲ್ಲ ಎಂದ ಕಾವ್ಯ
ಕಾವ್ಯ ಶೈವ ಹಾಗೂ ರಕ್ಷಿತಾ ಶೆಟ್ಟಿ ನಡುವೆ ಸಾಕಷ್ಟು ಜಗಳ ಆಗಿದೆ. ನಾಮಿನೇಶನ್ ವಿಷಯ ಬಂದಾಗಲೋ, ಇನ್ಯಾವುದೋ ವಿಷಯ ಬಂದಾಗ ಕಾವ್ಯ ಅವರು ರಕ್ಷಿತಾ ವಿರುದ್ಧ ಮಾತನಾಡಿದ್ದರು. ಅದರಂತೆ ರಕ್ಷಿತಾ ಅವರು ಕಾವ್ಯ ವಿರುದ್ಧ ಮಾತನಾಡಿದ್ದರು. ಈಗ ನಾನು ಅಳೋದಿಲ್ಲ ಎಂದು ಕಾವ್ಯ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

