- Home
- Entertainment
- TV Talk
- ಇಷ್ಟು ದಿನ ಸಂಧ್ಯಾ ಎಲ್ಲಿದ್ಲು, ಭಾರ್ಗವಿ ಬಳಿ ಯಾಕೆ ಬರ್ಲಿಲ್ಲ? ಅರ್ಜುನ್ ಪ್ರಶ್ನೆಗೆ ಸಂಧ್ಯಾ ಹತ್ತಿರ ಉತ್ತರ ಇಲ್ಲ
ಇಷ್ಟು ದಿನ ಸಂಧ್ಯಾ ಎಲ್ಲಿದ್ಲು, ಭಾರ್ಗವಿ ಬಳಿ ಯಾಕೆ ಬರ್ಲಿಲ್ಲ? ಅರ್ಜುನ್ ಪ್ರಶ್ನೆಗೆ ಸಂಧ್ಯಾ ಹತ್ತಿರ ಉತ್ತರ ಇಲ್ಲ
Bhargavi LLB Serial : ಭಾರ್ಗವಿ ಎಲ್ ಎಲ್ ಬಿಯಲ್ಲಿ ಸಂಧ್ಯಾ ಎಂಟ್ರಿ ಈಗ ಕುತೂಹಲ ಮೂಡಿಸಿದೆ. ಹಣ ತೆಗೆದುಕೊಂಡು ಸಂಧ್ಯಾ ಆಗಿ ಬಂದಿರುವ ಹುಡುಗಿಗೆ ಅರ್ಜುನ್ ಪ್ರಶ್ನೆ ಎದುರಿಸೋದು ಕಷ್ಟವಾಗ್ತಿದೆ.

ಸೀರಿಯಲ್ ಗೆ ಬಿಗ್ ಟ್ವಿಸ್ಟ್
ಕಲರ್ಸ್ ಕನ್ನಡ (Colors Kannada)ದಲ್ಲಿ ಪ್ರಸಾರ ಆಗ್ತಿರುವ ಭಾರ್ಗವಿ ಎಲ್ ಎಲ್ ಬಿ (Bhargavi LL.B) ಸೀರಿಯಲ್ ನಲ್ಲಿ ಭಾರ್ಗವಿಗೆ ಶಾಕ್ ಆಗಿದೆ. ಎಲ್ಲ ಸರಿ ಹೋಯ್ತು, ಇನ್ನೇನು ವಿಕ್ಕಿ ಅಮ್ಮ ಜೈಲು ಸೇರ್ತಾರೆ ಎನ್ನುವಾಗ ಸಂಧ್ಯಾ ಪ್ರತ್ಯಕ್ಷಳಾಗಿದ್ದಾಳೆ. ಏಕಾಏಕಿ ಕೋರ್ಟ್ ಗೆ ಬಂದು ಭಾರ್ಗವಿ ವಿರುದ್ಧವೇ ಹೇಳಿಕೆ ನೀಡಿದ್ದಾಳೆ.
ಜೈಲು ಸೇರಿದ ಭಾರ್ಗವಿ
ವಿಕ್ಕಿ ವಿರುದ್ಧ ಹೋರಾಟ ಶುರು ಮಾಡಿ ಸಂಧ್ಯಾಳನ್ನು ಕಳೆದುಕೊಂಡಿದ್ದ ಭಾರ್ಗವಿ ಸೋತ್ರೂ ತನ್ನ ಹೋರಾಟ ಬಿಟ್ಟಿರಲಿಲ್ಲ. ಜೆಪಿ ಪಾಟೀಲ್ ಹಾಗೂ ಶಕ್ತಿ ಪ್ರಸಾದ್ ವಿರುದ್ಧ ತಿರುಗಿ ನಿಂತಿದ್ದ ಭಾರ್ಗವಿಗೆ ಪತಿ ಅರ್ಜುನ್ ಕೂಡ ಸಹಾಯ ಮಾಡಿದ್ದ. ವಿಕ್ಕಿ ಸಂಧ್ಯಾ ಕೊಲೆ ಮಾಡಿಲ್ಲ ಆದ್ರೆ ವಿಕ್ಕಿ ತಾಯಿ ಕೊಲೆ ಮಾಡಿಸಿದ್ದಾಳೆ ಎಂಬುದಕ್ಕೆ ಭಾರ್ಗವಿ ಬಳಿ ಸಾಕಷ್ಟು ಸಾಕ್ಷ್ಯ ಕೂಡ ಸಿಕ್ಕಿತ್ತು. ಆದ್ರೆ ಕೋರ್ಟ್ ನಲ್ಲಿ ಎಲ್ಲ ತಲೆಕೆಳಗಾಯ್ತು. ಭಾರ್ಗವಿ ಅಂದ್ಕೊಂಡಂತೆ ವಿಕ್ಕಿ ಅಮ್ಮ ಜೈಲಿಗೆ ಹೋಗ್ಲಿಲ್ಲ. ಅದ್ರ ಬದಲು ಭಾರ್ಗವಿ ಜೈಲು ಸೇರಿದ್ದಾಳೆ. ಪತ್ನಿ ಗೆದ್ದೇ ಗೆಲ್ತಾಳೆ ಎನ್ನುವ ನಂಬಿಕೆಯಲ್ಲಿದ್ದ ಅರ್ಜುನ್ ಗೂ ಆಘಾತವಾಗಿದೆ. ಈ ಸಂಧ್ಯಾ ತನಿಖೆ ಶುರು ಮಾಡಿದ್ದಾನೆ. ಭಾರ್ಗವಿ ಜೊತೆ ಸದಾ ನಾನಿರ್ತೇನೆ ಅಂತ ಪ್ರಮಾಣ ಮಾಡಿದ್ದಾನೆ ಅರ್ಜುನ್.
ಅರ್ಜುನ್ ಪ್ರಶ್ನೆಗೆ ಉತ್ತರ ನೀಡ್ತಾಳಾ ಸಂಧ್ಯಾ?
ಇಂದು ಪ್ರಸಾರ ಆಗಲಿರುವ ಎಪಿಸೋಡ್ ನಲ್ಲಿ ಅರ್ಜುನ್, ಸಂಧ್ಯಾಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದಾನೆ. ಆದ್ರೆ ಸಂಧ್ಯಾ ಯಾವುದಕ್ಕೂ ಸರಿಯಾಗಿ ಉತ್ತರ ನೀಡ್ತಿಲ್ಲ. ಇಷ್ಟು ದಿನ ಎಲ್ಲಿದ್ದೆ ಎನ್ನುವ ಪ್ರಶ್ನೆಗೆ ಕೋಮಾದಲ್ಲಿ ಎಂದ ಸಂಧ್ಯಾಗೆ, ಎಚ್ಚರವಾದ್ಮೇಲೆ ಭಾರ್ಗವಿ ಅಥವಾ ನನ್ನನ್ನು ಸಂಪರ್ಕಿಸೋ ಬದಲು ಅವರಿಗೆ ಯಾಕೆ ಬೆಂಬಲ ನೀಡಿದ್ದೀಯಾ, ವಿಕ್ಕಿ ರಕ್ಷಣೆ ಮಾಡಿದ್ದು ಏಕೆ ಅಂತ ಅರ್ಜುನ್ ಕೇಳಿದ್ದಾನೆ. ಆದ್ರೆ ಇದ್ಯಾವುದಕ್ಕೂ ಸಂಧ್ಯಾ ಬಳಿ ಉತ್ತರ ಇಲ್ಲ.
ಸಂಧ್ಯಾ ಆಗಿ ಬಂದವಳು ಯಾರು?
ವಾಸ್ತವವಾಗಿ ಈಗ ಬಂದಿದ್ದು ಸಂಧ್ಯಾ ಅಲ್ವೇ ಅಲ್ಲ. ಈ ಸತ್ಯ ಭಾರ್ಗವಿ ಹಾಗೂ ಅರ್ಜುನ್ ಗೆ ತಿಳಿದಿಲ್ಲ. ಅಕ್ಕ ಬೃಂದಾ ಮೋಸದಾಟದಿಂದ ಇದೆಲ್ಲ ನಡೆದಿದೆ. ಜೆಪಿ ಪಾಟೀಲ್ ಕೋರ್ಟ್ ನಲ್ಲಿ ಗೆದ್ದು ಬೀಗುವಂತಾಗಿದೆ. ಕೇಸ್ ಮುಗಿಯುವ ಹಂತದಲ್ಲಿದ್ದಾಗ, ಜೆಪಿ ಮುಖದಲ್ಲಿ ಬೆವರು ಬರ್ತಿರುವಾಗ ಅವನ ರಕ್ಷಣೆಗೆ ಬಂದಿದ್ದು ಬೃಂದಾ. ಬೃಂದಾಗೆ ಸಂಧ್ಯಾ ಹೋಲುವ ಹುಡುಗಿ ಸಿಕ್ಕಿದ್ದಾಳೆ. ಅವಳಿಗೆ ಹಣ ನೀಡಿ, ಸಂಧ್ಯಾಳಂತೆ ವರ್ತಿಸಲು ಟ್ರೈನಿಂಗ್ ನೀಡಿ, ಬೃಂದಾ ಕೋರ್ಟಿಗೆ ಕರೆ ತಂದಿದ್ದಾಳೆ.
ಭಾರ್ಗವಿ ಮುಂದಿನ ನಡೆ ಏನು?
ನಿರ್ದೇಶಕರು, ಅವಳು ಸಂಧ್ಯಾ ಅಲ್ಲ ಎನ್ನುವ ಸತ್ಯವನ್ನು ವಿಕ್ಷಕರಿಗೆ ತಿಳಿಸಿದ್ದಾರೆ. ಆದ್ರೆ ಭಾರ್ಗವಿಗೆ ಗೊತ್ತಿಲ್ಲ. ಕಣ್ಣಾರೆ ಸಂಧ್ಯಾ ಶವ ನೋಡಿರುವ, ಕೊಲೆಗೆ ಎಲ್ಲ ಸಾಕ್ಷ್ಯಗಳು ಸಿಕ್ಕಿರುವ ಸಮಯದಲ್ಲಿ ಸಂಧ್ಯಾ ರೀ ಎಂಟ್ರಿ ಭಾರ್ಗವಿಗೆ ತಡೆಯಲಾಗ್ತಿಲ್ಲ. ಸಂಧ್ಯಾ ಬದುಕಿದ್ದಾಳೆ ಅಂತ ಖುಷಿಪಡೋದಾ ಇಲ್ಲ ವಿಕ್ಕಿ ಪರ ಮಾತನಾಡ್ತಿದ್ದಾಳೆ, ಇಷ್ಟೊಂದು ಬದಲಾವಣೆ ಆಗಿದ್ದು ಹೇಗೆ ಎಂಬ ಬಗ್ಗೆ ಅನುಮಾನಪಡೋದಾ ಎನ್ನುವ ಗೊಂದಲ ಕೂಡ ಆಕೆಗಿದೆ. ಸಂಧ್ಯಾ ಇಷ್ಟು ದಿನ ಎಲ್ಲಿದ್ಲು, ಬಂದಿದ್ದು ಸಂಧ್ಯಾನಾ ಎಂಬೆಲ್ಲ ಪ್ರಶ್ನೆಗೆ ಭಾರ್ಗವಿ ಹೇಗೆ ಉತ್ತರ ಕಂಡುಕೊಳ್ತಾಳೆ, ಜೆಪಿ ವಿರುದ್ಧ ಯಾವೆಲ್ಲ ಅಸ್ತ್ರ ಬಳಸ್ತಾಳೆ ಕಾದು ನೋಡ್ಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

