- Home
- Entertainment
- TV Talk
- BBK 12: ಫಿನಾಲೆಗೆ 2 ದಿನ ಇರುವಾಗಲೇ, ಗುಡ್‌ನ್ಯೂಸ್ ಕೊಟ್ಟ ಗಿಲ್ಲಿ ನಟ; ವೀಕ್ಷಕರು ಫುಲ್ ಖುಷ್!
BBK 12: ಫಿನಾಲೆಗೆ 2 ದಿನ ಇರುವಾಗಲೇ, ಗುಡ್‌ನ್ಯೂಸ್ ಕೊಟ್ಟ ಗಿಲ್ಲಿ ನಟ; ವೀಕ್ಷಕರು ಫುಲ್ ಖುಷ್!
Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಫಿನಾಲೆಗೆ ದಿನಗಣನೆ ಶುರುವಾಗಿದೆ. ಹೀಗಿರುವಾಗ ಗಿಲ್ಲಿ ನಟ ಅವರು ಗುಡ್‌ನ್ಯೂಸ್ ನೀಡಿದ್ದಾರೆ.

ಗಿಚ್ಚಿ ಗಿಲಿಗಿಲಿಗೂ ಬಿಗ್ ಬಾಸ್‌ಗೂ ಸಂಬಂಧ
ಗಿಚ್ಚಿ ಗಿಲಿಗಿಲಿ ಖ್ಯಾತಿಯ ಕಲಾವಿದರು ದೊಡ್ಮನೆಗೆ ಬಂದಿದ್ದರು. ಪ್ರತಿ ಬಾರಿ ಬಿಗ್ ಬಾಸ್ ಶೋನಲ್ಲಿ ಒಂದಲ್ಲ ಒಂದು ಗಿಚ್ಚಿ ಗಿಲಿಗಿಲಿ ಶೋ ಕಲಾವಿದರಿಂದ ಏನಾದರೊಂದು ಪ್ರದರ್ಶನ ಇರುತ್ತದೆ.
ಕುಣಿದು ಕುಪ್ಪಳಿಸಿದ ಸ್ಪರ್ಧಿಗಳು
ಗಿಚ್ಚಿ ಗಿಲಿಗಿಲಿ ಕಲಾವಿದರು ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಇವರನ್ನು ನೋಡಿ ಮನೆಯಲ್ಲಿದ್ದವರು ಕೂಡ ಖುಷಿಪಟ್ಟಿದ್ದಾರೆ.
ಗಿಚ್ಚಿ ಗಿಲಿಗಿಲಿ ಜ್ಯೂನಿಯರ್ಸ್
ಅಂದಹಾಗೆ ಗಿಚ್ಚಿಗಿಲಿ ಶೋ ಪ್ರಸಾರ ಆಗಲಿದೆ. ಅಂದಹಾಗೆ ಈ ಬಾರಿ ಗಿಚ್ಚಿ ಗಿಲಿಗಿಲಿ ಜ್ಯೂನಿಯರ್ಸ್ ಬರುತ್ತಿದೆ ಎಂದು ನಟಿ ಮಾನಸಾ ಅವರು ಹೇಳಿದ್ದಾರೆ.
ಬಿಗ್ ಬಾಸ್ ಸೂಪರ್ ಡೂಪರ್ ಹಿಟ್
ಬಿಗ್ ಬಾಸ್ ಸೂಪರ್ ಡೂಪರ್ ಹಿಟ್ ಆಗಿದೆ, ಅದೇ ಜಾಗಕ್ಕೆ ಗಿಚ್ಚಿ ಗಿಲಿಗಿಲಿ ಜ್ಯೂನಿಯರ್ಸ್ ಬರಲಿದೆ ಎಂದು ಹೇಳಲಾಗಿದೆ. ಆ ಮಕ್ಕಳು ನಿನ್ನ ಥರ ಇರ್ತಾರೆ ಎಂದು ಮಾನಸಾ ಅವರು ಗಿಲ್ಲಿಗೆ ಹೇಳಿದ್ದಾರೆ. ಆಗ ಗಿಲ್ಲಿ ನಟ ಅವರು “ನಾನು ಮಗು ಆಗಿ ಬರ್ತೀನಿ” ಎಂದಿದ್ದಾರೆ.
ಒಂದು ವರ್ಷಗಳ ಕಾಲ ಒಪ್ಪಂದ
ಬಿಗ್ ಬಾಸ್ ಸ್ಪರ್ಧಿಗಳ ಜೊತೆ ಒಂದು ವರ್ಷಗಳ ಕಾಲ ಒಪ್ಪಂದ ಇರುವುದು. ಈ ಒಪ್ಪಂದದ ಪ್ರಕಾರ ಸ್ಪರ್ಧಿಗಳು ಕಲರ್ಸ್ ಬಿಟ್ಟು, ಬೇರೆ ವಾಹಿನಿಯಲ್ಲಿ ಕಾಣಿಸಿಕೊಳ್ಳೋ ಹಾಗಿಲ್ಲ. ಅದರಂತೆ ಗಿಲ್ಲಿ ಕೂಡ ಕಲರ್ಸ್ ವಾಹಿನಿಯಲ್ಲಿ ರಿಯಾಲಿಟಿ ಶೋ ಅಥವಾ ಸಿನಿಮಾ ಮಾಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

