BBK 12: ಕೊನೆಗೂ ಅಶ್ವಿನಿ ಗೌಡ ನಡೆದು ಬಂದ ಹಾದಿ ಹಿಡಿದ ಗಿಲ್ಲಿ ನಟ; ಎಲ್ಲರಿಗೂ ಶಾಕ್
Bigg Boss Kannada 12 Update: ಸಂಡೇ ವಿಥ್ ಸುದೀಪ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಹಾಗೂ ಗಿಲ್ಲಿ ನಟನ ಮಧ್ಯೆ ಭಾರೀ ಕಾಮಿಡಿ ಮಾತುಕತೆ ನಡೆದಿದೆ. ಈ ಹಿಂದೆಯೇ ವೀಕೆಂಡ್ ಎಪಿಸೋಡ್‌ನಲ್ಲಿ ಅಶ್ವಿನಿ ಹೇಗೆ ಮಾತನಾಡ್ತಾರೆ ಎಂದು ಗಿಲ್ಲಿ ನಟ ಹೇಳಿದ್ದರು. ಈಗ ಅವರು ಮತ್ತೆ ಮಿಮಿಕ್ರಿ ಮಾಡಿದ್ದರು.

ವೀಕೆಂಡ್‌ನಲ್ಲಿ ಅಣ್ಣಾ.. ಅಣ್ಣಾ..
ವೀಕ್ ಡೇಗಳಲ್ಲಿ ಎಲ್ಲರ ಜೊತೆ ಜಗಳ ಆಡಿ, ಗೌರವ, ಪ್ರತಿಷ್ಠೆ, ಪ್ರೌಢಿಮೆ, ಘನತೆ, ಅನುಭವ, ವಯಸ್ಸು ಎಂದು ಮಾತನಾಡುತ್ತ, ಜಗಳ ಆಡುವ ಅಶ್ವಿನಿ ಗೌಡ ಅವರು ವೀಕೆಂಡ್‌ನಲ್ಲಿ ಅಣ್ಣಾ ಅಣ್ಣಾ ಎಂದು ಸಮಾಧಾನದಿಂದ, ಸಾವಧಾನವಾಗಿ ಮಾತನಾಡುತ್ತಾರೆ.
ಅಶ್ವಿನಿ ಗೌಡ ಮಿಮಿಕ್ರಿ
ಅಶ್ವಿನಿ ಗೌಡ ಅವರು ವೀಕ್ ಡೇನಲ್ಲಿ, ವೀಕೆಂಡ್ ಎಪಿಸೋಡ್‌ನಲ್ಲಿ ಹೇಗೆ ಇರುತ್ತಾರೆ ಎಂದು ಮಿಮಿಕ್ರಿ ಮಾಡಿ ತೋರಿಸಿ ಎಂದು ಕಿಚ್ಚ ಸುದೀಪ್ ಅವರು ಗಿಲ್ಲಿ ನಟನಿಗೆ ಹೇಳಿದ್ದರು. ಅದನ್ನು ಅವರು ಮಾಡಿ ತೋರಿಸಿದ್ದು, ಅಶ್ವಿನಿ ಗೌಡ ಅವರೇ ನಕ್ಕಿದ್ದಾರೆ.
ಎಲ್ಲಿ ಎಡವಿದ್ದೀನಿ ಎಂದು ಗೊತ್ತಾಗ್ತಿಲ್ಲ
ಕಿಚ್ಚ ಸುದೀಪ್ ಅವರು ವೀಕೆಂಡ್ ಎಪಿಸೋಡ್ ಎಂದಾಗ “ಅಣ್ಣ, ನಾನು ಹೇಳೋದು ಏನೆಂದರೆ ಸುಸಂಸ್ಕೃತವಾಗಿ, ಸುಲಲಿತವಾಗಿ, ಸುಲೋಚನೆಯಿಂದ ಯೋಚನೆ ಮಾಡಿದಾಗ ನಾನು ಕರೆಕ್ಟ್ ಆಗಿ ಮಾತನಾಡಿದ್ದೀನಿ, ಎಲ್ಲಿ ಎಡವಿದ್ದೀನಿ ಎಂದು ಗೊತ್ತಾಗ್ತಿಲ್ಲ. ತಪ್ಪು ಸಹಜ, ತಪ್ಪು ತಿದ್ದಿಕೊಂಡು ಮುಂದೆ ಹೋಗೋದು ದೊಡ್ಡದು” ಎಂದು ಗಿಲ್ಲಿ ನಟ ಹೇಳಿದ್ದಾರೆ.
ರಘು ನೀ ಯಾವನೋ
ಕಿಚ್ಚ ಸುದೀಪ್ ಅವರು ವೀಕ್ ಡೇ ಎಂದಾಗ ಗಿಲ್ಲಿ ನಟ ಅವರು, “ರಘು ನೀ ಯಾವನೋ, ಲೇ ನೀ ಯಾವನೋ, ನೀ ನನಗಿಂತ ಮೇಲಾ? ಹೋಗೋಲೋ” ಎಂದು ಮಿಮಿಕ್ರಿ ಮಾಡಿದ್ದಾರೆ.
ಆ ಶೋನಲ್ಲಿರೋರು ಸೋತವರು.
ಬಿಗ್ ಬಾಸ್ ಶೋ ಮುಗಿದ ಬಳಿಕ ಅಶ್ವಿನಿ ಗೌಡ ಅವರು ಹೇಗೆ ಮಾತಾಡ್ತಾರೆ ಎಂದು ಕೂಡ ಗಿಲ್ಲಿ ನಟ ತೋರಿಸಿದ್ದಾರೆ. “ಆ ಶೋನಲ್ಲಿರೋರು ಸೋತವರು. ಆ ಶೋ ನನಗೆ ಅಲ್ಲ, ಆ ಶೋ ನನಗೆ ಫಿಟ್ ಅಲ್ಲ” ಎಂದು ಗಿಲ್ಲಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

