- Home
- Entertainment
- TV Talk
- Bigg Boss Kannada 12: ಗಿಲ್ಲಿ ರೋಸ್ಟ್‌ಗೆ ರಜತ್ ಬ್ಲಾಸ್ಟ್; ರಣರಂಗವಾದ ಬಿಗ್‌ಬಾಸ್ ಮನೆ
Bigg Boss Kannada 12: ಗಿಲ್ಲಿ ರೋಸ್ಟ್‌ಗೆ ರಜತ್ ಬ್ಲಾಸ್ಟ್; ರಣರಂಗವಾದ ಬಿಗ್‌ಬಾಸ್ ಮನೆ
ಬಿಗ್‌ಬಾಸ್ ಸೀಸನ್ 12ರ ಮನೆಗೆ ಅತಿಥಿಗಳಾಗಿ ಬಂದಿರುವ ಹಳೆಯ ಸ್ಪರ್ಧಿಗಳಿಗೆ ಗಿಲ್ಲಿ ನಟನ ಕಾಮಿಡಿ ಕಿರಿಕಿರಿ ಉಂಟುಮಾಡಿದೆ. ಮನರಂಜನೆ ನೀಡುವ ರೋಸ್ಟ್ ಟಾಸ್ಕ್ ವೇಳೆ ಗಿಲ್ಲಿ ನಟನ ಮಾತುಗಳು ಮಿತಿಮೀರಿದ್ದು, ಅತಿಥಿ ರಜತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಗಿಲ್ಲಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಗ್‌ಬಾಸ್ ಸೀಸನ್ 12
ಬಿಗ್‌ಬಾಸ್ ಸೀಸನ್ 12ರ ಮನೆಗೆ ರಜತ್, ಮಂಜು, ಚೈತ್ರಾ, ಮೋಕ್ಷಿತಾ ಮತ್ತು ತ್ರಿವಿಕ್ರಮ್ ಅತಿಥಿಗಳಾಗಿ ಬಂದಿದ್ದಾರೆ. ಸೀಸನ್ 12ರ ಸ್ಪರ್ಧಿಗಳು ರೆಸ್ಟೊರೆಂಟ್ ಸಿಬ್ಬಂದಿಗಳಾಗಿದ್ದು, ಅತಿಥಿಗಳಿಗೆ ಉತ್ತಮ ಸೇವೆ ನೀಡಿ ಅವರು ನೀಡುವ ಹಣದಿಂದ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗುತ್ತಾರೆ. ಹಾಗೆಯೇ ಟಾಸ್ಕ್ ಮುಗಿಯವರೆಗೂ ಪಾತ್ರದಿಂದ ಹೊರಗೆ ಬರುವಂತಿಲ್ಲ.
ಗಿಲ್ಲಿ ನಟ ಮಾಡುತ್ತಿರೋ ಕಾಮಿಡಿ
ಮನೆಯ ಹೆಡ್ ವೇಟರ್ ಆಗಿರುವ ಗಿಲ್ಲಿ ನಟ ಕಾಮಿಡಿ ಅತಿಥಿಗಳಿಗೆ ಬೇಸರವನ್ನುಂಟು ಮಾಡುತ್ತಿದೆ. ಈಗಾಗಲೇ ಉಗ್ರಂ ಮಂಜು ಮತ್ತು ರಜತ್ ಕೋಪಗೊಂಡು ಗಿಲ್ಲಿ ನಟ ಅವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಅತಿಥಿಗಳಾಗಿ ಬಂದಿರೋ ಸ್ಪರ್ಧಿಗಳು ಜೊತೆಯಾಗಿ ಗಿಲ್ಲಿ ನಟ ಮಾಡುತ್ತಿರೋ ಕಾಮಿಡಿ ಅತಿಯಾಗಿದೆ ಎಂದು ತಮ್ಮ ತಮ್ಮಲ್ಲಿ ಚರ್ಚೆ ನಡೆಸಿದ್ದಾರೆ.
ರೋಸ್ಟ್‌ಗೆ ರಜತ್ ಬ್ಲಾಸ್ಟ್
ಅತಿಥಿಗಳಿಗೆ ಮನರಂಜನೆ ಕಾರ್ಯಕ್ರಮ ನೀಡಬೇಕೆಂದು ಬಿಗ್‌ಬಾಸ್ ಸೂಚಿಸಿದ್ದಾರೆ. ಮಹಿಳಾ ಸ್ಪರ್ಧಿಗಳಿಂದ ಗ್ರೂಪ್ ಡ್ಯಾನ್ಸ್, ಪುರುಷರಿಂದ ಪ್ರಾಪರ್ಟಿ ಡ್ಯಾನ್ಸ್, ಮಾಳು ಅವರಿಂದ ತಮಟೆ ಡ್ಯಾನ್ಸ್, ಗಿಲ್ಲಿ ಮತ್ತು ಅಶ್ವಿನಿ ಗೌಡ ಜೊತೆಯಾಗಿ ಸಭ್ಯತೆ ಎಲ್ಲೆ ಮೀರದಂತೆ ಅತಿಥಿಗಳನ್ನು ರೋಸ್ಟ್ ಮಾಬೇಕೆಂದು ಬಿಗ್‌ಬಾಸ್ ಆದೇಶ ನೀಡಿದ್ದಾರೆ. ಗಿಲ್ಲಿ ನಟ ಮಾಡಿರುವ ರೋಸ್ಟ್‌ಗೆ ರಜತ್ ಬ್ಲಾಸ್ಟ್ ಆಗಿದ್ದಾರೆ.
ಗಿಲ್ಲಿ ಕಾಮಿಡಿಗೆ ರಜತ್ ಆಕ್ಷೇಪ
ಐದು ಜನ ನೆಂಟರು ಬಂದು ತಿಂದರು. ತಿಂದ ಮೇಲೆ ಇಷ್ಟೊಂದು ದವಲತ್ತು. ಇನ್ನು ತಂದು ಹಾಕಿದವರಿಗೆ ನಮಗೆಷ್ಟು ಇರಬಾರದು ಎಂದು ಗಿಲ್ಲಿ ನಟ ಹೇಳುತ್ತಾರೆ. ಈ ಮತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ರಜತ್, ಏನು ಮಾತನಾಡ್ತಿದ್ದೀಯಾ? ಒಳ್ಳೆಯ ಕ್ಷಣಗಳನ್ನು ಯಾಕೆ ಹಾಳು ಮಾಡ್ತಿದ್ದೀಯಾ? ತುಂಬಾನೇ ಇರಿಟೇಟ್ ಮಾಡ್ತಿದ್ದೀಯಾ? ಮನುಷ್ಯರ ಜಾತಿಯವರಾಗಿದ್ರೆ ಒಮ್ಮೆ ಹೇಳಿದ್ರೆ ತಿಳಿದುಕೊಳ್ಳಬೇಕು ಎಂದು ರಜತ್ ಹೇಳಿದ್ದಾರೆ.
ವೀಕ್ಷಕರು ಹೇಳಿದ್ದೇನು?
ಗಿಲ್ಲಿಯನ್ನು ರಕ್ಷಿತ ಸುಮ್ಮನೆ ನಾಮಿನೇಟ್ ಮಾಡಿಲ್ಲ. ಕಾಮಿಡಿ ನೆಪದಲ್ಲಿ ಗಿಲ್ಲಿ ಅತಿರೇಕದ ವರ್ತನೆ . ವೈಯುಕ್ತಿಕ ನಿಂದನೆ ಸರಿ ಇಲ್ಲ. ಟಾಸ್ಕ್ ಅಂತ ಅಂದಾಗ ಅದರ ಪಾತ್ರದಲ್ಲಿರಬೇಕು. ಗಿಲ್ಲಿ ಟಾಸ್ಕ್ ಕೂಡ ಸರಿಯಾಗಿ ಮಾಡಲು ಬಿಡುತ್ತಿಲ್ಲ. ಸುದೀಪ್ ಎಷ್ಟು ಸಲ ಬುದ್ಧಿ ಹೇಳಿದ್ದಾರೆ. ವೀಕ್ಷರಿಗೇ ಗಿಲ್ಲಿಯ ವರ್ತನೆ ಇಷ್ಟು ಇರಿಟೇಟ್ ತರಿಸುತ್ತಿದೆ ಇನ್ನು ಅತಿಥಿಗಳಿಗೆ ಹೇಗಾಗಿರಬೇಡ? ವಾರದ ಪಂಚಾಯತಿಯಲ್ಲಿ ಗಿಲ್ಲಿಗೆ ಬುದ್ದಿ ಹೇಳಬೇಕು ಎಂದು ವೀಕ್ಷಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: BBK 12: ನೀನ್ಯಾಕೆ ಎಲ್ಲರ ಪೇಮೆಂಟ್ ತಗೋತಿದ್ಯಾ? ಗಿಲ್ಲಿ ನಟನಿಗೆ ಡ್ರಿಲ್ ಮಾಡಿದ ಉಗ್ರಂ ಮಂಜು!
ಕೋಪ ಬರುವಂತಾಗಬಾರದು
ಗಿಲ್ಲಿ ಏನೇ ಮಾಡಿದರೂ ಅವನ ಫಾಲೋವರ್ಸ್ ಆದನ್ನು ತಮಾಷೆಯಾಗಿ ತೆಗೆದುಕೊಳ್ಳುತ್ತಾರೆ. ಬೇರೆ ಕಂಟೆಸ್ಟೆಂಟ್ ಸಣ್ಣ ತಪ್ಪು ಮಾಡಿದರೂ ಅದನ್ನು ದೊಡ್ಡದಾಗಿ ಮಾಡುತ್ತಾರೆ. ತಮಾಷೆ ಮಾಡುವುದಕ್ಕೂ ಮಿತಿ ಬೇಕು. ಗಿಲ್ಲಿ ಮಾಡುವ ಕಾಮಿಡಿಗಳು ಒಬ್ಬರನ್ನು ನಗಿಸುವಂತಿರಬೇಕು. ಕೋಪ ಬರುವಂತಾಗಬಾರದು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: BBK 12: ಮಂಜು ಪರ್ಸನಲ್ ಲೈಫ್‌ಗೆ ಡ್ಯಾಮೇಜಿಂಗ್ ಹೇಳಿಕೆ ಕೊಟ್ಟ ಗಿಲ್ಲಿ ನಟ; ತಿರುಗಿಬಿದ್ದ ಬುಜ್ಜಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

