- Home
- Entertainment
- TV Talk
- ಸುಳ್ಳು ಹರಡಿದ್ರು ..ಪಳನಿ ದೇವಸ್ಥಾನದಲ್ಲಿ ಹಾಗೆ ಮಾಡಿದೆ, 3 ತಿಂಗಳಿಗೆ ಜೈಲಿಗೆ ಹೋದ್ರು : ಚೈತ್ರಾ ಕುಂದಾಪುರ
ಸುಳ್ಳು ಹರಡಿದ್ರು ..ಪಳನಿ ದೇವಸ್ಥಾನದಲ್ಲಿ ಹಾಗೆ ಮಾಡಿದೆ, 3 ತಿಂಗಳಿಗೆ ಜೈಲಿಗೆ ಹೋದ್ರು : ಚೈತ್ರಾ ಕುಂದಾಪುರ
ಸಾಮಾಜಿಕ ಹೋರಾಟಗಾರ್ತಿ ಎಂದು ಕರೆಸಿಕೊಂಡು, ಬಿಗ್ ಬಾಸ್ ಮನೆಯೊಳಗಡೆ ಪ್ರವೇಶ ಮಾಡಿದ್ದ Chaithra Kundapura ಅವರು ತನ್ನ ಬಗ್ಗೆ ಸುಳ್ಳು ಮಾಹಿತಿ ನೀಡುವವರ ವಿರುದ್ಧ ಏನು ರೆಮಿಡಿ ಮಾಡುತ್ತೇನೆ ಎಂದು The Powerhouse Vines ಎನ್ನುವ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಫೇಕ್ ನ್ಯೂಸ್ ಹಾಕ್ತಾರೆ
ಡೆಸ್ಕ್‌ನಲ್ಲಿ ಕೂತು ಕೆಲಸ ಮಾಡೋದು ಎಷ್ಟು ಕಷ್ಟ ಎಂದು ಗೊತ್ತಿದೆ, ನಾನು ನಿರೂಪಕಿಯಾಗಿ ಕೆಲಸ ಮಾಡಿದ್ದೀನಿ. ಜ್ಞಾನ ಇಟ್ಟುಕೊಂಡು ಮಾತನಾಡಬೇಕು, ಇಲ್ಲಿ ಜ್ಞಾನವಿಲ್ಲದೆ ಮಾತನಾಡುತ್ತಾರೆ, ನನ್ನ ಬಗ್ಗೆ ಬಹುತೇಕ ಫೇಕ್ ನ್ಯೂಸ್ ಹಾಕ್ತಾರೆ. ಯಾರಾದರೂ ಪರಿಚಯ ಇದ್ದರೆ, ನಾನು ಫೋನ್ ಮಾಡಿ, ಯಾಕೆ ಹೀಗೆ ನ್ಯೂಸ್ ಮಾಡ್ತಾರೆ ಎಂದು ಹೇಳ್ತೀನಿ, ನನ್ನ ಬಗ್ಗೆ ಬರುವ ನ್ಯೂಸ್‌ಗಳಲ್ಲಿ 90% ಮಾಹಿತಿ ಎಲ್ಲವೂ ಫೇಕ್. ಅದಕೆ ನಾನು ಡಾಕ್ಯುಮೆಂಟ್ ಕೊಡ್ತೀನಿ, ಸಾಕ್ಷಿ ಕೊಡ್ತೀನಿ, ಸ್ಪಷ್ಟನೆ ಕೊಡ್ತೀನಿ.
ಆ ಹಣ ಉಳಿಯೋದಿಲ್ಲ
ನನ್ನ ಬಗ್ಗೆ ಸುಳ್ಳು ಮಾಹಿತಿ ಕೊಟ್ಟವರಿಗೆ ಹತ್ತು, ಹದಿನೈದು ಸಾವಿರ ಹಣ ಸಿಗಬಹುದು, ಆದರೆ ಆ ಹಣವು ಆಸ್ಪತ್ರೆಗೆ ಹೋಗುತ್ತದೆ, ಅಂಥವರಿಗೆ ಅನಾರೋಗ್ಯವೋ ಇನ್ನೇನಾದರೂ ಆಗಬಹುದು. ಇಂಥ ಹಣ ಮಾಡಿ ಏನು ಪ್ರಯೋಜನ?
ನನ್ನ ಗಂಡ ಏನು ಹೇಳ್ತಾರೆ?
“ನಿನ್ನ ಬಗ್ಗೆ ಮಾತನಾಡಿದರೆ ಜನರಿಗೆ ನೆಗೆಟಿವ್ ಬರುತ್ತದೆ, ಅದಕ್ಕೆ ಖುಷಿಯಾಗಿರು, ನೀನು ಮಾರ್ಕೆಟ್‌ನಲ್ಲಿರು, ನಿನ್ನ ಜಾತಕವೇ ಹಾಗಿದೆ ಎಂದು ನನ್ನ ಗಂಡ ಹೇಳುತ್ತಾರೆ.
ಪಳನಿ ದೇವಸ್ಥಾನಕ್ಕೆ ಹೋಗುವೆ
ಕೆಲವೊಮ್ಮೆ ಪೇಡ್ ಪ್ರಮೋಶನ್ಸ್ ಮಾಡುತ್ತಾರೆ. ಸಂಬಂಧವೇ ಇಲ್ಲದ ವಿಷಯದ ಬಗ್ಗೆ, ತಂದೆ ಬಗ್ಗೆ ಸುಳ್ಳು ಮಾಹಿತಿ ಹಂಚಿಕೊಳ್ತಾರೆ. ಟ್ರೋಲ್ ಮಾಡಿದಾಗ, ಕಾಮೆಂಟ್ ಮಾಡಿದಾಗ, ನನಗೆ ಬೇಸರ ಆದಾಗ ನಾನು ಯಾರು, ಎಲ್ಲಿ, ಯಾವಾಗ ಈ ರೀತಿ ನೆಗೆಟಿವ್ ಮಾಡುತ್ತಾರೆ ಎಂದು ಚೀಟಿ ಬರೆಯುತ್ತೇನೆ, ಕಣ್ಣೀರು ಹಾಕ್ತೀನಿ, ಆ ಕಣ್ಣೀರು ಚೀಟಿ ಮೇಲೆ ಬೀಳುವುದು. ಅದನ್ನು ಒಂದು ಗಾಜಿನ ಗ್ಲಾಸ್‌ಗೆ ಹಾಕಿ, ಪೊಳಲಿ ಭದ್ರಕಾಳಿ ದೇವಸ್ಥಾನಕ್ಕೆ ಹೋಗುತ್ತೇನೆ. ಅಲ್ಲಿ ತಾಯಿ ಮುಂದೆ ಹಾಗೆ ಕೂರುವೆ, ನನ್ನ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ್ದಾರೆ, ನನಗೆ ಈ ವಿಚಾರಕ್ಕೆ ಸಂಬಂಧವೇ ಇಲ್ಲ, ಇನ್ಮುಂದೆ ನೀನೇ ನೋಡಿಕೋ ಎಂದು ದೇವರ ಬಳಿ ಹೇಳುತ್ತೇನೆ. ಇದಾಗಿ ಒಂದು ತಿಂಗಳು ಅಥವಾ ಮೂರು ತಿಂಗಳಿಗೆ ಬ್ಯುಸಿನೆಸ್ ಲಾಸ್ ಆಗಿರುತ್ತದೆ, ಕಾಂಟ್ರವರ್ಸಿ ಆಗಿರುತ್ತದೆ.
ಜೈಲಿಗೆ ಹೋದ್ರು
ನನ್ನ ಹಳೆ ಕಾಂಟ್ರವರ್ಸಿ ಬಗ್ಗೆ ಯಾರೋ ಬರೆದಿದ್ದರು, ಅದು ತುಂಬ ಬೇಸರ ಆಗಿತ್ತು, ನನಗೆ ಪೀರಿಯಡ್ಸ್ ಆದಾಗ, ನಾನು ಆ ಚೀಟಿ ಬರೆದಿದ್ದೆ. ಆಮೇಲೆ ಅವನ ಮಗನ ಮೇಲೆ ಫೋಕ್ಸೊ ಕೇಸ್ ಆಗಿ ಜೈಲಿಗೆ ಹೋದರು.
ಅತ್ಯಾ*ಚಾರ ಕೇಸ್ ಆಯ್ತು
ನಾನು ಬಿಗ್ ಬಾಸ್ ಮನೆಯಲ್ಲಿದ್ದಾಗ ಕಾರ್ಕಳದಲ್ಲಿ ಇರೋರು, ನನಗೆ ಪರಿಚಯ ಇರೋರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ರೇ*ಪ್ ಕೇಸ್ ಮೇಲೆ ಜೈಲಿಗೆ ಹೋಗಿ ಮತ್ತೆ ಅವರಿಗೆ ಬೇಲ್ ಕ್ಯಾನ್ಸಲ್ ಆಗಿದೆ.
ದೇವರನ್ನು ನಂಬಿ
ನೀವು ದೇವರ ಮೇಲೆ ನಂಬಿಕೆ ಇಡಿ, ಏನು ನಮ್ಮ ಹಣೆಯಲ್ಲಿ ಬರೆದಿದ್ಯೋ ಅದು ಆಗುವುದು, ಅದನ್ನು ಬದಲಾಯಿಸಲು ಆಗೋದಿಲ್ಲ. ದೇವರನ್ನು ನಂಬಿದರೆ, ಅವನು ಕೈಬಿಡೋದಿಲ್ಲ.
ನಾನು ನವರಾತ್ರಿಗೆ ಪೂಜೆ ಮಾಡಿ, ಉಪವಾಸ ಮಾಡಿದ್ದೆ, ಮುಂದಿನ ನವರಾತ್ರಿಗೆ ನಾನು ಬಿಗ್ ಬಾಸ್ ಮನೆಯಲ್ಲಿದ್ದೆ. ಬಿಗ್ ಬಾಸ್ ಮನೆಯಲ್ಲಿ ನನಗೆ ಈರುಳ್ಳಿ, ಬೆಳ್ಳುಳ್ಳಿ ಹಾಕದ ಅಡುಗೆಯನ್ನು ಕಳಿಸುತ್ತಿದ್ದರು, ಆ ಮನೆಯಲ್ಲಿರುವ ದೇವಿ ತುಂಬ ಪವರ್‌ಫುಲ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

