ಸೀರೆ ಬಣ್ಣ ಯಾವುದೇ ಇರಲಿ, ಸಿಕ್ಕಾಪಟ್ಟೆ ಝಗಮಗ ಇರಬಾರದು, ಸಿಂಪಲ್ ಆಗಿದ್ದರೆ ಚೆಂದವಾಗಿ ಕಾಣುವುದು. ಸೀರೆ ಡಿಸೈನ್ ಜಾಸ್ತಿ ಇದ್ದರೆ, ಮುಖ ಕಾಣಿಸೋದಿಲ್ಲ, ಅದರ ಆರ್ಭಟವೇ ಜಾಸ್ತಿ ಆಗುತ್ತದೆ!
Image credits: Actress Bhavya Gowda instagram
Kannada
ಬ್ಲೌಸ್ ಡಿಸೈನ ಮುಖ್ಯ
ಸೀರೆಯೂ ಝಗಮಗ ಗ್ರ್ಯಾಂಡ್ ಇದ್ದು, ಅದರಂತೆ ಬ್ಲೌಸ್ ಕೂಡ ಗ್ರ್ಯಾಂಡ್ ಇದ್ದರೆ ಚೆನ್ನಾಗಿರೋದಿಲ್ಲ. ಸೀರೆ ಸಿಂಪಲ್ ಆಗಿದ್ದರೆ, ಬ್ಲೌಸ್ ಗ್ರ್ಯಾಂಡ್ ಆಗಿರಲಿ, ಬ್ಲೌಸ್ ಸಿಂಪಲ್ ಆಗಿದ್ದಾಗ, ಸೀರೆ ಗ್ರ್ಯಾಂಡ್ ಇಲಿ.
Image credits: Actress Bhavya Gowda instagram
Kannada
ಆಭರಣ
ಸೀರೆ ನೋಡಿದ ತಕ್ಷಣ ಇದಕ್ಕೆ ಬಂಗಾರದ ಬಣ್ಣದ ಆಭರಣ, ಕುಂದನ್ ಆಭರಣ, ಸ್ಟೋನ್, ಫ್ಯಾನ್ಸಿ ಆಭರಣ ಯಾವುದು ಮ್ಯಾಚ್ ಆಗುತ್ತೆ ಎಂದು ಗೊತ್ತಾಗುತ್ತದೆ. ಅದರಂತೆ ಆಭರಣ ಆಯ್ಕೆ ಮಾಡಿ. ಆರ್ಟಿಫಿಶಿಯಲ್ ಕೂಡ ಎನಿಸಬಾರದು.
Image credits: Actress Bhavya Gowda instagram
Kannada
ಬಳೆ ಸಿಂಪಲ್
ಬ್ಲೌಸ್, ಸೀರೆ, ಆಭರಣ ಎಲ್ಲವೂ ಗ್ರ್ಯಾಂಡ್ ಆಗಿದ್ದು, ಬಳೆ ಕೂಡ ಗ್ರ್ಯಾಂಡ್ ಆಗಿದ್ದರೆ ಅತಿ ಎನಿಸುವುದು. ಹೀಗಾಗಿ ಸೀರೆಗೆ ತಕ್ಕಂತೆ ಕ್ಲಾಸಿ ಬಳೆ ಆಯ್ಕೆ ಮಾಡಿಕೊಳ್ಳಿ.
Image credits: Actress Bhavya Gowda instagram
Kannada
ಮೇಕಪ್ ಜಾಸ್ತಿ ಬೇಡ
ಬೆಳ್ಳಗಿದ್ದೇವೆ ಎಂದತಕ್ಷಣ ಚೆನ್ನಾಗಿ ಕಾಣಿಸ್ತೀವಿ ಎಂದರ್ಥವಲ್ಲ. ಹೌದು, ಮೇಕಪ್ ಜಾಸ್ತಿ ಆದಷ್ಟು ನಮ್ಮ ರೂಪ ಹಾಳಾಗುತ್ತೆ. ಹೀಗಾಗಿ ಕಡಿಮೆ ಮೇಕಪ್ ಮಾಡಿಕೊಳ್ಳಿ, ಆಗ ನಿಜಕ್ಕೂ ನೋಡಲು ಚೆನ್ನಾಗಿ ಕಾಣ್ತೀವಿ.