MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಬಿಗ್‌ಬಾಸ್ ಮುಗಿದ್ರೂ ನಿಲ್ಲದ ಕೋಳಿ ಜಗಳ? ಅಶ್ವಿನಿ ಗೌಡ ವಿರುದ್ಧ ಚೈತ್ರಾ ಕುಂದಾಪುರ ಗರಂ

ಬಿಗ್‌ಬಾಸ್ ಮುಗಿದ್ರೂ ನಿಲ್ಲದ ಕೋಳಿ ಜಗಳ? ಅಶ್ವಿನಿ ಗೌಡ ವಿರುದ್ಧ ಚೈತ್ರಾ ಕುಂದಾಪುರ ಗರಂ

ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಚೈತ್ರಾ ಕುಂದಾಪುರ, ಅಶ್ವಿನಿ ಗೌಡ ಜೊತೆಗಿನ ಜಗಳದ ಬಗ್ಗೆ ಮತ್ತೆ ಮಾತನಾಡಿದ್ದಾರೆ. ಆಟದ ವೇಳೆ ತನಗೂ ಗಾಯವಾಗಿತ್ತು ಎಂದು ಗುರುತು ತೋರಿಸಿರುವ ಚೈತ್ರಾ, ತನಗೆ ಪಿಆರ್ ಟೀಂ ಇರಲಿಲ್ಲವೆಂದು ಅಸಮಾಧಾನ ಹೊರಹಾಕಿದ್ದಾರೆ.

2 Min read
Author : Mahmad Rafik
Published : Feb 10 2026, 08:05 AM IST
Share this Photo Gallery
  • FB
  • TW
  • Linkdin
  • Whatsapp
15
ಬಿಗ್‌ಬಾಸ್ ಕನ್ನಡ ಸೀಸನ್ 12
Image Credit : colors Kannada

ಬಿಗ್‌ಬಾಸ್ ಕನ್ನಡ ಸೀಸನ್ 12

ಬಿಗ್‌ಬಾಸ್ ಕನ್ನಡ ಸೀಸನ್ 12 ಮುಗಿದು ತಿಂಗಳು ಸಮೀಪಿಸುತ್ತಿದ್ರೂ ಸ್ಪರ್ಧಿಗಳು ಮಾತ್ರ ಇನ್ನು ಆಟದಿಂದ ಹೊರ ಬಂದಂತೆ ಕಾಣಿಸುತ್ತಿಲ್ಲ. ಈ ಬಾರಿ ಬಿಗ್‌ಬಾಸ್‌ ಮನೆಗೆ ವಿಶೇಷ ಅತಿಥಿಗಳಾಗಿ ತೆರಳಿದ್ದ ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ನಿಜವಾದ ಸ್ಪರ್ಧಿಗಳಂತೆಯೇ ಆಟವಾಡಿದ್ದರು. ಈ ವೇಳೆ ಚೈತ್ರಾ ಮತ್ತು ಅಶ್ವಿನಿ ಗೌಡ ನಡುವಿನ ಆಟ ಭಯಂಕರವಾಗಿಯೇ ಇತ್ತು.

25
 ಚೈತ್ರಾ ಕುಂದಾಪುರ
Image Credit : colors Kannada

ಚೈತ್ರಾ ಕುಂದಾಪುರ

ಟಾಸ್ಕ್‌ ಸಂದರ್ಭದಲ್ಲಿ ಚೈತ್ರಾ ಕುಂದಾಪುರ ಅವರನ್ನು ಅಶ್ವಿನಿ ಗೌಡ ತಡೆದು ನಿಲ್ಲಿಸಬೇಕಿತ್ತು. ಈ ಆಟದಲ್ಲಿ ಚೈತ್ರಾ ಕುಂದಾಪುರ ನನ್ನ ಕೈಗಳಿಗೆ ಪರಚಿ ಚಿವುಟಿದ್ದಾರೆ ಎಂದು ಅಶ್ವಿನಿ ಗೌಡ ಆರೋಪಿಸಿದ್ದರು. ಆಟದಲ್ಲಿ ನಾನೇನು ಮಾಡಿಲ್ಲ ಎಂದು ವಾದಿಸಿದ ಚೈತ್ರಾ, ನಂತರ ಅಶ್ವಿನಿ ಗೌಡ ಬಳಿ ಕ್ಷಮೆಯನ್ನು ಸಹ ಕೇಳಿದ್ದರು. ಅಶ್ವಿನಿ ಗೌಡ ಸಹ ಕ್ಷಮಿಸಿರೋದಾಗಿ ಹೇಳಿ ಜಗಳಕ್ಕೆ ಪೂರ್ಣವಿರಾಮ ಇರಿಸಿದ್ದರು.

Related Articles

Related image1
'ಬಿಗ್ ಬಾಸ್ ವೋಟಿಂಗ್ ಲೆಕ್ಕ ಬಿಟ್ಟರೆ, ವಿನ್ನರ್ ನಾನೇ'-ಅಶ್ವಿನಿ ಗೌಡ; ಸುದೀಪಣ್ಣ ಕೈ ಬಿಡ್ತಾರೆ ಅನ್ಕೊಂಡಿರಲಿಲ್ಲ!
Related image2
Bigg Boss: ದೇವರ ಮುಂದೆ ಬಿಕ್ಕಿಬಿಕ್ಕಿ ಅತ್ತ ಚೈತ್ರಾ ಕುಂದಾಪುರ: ವೀಕೆಂಡ್​ ಹೊತ್ತಲ್ಲಿ ಅಂಥದ್ದೇನಾಯ್ತು?
35
ಪಿಆರ್ ಟೀಂ ಇರಲಿಲ್ಲ
Image Credit : colors Kannada

ಪಿಆರ್ ಟೀಂ ಇರಲಿಲ್ಲ

ಇದೀಗ ಬಿಗ್‌ಬಾಸ್ ಮುಗಿದಿದ್ದು, ಸಂದರ್ಶನವೊಂದರಲ್ಲಿ ಅಶ್ವಿನಿ ಗೌಡ ಜೊತೆಗಿನ ಜಗಳದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿಯೂ ನನ್ನ ಬಳಿ ಪಿಆರ್ ಟೀಂ ಇರಲಿಲ್ಲ ಎಂಬ ಕಾರಣ ನೀಡುವ ಮೂಲಕ ಅಶ್ವಿನಿ ಗೌಡ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

45
 ಆಟವನ್ನು ಆಟವಾಗಿಯೇ ನೋಡಿದ್ದೆ
Image Credit : colors Kannada

ಆಟವನ್ನು ಆಟವಾಗಿಯೇ ನೋಡಿದ್ದೆ

ನಾನು ಆಟವಾಡಿದ್ದೆ. ಆಟದ ಸಂದರ್ಭದಲ್ಲಿ ನಮ್ಮಿಬ್ಬರ ಮಧ್ಯೆ ಜಗಳ ನಡೆದಿತ್ತು. ಆಟದ ಕಿತ್ತಾಟದ ವೇಳೆ ನಾನು ಅವರಿಗೆ ಪರಚಿದ್ದೆ. ನನಗೂ ಸಹ ಅಶ್ವಿನಿ ಗೌಡ ಪರಚಿದ್ದರು ಎಂದು ತಮ್ಮ ಕೈ ಮೇಲಿರುವ ಗಾಯಗಳನ್ನು ಚೈತ್ರಾ ಕುಂದಾಪುರ ತೋರಿಸಿದ್ದಾರೆ. ನಾನು ಆಟವನ್ನು ಆಟವಾಗಿಯೇ ನೋಡಿದ್ದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಮ್ಯೂಸಿಕ್‌ Live Concertನಲ್ಲಿ ಗಾಯಕನ ಪ್ರೈವೇಟ್ ಪಾರ್ಟ್‌ಗೆ ಕೈ ಹಾಕಿದ ಯುವತಿ: ವಿಡಿಯೋ

55
maturity
Image Credit : colors Kannada

maturity

ಅಂದು ಅಶ್ವಿನಿ ಗೌಡ ಉದ್ದೇಶಪೂರ್ವಕವಾಗಿ ಮಾಡಿದ್ರು ಅಂತ ಹೇಳಲು ಆಗಲ್ಲ. ಅದು ಆಟದ ವೇಳೆ ಆಗಿದೆ. ಆಟವನ್ನು ಆಟವಾಗಿ ನೋಡಿದ್ದೇನೆ. ಹೊರಗೆ ಬಂದ ಮೇಲೆ ನಮ್ಮ ನಮ್ಮ ಬದುಕಿನಲ್ಲಿ ನಾವು ಬ್ಯುಸಿ ಆಗಿದ್ದೇವೆ. ಆಟ ಮುಗಿದ ಮೇಲೆ ಅದರ ಬಗ್ಗೆ ಚರ್ಚಿಸುವುದಿಲ್ಲ. ಅದನ್ನು ನಾವು "maturity " ಅಂತೀವಿ ಎಂದು ಚೈತ್ರಾ ಕುಂದಾಪುರ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: BBK 12: ಇಂದಿಗೂ ಆ ನೋವು ಮನಸ್ಸಿನಲ್ಲಿ ಉಳಿದಿದೆ: 15 ದಿನಗಳ ನಂತ್ರ ರಕ್ಷಿತಾ ಶೆಟ್ಟಿ ಪೋಸ್ಟ್

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಚೈತ್ರಾ ಕುಂದಾಪುರ
ಅಶ್ವಿನಿ ಗೌಡ
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ

Latest Videos
Recommended Stories
Recommended image1
‘ದೃಷ್ಟಿ ಬೊಟ್ಟು’ ಧಾರಾವಾಹಿಯ ಕೃಷ್ಣಸುಂದರಿಯ ಈ ಲುಕ್ ಹೇಗಿದೆ?
Recommended image2
ಮಟನ್‌ ತಿನ್ನೋದನ್ನ ರಕ್ಷಿತಾ ನೋಡಿ ಕಲೀರಿ, ಬಿಗ್‌ಬಾಸ್ ಹುಡುಗಿ ಬೆಂಗ್ಳೂರ್ ಹೈದಂಗೆ ಮಾಡಿದ ಓಪನ್‌ ಚಾಲೆಂಜ್ ಏನು?
Recommended image3
Karna Serial: ರಮೇಶ್​ಗೆ ಮಣ್ಣು ಮುಕ್ಕಿಸಿದ ಕರ್ಣ- ನಿತ್ಯಾ ಹೆಸರಿಗೆ 3 ಕೋಟಿ ಆಸ್ತಿ ವರ್ಗಾವಣೆ ಆಗೋಯ್ತು?
Related Stories
Recommended image1
'ಬಿಗ್ ಬಾಸ್ ವೋಟಿಂಗ್ ಲೆಕ್ಕ ಬಿಟ್ಟರೆ, ವಿನ್ನರ್ ನಾನೇ'-ಅಶ್ವಿನಿ ಗೌಡ; ಸುದೀಪಣ್ಣ ಕೈ ಬಿಡ್ತಾರೆ ಅನ್ಕೊಂಡಿರಲಿಲ್ಲ!
Recommended image2
Bigg Boss: ದೇವರ ಮುಂದೆ ಬಿಕ್ಕಿಬಿಕ್ಕಿ ಅತ್ತ ಚೈತ್ರಾ ಕುಂದಾಪುರ: ವೀಕೆಂಡ್​ ಹೊತ್ತಲ್ಲಿ ಅಂಥದ್ದೇನಾಯ್ತು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved