- Home
- Entertainment
- TV Talk
- BBK 12: ಯಾಕಿಂಗೆ ಆದೆ ಗಿಲ್ಲಿ? ಅಭಿಮಾನಿಗಳಿಂದಲೇ ಬೇಸರ; ಇತ್ತ ಗಿಲ್ಲಿಯಾಗಿ ಬದಲಾದ್ರಂತೆ ರಘು!
BBK 12: ಯಾಕಿಂಗೆ ಆದೆ ಗಿಲ್ಲಿ? ಅಭಿಮಾನಿಗಳಿಂದಲೇ ಬೇಸರ; ಇತ್ತ ಗಿಲ್ಲಿಯಾಗಿ ಬದಲಾದ್ರಂತೆ ರಘು!
ಬುಧವಾರದ ಸಂಚಿಕೆಯಲ್ಲಿ ಗಿಲ್ಲಿ ನಟ, ಅಶ್ವಿನಿ ಗೌಡ ಮತ್ತು ಧ್ರುವಂತ್ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಗಿಲ್ಲಿ ನಟನ ಕಾಮಿಡಿಗೆ ತಿರುಗೇಟು ನೀಡಲು ಹೋದಾಗ, ಅವರು 'ಮುದುಕಿ', 'ಅಜ್ಜಿ', 'ವಿಗ್' ಎಂಬಂತಹ ಪದಗಳನ್ನು ಬಳಸಿ ವೈಯಕ್ತಿಕ ನಿಂದನೆ ನಡೆಸಿದರು.

ಗಿಲ್ಲಿ ನಟ ವಿರುದ್ಧ ವಾಗ್ದಾಳಿ
ಬುಧವಾರದ ಸಂಚಿಕೆಯಲ್ಲಿ ಅಶ್ವಿನಿ ಗೌಡ ಮತ್ತು ಧ್ರುವಂತ್ ಜೊತೆಯಾಗಿ ಗಿಲ್ಲಿ ನಟ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆರಂಭ ಗಿಲ್ಲಿಯಿಂದಲೇ ಶುರುವಾಗಿದ್ದು ಎಂದು ಅಶ್ವಿನಿ ಗೌಡ ಕಿಡಿಕಾರಿದ್ದರು. ಗಾರ್ಡನ್ ಏರಿಯಾದಲ್ಲಿ ನಡೆದ ಮೂವರ ಜಗಳ ಸುಮಾರು 2 ಗಂಟೆಯವರೆಗೂ ನಡೆದಿದ್ದನ್ನು ನೋಡಿ ಮನೆ ಮಂದಿಯೆಲ್ಲಾ ಶಾಕ್ ಆಗಿದ್ದಾರೆ.
ತಿರುಗೇಟು
ಗಿಲ್ಲಿ ನಟ ಕಾಮಿಡಿ ಮೂಲಕ ನಮ್ಮನ್ನು ಎಷ್ಟು ಸಾಧ್ಯವೋ ಅಷ್ಟು ಕೆಳಗೆ ತೋರಿಸುತ್ತಾರೆ. ಗಿಲ್ಲಿ ನಟ ಮಾತುಗಳನ್ನು ನಿರ್ಲಕ್ಷ್ಯಿಸಿದ್ರೆ ಅವರು ನಾವು ತಪ್ಪು ಮಾಡಿದಂತೆ ಕಾಣಿಸುತ್ತದೆ. ಹಾಗಾಗ ಯಾವುದೇ ಕಾರಣಕ್ಕೂ ಸುಮ್ಮನಾಗೋದು ಬೇಡ, ಪ್ರತಿಯೊಂದು ಮಾತಿಗೂ ನಾವು ತಿರುಗೇಟು ನೀಡಬೇಕು ಎಂದು ಅಶ್ವಿನಿ ಗೌಡ ಮತ್ತು ಧ್ರುವಂತ್ ನಿರ್ಧರಿಸಿದ್ದರು.
ಅಶ್ವಿನಿ ಗೌಡ-ಧ್ರುವಂತ್
ಅದೇ ರೀತಿ ಗಾರ್ಡನ್ ಏರಿಯಾದಲ್ಲಿ ಅಶ್ವಿನಿ ಗೌಡ-ಧ್ರುವಂತ್ ಒಂದೆಡೆ ಕುಳಿತು ಮಾತನಾಡುತ್ತಿರುತ್ತಾರೆ. ಅನತಿ ದೂರದಲ್ಲಿಯೇ ಕುಳಿತಿದ್ದ ಗಿಲ್ಲಿ ನಟ, ಇಬ್ಬರನ್ನು ಉದ್ದೇಶಿಸಿ ತಮಾಷೆ ಮಾಡಲು ಆರಂಭಿಸುತ್ತಾರೆ. ಈ ತಮಾಷೆಯನ್ನು ಗಂಭೀರವಾಗಿ ಪರಿಗಣಿಸಿದ ಅಶ್ವಿನಿ-ಧ್ರುವಂತ್, ಏಟಿಗೆ ಎದುರೇಟು ಎಂಬಂತೆ ಪ್ರತಿಕ್ರಿಯೆ ನೀಡಲು ಆರಂಭಿಸುತ್ತಾರೆ. ಯಾವಾಗ ಈ ವಾಕ್ಸಮರ ದೀರ್ಘ ಸಮಯದವರೆಗೆ ಮುಂದುವರಿಯುತ್ತಿದ್ದಂತೆ ಗಿಲ್ಲಿ ನಟ ವೈಯಕ್ತಿಕ ನಿಂದನೆಗೆ ಮುಂದಾಗುತ್ತಾರೆ.
ಹಲ್ಲು ಸೆಟ್, ವಿಗ್, ಅಜ್ಜಿ, ಜುಟ್ಟು ಮತ್ತು ಮುದುಕಿ
ಈ ಹಿಂದೆ ಬಳಕೆ ಮಾಡಿದ ಹಲ್ಲು ಸೆಟ್, ವಿಗ್, ಅಜ್ಜಿ, ಜುಟ್ಟು ಮತ್ತು ಮುದುಕಿ ಎಂಬಿತ್ಯಾದಿ ಪದಗಳನ್ನು ಬಳಸಿ ತೇಜೋವಧೆ ಮಾಡಲು ಆರಂಭಿಸುತ್ತಾರೆ. ಗಿಲ್ಲಿ ನಟ ಅವರ ಪದ ಬಳಕೆಗೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಗಿಲ್ಲಿ ನಟ ಅಭಿಮಾನಿಗಳು ಎಂದು ಹೇಳಿಕೊಳ್ಳುವ ಜನರು ಸಹ ಯಾಕೆ ಹೀಗೆ? ಫಿನಾಲೆ ಸಮಯದಲ್ಲಿ ಇಂತಹ ಪದ ಬಳಕೆ ಬೇಕಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಮಾತಿನ ಚಕಮಕಿ
ಈ ಮೂವರ ಮಾತಿನ ಚಕಮಕಿ ಸುಮಾರು ಗಂಟೆಗಳ ನಡೆದ ನಂತರ ಮನೆ ಮಂದಿಯೆಲ್ಲಾ ಇದನ್ನು ಇಲ್ಲಿಗೆ ನಿಲ್ಲಿಸುವಂತೆ ಮನವಿ ಮಾಡಿಕೊಳ್ಳುತ್ತಾರೆ. ನಮ್ಮನ್ನು ಕೆಣಕಿದ್ದು ಗಿಲ್ಲಿ, ನಮಗ್ಯಾಕೆ ಹೇಳುತ್ತೀರಿ? ಯಾಕೆ ಅವನಿಗೆ ಹೇಳಲು ನಿಮ್ಮಿಂದ ಆಗಲ್ಲವಾ ಎಂದು ಅಶ್ವಿನಿ ಗೌಡ ಹೇಳುತ್ತಾರೆ. ಇದಕ್ಕೆ ಧನುಷ್ ಮತ್ತು ಸ್ಪಂದನಾ ಜೊತೆಯಾಗಿ ಮೊದಲು ನೀನೇ ಶುರು ಮಾಡ್ತೀಯಾ. ಸುಮ್ಮನಾಗು ಎಂದು ಹೇಳುತ್ತಾರೆ. ಇದಕ್ಕೆ ಗಿಲ್ಲಿ, ಅವರು ಕೇಳ್ತಿದ್ದಾರೆ, ನಾನು ತೆಗೆದು ಕೊಡ್ತಿದ್ದೀನಿ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳುತ್ತಾರೆ.
ಇದನ್ನೂ ಓದಿ: BBK 12: ಫಿನಾಲೆ ಟಿಕೆಟ್‌ಗಾಗಿ ಮನೆಯಲ್ಲಿ ಹೆಚ್ಚಿದ ಕಿಚ್ಚು; ರಣರೋಚಕ ಆಟದಲ್ಲಿ ಗೆದ್ದೋರು ಯಾರು?
ಸ್ಪಂದನಾ ಸೋಮಣ್ಣ, ರಘು ಮತ್ತು ಧನುಷ್
ಮತ್ತೊಂದೆಡೆ ಸ್ಪಂದನಾ ಸೋಮಣ್ಣ, ರಘು ಮತ್ತು ಧನುಷ್ ಜೊತೆಯಾಗಿ ಕುಳಿತು ಮಾತನಾಡುತ್ತಿರುತ್ತಾರೆ. ಈ ಸಂದರ್ಭದಲ್ಲಿ ಬಿಗ್‌ಬಾಸ್ ನನ್ನ ಮನೆ ಎಂದು ಸ್ಪಂದನಾ ಎಂದು ಹೇಳಿಕೊಳ್ಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುವ ರಘು, ನಾಮಿನೇಷನ್‌ನಲ್ಲಿ ಕಾರ್‌ನಿಂದ ಇಳಿದ ಸಂದರ್ಭ ಉಲ್ಲೇಖಿಸಿ ಸ್ಪಂದನಾ ಅವರನ್ನು ತಮಾಷೆ ಮಾಡುತ್ತಾರೆ. ಯಾಕೆ ನೀವು ಗಿಲ್ಲಿಯಂತೆ ಮಾತಾಡ್ತಾ ಇದ್ದೀರಿ ಎಂದು ಸ್ಪಂದನಾ ಪ್ರಶ್ನೆ ಮಾಡುತ್ತಾರೆ.
ಇದನ್ನೂ ಓದಿ: BBK 12: ಹೇಳಿದ್ದೊಂದು ಮಾಡ್ತಿರೋದು ಮತ್ತೊಂದು; WWE ಆಟಗಾರರಾದ ಸ್ಪಂದನಾ-ರಾಶಿಕಾ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

