ಅಪ್ಪನ ಕೈನಲ್ಲಿ ಏಟು ತಿಂದ ಗಿಲ್ಲಿಗೆ ಅಮ್ಮ ಮಾಡಿಸಿದ್ರು ಎಣ್ಣೆ ಸ್ನಾನ
ಬಿಗ್ ಬಾಸ್ ಮನೆಗೆ ಗಿಲ್ಲಿ ಅಪ್ಪ ಹಾಗೂ ಅಮ್ಮ ಬಂದಿದ್ದಾರೆ. ಮಗನ ಮೇಲೆ ಅಮ್ಮ ಪ್ರೀತಿಯ ಮಳೆ ಸುರಿಸಿದ್ದು, ಹೊಸ ಅವತಾರದಲ್ಲಿ ಗಿಲ್ಲಿ ಕಾಣಿಸಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಗೆ ಬಂದ ಗಿಲ್ಲಿ ಅಪ್ಪ ಅಮ್ಮ
ಬಿಗ್ ಬಾಸ್ ನಲ್ಲಿ ಫ್ಯಾಮಿಲಿ ರೌಂಡ್ ನಡೆಯುತ್ತಿದೆ. ಈಗಾಗಲೇ ಅನೇಕ ಸ್ಪರ್ಧಿಗಳ ಕುಟುಂಬಸ್ಥರು ಬಂದು ಹೋಗಿದ್ದಾರೆ. ಈಗ ಗಿಲ್ಲಿ ಸರದಿ. ಗಿಲ್ಲಿ ಮನೆಯಿಂದ ಅವರ ಅಪ್ಪ ಹಾಗೂ ಅಮ್ಮ ಬಿಗ್ ಬಾಸ್ ಮನೆಗೆ ಬಂದಿದ್ದಾರೆ.
ಗಿಲ್ಲಿಗೆ ಏಟು
ಗಿಲ್ಲಿ ಮಾತ್ರ ಅಲ್ಲ ಅವರ ಅಪ್ಪ ಅಮ್ಮ ಕೂಡ ತುಂಬಾ ತಮಾಷೆ ವ್ಯಕ್ತಿತ್ವದವರು ಅನ್ನೋದು ಪ್ರೋಮೋ ನೋಡಿದ್ರೆ ಗೊತ್ತಾಗುತ್ತದೆ. ಬಿಗ್ ಬಾಸ್ ಮನೆಗೆ ಬರ್ತಿದ್ದಂತೆ ಅವರ ಅಪ್ಪ, ಎಲ್ಲಿ ನಮ್ಮ ಟಗರು ಮರಿ ಹುಡುಕ್ತಾರೆ. ನಂತ್ರ ಇಲ್ಲೆ ಇದೆ ಅಂತ ಕೋಲಿನಲ್ಲಿ ಹೊಡೆಯುತ್ತಾರೆ. ಅಪ್ಪನ ಹೊಡೆತ ತಪ್ಪಿಸಿಕೊಳ್ಳೋ ಪ್ರಯತ್ನವನ್ನು ಗಿಲ್ಲಿ ಮಾಡ್ತಿದ್ದಾರೆ.
ಗಿಲ್ಲಿಗೆ ಸ್ನಾನ ಮಾಡಿಸಿದ ಅಮ್ಮ
ಅಪ್ಪ – ಅಮ್ಮನನ್ನೂ ಗಿಲ್ಲಿ ಬಿಡೋದಿಲ್ಲ. ಅವರನ್ನು ಕೂಡ ತಮಾಷೆ ಮಾಡ್ತಿದ್ದಾರೆ. ಅವರ ಅವ್ವ ಬರ್ತಿದ್ದಂತೆ, ಕೂದಲಿಗೆ ಬಣ್ಣ ಹಚ್ಚಿಕೊಂಡು ಚೆನ್ನಾಗಿ ಬರಬಹುದಿತ್ತಲ್ವ ಅಂತಾರೆ. ಅದಕ್ಕೆ ನಿನ್ನ ತಲೆ ನೋಡ್ಕೋ ಅಂತ ಅವರ ಅಮ್ಮ ಹೇಳ್ತಾರೆ. ಅಷ್ಟೇ ಅಲ್ಲ ಮಗನಿಗೆ ಎಣ್ಣೆ ಹಚ್ಚಿ, ಸ್ನಾನ ಮಾಡಿಸಿ, ಬಿಳಿ ಬಟ್ಟೆ ಹಾಕಿ, ಹಣೆಗೆ ತಿಲಕ ಇಡ್ತಾರೆ.
ಚಿಕ್ಕವ್ವನ ಹೆಸ್ರಲ್ಲಿ ತಮಾಷೆ
ಗಿಲ್ಲಿ ಅಪ್ಪ – ಅಮ್ಮನ ಜೊತೆ ಮಾತನಾಡಿ ಇಡೀ ಬಿಗ್ ಬಾಸ್ ಸ್ಪರ್ಧಿಗಳು ಖುಷಿಯಾಗಿದ್ದಾರೆ. ಮನೆಯಲ್ಲಿರುವಂಗೆ ಗಿಲ್ಲಿ ಇಲ್ಲೂ ಇದ್ದಾರೆ ಅಂತಾ ಅವರ ಅಮ್ಮ ಹೇಳಿದ್ದಾರೆ. ಅಪ್ಪ – ಅಮ್ಮನ ಮುಂದೆ ಚಿಕ್ಕವ್ವ ಅಂತ ಅಶ್ವಿನಿ ಅವರನ್ನು ಪರಿಚಯ ಮಾಡ್ತಾರೆ ಗಿಲ್ಲಿ. ಅಪ್ಪನ ಎರಡನೇ ಹೆಂಡ್ತಿ ಅಂತ ಅಶ್ವಿನಿ ಅವರನ್ನು ಪರಿಚಯ ಮಾಡಿಸ್ತಾರೆ. ಅಪ್ಪನ ಮುಂದೆ ಇಷ್ಟೆಲ್ಲ ಮಾತನಾಡ್ತಿರಲಿಲ್ಲ, ಈಗ ಹೆಚ್ಚು ಮಾತನಾಡ್ತಿದ್ದಾನೆ ಅಂತ ಗಿಲ್ಲಿ ಅಮ್ಮ ಮಗನ ಬಗ್ಗೆ ಹೇಳಿದ್ದಾರೆ.
ಎಪಿಸೋಡ್ ಗೆ ಕಾಯ್ತಿರೋ ಅಭಿಮಾನಿಗಳು
ಕಲರ್ಸ್ ಕನ್ನಡದ ಪ್ರೋಮೋ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಹಳ್ಳಿಯವರು ಅಂದ್ರೆ ಸುಮ್ಮನೇನಾ? ಈವತ್ತಿನ ಎಪಿಸೋಡ್ ಮಜವಾಗಿರುತ್ತೆ. ಗಿಲ್ಲಿ ಕುಟುಂಬ ನೋಡೋಕೆ ಖುಷಿಯಾಗುತ್ತೆ ಅಂತ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ಹವಾ
ಬಿಗ್ ಬಾಸ್ ಮನೆಗೆ ಬಂದ ಗಿಲ್ಲಿ ಆರಂಭದಿಂದಲೂ ತಮ್ಮ ತಮಾಷೆ ಮೂಲಕ ವೀಕ್ಷಕರನ್ನು ಹಿಡಿದಿಟ್ಟುಕೊಂಡಿದ್ದಾರೆ. ಗಿಲ್ಲಿ ಕೆಲ್ಸ ಮಾಡಲ್ಲ, ಬೇರೆಯವರ ಬಗ್ಗೆ ತಮಾಷೆ ಮಾಡಿ ಮನಸ್ಸಿಗೆ ನೋವು ಮಾಡ್ತಾರೆ ಎನ್ನುವ ಆರೋಪ ಇದ್ರೂ ಗಿಲ್ಲಿ ಹವಾ ಮಾತ್ರ ಕಡಿಮೆ ಆಗಿಲ್ಲ.ಈ ಬಾರಿ ಬಿಗ್ ಬಾಸ್ ವಿನ್ನರ್ ಗಿಲ್ಲಿ ಎನ್ನುವ ಮಾತುಗಳು ದೊಡ್ಡ ಮಟ್ಟದಲ್ಲಿ ಕೇಳಿ ಬರ್ತಿವೆ.
ಅಶ್ವಿನಿ ತಾಯಿಯನ್ನು ಅತ್ತೆ ಎಂದ ಗಿಲ್ಲಿ
ಹಾಸ್ಯ ನಟ ಗಿಲ್ಲಿ ರಿಯಾಲಿಟಿ ಶೋ ಮೂಲಕವೇ ಪ್ರಸಿದ್ಧಿಗೆ ಬಂದವರು. ಈಗಾಗಲೇ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿರುವ ಗಿಲ್ಲಿಗೆ ಕಾವ್ಯ ಮೇಲೆ ವಿಶೇಷ ಪ್ರೀತಿ. ಕಾವ್ಯ ಮನೆಯವರು ಇನ್ನೂ ಬಿಗ್ ಬಾಸ್ ಮನೆಗೆ ಬಂದಿಲ್ಲ. ಆದ್ರೆ ನಿನ್ನೆ ಅಶ್ವಿನಿ ತಾಯಿ ಬಿಗ್ ಬಾಸ್ ಮನೆಗೆ ಬಂದಿದ್ದರು. ಅವರನ್ನು ಅತ್ತೆ ಅಂತ ಕರೆದು ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದ್ರು ಗಿಲ್ಲಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

