ತಟ್ಟೆ ಖಾಲಿಯಾದ್ರೆ ಊಟ ತರೋದೂ ಕಷ್ಟ, ಗಿಲ್ಲಿಗಿಂತ ನೂರು ಪಟ್ಟು ಸೋಂಬೇರಿ ಸ್ಪಂದನಾ
ಬಿಗ್ ಬಾಸ್ ಮನೆಯಲ್ಲಿ ಇಷ್ಟು ದಿನ ಇದ್ದ ಸ್ಪರ್ಧಿಗಳಲ್ಲಿ ಅತೀ ಸೋಂಬೇರಿ ಯಾರು ಎಂಬುದಕ್ಕೆ ಉತ್ತರ ಸಿಕ್ಕಿದೆ. ಊಟ ತರೋದಕ್ಕೂ ಯಾರು ಬೇಸರ ಮಾಡಿಕೊಳ್ತಾರೆ, ಯಾರು ಆಲಸಿ ಎಂಬುದು ಗೊತ್ತಾಗಿದೆ.

ಬಿಗ್ ಬಾಸ್ ಮನೆ ಸೋಂಬೇರಿ
ಬಿಗ್ ಬಾಸ್ ಕನ್ನಡ 12ರ ರಿಯಾಲಿಟಿ ಶೋನಲ್ಲಿ ಯಾರು ಸೋಂಬೇರಿ ಅಂತ ಕೇಳಿದ್ರೆ ಎಲ್ಲರ ಬಾಯಿಂದ ಬರೋದು ಗಿಲ್ಲಿ ಹೆಸ್ರು. ಗಿಲ್ಲಿ, ಮನೆ ಕೆಲ್ಸವನ್ನು ಏನೂ ಮಾಡೋದಿಲ್ಲ, ಅಲ್ಲಿ ಇಲ್ಲಿ ಮಲಗಿ ಟೈಂ ಪಾಸ್ ಮಾಡ್ತಾರೆ ಎನ್ನುವ ಆರೋಪ ಆಗಾಗ ಕೇಳಿ ಬರ್ತಿರುತ್ತೆ. ಆದ್ರೆ ಗಿಲ್ಲಿಗಿಂತ ಸೋಂಬೇರಿ ಬಿಗ್ ಬಾಸ್ ಮನೆಯಲ್ಲಿದ್ದಾರೆ.
ಎಸ್ ಫಾರ್ ಸ್ಪಂದನಾ ಅಲ್ಲ ಸೋಂಬೇರಿ
ಬಿಗ್ ಬಾಸ್ ಮನೆಯೊಳಗೆ ಗಿಲ್ಲಿ ಮೀರಿಸುವ ಸೋಂಬೇರಿ ಒಬ್ಬರಿದ್ದಾರೆ. ಅವರೇ ಕಲರ್ಸ್ ಕನ್ನಡದ ಕರಿಮಣಿ ಸೀರಿಯಲ್ ನಟಿ ಸ್ಪಂದನಾ ಸೋಮಣ್ಣ. ಬಿಗ್ ಬಾಸ್ ಮನೆಯಲ್ಲಿ ನೂರು ದಿನವನ್ನು ಯಶಸ್ವಿಯಾಗಿ ಕಳೆದಿರುವ ಸ್ಪಂದನಾ ಸೋಮಣ್ಣ, ಮಹಾನ್ ಸೋಂಬೇರಿ ಅನ್ನೋದು ಗೊತ್ತಾಗಿದೆ.
ಅಭಿಷೇಕ್ ಗೆ ಗೊತ್ತು ಸತ್ಯ
ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿರುವ ಮಾಜಿ ಸ್ಪರ್ಧಿ ಅಭಿಷೇಕ್ ಜೊತೆ ಸ್ಪಂದನಾ ಹೆಚ್ಚಿನ ಸಮಯವನ್ನು ಕಳೆದಿದ್ದಾರೆ. ಅಭಿಷೇಕ್, ಧನುಷ್, ಕಾವ್ಯ ಹಾಗೂ ಸ್ಪಂದನಾ ಬೆಸ್ಟ್ ಫ್ರೆಂಡ್ಸ್. ಸ್ಪಂದನಾ ದಿನದಲ್ಲಿ ಬಹುತೇಕ ಟೈಂ ಇವರ ಜೊತೆ ಕಳೆದಿರೋದ್ರಿಂದ ಅಭಿಷೇಕ್, ಸ್ಪಂದನಾ ಎಷ್ಟು ಸೋಂಬೇರಿ ಅನ್ನೋದನ್ನು ಹೇಳಿದ್ದಾರೆ.
ಅಭಿಷೇಕ್ ಹೇಳಿದ್ದೇನು?
ಅಭಿಷೇಕ್ ಪ್ರಕಾರ, ಗಿಲ್ಲಿಗಿಂತ ಸ್ಪಂದನಾ ಹೆಚ್ಚು ಆಲಸಿ. ಅವರ ಕತ್ತಿನಲ್ಲಿ ಎಸ್ ಲಾಕೆಟ್ ಇದೆ. ಇದು ಸ್ಪಂದನಾ ಅಲ್ಲ ಸೋಂಬೇರಿ ಅಂತ ಎಲ್ಲರೂ ಅವರನ್ನು ಕಾಡ್ತಿದ್ದರಂತೆ. ತಟ್ಟೆಗೆ ಊಟ ಹಾಕಿಸಿಕೊಳ್ಳೋಕೂ ಸ್ಪಂದನಾಗೆ ಬೇಸರ. ಊಟ ಮುಗಿಸಿ ಎಲ್ಲರ ಮುಖ ನೋಡ್ತಾ ಕುಳಿತುಕೊಳ್ತಾರೆ. ಚಪಾತಿ ಹಾಕಿಕೊಂಡು ಬನ್ನಿ ಅಂದ್ರೆ ನಿಮಗೆ ಆಗ್ಲಿ ಅಂತಾರೆ. ಅಭಿಷೇಕ್ ಊಟ ಮುಗಿಸಿ ಚಪಾತಿ ತರೋಕೆ ಹೋದಾಗ, ಅವ್ರ ಜೊತೆ ಬರದ ಸ್ಪಂದನಾ, ನನಗೂ ಚಪಾತಿ ತನ್ನಿ ಅಂತಾರಂತೆ. ಸ್ಪಂದನಾ ಇರೋರಲ್ಲಿ ಅತೀ ಹೆಚ್ಚು ಸೋಂಬೇರಿ ಅಂತ ಅಭಿಷೇಕ್ ಹೇಳಿದ್ದಾರೆ.
ಕಾವ್ಯ ಹಿಂದೆಯೇ ಹೇಳಿದ್ರು
ವಿಲನ್ ಟಾಸ್ಕ್ ವೇಳೆ ಕಾವ್ಯಾ ಕೂಡ ಸ್ಪಂದನಾ ಸೋಂಬೇರಿ ಸ್ವಭಾವದ ಬಗ್ಗೆ ಹೇಳಿದ್ರು. ಸ್ಪಂದನಾ ಬಿಗ್ ಬಾಸ್ ಪೂಟೇಜ್ ನಲ್ಲಿ ಸಿಗೋದು ಬರಿ ಬೆಡ್ ಮೇಲೆ ಕುಳಿತಿರೋದು, ಮಲಗಿರೋದು ಮಾತ್ರ. ವೀಕೆಂಡ್ ನಲ್ಲಿ ಮಾತ್ರ ನೇರವಾಗಿ ಕುಳಿತಿರ್ತಾರೆ. ಧನು ಟೀ, ಕಾವ್ಯಾ ಊಟ ಅಂತ ಹೇಳೋದು ಬಿಟ್ರೆ ಮತ್ತೇನೂ ಸಿಗೋದಿಲ್ಲ ಎಂದು ಕಾವ್ಯ ಹೇಳಿದ್ದಾರೆ.
ಅಲ್ಲಲ್ಲಿ ಕಾಣಿಸಿಕೊಳ್ತಿದ್ದಾರೆ ಸ್ಪಂದನಾ
ಈಗ ನಾಮಿನೇಷನ್ ಬಿಸಿ ಎಲ್ಲ ಸ್ಪರ್ಧಿಗಳಿಗೆ ತಟ್ಟಿದೆ. ಇಷ್ಟು ವಾರ ನಾಮಿನೇಷನ್ ನಿಂದ ತಪ್ಪಿಸಿಕೊಂಡಿದ್ದ ಸ್ಪರ್ಧಿಗಳು ಈ ವಾರದಿಂದ ಒಬ್ಬೊಬ್ಬರಾಗಿ ಮನೆಗೆ ಹೋಗಲಿದ್ದಾರೆ. ರಕ್ಷಿತಾ ಹಾಗೂ ಧ್ರುವಂತ್ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಅಂದ್ಕೊಂಡಿದ್ದ ಸ್ಪಂದನಾ ಸ್ವಲ್ಪ ಸೀರಿಯಸ್ ಆಗಿದ್ದರು. ಸದ್ಯ ಎಲ್ಲರ ಜೊತೆ ಸ್ಪಂದನಾ ಕಾಣಿಸಿಕೊಳ್ತಿದ್ದಾರೆ. ಅಲ್ಲಿ – ಇಲ್ಲಿ ಓಡಾಡ್ತಿದ್ದಾರೆ.
ಕಲರ್ಸ್ ಹುಡುಗಿ ಆರೋಪ
ಸ್ಪಂದನಾ ಸೋಮಣ್ಣ, ನಾನು ನನ್ನ ಕನಸು ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಅವರು ಕನ್ನಡ ಹಾಗೂ ತೆಲುಗು ಸೀರಿಯಲ್, ಸಿನಿಮಾದಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಮನೆಗೆ ಬರುವ ಮುನ್ನ ಅವರು ಕಲರ್ಸ್ ಕನ್ನಡದ ಕರಿಮಣಿ ಸೀರಿಯಲ್ ನಲ್ಲಿ ನಟಿಸಿದ್ದರು. ಅವರನ್ನು ಕಲರ್ಸ್ ಹುಡುಗಿ ಅಂತಾನೇ ಗುರುತಿಸಲಾಗ್ತಿದೆ. ಸ್ಪಂದನಾಗೆ ಕಲರ್ಸ್ ಕನ್ನಡದ ಬೆಂಬಲ ಇದೆ ಹಾಗಾಗಿ ಏನೇ ಆಟ ಆಡದೆ ಇದ್ರೂ ಸ್ಪಂದನಾ ಉಳಿದುಕೊಳ್ತಿದ್ದಾರೆ ಎನ್ನುವ ಆರೋಪ ಕೇಳಿ ಬರ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

