- Home
- Entertainment
- TV Talk
- ನಾಲ್ಕು ವರ್ಷಗಳ ನಂತ್ರ ರಾಮಾಚಾರಿ ಸೀರಿಯಲ್ ಮುಕ್ತಾಯ, ಫ್ಯಾನ್ಸ್ ಗೆ ಧನ್ಯವಾದ ಹೇಳಿದ ಮೌನಾ ಗುಡ್ಡೆಮನೆ
ನಾಲ್ಕು ವರ್ಷಗಳ ನಂತ್ರ ರಾಮಾಚಾರಿ ಸೀರಿಯಲ್ ಮುಕ್ತಾಯ, ಫ್ಯಾನ್ಸ್ ಗೆ ಧನ್ಯವಾದ ಹೇಳಿದ ಮೌನಾ ಗುಡ್ಡೆಮನೆ
ನಾಲ್ಕು ವರ್ಷಗಳ ಕಾಲ ಮನೆ ಮನೆಯಲ್ಲಿ ಪ್ರಸಾರ ಆಗ್ತಿದ್ದ ರಾಮಾಚಾರಿ ಸೀರಿಯಲ್ ಮುಕ್ತಾಯಗೊಳ್ತಿದೆ. ಸೀರಿಯಲ್ ನ ಕೊನೆ ಸಂಚಿಕೆಗಳು ಪ್ರಸಾರ ಆಗ್ತಿದ್ದು, ತಂಡ ಕೊನೆ ದಿನದ ಶೂಟಿಂಗ್ ಮುಗಿಸಿದೆ.

ರಾಮಾಚಾರಿ ಸೀರಿಯಲ್ ಮುಕ್ತಾಯ
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ರಾಮಾಚಾರಿ ಸೀರಿಯಲ್ ಮುಕ್ತಾಯದ ಹಂತ ತಲುಪಿದೆ. ಈಗಾಗಲೇ ಸೀರಿಯಲ್ ಕೊನೆ ದಿನದ ಶೂಟಿಂಗ್ ಮುಗಿದಿದೆ. ಈ ಬಗ್ಗೆ ಕಲಾವಿದರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಷ್ಯ ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.
ನಾಲ್ಕು ವರ್ಷಗಳಿಂದ ಬರ್ತಿತ್ತು ರಾಮಾಚಾರಿ
ರಾಮಾಚಾರಿ ಸೀರಿಯಲ್ ಶುರುವಾಗಿ ನಾಲ್ಕು ವರ್ಷ ಕಳೆದಿದೆ. ಸೊಕ್ಕಿನ ಹುಡುಗಿ ಚಾರುವಿಗೆ ರಾಮಾಚಾರಿ ಹೇಗೆ ಸಿಗ್ತಾನೆ, ಚಾರು, ರಾಮಾಚಾರಿಯನ್ನ ಹೇಗೆ ಮದುವೆ ಆಗ್ತಾಳೆ ಎಂಬುದು ಆರಂಭದ ಕಥೆಯಾದ್ರೆ ನಂತ್ರ ಕಥೆ ಮತ್ತಷ್ಟು ಪಾತ್ರಗಳು, ಟ್ವಿಸ್ಟ್ ಗಳು ಸೀರಿಯಲ್ ಓಡಿಸಿಕೊಂಡು ಹೋಗಿತ್ತು. ರಾಮಾಚಾರಿ ಅವಳಿಯಾಗಿ ಕೃಷ್ಣನ ಎಂಟ್ರಿ, ಅವನ ಮದುವೆ, ಅವನ ಪತ್ನಿ ರುಕ್ಮಿಣಿ ವಿಲನ್ ಆಗೋದು ನಂತ್ರ ಚಾರು ಅಮ್ಮನ ಜೊತೆ ಸೇರಿ ತನ್ನ ರಾಮಾಚಾರಿ ಅಂದ್ಕೊಂಡು ತನ್ನ ಗಂಡನನ್ನೇ ಹತ್ಯೆ ಮಾಡೋದು ಹೀಗೆ ನಾನಾ ತಿರುವುಗಳ ಜೊತೆ ಸೀರಿಯಲ್ ಸತತ ನಾಲ್ಕು ವರ್ಷ ಮನೆ ಮನೆಯಲ್ಲಿ ಪ್ರಸಾರವಾಗಿದೆ.
ರಾಮಾಚಾರಿ – ಯಜಮಾನ ಮಿಲನ
ಬಿಗ್ ಬಾಸ್ ಸೀಸನ್ 12 ಶುರುವಾಗುವ ಮುಂಚೆ ರಾಮಾಚಾರಿ ಸೀರಿಯಲ್ ಮುಗಿಯುತ್ತೆ ಎನ್ನುವ ಸುದ್ದಿ ಹಬ್ಬಿತ್ತು. ಆದ್ರೆ ಸೀರಿಯಲ್ ಮುಗಿದಿಲ್ಲ, ಇನ್ನೂ ಕಥೆ ಇದೆ ಅಂತ ನಟಿ ಅಂಜಲಿ ಸೇರಿದಂತೆ ತಂಡ ಸ್ಪಷ್ಟನೆ ನೀಡಿತ್ತು. ಆದ್ರೆ ಸೀರಿಯಲ್ ಟೈಂ ಬದಲಾಗಿತ್ತು. ಯಜಮಾನ ಸೀರಿಯಲ್ ಜೊತೆ ರಾಮಾಚಾರಿ ಸೀರಿಯಲ್ ಸೇರಿಸಿ ರಾಮಾಚಾರಿ – ಯಜಮಾನ ಮಿಲನ ಹೆಸರಿನಲ್ಲಿ ಸೀರಿಯಲ್ ಪ್ರಸಾರ ಆಗ್ತಿದೆ.
ರಾಘು – ಝಾನ್ಸಿ ಒಂದು ಮಾಡುವ ಪ್ರಯತ್ನ
ರಾಮಾಚಾರಿ ಹಾಗೂ ಚಾರು ಸದ್ಯ ರಾಘು ಹಾಗೂ ಝಾನ್ಸಿಯನ್ನು ಒಂದು ಮಾಡುವ ಪ್ರಯತ್ನದಲ್ಲಿದ್ದಾರೆ. ಮದುವೆ ನೆನಪು ಕಳೆದುಕೊಂಡಿರುವ ಝಾನ್ಸಿಗೆ ಸತ್ಯ ಹೇಳುವಂತೆ ರಾಘುಗೆ ರಾಮಾಚಾರಿ ಹಾಗೂ ಚಾರು ಒತ್ತಡ ಹೇರಿದ್ದಾರೆ.
ರಾಮಾಚಾರಿ ಕಥೆ ಹೇಗೆ ಕೊನೆಯಾಗ್ಬಹುದು?
ಸದ್ಯ ರಾಮಾಚಾರಿ ಹಾಗೂ ಚಾರುಗೆ ಮಗು ಜನಿಸಿದೆ. ಸೀಮಂತವನ್ನು ಗ್ರ್ಯಾಂಡ್ ಆಗಿ ಆಚರಿಸುವ ಪ್ಲಾನ್ ನಲ್ಲಿ ರಾಮಾಚಾರಿ ಕುಟುಂಬವಿದೆ. ಚಾರು ಅಪ್ಪ ಜೈಲಿನಲ್ಲಿದ್ದು ಅವರನ್ನು ಬಿಡುಸುವ ಪ್ರಯತ್ನ ಕೂಡ ನಡೆಯುತ್ತಿದೆ. ಚಾರು ಅಪ್ಪ ಜೈಲಿನಿಂದ ಬಿಡುಗಡೆಯಾಗಿ, ಮಗು ಸೀಮಂತಕ್ಕೆ ಖುಷಿಯಿಂದ ಪಾಲ್ಗೊಳ್ಳುವ ಜೊತೆಗೆ ಸೀರಿಯಲ್ ಅಂತ್ಯವಾಗುವ ಸಾಧ್ಯತೆ ಇದೆ.
ಧನ್ಯವಾದ ಹೇಳಿದ ಮೌನಾ ಗುಡ್ಡೆಮನೆ
ಮೌನಾ ಗುಡ್ಡೆಮನೆ, ಪ್ರೀತಿ ನೀಡಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಪಾತ್ರವನ್ನು ನಾಲ್ಕು ವರ್ಷಗಳ ಕಾಲ ನಿರ್ವಹಿಸುವ ಅವಕಾಶ ನನ್ನ ಜೀವನದ ಅತ್ಯಂತ ಅಮೂಲ್ಯವಾದ ಪ್ರಯಾಣವಾಗಿತ್ತು. ಇದು ಕೇವಲ ಒಂದು ಪಾತ್ರವಾಗಿರಲಿಲ್ಲ. ನನ್ನ ಬೆಳವಣಿಗೆ, ನನ್ನ ಕಲಿಕೆ ಮತ್ತು ನನ್ನ ಮನಸ್ಸಿನ ಒಂದು ಭಾಗವಾಯಿತು. ಇಂದು ರಾಮಾಚಾರಿ ಧಾರಾವಾಹಿ ಅತ್ಯಂತ ಸುಂದರ ಅಂತ್ಯವನ್ನು ಕಂಡಿದೆ. ಈ ಪ್ರಯಾಣದ ಪ್ರತಿಕ್ಷಣಕ್ಕೂ ನಾನು ಹೃದಯಪೂರ್ವಕವಾಗಿ ಕೃತಜ್ಞಳಾಗಿದ್ದೇನೆ. ಚಾರುವಿಗೆ ನೀವು ನೀಡಿದ ಅಪಾರ ಪ್ರೀತಿ, ಬೆಂಬಲ ಮತ್ತು ಆಶೀರ್ವಾದವೇ ನನ್ನ ಶಕ್ತಿ ಎಂದು ಮೌನಾ ಗುಡ್ಡೆಮನೆ ಬರೆದಿದ್ದಾರೆ.
ರಾಮಾಚಾರಿ ಸೀರಿಯಲ್ ನಲ್ಲಿ ಯಾರೆಲ್ಲ ಇದ್ರು?
ರಾಮಾಚಾರಿ ಸೀರಿಯಲ್ ನಲ್ಲಿ ರಾಮಾಚಾರಿಯಾಗಿ ರಿತ್ವಿಕ್ ಕೃಪಾಕರ್, ಚಾರು ಆಗಿ ಮೌನಾ ಗುಡ್ಡೆಮನೆ, ರಾಮಾಚಾರಿ ಅಮ್ಮನಾಗಿ ಅಂಜಲಿ, ಅಪ್ಪನಾಗಿ ಶಂಕರ್ ಅಶ್ವಥ್, ಝಾನ್ಸಿ ಕಾವೇರಪ್ಪ ಸೇರಿದಂತೆ ಅನೇಕ ಕಲಾವಿದರು ರಾಮಾಚಾರಿ ಸೀರಿಯಲ್ ಪಾತ್ರಕ್ಕೆ ಜೀವ ತುಂಬಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

