- Home
- Entertainment
- TV Talk
- ಡೈಲಾಗ್, ಪಾತ್ರಗಳಿಂದ ಜನ ಮೆಚ್ಚುಗೆ ಗಳಿಸಿದ್ದ ಆಸೆ ಧಾರಾವಾಹಿಯಿಂದ ಏಕಾಏಕಿ ಹೊರಬಂದ ನಟಿ! ಯಾರದು?
ಡೈಲಾಗ್, ಪಾತ್ರಗಳಿಂದ ಜನ ಮೆಚ್ಚುಗೆ ಗಳಿಸಿದ್ದ ಆಸೆ ಧಾರಾವಾಹಿಯಿಂದ ಏಕಾಏಕಿ ಹೊರಬಂದ ನಟಿ! ಯಾರದು?
Aase Kannada Serial Episode: ಡೈಲಾಗ್, ನಟನೆ, ಕಥೆಯಿಂದಲೇ ಆಸೆ ಧಾರಾವಾಹಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳಿರುವ ಈ ಸೀರಿಯಲ್‌ಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ. ಈಗ ಈ ಸೀರಿಯಲ್‌ನಿಂದ ಓರ್ವ ನಟಿ ಹೊರಬಂದಿದ್ದಾರೆ.

ರೋಹಿಣಿ ಪಾತ್ರ ಹೇಗಿದೆ?
ಆಸೆ ಧಾರಾವಾಹಿಯಲ್ಲಿ ರೋಹಿಣಿ ಪಾತ್ರ ಸಿಕ್ಕಾಪಟ್ಟೆ ಹೆಸರು ಮಾಡಿದೆ. ಮನೋಜ್ ಅವರನ್ನು ಮದುವೆಯಾಗಿರೋ ರೋಹಿಣಿಗೆ ಮೊದಲೇ ಮದುವೆಯಾಗಿ, ಮಗ ಕೂಡ ಇರುತ್ತಾನೆ. ಆದರೆ ರೋಹಿಣಿ ಮಾತ್ರ ಈ ಸತ್ಯ ಮುಚ್ಚಿಟ್ಟಿರುತ್ತಾಳೆ.
ರೋಹಿಣಿಗೆ ಅತ್ತೆ ಕಾಟ!
ಅತ್ತೆ ಬಳಿ ತಾನು ಶ್ರೀಮಂತೆ, ತನ್ನ ತಂದೆ ವಿದೇಶದಲ್ಲಿದ್ದಾರೆ ಎಂದು ಹೇಳುತ್ತಿದ್ದ ರೋಹಿಣಿ ಒಮ್ಮೆ ಸಿಕ್ಕಿಹಾಕಿಕೊಂಡಳು. ಆಮೇಲೆ ಅತ್ತೆ ಅವಳಿಗೆ ಕಾಟ ಕೊಡಲು ಆರಂಭಿಸಿದರು. ಇನ್ನೊಂದು ಕಡೆ ಮನೋಜ್ ತಾಯಿ ಮಗ. ಮನೋಜ್ ಕೆಲಸ ಕೂಡ ಮಾಡೋದಿಲ್ಲ, ದಡ್ಡ ಕೂಡ ಹೌದು.
ರೋಹಿಣಿಗೆ ಈಗ ಕಷ್ಟಗಳ ಸುರಿಮಾಲೆ
ಆಸೆ ಧಾರಾವಾಹಿಯಲ್ಲಿ ಅತ್ತೆ ಕಾಟಕ್ಕೆ ರೋಹಿಣಿ ಬೇಸತ್ತಿದ್ದಾಳೆ. ಸೂರ್ಯ-ಮೀನಾಗೆ ಅವಳು ಕಷ್ಟ ಕೊಟ್ಟಿದ್ದಳು. ಈಗ ಕರ್ಮ ರಿಟರ್ನ್ಸ್ ಎನ್ನುವಂತೆ ರೋಹಿಣಿ ಕಂಡ್ರೆ ಅತ್ತೆ ಶಾಂತಿಗೆ ಆಗೋದೇ ಇಲ್ಲ. ಈ ಕುರಿತು ಸೀರಿಯಲ್ ಕಥೆ ಪ್ರಸಾರ ಆಗ್ತಿದೆ.
ಧಾರಾವಾಹಿ ಬಿಟ್ಟಿದ್ಯಾಕೆ?
ರೋಹಿಣಿ ಪಾತ್ರದಲ್ಲಿ ನಟಿ ಅಮೃತಾ ರಾಮಮೂರ್ತಿ ನಟಿಸುತ್ತಿದ್ದರು. ಈಗ ಇವರು ಈ ಧಾರಾವಾಹಿಯಿಂದ ಹೊರಗಡೆ ಬಂದಿದ್ದಾರೆ. ಈ ವಿಷಯವನ್ನು ಅವರು ಸೋಶಿಯಲ್ ಮೀಡಿಯಾ ಮೂಲಕ ಅಧಿಕೃತಪಡಿಸಿದ್ದಾರೆ. ವಿಡಿಯೋ ಮಾಡಿದ್ದು, “ಆಸೆ ಧಾರಾವಾಹಿಗೆ ನೀವು ತುಂಬ ಪ್ರೀತಿ ಕೊಟ್ಟಿದ್ದೀರಿ. ನಾನು ಕಾರಣಾಂತರಗಳಿಂದ ಆಸೆ ಸೀರಿಯಲ್ ಬಿಟ್ಟಿದ್ದೀನಿ. ಒಂದು ಬ್ರೇಕ್ ತಗೊಂಡು ನಾನು ತೆರೆ ಮೇಲೆ ಕಾಣಿಸಿಕೊಳ್ತೀನಿ” ಎಂದು ಹೇಳಿದ್ದಾರೆ.
ರಮೇಶ್ ಅರವಿಂದ್ ನಿರ್ಮಾಣ
ಅಂದಹಾಗೆ ನಟ ನಿನಾದ್ ಹರಿತ್ಸ, ಪ್ರಿಯಾಂಕಾ ಡಿ ಎಸ್, ಮಂಡ್ಯ ರಮೇಶ್, ಇಂಚರಾ ಜೋಶಿ, ಸ್ನೇಹಾ ಈಶ್ವರ್ ಅವರು ನಟಿಸುತ್ತಿದ್ದಾರೆ. ನಟ ರಮೇಶ್ ಅರವಿಂದ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

