BBK12: ಮೊದಲ ದಿನವೇ ಸ್ಪರ್ಧಿಗಳಿಗೆ ಭರ್ಜರಿ ಟ್ವಿಸ್ಟ್; ಓಪನ್ ಆಯ್ತು ಮುಖ್ಯದ್ವಾರ
Bigg Boss Kannada first day elimination: ಬಿಗ್‌ಬಾಸ್ ಮನೆಗೆ ಪ್ರವೇಶಿಸಿದ ಮೊದಲ ದಿನವೇ ಸ್ಪರ್ಧಿಗಳಿಗೆ ಅನಿರೀಕ್ಷಿತ ಆಘಾತ ಎದುರಾಗಿದೆ. ನಿಮ್ಮಲ್ಲೊಬ್ಬರು ಮನೆಯಿಂದ ಹೊರಹೋಗಬೇಕೆಂದು ಬಿಗ್‌ಬಾಸ್ ಸೂಚಿಸಿದ್ದು, ಇದು ಸ್ಪರ್ಧಿಗಳಲ್ಲಿ ತೀವ್ರ ಚರ್ಚೆ ಮತ್ತು ಆತಂಕಕ್ಕೆ ಕಾರಣವಾಗಿದೆ.

ಭರ್ಜರಿ ಟ್ವಿಸ್ಟ್
ಬಿಗ್‌ಬಾಸ್ ಪ್ರವೇಶಿಸಿದ ಮೊದಲ ದಿನವೇ ಸ್ಪರ್ಧಿಗಳಿಗೆ ಭರ್ಜರಿ ಟ್ವಿಸ್ಟ್ ನೀಡಲಾಗಿದೆ. ಮೊದಲ ದಿನವೇ ಅಭ್ಯರ್ಥಿಯೊಬ್ಬರು ಮನೆಯಿಂದ ಹೊರ ಹೋಗುವ ಸನ್ನಿವೇಶ ಸೃಷ್ಟಿಯಾಗಿದೆ. ಇದಕ್ಕಾಗಿ ಬಿಗ್‌ಬಾಸ್ ಮುಖ್ಯದ್ವಾರವನ್ನು ಓಪನ್ ಮಾಡಿದ್ದಾರೆ.
ಹೊರಗೆ ಯಾರು?
ನಿಮ್ಮೊಳಗೆ ಚರ್ಚಿಸಿ ಮನೆಯಿಂದ ಹೊರಗೆ ಯಾರು ಹೋಗಬೇಕು ಎಂದು ನಿರ್ಧರಿಸಿ ಎಂದು ಬಿಗ್‌ಬಾಸ್ ಸೂಚನೆ ನೀಡುತ್ತಾರೆ. ಚರ್ಚೆಯ ಸಂದರ್ಭದಲ್ಲಿ ನಿರೂಪಕಿ ಜಾನ್ವಿ, ತಪ್ಪು ಮಾತಾಡಿ ಫೇಮಸ್ ಆಗೋದು ಬೇರೆ ತರಹ ಅಂತ ಹೇಳಿದ್ದಾರೆ.
ಚರ್ಚೆ ಶುರು
ಇತ್ತ ಜನಪ್ರಿಯ ಹಾಡುಗಳು ಗಾಯಕ ಮಾಳು, ಎರಡ್ಮೂರು ದಿನವಾದ್ರೂ ಬಿಗ್‌ಬಾಸ್ ಮನೆಯಲ್ಲಿರಬೇಕೆಂದು ತಮ್ಮ ಆಸೆಯನ್ನು ಹೇಳಿಕೊಂಡಿದ್ದಾರೆ. ಇತ್ತ ಅಶ್ವಿನಿ ಗೌಡ, ಹೊರಗೆ ಇನ್ನು ಹೆಚ್ಚು ಅವಕಾಶಗಳು ನಿಮಗೆ ಸಿಗಬಹುದು ಅಂದಿದ್ದಾರೆ. ಆದ್ರೆ ಯಾರನ್ನು ಉದ್ದೇಶಿಸಿ ಅಶ್ವಿನಿ ಗೌಡ ಹೇಳಿದ್ದಾರೆ ಎಂಬುದರ ಬಗ್ಗೆ ಖಚಿತವಾಗಿಲ್ಲ.
ಮೊದಲ ದಿನವೇ ಎಲಿಮಿನೇಷನ್
ಮೊದಲ ದಿನವೇ ಎಲಿಮಿನೇಷನ್ ಎಂಬ ವಿಷಯ ಕೇಳಿ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಬಿಗ್‌ಬಾಸ್ ಸ್ವಾಗತ ಮಾಡ್ತಾರೆ ಅಂತ ಅಂದ್ಕೊಂಡಿದ್ದ ಸ್ಪರ್ಧಿಗಳಿಗೆ ಮೊದಲ ದಿನವೇ ಎಲಿಮಿನೇಷನ್ ಭಯ ಶುರುವಾಗಿದೆ. ಮುಂದೇನಾಯ್ತು ಅಂತ ತಿಳಿದುಕೊಳ್ಳಲು ಇಂದಿನ ಸಂಚಿಕೆ ನೋಡಬೇಕಾಗುತ್ತದೆ.
ಇದನ್ನೂ ಓದಿ: ಮಲ್ಲಮ್ಮನ ಮುಂದೆ ತಮ್ಮ ಆಸೆ ಹೇಳಿಕೊಂಡ್ರು ಸುದೀಪ್: ಇದು 12 ರೂಪಾಯಿ ಕತೆ
ಈ ಬಾರಿಯ ಬಿಗ್‌ಬಾಸ್ ಸ್ಪರ್ಧಿಗಳು
ಕಾಕ್ರೋಚ್ ಸುಧಿ, ಕಾವ್ಯಾ ಶೈವ, ಗಿಲ್ಲಿ ನಟ, ಜಾನ್ವಿ , ಧನುಷ್, ಚಂದ್ರಪ್ರಭ, ಮಂಜು ಭಾಷಿಣಿ, ರಾಶಿಕಾ, ಅಭಿಷೇಕ್, ಅಶ್ವಿನಿ ಎಸ್ಎನ್, ಮಲ್ಲಮ್ಮ, ಧ್ರವಂತ್, ಸ್ಪಂದನಾ ಸೋಮಣ್ಣ, ಅಶ್ವಿನಿ ಗೌಡ, ಕರಿಬಸಪ್ಪ, ಆರ್ ಜೆ ಅಮಿತ್, ಮಾಳು ಮತ್ತು ಸತೀಶ್
ಇದನ್ನೂ ಓದಿ: BBK 12: ಹೊರಗಡೆಯೇ ಕಾಂಟ್ರವರ್ಸಿ ಮಾಡ್ಕೊಂಡು ಬಿಗ್ ಬಾಸ್ ಮನೆಗೆ ಬಂದ ಧ್ರುವಂತ್ ಯಾರು?